• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Sudha Murty: ಜೆಆರ್‌ಡಿ ಟಾಟಾ ಹೇಳಿದ್ದ ಆ ಒಂದು ಮಾತು ಸುಧಾಮೂರ್ತಿ ಅವರಿಗೆ ಇಂದಿಗೂ ಸ್ಫೂರ್ತಿಯಂತೆ! ಏನದು ಸಲಹೆ?

Sudha Murty: ಜೆಆರ್‌ಡಿ ಟಾಟಾ ಹೇಳಿದ್ದ ಆ ಒಂದು ಮಾತು ಸುಧಾಮೂರ್ತಿ ಅವರಿಗೆ ಇಂದಿಗೂ ಸ್ಫೂರ್ತಿಯಂತೆ! ಏನದು ಸಲಹೆ?

ಸುಧಾಮೂರ್ತಿ

ಸುಧಾಮೂರ್ತಿ

ಅನೇಕರಿಗೆ ಸ್ಫೂರ್ತಿಯಾಗಿರುವ ಸುಧಾಮೂರ್ತಿ ಅವರಿಗೆ ಪ್ರತಿದಿನ ಸ್ಫೂರ್ತಿ ನೀಡುವ ಮಾತೊಂದಿದೆಯಂತೆ.

  • Share this:

ಇತ್ತೀಚೆಗೆ ಇನ್ಫೋಸಿಸ್ (Infosys) ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಸುಧಾ ಮೂರ್ತಿ ಅವರು ಆರೋಗ್ಯ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ಪ್ರಾಣಿ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ 25 ವರ್ಷಗಳ ಸಮಾಜ ಸೇವೆಗಾಗಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನಿಜಕ್ಕೂ ಸುಧಾಮೂರ್ತಿ (Sudha Murty) ಅವರ ಸರಳವಾದ ಜೀವನಶೈಲಿ ಮತ್ತು ಉದಾತ್ತ ಮನೋಭಾವನೆ ಅನೇಕರಿಗೆ ಒಂದು ಪ್ರೇರಣೆ ಮತ್ತು ಸ್ಪೂರ್ತಿ. ಅನೇಕರಿಗೆ ಸ್ಫೂರ್ತಿಯಾಗಿರುವ ಸುಧಾ ಮೂರ್ತಿ ಅವರಿಗೆ ಪ್ರತಿದಿನ ಸ್ಫೂರ್ತಿ ನೀಡುವ ಮಾತೊಂದಿದೆಯಂತೆ. ಹೌದು, ಸುಧಾ ಅವರು ಈಗ ಟಾಟಾ ಮೋಟಾರ್ಸ್ ಎಂದು ಕರೆಯಲ್ಪಡುವ ಟೆಲ್ಕೊದಲ್ಲಿ ಕೆಲಸ ಮಾಡಿದ ಮೊದಲ ಮಹಿಳಾ ಎಂಜಿನಿಯರ್ ಆಗಿದ್ದರು. ಅಲ್ಲಿ ಅವರು ಭಾರತೀಯ ಉದ್ಯಮದ ಪ್ರವರ್ತಕ ಮತ್ತು ಟಾಟಾ ಗ್ರೂಪ್‌ನ (TATA Group) ಅಧ್ಯಕ್ಷರಾದ ಜೆಆರ್‌ಡಿ ಟಾಟಾ ಅವರನ್ನು ಭೇಟಿಯಾದರಂತೆ.


ಟಾಟಾ ಅವರು ಸುಧಾ ಅವರಿಗೆ “ನೀವು ಯಶಸ್ವಿಯಾದಾಗ, ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು” ಅಂತ ಹೇಳಿದ ಮಾತು ಇವರಿಗೆ ಪ್ರತಿದಿನ ಸ್ಪೂರ್ತಿಯ ಮಾತಾಗಿದೆ ಎಂದಿದ್ದಾರೆ.


ಟೆಲ್ಕೊದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಜೆಆರ್‌ಡಿ ಅವರಿಗೆ ಪತ್ರ ಬರೆದಿದ್ದರಂತೆ ಸುಧಾ


ಜೆಆರ್‌ಡಿ ಅವರೊಂದಿಗೆ ಸುಧಾ ಅವರು ಮೊದಲ ಬಾರಿ ಮಾತಾಡಿದ್ದು ಒಂದು ಪತ್ರದ ಮೂಲಕವಂತೆ. ಸುಧಾ ಅವರು ಟೆಲ್ಕೊದಲ್ಲಿ ಕೆಲಸ ಮಾಡಲು ಬಯಸಿದ್ದರಂತೆ, ಆದರೆ ಲಿಂಗ ತಾರತಮ್ಯದಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲವಂತೆ. ಆಗ ಸುಧಾ ಅವರು ಜೆಆರ್‌ಡಿ ಅವರಿಗೆ ಪತ್ರ ಬರೆದರಂತೆ.


ಇದನ್ನೂ ಓದಿ: ಒಂದೇ ಹಾಡನ್ನು ಪದೇ ಪದೇ ಗುನುಗುತ್ತೀರಾ? ಅದಕ್ಕೂ ಇದೆ ಒಂದು ಕಾರಣ


ಅದರಲ್ಲಿ ಸುಧಾ ಅವರು "ಟಾಟಾ ಅವರು 1900 ರಿಂದ ಭಾರತದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿದ್ದಾರೆ ಮತ್ತು ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೂ ಸಹ ಕಾರಣರಾಗಿದ್ದಾರೆ. ಅದೃಷ್ಟವಶಾತ್, ನಾನು ಅಲ್ಲಿ ಅಧ್ಯಯನ ಮಾಡುತ್ತೇನೆ. ಆದರೆ ಟೆಲ್ಕೊದಂತಹ ಕಂಪನಿಯು ಲಿಂಗದ ಆಧಾರದ ಮೇಲೆ ಹೇಗೆ ತಾರತಮ್ಯ ಮಾಡುತ್ತಿದೆ ಎಂದು ನನಗೆ ಆಶ್ಚರ್ಯವಾಗಿದೆ” ಅಂತ ಬರೆದಿದ್ದರಂತೆ. ಆ ಪತ್ರ ಟಾಟಾ ಅವರಿಗೆ ಸೇರಿದ 10 ದಿನಗಳ ನಂತರ, ಟೆಲ್ಕೊದಲ್ಲಿ ಸಂದರ್ಶನಕ್ಕಾಗಿ ಸುಧಾ ಅವರನ್ನು ಕರೆಯಲಾಯಿತು ಮತ್ತು ನಂತರ ಆ ಕೆಲಸಕ್ಕೆ ಸಹ ಸೇರಿದರಂತೆ ಸುಧಾ.


ಜೆಆರ್‌ಡಿ ಟಾಟಾ ಅವರು ಸುಧಾಮೂರ್ತಿ ಅವರಿಗೆ‌ ನೀಡಿದ ಸಲಹೆ ಏನು?


1982 ರಲ್ಲಿ ಸುಧಾಮೂರ್ತಿ ಅವರು ತಮ್ಮ ಪತಿ ನಾರಾಯಣಮೂರ್ತಿ ಅವರೊಂದಿಗೆ ಇನ್ಫೋಸಿಸ್ ಕಂಪನಿಯೊಂದನ್ನು ಪ್ರಾರಂಭಿಸಲು ಟೆಲ್ಕೊವನ್ನು ತೊರೆಯುತ್ತಿದ್ದಾಗ, ಅವರು ಜೆಆರ್‌ಡಿ ಟಾಟಾ ಅವರಿಗೆ ವಿದಾಯ ಹೇಳಲು ಭೇಟಿ ಆದ್ರಂತೆ.


ಇದನ್ನೂ ಓದಿ: ಅಬ್ಬಬ್ಬಾ, ಇಲ್ಲಿ ಆಚರಿಸುವ ಹಬ್ಬಗಳ ಬಗ್ಗೆ ಕೇಳ್ತಾ ಇದ್ರೆ ಹಾರ್ಟ್​ಬೀಟ್​ ಜಾಸ್ತಿ ಆಗುತ್ತೆ!


ಆ ಸಮಯದಲ್ಲಿ ಸುಧಾ ಅವರಿಗೆ ಟಾಟಾ ಅವರು "ನೀವು ಜೀವನದಲ್ಲಿ ಯಶಸ್ವಿಯಾದಾಗ ನೀವು ಸಮಾಜಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕು. ಏಕೆಂದರೆ ಈ ಸಮಾಜವು ನಮಗೆ ತುಂಬಾ ನೀಡುತ್ತದೆ, ಸಮಯ ಬಂದಾಗ ನಾವು ಅದನ್ನು ಸಮಾಜಕ್ಕೆ ಹಿಂತಿರುಗಿಸಬೇಕು. ನಾನು ನಿಮಗೆ ಶುಭ ಹಾರೈಸುತ್ತೇನೆ" ಅಂತ ಸಲಹೆ ನೀಡಿದ್ರಂತೆ ಎಂದು ಸುಧಾ ಹೇಳುತ್ತಾರೆ.
“ಹಣವನ್ನು ಸಾರ್ವಜನಿಕ ಒಳಿತಿಗಾಗಿ ಬಳಸಬೇಕು ಮತ್ತು ಖಾಸಗಿ ಒಳಿತಿಗಾಗಿ ಅಲ್ಲ” ಎಂದು ಟಾಟಾ ಅವರು ಸುಧಾ ಅವರಿಗೆ ಹೇಳಿದ್ದರಂತೆ. "ನಾನು ಸಹ ಟಾಟಾ ಅವರು ಹೇಳಿದ ಮಾತನ್ನು ನಂಬುತ್ತೇನೆ, ಏಕೆಂದರೆ ನಮಗಿಂತ ಕಷ್ಟಪಟ್ಟು ದುಡಿಯುವ ಅನೇಕ ಜನರಿರುವಾಗ ಹಣವನ್ನು ಆ ದೇವರು ನಮ್ಮಲ್ಲಿ ಕೆಲವರಿಗೆ ಏಕೆ ನೀಡುತ್ತಾನೆ? ಇದರಿಂದ ನಾವು ಇತರರಿಗೆ ಸಹಾಯ ಮಾಡಬೇಕೆಂದು ಹಣವನ್ನು ನೀಡುತ್ತಾನೆ" ಎಂದು ಸುಧಾಮೂರ್ತಿ ಫೋರ್ಬ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

First published: