Viral Video: ಅಲೆಕ್ಸಾಗೆ ಗಣಪತಿ ಭಜನೆ ಹೇಳಲು ಹೇಳಿದ ಅಜ್ಜಿ; ಇನ್‍ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೋ!

ಅಲೆಕ್ಸಾ ಜೊತೆಗಿನ ಅಜ್ಜಿಯ ಈ ಮುದ್ದು ವರ್ತನೆ ಬಹಳಷ್ಟು ಮಂದಿ ಇನ್‍ಸ್ಟಾಗ್ರಾಂ ಬಳಕೆದಾರರ ಮನ ಗೆದ್ದಿದೆ. ಈ ವಿಡಿಯೋಗೆ ಈಗಾಗಲೇ 55,500 ಮೆಚ್ಚುಗೆಗಳು ದೊರಕಿದ್ದು, ಆ ಸಂಖ್ಯೆ ಹೆಚ್ಚುತ್ತಲೇ ಇದೆ. ನೆಟ್ಟಿಗರು ಈ ವಿಡಿಯೋಗೆ ಪ್ರೀತಿಯ ಸುರಿಮಳೆಯನ್ನು ಸುರಿಸುತ್ತಿದ್ದಾರೆ.

ಅಲೆಕ್ಸಾಗೆ ಆಜ್ಞೆ ಮಾಡುತ್ತಿರುವ ಅಜ್ಜಿ.

ಅಲೆಕ್ಸಾಗೆ ಆಜ್ಞೆ ಮಾಡುತ್ತಿರುವ ಅಜ್ಜಿ.

  • Share this:
    ಅಜ್ಜಿಯೊಬ್ಬರು ಅಲೆಕ್ಸಾಗೆ (Alexa) ತನ್ನ ಆಯ್ಕೆಯ ಹಾಡನ್ನು ಕೇಳಿಸುವಂತೆ ವಿನಂತಿಸುವ ಆ ವಿಡಿಯೋ ಹಲವಾರು ಮಂದಿ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರ ಹೃದಯವನ್ನು ಸೂರೆಗೊಂಡಿದೆ. ಹಿರಿಯರ ನಾಗರಿಕರು ಆಧುನಿಕ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ವಿಡಿಯೋಗಳನ್ನು ನೋಡುವುದೇ ಒಂದು ಸಂಭ್ರಮ. ಹಿರಿಯ ನಾಗರಿಕರಲ್ಲಿ, ಕೆಲವರು ಯಂತ್ರಗಳ ಜೊತೆ, ಮನುಷ್ಯರ ಜೊತೆ ಮಾತನಾಡಿದಂತೆ ಶಾಂತವಾಗಿ ಮಾತನಾಡುತ್ತಾರೆ. ಆದರೆ ಇನ್ನು ಕೆಲವರಂತೂ ಯಂತ್ರಗಳ ಉಪಯೋಗವನ್ನು ಅರ್ಥ ಮಾಡಿಕೊಳ್ಳುವ ಅಥವಾ ಕಲಿಯುವಾಗ ಅಭಿವ್ಯಕ್ತಪಡಿಸುವ ಭಾವನೆಗಳು ಎಣಿಕೆಗೂ ನಿಲುಕದಂತಿರುತ್ತವೆ. ಕೆಲವು ಮೋಜಿನಿಂದ ಕೂಡಿದ್ದರೆ, ಇನ್ನು ಕೆಲವು ಬಿದ್ದು ಬಿದ್ದು ನಗುವಂತೆ ಮಾಡುತ್ತವೆ ಮತ್ತು ಕೆಲವು ಅತ್ಯಂತ ಮುದ್ದೆನಿಸುವಂತಿರುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಇನ್‍ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. (Viral Video)

    ಅಜ್ಜಿಯೊಬ್ಬರು ಅಲೆಕ್ಸಾಗೆ ತನ್ನ ಆಯ್ಕೆಯ ಹಾಡನ್ನು ಕೇಳಿಸುವಂತೆ ವಿನಂತಿಸುವ ಆ ವಿಡಿಯೋ ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯವನ್ನು ಸೂರೆಗೊಂಡಿದೆ. ನೇಹಾ ಶರ್ಮಾ ಎಂಬುವರು ಹಂಚಿಕೊಂಡಿರುವ ಈ ವಿಡಿಯೋ ನಿಮ್ಮ ಮನಸ್ಸಿಗೆ ಕೂಡ ಮೋಡಿ ಮಾಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಹಿರಿಯ ಮಹಿಳೆಯೊಬ್ಬರು ಅಲೆಕ್ಸಾಗೆ ಗಣಪತಿ ಭಜನೆ ಕೇಳಿಸುವಂತೆ ವಿನಂತಿ ಮಾಡಿಕೊಳ್ಳುವುದರೊಂದಿಗೆ ರೆಕಾರ್ಡಿಂಗ್ ಆರಂಭ ಆಗುತ್ತದೆ. ಬಳಿಕ ಅವರು ತನ್ನ ಮಾತನ್ನು ಮುಂದುವರೆಸುತ್ತಾ, ಯಾವ ರೀತಿಯ ಗಣಪತಿ ಭಜನೆ ಹಾಕಬೇಕು ಎಂಬುದನ್ನು ಅಲೆಕ್ಸಾಗೆ ವಿವರಿಸುತ್ತಾರೆ.

    https://www.instagram.com/reel/CTqyIIAoV03/?utm_source=ig_embed&ig_rid=7458ad4f-406c-4dd7-8527-a55b53cd980c

    ಇನ್ನಷ್ಟು ಖುಷಿ ಕೊಡುವ ಸಂಗತಿ ಎಂದರೆ ಅಜ್ಜಿ ಅಲೆಕ್ಸಾವನ್ನು ಸಂಬೋಧಿಸುವ ರೀತಿ ! ವಿಡಿಯೋದಲ್ಲಿ ಅಜ್ಜಿ ಮತ್ತು ರೆಕಾರ್ಡ್ ಮಾಡುತ್ತಿರುವವರ ನಡುವಿನ ಸಂಭಾಷಣೆ ಹೇಗಿದೆ ? ಮೊದಲು ಅಜ್ಜಿ ಅಲೆಕ್ಸಾದ ಕಡೆಗೆ ಬಾಗಿ ‘ಅಲೆಕ್ಷಾ’ ಎಂದು ಕರೆಯುತ್ತಾರೆ. ರೆಕಾರ್ಡ್ ಮಾಡುತ್ತಿರುವವರು , “ಗಣಪತಿ ಹೇಳಿ” ಎನ್ನುತ್ತಾರೆ. ಆಗ ಅಜ್ಜಿ ಅಲೆಕ್ಸಾಗೆ “ಗಣಪತಿ ಭಜನೆ, ಗಣಪತಿ ಸ್ತೋತ್ರ ಹೇಳು, ಸ್ತುತಿ ಹೇಳು, ಆರತಿ ಹೇಳು. . .ಓಂ ಗಣ್‍ಗಣಾಯ ನಮಃ. ಗಣಪತಿಯ ಭಜನೆಯಲ್ಲಿ ಎಲ್ಲವನ್ನು ಹೇಳು” ಎಂದು ಮಕ್ಕಳಿಗೆ ಕೈ ತೋರಿಸಿ ಆಜ್ಞೆ ಮಾಡುವಂತೆ ಮುದ್ದಾಗಿ ಹೇಳುತ್ತಾರೆ. ಅಜ್ಜಿಯ ಧ್ವನಿಯಲ್ಲಿ ಅಲೆಕ್ಸಾ ಪುಟ್ಟ ಹುಡುಗಿಯೇನೋ ಎಂಬಂತ ಪ್ರೀತಿ ಇದೆ.

    ಇದನ್ನು ಓದಿ: Online Grocery Shop: ಬಿಹಾರದಲ್ಲಿ ಡಿಜಿಟಲ್ ಕಿರಾಣಿ ಅಂಗಡಿ: ಬಂಡವಾಳ ಇಲ್ಲದೆ ನೂರಾರು ಯುವಕರಿಗೆ ಉದ್ಯೋಗ!

    ಅಲೆಕ್ಸಾ ಜೊತೆಗಿನ ಅಜ್ಜಿಯ ಈ ಮುದ್ದು ವರ್ತನೆ ಬಹಳಷ್ಟು ಮಂದಿ ಇನ್‍ಸ್ಟಾಗ್ರಾಂ ಬಳಕೆದಾರರ ಮನ ಗೆದ್ದಿದೆ. ಈ ವಿಡಿಯೋಗೆ ಈಗಾಗಲೇ 55,500 ಮೆಚ್ಚುಗೆಗಳು ದೊರಕಿದ್ದು, ಆ ಸಂಖ್ಯೆ ಹೆಚ್ಚುತ್ತಲೇ ಇದೆ. ನೆಟ್ಟಿಗರು ಈ ವಿಡಿಯೋಗೆ ಪ್ರೀತಿಯ ಸುರಿಮಳೆಯನ್ನು ಸುರಿಸುತ್ತಿದ್ದಾರೆ. ಅಜ್ಜಿ ಎಷ್ಟು ಪ್ರೀತಿಯಿಂದ ಅಲೆಕ್ಸಾಗೆ ವಿನಂತಿ ಮಾಡಿಕೊಂಡರು ಎಂಬ ಬಗ್ಗೆ ಕೂಡ ಹಲವಾರು ಮಂದಿ ಗಮನ ಸೆಳೆದಿದ್ದಾರೆ. ಇನ್ನು ಕೆಲವರು ತಮ್ಮ ಅಜ್ಜಅಜ್ಜಿ ಇಂತಹ ಸಾಧನಗಳ ಜೊತೆ ವರ್ತಿಸಿದ ಬಗೆಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.ಒಬ್ಬರಂತೂ ಅಜ್ಜಿಯ ಮನವಿಗೆ ಅಲೆಕ್ಸಾ ಏನು ಉತ್ತರ ನೀಡಿರಬಹುದು ಎಂದು ಊಹಿಸಿ, “ಆಯ್ತು ಅಜ್ಜಿ, ನಾನು ನಿಮ್ಮ ವಿನಂತಿಯನ್ನು ನೋಟ್ ಮಾಡಿಕೊಂಡಿದ್ದೇನೆ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಅಜ್ಜಿ ಹೇಳಿದ್ದನ್ನು ಅದು ಅನುಸರಿಸಿತೆ?” ಎಂದು ಪ್ರಶ್ನೆ ಕೇಳಿದ್ದಾರೆ. ಇನ್ನೊಬ್ಬರು “ಎಲ್ಲಾ ಅಜ್ಜಿಯರು ಒಂದೇ ತರಹ” ಎಂದು ಪ್ರತಿಕ್ರಿಯಿಸಿದ್ದಾರೆ. “ಅವರು ತುಂಬಾ ಮುದ್ದು” ಎಂದು ಪ್ರತಿಕ್ರಿಯಿಸಿದವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಹಾಗೆ ಅಜ್ಜಿ ಹೇಳುವುದನ್ನು ಫಾಲೋ ಮಾಡು ಎಂದು ಕೆಲವರು ಹೇಳಿದ್ದಾರೆ. ಇನ್ನು ಹಲವರು ಅಜ್ಜಿಯ ಮುದ್ದಾದ ಆಜ್ಞೆಗೆ ತಲೆಬಾಗಿದ್ದಾರೆ.
    First published: