Tsunami Awareness: ಸುನಾಮಿ ಬಗ್ಗೆ ಎಲ್ಲರೂ ತಿಳಿದಿರಲೇಬೇಕಾದ ಮಹತ್ವದ ಅಂಶಗಳಿವು, ನಿಮಗೆ ಗೊತ್ತಾ?

Awareness on Tsunami: UN ವರದಿಯ ಪ್ರಕಾರ, ಪ್ರಪಂಚದ 50% ಜನಸಂಖ್ಯೆಯು ಚಂಡಮಾರುತಗಳು, ಸುನಾಮಿಗಳು ಮತ್ತು ಪ್ರವಾಹಗಳ ಹೆಚ್ಚು ಪ್ರಭಾವಕ್ಕೊಳಗಾಗುವ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Natural Disaster: 260,000ಕ್ಕಿಂತಲೂ ಹೆಚ್ಚಿನ ಜನರನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ನೈಸರ್ಗಿಕ ವಿಕೋಪದ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 5 ಅನ್ನು ಸುನಾಮಿ ಜಾಗೃತ ದಿನವನ್ನಾಗಿ (Tsunami Awareness Day) ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ (United Nations) ಅಧಿಕೃತ ವೆಬ್‌ಸೈಟ್ ಉಲ್ಲೇಖಿಸಿರುವಂತೆ ಡಿಸೆಂಬರ್ 2004ರಲ್ಲಿ ಹಿಂದೂ ಮಹಾಸಾಗರದಲ್ಲಿ (Indian Ocean) ಸಂಭವಿಸಿದ ಸುನಾಮಿಯ ಮಾರಣಾಂತಿಕ ವಿಪತ್ತು ಕಳೆದ 100 ವರ್ಷಗಳಲ್ಲಿ ಸಂಭವಿಸಿದ ಇತರ ಯಾವುದೇ ನೈಸರ್ಗಿಕ ಅಪಾಯ ಮೀರಿಸಿದೆ ಎಂದಾಗಿದೆ. ಈ ಘಟನೆಯಲ್ಲಿ ಲಕ್ಷಾಂತರ ಜನರು ಮೃತರಾದರು (Lakhs of People Died) ಹಾಗೂ 14 ದೇಶಗಳು ಸುನಾಮಿ ಹಾನಿಗೆ ಒಳಗಾದವು. ಸುನಾಮಿಯಿಂದ ಅತಿ ಹೆಚ್ಚು ಹಾನಿಗೊಳಗಾದ ದೇಶವೆಂದರೆ ಥೈಲ್ಯಾಂಡ್ (Thailand), ಅದೇ ರೀತಿ ಅಂದಾಜು ಅಂಕೆ ಸಂಖ್ಯೆಯ ಪ್ರಕಾರ ಶ್ರೀಲಂಕಾ (Srilanka), ಇಂಡೋನೇಷ್ಯಾ (Indonesia) ಹಾಗೂ ಭಾರತದಲ್ಲೇ 2,27,000 ಜನರು ಮೃತರಾಗಿದ್ದಾರೆ ಎಂಬ ವಿವರ ಲಭ್ಯವಾಗಿದೆ.


ಜಾಗೃತಿ ಹರಡುವ ಪ್ರಯತ್ನದಲ್ಲಿ, UN ಜನರಲ್ ಅಸೆಂಬ್ಲಿ (UNGA) ಡಿಸೆಂಬರ್ 2015ರಲ್ಲಿ ನವೆಂಬರ್ 5 ಅನ್ನು ವಿಶ್ವ ಸುನಾಮಿ ಜಾಗೃತಿ ದಿನವೆಂದು ಘೋಷಿಸಿತು. ಮತ್ತು, ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ನಿರಂತರವಾಗಿ ಆಚರಿಸಲಾಗುತ್ತಿದೆ.


ಸುನಾಮಿಯ ಕುರಿತು ಜಾಗೃತಿ ಬಹಳ ಮುಖ್ಯ

ನಾಗರಿಕ ಸಮಾಜಗಳು, ದೇಶಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಸುನಾಮಿಯಿಂದ ಉಂಟಾಗುವ ಅಪಾಯ ಕಡಿಮೆ ಮಾಡಲು UNನ ನೀತಿ-ನಿರ್ಮಾಣ ಅಂಗವು ತಮ್ಮ ನವೀನ ವಿಧಾನಗಳನ್ನು ಹಂಚಿಕೊಳ್ಳಲು ಕರೆ ನೀಡಿತು.


ಇದನ್ನೂ ಓದಿ: Tsunami - ನ್ಯೂಜಿಲೆಂಡ್ ಬಳಿ ಮೂರು ಬಾರಿ ಪ್ರಬಲ ಭೂಕಂಪ; ಕಡಲತೀರಕ್ಕೆ ಅಪ್ಪಳಿಸಿದ ಸುನಾಮಿ

ಮುಖ್ಯವಾಗಿ, ಜನರಲ್ಲಿ ಮತ್ತು ಪ್ರಸ್ತುತ ತಗ್ಗು ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ 700 ಮಿಲಿಯನ್ ಜನಸಂಖ್ಯೆಯಲ್ಲಿ ಸುನಾಮಿಯ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಸುನಾಮಿ ಜಾಗೃತಿ ದಿನ 2020ರ ಮುಖ್ಯ ವಿಷಯವು ಸೆಂಡೈ ಸೆವೆನ್ ಜಾಗೃತಿ ಅಭಿಯಾನವಾಗಿದ್ದು ಹೆಚ್ಚಿನ ಜೀವಗಳನ್ನು ಉಳಿಸಲು ಮತ್ತು ನೈಸರ್ಗಿಕ ಸಂಭವದ ವಿರುದ್ಧ ಅಪಾಯ ತಗ್ಗಿಸಲು ಸಮುದಾಯ-ರಾಷ್ಟ್ರೀಯ ಮಟ್ಟದಲ್ಲಿ ತಂತ್ರಗಳ ಅಭಿವೃದ್ಧಿಯನ್ನು ಉನ್ನತೀಕರಿಸಿತು.


ಅರ್ಧದಷ್ಟು ಜನ ಅಪಾಯದ ಸ್ಥಳಗಳಲ್ಲೇ ವಾಸಿಸುತ್ತಿದ್ದಾರೆ

UN ವರದಿಯ ಪ್ರಕಾರ, ಪ್ರಪಂಚದ 50% ಜನಸಂಖ್ಯೆಯು ಚಂಡಮಾರುತಗಳು, ಸುನಾಮಿಗಳು ಮತ್ತು ಪ್ರವಾಹಗಳ ಹೆಚ್ಚು ಪ್ರಭಾವಕ್ಕೊಳಗಾಗುವ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಸುನಾಮಿಗೆ ಸಂಬಂಧಿಸಿದ ಅಪಾಯಗಳ ಕುರಿತು ಎಲ್ಲರಿಗೂ ಶಿಕ್ಷಣ ನೀಡುವುದು ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಜನಸಂಖ್ಯೆ ನಿರ್ಮಿಸಲು ಪರಿಣಾಮಗಳನ್ನು ತಗ್ಗಿಸಲು ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಯೋಜಿಸುವುದು ಮುಖ್ಯವಾಗಿದೆ.


ಜಾಗೃತಿಗಾಗಿ ಅಭಿಯಾನ

2020ರಲ್ಲಿ ವಿಶ್ವ ಸುನಾಮಿ ಜಾಗೃತಿ ದಿನವನ್ನು 30-ದಿನಗಳ ಅಭಿಯಾನವಾಗಿ ರಚಿಸಲಾಗಿದೆ. ಇದರಲ್ಲಿ, ವೈಜ್ಞಾನಿಕ ಪರಿಣತಿ, ಸ್ಥಳೀಯ ಜ್ಞಾನ ಮತ್ತು ಡಿಸೆಂಬರ್ 2004ರ ಸುನಾಮಿಯ ಸ್ಮರಣೆಯ ಮೇಲೆ ನಿರ್ದಿಷ್ಟ ಗಮನ ನೀಡಲಾಯಿತು. ಇತ್ತೀಚೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್ ವಿಶ್ವ ಸುನಾಮಿ ಜಾಗೃತಿ ದಿನದ ಸಂದೇಶವನ್ನು ನೀಡಿದ್ದಾರೆ. ಸಂಕೀರ್ಣ ಜಾಗತಿಕ ಬಿಕ್ಕಟ್ಟು ಹೆಚ್ಚುತ್ತಿರುವ ಕಾರಣ ನಾವು ಸಿದ್ಧರಾಗಿರುವುದು ಅನಿವಾರ್ಯವಾಗಿದೆ ಎಂದು ಆ್ಯಂಟೋನಿಯೋ ತಿಳಿಸಿದ್ದಾರೆ. ಸುನಾಮಿ ಅಪಾಯ ತಗ್ಗಿಸುವುದು ಹಾಗೂ ಸ್ಥಿತಿಸ್ಥಾಪಕತ್ವ ನಿರ್ಮಿಸುವುದು ಮುಖ್ಯವಾಗಿದೆ ಮತ್ತು ಅದಕ್ಕಾಗಿ ನಾವು ಸೆಂಡೈ ಫ್ರೇಮ್‌ವರ್ಕ್ ತಲುಪಿಸಬೇಕಾಗಿದೆ.


ಇದನ್ನೂ ಓದಿ: Karnataka Weather: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ ಮೂರು ದಿನ ಮಳೆಯ ಅಬ್ಬರ

ಸೆಂಡೈ ಫ್ರೇಮ್‌ವರ್ಕ್ ಫಾರ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ 2015-2030 (The Sendai Framework for Disaster Risk Reduction 2015-2030) 2015ರ ನಂತರದ ಅಭಿವೃದ್ಧಿ ಕಾರ್ಯಸೂಚಿಯ ಮೊದಲ ಪ್ರಮುಖ ಒಪ್ಪಂದವಾಗಿದೆ ಮತ್ತು ವಿಪತ್ತಿನ ಅಪಾಯದಿಂದ ಅಭಿವೃದ್ಧಿ ಲಾಭಗಳನ್ನು ರಕ್ಷಿಸಲು ಸದಸ್ಯ ರಾಷ್ಟ್ರಗಳಿಗೆ ವಾಸ್ತವಿಕ ಕ್ರಮಗಳನ್ನು ಒದಗಿಸುತ್ತದೆ.

Published by:Soumya KN
First published: