Viral Video: ನೀರಿನಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಮೇಲೆ ಅಲಿಗೇಟರ್​ ದಾಳಿ.. ಭಯಾನಕವಾಗಿದೆ ಈ ದೃಶ್ಯ

Alligator Attacks: ಲಾಗೋ ಡಾ ಅಮೋರ್‌ ಪ್ರವಾಸಿತಾಣವಾಗಿದ್ದು, ಜನಪ್ರಿಯವಾಗಿದೆ. ಆದರೆ ಸರೋವರದಲ್ಲಿ ಅಲಿಗೇಟರ್‌ಗಳಿದ್ದು, ಈಜಾಡುವುದನ್ನು ನಿಷೇಧಿಸಲಾಗಿದೆ. ಆದರೆ ವ್ಯಕ್ತಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಸರೋವರದಲ್ಲಿ ಈಜಾಡಿದ್ದಾನೆ ಈ ವೇಳೆ ಅಲಿಗೇಟರ್​ ಆತನ ಮೈ ಮೇಲೆ ಬಂದು ಕಚ್ಚಿದೆ.

ಅಲಿಗೇಟರ್​ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿ

ಅಲಿಗೇಟರ್​ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿ

  • Share this:
    ನೀರಿನಲ್ಲಿ ಈಜುತ್ತಿರುವ ವ್ಯಕ್ತಿಯೊಬ್ಬನಿಗೆ ಅಲಿಗೇಟರ್ (Alligator)​ ದಾಳಿ ಮಾಡಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ನಲ್ಲಿ ವೈರಲ್​ ಆಗಿದೆ. ಮಾಹಿತಿಯಂತೆ, ಬ್ರೆಜಿಲ್‌ನ (Brazil) ಕ್ಯಾಂಪೋ ಗ್ರಾಂಡೆಯಲ್ಲಿರುವ ಲಾಗೋ ಡಾ ಅಮೋರ್‌ ಸರೋವರದಲ್ಲಿ ವ್ಯಕ್ತಿಯೊಬ್ಬ ಈಜುತ್ತಿದ್ದನು ಈ ವೇಳೆ ಅಲಿಗೇಟರ್​ ದಾಳಿ ಮಾಡಿದೆ. ಶನಿವಾರ ಈ ಘಟನೆ ಸಂಭವಿಸಿದೆ.

    ಲಾಗೋ ಡಾ ಅಮೋರ್‌ ಪ್ರವಾಸಿತಾಣವಾಗಿದ್ದು, ಜನಪ್ರಿಯವಾಗಿದೆ. ಆದರೆ ಸರೋವರದಲ್ಲಿ ಅಲಿಗೇಟರ್‌ಗಳಿದ್ದು, ಈಜಾಡುವುದನ್ನು ನಿಷೇಧಿಸಲಾಗಿದೆ. ಆದರೆ ವ್ಯಕ್ತಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಸರೋವರದಲ್ಲಿ ಈಜಾಡಿದ್ದಾನೆ ಈ ವೇಳೆ ಅಲಿಗೇಟರ್​ ಆತನ ಮೈ ಮೇಲೆ ಬಂದು ಕಚ್ಚಿದೆ.

    ವಿಲಿಯನ್ ಕೇಟಾನೊ ಎಂಬ ವ್ಯಕ್ತಿ ಅಲಿಗೇಟರ್​ ದಾಳಿಗೆ ಒಳಗಾದ ಈಜುಗಾರರನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದ್ದಾನೆ. ಸಂಜೆ 4.40 ರ ಸುಮಾರಿಗೆ ಅಪಾಯವಿದ್ದರು, ನೀರಿನಲ್ಲಿ ಈಜುತ್ತಿರುವ ವ್ಯಕ್ತಿಯನ್ನು ಗಮನಿಸಿದರು. ಸ್ವಲ್ಪ ಸಮಯದ ನಂತರ, ಅಲಿಗೇಟರ್ ಈಜಾಡುತ್ತಿರುವ ವ್ಯಕ್ತಿಯನ್ನು ಕಂಡು ವೇಗವಾಗಿ ಆತನ ಬಳಿ ಬಂದಿದೆ. ತಕ್ಷಣವೇ ಅವನ ಮೇಲೆ ದಾಳಿ ಮಾಡಿ ಅವನ ಕೈಯನ್ನು ಕಚ್ಚಿದೆ. ಈಜುತ್ತಿರುವ ವ್ಯಕ್ತಿ ಅಲಿಗೇಟರ್​ ದಾಳಿ ಮಾಡಲು ಬರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಬೇಗನೆ ದಡಕ್ಕೆ ಹಿಂತಿರುಗಲು ಪ್ರಯತ್ನಿಸಿದನು. ಈ ವೇಳೆ ರಭಸದಿಂದ ಬಂದ ಅಲಿಗೇಟರ್​ ಆತನ ಕೈಗೆ ಕಚ್ಚಿ ನೀಡಿನಲ್ಲಿ ಎಳೆದಾಡಿದೆ.

    ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ಕೇಟಾನೊ, “ಇದ್ದಕ್ಕಿದ್ದಂತೆ, ನನಗೆ ಆಶ್ಚರ್ಯವಾಗುವಂತೆ, ಅಲಿಗೇಟರ್ ಅವನನ್ನು ಬೆನ್ನಟ್ಟಲು ಪ್ರಾರಂಭಿಸುತ್ತದೆ. ಅವನು ತಪ್ಪಿಸಿಕೊಳ್ಳಲು ವೇಗವಾಗಿ ಈಜಲು ಪ್ರಯತ್ನಿಸಿದನು, ಆದರೆ ಅಲಿಗೇಟರ್ ಅವನ ಮೇಲೆ ದಾಳಿ ಮಾಡಿ ತೋಳಿಗೆ ಕಚ್ಚಿದೆ, ಕೈಯಿಂದ ರಕ್ತ ಬರುತ್ತಿದ್ದರು ಹೇಗಾದರು ದಡ ಸೇರಿ ಕೊನೆಗೆ ವ್ಯಕ್ತು ಜೀವ ಉಳಿಸಿಕೊಂಡಿದ್ದಾನೆ ಎಂದು ಹೇಳಿದರು.

    Read Also: Viral News: ‘ಪ್ಲೀಸ್.. ನನ್ನ ಜೈಲಿಗೆ ಹಾಕಿ.. ಮನೆಯಲ್ಲಿ ಹೆಂಡ್ತಿ ಕಾಟ ತಡೆಯಕ್ಕಾಗಲ್ಲ’: ಗಂಡನ ಮನವಿ ಕೇಳಿ ಪೊಲೀಸ್ ಶಾಕ್!

    ಅಲಿಗೇಟರ್​​ ದಾಳಿಯ ಬಳಿಕ ಗಾಯಗೊಂಡ ವ್ಯಕ್ತಿಯ ಸುತ್ತಲೂ ಜನರು ಜಮಾಯಿಸಿದರು ಮತ್ತು ದಾಳಿಯ ನಂತರ ಮೊಬೈಲ್ ಎಮರ್ಜೆನ್ಸಿ ಕೇರ್ ಸೇವೆಗೆ ಕರೆ ಮಾಡಿದರು. ಈಜುಗಾರನ ಒಂದು ಕೈಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಗಾಯವಾಗಿಲ್ಲ.

    ಏತನ್ಮಧ್ಯೆ, ದಾಳಿಯ ವೀಡಿಯೊ ವೈರಲ್ ಆಗಿದ್ದು, ಫೇಸ್​ಬುಕ್​ನಲ್ಲಿ ವೈರಲ್​ ಆಗಿದೆ. ಅನೇಕರು ವಿಡಿಯೋ ವೀಕ್ಷಸಿದ್ದಾರೆ, ಇನ್ನು ಕೆಲವರು ಅಲಿಗೇಟರ್‌ಗಳಿದೆ ಎಂಬ ಎಚ್ಚರದ ಸಂದೇಶವಿದ್ದರು ವ್ಯಕ್ತಿ ನೀರಿನಲ್ಲಿ ಏಕೆ ಈಜಾಡಿದ್ದಾನೆ ಎಂದು ಪ್ರಶ್ನಿಸಿದ್ದಾರೆ.



    Read Also: Viral: ಉದ್ಯೋಗಿಗಳಿಗೆ 7.5 ಲಕ್ಷ ರೂ, ವಿಮಾನ ಟಿಕೆಟ್​ ಉಡುಗೊರೆ; ಇಂತಹ ಸಿಇಒ ಎಲ್ಲರಿಗೂ ಸಿಗಲ್ಲ

    ಕಳೆದ ಐದು ವರ್ಷಗಳಿಂದ ಲಾಗೋ ಡೊ ಅಮೋರ್‌ನಲ್ಲಿ ಜ್ಯೂಸ್ ಸ್ಟ್ಯಾಂಡ್ ನಡೆಸುತ್ತಿರುವ ಪ್ರತ್ಯಕ್ಷದರ್ಶಿ ಗರಪೈರಾ ಮರಿನಾಲ್ವಾ ಡಾ ಸಿಲ್ವಾ ಈ ಬಗ್ಗೆ ಮಾತನಾಡಿದ್ದು, ಐದು ವರ್ಷಗಳಲ್ಲಿ ಇದೇ ಮೊದಲು ವ್ಯಕ್ತಿಯೊಬ್ಬ ಈ ಸರೋವರದಲ್ಲಿ ಈಜಾಡಲು ಹೋಗಿರುವುದನ್ನು ನೋಡಿದೆ ಎಂದು ಹೇಳಿದರು. "ಕೆಲವೊಮ್ಮೆ, ಮಕ್ಕಳು ಅಲ್ಲಿಗೆ ಹೋಗುತ್ತಾರೆ, ಆದರೆ ನಂತರ ನಾವು ಅವರಿಗೆ ಅಲಿಗೇಟರ್ ಇದೆ ಎಂದು ಹೇಳುತ್ತೇವೆ. ಹಾಗಾಗಿ ಯಾರು ಸರೋವರದ ಬಳಿ ಸುಳಿಯುವುದಿಲ್ಲ ಎಂದರು.
    Published by:Harshith AS
    First published: