• Home
  • »
  • News
  • »
  • trend
  • »
  • NASA: ಪ್ಲಾನೆಟ್ ಪರೇಡ್ ಫೋಟೋ ಹಂಚಿಕೊಂಡ ನಾಸಾ, ನಿಸರ್ಗದ ಅದ್ಭುತವನ್ನು ಮೆಚ್ಚಿಕೊಂಡ ಇಂಟರ್ನೆಟ್ ಬಳಕೆದಾರರು!

NASA: ಪ್ಲಾನೆಟ್ ಪರೇಡ್ ಫೋಟೋ ಹಂಚಿಕೊಂಡ ನಾಸಾ, ನಿಸರ್ಗದ ಅದ್ಭುತವನ್ನು ಮೆಚ್ಚಿಕೊಂಡ ಇಂಟರ್ನೆಟ್ ಬಳಕೆದಾರರು!

ನಾಸಾ ಹಂಚಿಕೊಂಡ ಫೋಟೋ

ನಾಸಾ ಹಂಚಿಕೊಂಡ ಫೋಟೋ

ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ನಿಸರ್ಗ ದಿನದಿಂದ ದಿನಕ್ಕೆ ಅತ್ಯದ್ಭುತ ಪವಾಡಗಳನ್ನು ತನ್ನಲ್ಲಿ ಅಡಗಿಸಿಕೊಂಡೇ ಮಾನವ ಲೋಕವನ್ನು ವಿಸ್ಮಯಕ್ಕೆ ದೂಡುತ್ತಿದೆ.

  • Trending Desk
  • 5-MIN READ
  • Last Updated :
  • Share this:

ಈ ವಿಶ್ವದಲ್ಲಿ ಏನಾದರೂ ಕೌತುಕ ರಹಸ್ಯಗಳು ನಮಗೆ ಅರಿವೇ ಇಲ್ಲದಂತೆ ಅಡಗಿರುತ್ತವೆ. ಈ ರಹಸ್ಯಗಳನ್ನು ಹಲವಾರು ಸಂಶೋಧಕರು ಅಧ್ಯಯನಕಾರರು ಹಲವಾರು ಅನ್ವೇಷಣೆಗಳ ಮೂಲಕ ಹೊರಜಗತ್ತಿಗೆ ಬಹಿರಂಗಗೊಳಿಸುತ್ತಾರೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ನಿಸರ್ಗ ದಿನದಿಂದ ದಿನಕ್ಕೆ ಅತ್ಯದ್ಭುತ ಪವಾಡಗಳನ್ನು ತನ್ನಲ್ಲಿ ಅಡಗಿಸಿಕೊಂಡೇ ಮಾನವ ಲೋಕವನ್ನು ವಿಸ್ಮಯಕ್ಕೆ ದೂಡುತ್ತಿದೆ. ಇದೀಗ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಅತ್ಯಂತ ಅಪರೂಪದ ಚಿತ್ರವೊಂದನ್ನು ಹಂಚಿಕೊಂಡಿದ್ದು, ನಿಸರ್ಗದ ಅದ್ಭುತ ಪವಾಡಕ್ಕೆ ನಾವು ತಲೆದೂಗಲೇಬೇಕಾಗಿದೆ. ಸೌರವ್ಯೂಹದ (Solar System) ಎಲ್ಲಾ ಗ್ರಹಗಳು ಆಕಾಶದಲ್ಲಿ ಸೆರೆಸಿಕ್ಕ ಅದ್ಭುತ ಚಿತ್ರವನ್ನು ನಾಸಾ ಹಂಚಿಕೊಂಡಿದೆ. ಪ್ಲಾನೆಟ್ ಪರೇಡ್ (Planets Period) ಎಂದು ಕರೆಯಲಾದ ಈ ವಿದ್ಯಮಾನವು ಅತ್ಯಂತ ಅಪರೂಪವಾಗಿ ಸಂಭವಿಸುತ್ತದೆ.


ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಹೀಗೆ ಎಲ್ಲಾ ಗ್ರಹಗಳನ್ನು ವೀಕ್ಷಿಸಲು ಜನರಿಗೆ ಅನುವು ಮಾಡಿಕೊಡುತ್ತದೆ. ಇದು ಒಂದು ರೀತಿಯಲ್ಲಿ ಗ್ರಹಗಳ ಪಥ ಸಂಚಲನದಂತಿರುತ್ತದೆ ಎಂದರೂ ತಪ್ಪಿಲ್ಲ.


ಖಗೋಳ ವಿದ್ಯಮಾನ


ನಾಸಾ ಉಲ್ಲೇಖಿಸಿರುವಂತೆ ಪ್ಲಾನೆಟ್ ಪರೇಡ್ ಒಂದು ರೀತಿಯ ಖಗೋಳ ವಿದ್ಯಮಾನವಾಗಿದ್ದು ಈ ಸಮಯದಲ್ಲಿ ಹಲವಾರು ಗ್ರಹಗಳನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದಾಗಿದೆ.


ಈ ದೃಶ್ಯವನ್ನು ನಾಸಾ ಖಗೋಳಶಾಸ್ತ್ರದ ಚಿತ್ರ (APOD) ಎಂದು ಹಂಚಿಕೊಂಡಿದೆ. ಸೂರ್ಯಾಸ್ತದ ನಂತರದ ಪ್ಲಾನೆಟ್ ಪರೇಡ್ ಎಂಬ ಶೀರ್ಷಿಕೆಯ ಚಿತ್ರವನ್ನು ನಾಸಾ ಜನವರಿ 2 ರಂದು ಪೋಸ್ಟ್ ಮಾಡಿದೆ.


ಈ ಸಮಯದಲ್ಲಿ ಗುರು, ಮಂಗಳ, ಶುಕ್ರ, ಶನಿ ಮತ್ತು ಬುಧದಂತಹ ವ್ಯಾಪಕ ಶ್ರೇಣಿಯ ಗ್ರಹಗಳು ಇಳಿಸಂಜೆಯ ಸಮಯದಲ್ಲಿ ನೇರಳೆ ಬಣ್ಣದ ಆಕಾಶಕ್ಕೆ ಅಭಿಮುಖವಾಗಿ ಹೊಳೆಯುತ್ತಿರುವುದನ್ನು ಕಾಣಬಹುದಾಗಿದೆ.


ಬೆರಗುಗೊಂಡ ಇಂಟರ್ನೆಟ್


ಮಂಗಳ, ಯುರೇನಸ್, ಗುರು, ನೆಪ್ಚೂನ್, ಶನಿ, ಬುಧ ಮತ್ತು ಶುಕ್ರ ಗ್ರಹಗಳನ್ನು ಒಂದೇ ಚೌಕಟ್ಟಿನಲ್ಲಿ ಸೆರೆಹಿಡಿದ ಫೋಟೋ ತ್ವರಿತವಾಗಿ ವೈರಲ್ ಆಗಿದ್ದು ಇಂಟರ್ನೆಟ್ ಬಳಕೆದಾರರು ಈ ಬೆರಗುಗೊಳಿಸುವ ಮುಸ್ಸಂಜೆಯ ದೃಶ್ಯವನ್ನು ವೀಕ್ಷಿಸಿ ಆನಂದಗೊಂಡರು.


ಸಾಂದರ್ಭಿಕ ಚಿತ್ರ


ಡಿಸೆಂಬರ್ 2022 ರಲ್ಲಿ ಖಗೋಳಶಾಸ್ತ್ರಜ್ಞ ಮತ್ತು ಛಾಯಾಗ್ರಾಹಕ ಟಂಕ್ ಟೆಜೆಲ್ ಈ ಚಿತ್ರವನ್ನು ಸೆರೆಹಿಡಿದಿದ್ದು ಚಿತ್ರದಲ್ಲಿ ಅಲ್ಟೇರ್, ಫೋಮಲ್ಹಾಟ್ ಮತ್ತು ಅಲ್ಡೆಬರನ್‌ನಂತಹ ಪ್ರಕಾಶಮಾನವಾದ ನಕ್ಷತ್ರಗಳು ಕಂಡುಬಂದಿದೆ.


ಪ್ರತಿದಿನ ಖಗೋಳ ಸಂಬಂಧಿತ ಚಿತ್ರ ಹಂಚಿಕೊಳ್ಳುವ ನಾಸಾ


ಪ್ರತಿ ದಿನ ಖಗೋಳ ಶಾಸ್ತ್ರ ಸಂಬಂಧಿತ ಚಿತ್ರವನ್ನು ಪೋಸ್ಟ್ ಮಾಡುವ ನಾಸಾದ APOD (ಖಗೋಳಶಾಸ್ತ್ರದ ದಿನದ ಚಿತ್ರ) ಸಂಪ್ರದಾಯವು ದಶಕಗಳಿಂದಲೇ ಪ್ರಚಲಿತದಲ್ಲಿದ್ದು, ನಾಸಾ ಅತ್ಯಂತ ಅಪರೂಪದ ವಿಸ್ಮಯದ ಚಿತ್ರವನ್ನು ಹಂಚಿಕೊಳ್ಳುತ್ತಿರುತ್ತದೆ.


ಪ್ರತಿ ದಿನ ಹೊಸದೊಂದು ಚಿತ್ರವಿದ್ದು ವೃತ್ತಿಪರ ಖಗೋಳಶಾಸ್ತ್ರಜ್ಞರು ಚಿತ್ರಕ್ಕೆ ಸಣ್ಣ ವಿವರಣೆಯನ್ನು ನೀಡಿ ಪೋಸ್ಟ್ ಮಾಡುತ್ತಾರೆ. ಇದು ಜನರಿಗೆ ಮಾಹಿತಿ ಮತ್ತು ಮನರಂಜನೆಯನ್ನೊಳಗೊಂಡ ವಿಷಯದ ಪರಿಪೂರ್ಣ ಮಿಶ್ರಣವನ್ನು ಒದಗಿಸುತ್ತದೆ.


ಇದನ್ನೂ ಓದಿ: ಸೂರ್ಯನ ಅದ್ಭುತ ಫೋಟೋ ಹಂಚಿಕೊಂಡು ರೋಚಕ ಮಾಹಿತಿ ನೀಡಿದ ನಾಸಾ!


1990 ರಲ್ಲಿ NASA ದ ವಾಯೇಜರ್ 1 ಬಾಹ್ಯಾಕಾಶ ನೌಕೆಯ ಮೂಲಕ ತೆಗೆದ ಫೋಟೋ ಹಾಗೂ APOD 2023 ರ ಮೊದಲ ಫೋಟೋವನ್ನು "ನಮ್ಮ ಸೌರವ್ಯೂಹದ ಅತಿದೊಡ್ಡ ಬಂಡೆ" ಎಂದು ಕರೆಯಲಾಗಿದ್ದು ಇದನ್ನು ಜನಪ್ರಿಯವಾಗಿ 'ಮಂದವಾದ ನೀಲಿ ಚುಕ್ಕೆ' ಎನ್ನಲಾಗುತ್ತದೆ.


ನಕ್ಷತ್ರ ಸಮೂಹದಿಂದ ಭಿನ್ನವಾದ ನಕ್ಷತ್ರಗಳ ಗುಂಪು


ಇಂದಿನ ಫೋಟೋವನ್ನು ಛಾಯಾಗ್ರಾಹಕ ಟಾಮಿ ಲೀಸ್ ಸೆರೆಹಿಡಿದಿದ್ದು, ವಿಸ್ಮಯಕಾರಿ ಕೆಂಬಲ್‌ನ ಕ್ಯಾಸ್ಕೇಡ್ ಆಫ್ ಸ್ಟಾರ್ಸ್ ಅನ್ನು ಉಲ್ಲೇಖಿಸಿದೆ.


ಇದು ಆಸ್ಟರಿಸಮ್ (ನಕ್ಷತ್ರ ಸಮೂಹದಿಂದ ಭಿನ್ನವಾದ ನಕ್ಷತ್ರಗಳ ಗುಂಪು) ಆಗಿದೆ. APOD ಯು ಈ ಚಿತ್ರಕ್ಕೆ ವಿಶ್ವವನ್ನು ಅನ್ವೇಷಿಸಿ ಎಂಬ ಟ್ಯಾಗ್ ಲೈನ್ ಅನ್ನು ನೀಡಿದ್ದು, ನಾವು ಪ್ರಸ್ತುತ ವಾಸವಾಗಿರುವ ವಿಶಾಲವಾದ ಹಾಗೂ ಕೌತುಕಗಳಿಂದ ಕೂಡಿದ ಪ್ರಪಂಚಕ್ಕೆ ಪ್ರತಿ ದಿನವೂ ಹೊಸ ಪ್ರವೇಶವಾಗಿದೆ ಎಂಬ ಭರವಸೆಯನ್ನೊದಗಿಸಿದೆ.

First published: