• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: 42 ಕಿಲೋ ಮೀಟರ್ ಮ್ಯಾರಥಾನ್ ಪೂರ್ಣಗೊಳಿಸಿದ ವಿಶೇಷ ಚೇತನ! ದೇಹ ಊನವಾದರೂ ಆತ್ಮವಿಶ್ವಾಸಕ್ಕಿಲ್ಲ ಕೊರತೆ!

Viral Video: 42 ಕಿಲೋ ಮೀಟರ್ ಮ್ಯಾರಥಾನ್ ಪೂರ್ಣಗೊಳಿಸಿದ ವಿಶೇಷ ಚೇತನ! ದೇಹ ಊನವಾದರೂ ಆತ್ಮವಿಶ್ವಾಸಕ್ಕಿಲ್ಲ ಕೊರತೆ!

ರೋಕಾ

ರೋಕಾ

ಸಾಮಾನ್ಯವಾದ ಮನುಷ್ಯರಿಗಿಂತ ಈ ವಿಶೇಷ ಚೇತನರಲ್ಲಿಯೇ ತಾನು ಏನೋ ಒಂದು ಸಾಧಿಸಬೇಕು ಎಂಬ ಛಲ ಇರುತ್ತೆ. ಹಾಗೆಯೇ ಗುರಿಯನ್ನು ಕೂಡ ಇಟ್ಟುಕೊಂಡಿರುತ್ತಾರೆ.

  • Share this:
  • published by :

ದೇಹದಲ್ಲಿ (Body) ಎಲ್ಲಾ ಅಂಗಾಂಗಗಳು ಸರಿ ಇದ್ರು ಕೂಡ, ಅಯ್ಯೋ ನಂಗ್ ಆಗಲ್ಲ, ಸುಸ್ತು, ಅದು ಇದು ಅಂತ ಕಾರಣಗಳನ್ನು ಹೇಳುತ್ತಾ ಕೈ ಚೆಲ್ಲಿ ಕೂರುವವರು ಇರ್ತಾರೆ. ಇನ್ನು ಸಮಾಜದಲ್ಲಿ ವಿಶೇಷ ಚೇತನರನ್ನು (Disability) ನಾವು ಕಾಣಬಹುದು. ಸಾಮಾನ್ಯವಾದ ಮನುಷ್ಯರಿಗಿಂತ ಈ ವಿಶೇಷ ಚೇತನರಲ್ಲಿಯೇ ತಾನು ಏನೋ ಒಂದು ಸಾಧಿಸಬೇಕು ಎಂಬ ಛಲ ಇರುತ್ತೆ. ಹಾಗೆಯೇ ಗುರಿಯನ್ನು ಕೂಡ ಇಟ್ಟುಕೊಂಡಿರುತ್ತಾರೆ. ನಾನಾ ರೀತಿಯ ಕಾಂಪಿಟೇಷನ್ ಗಳಲ್ಲಿ ಭಾಗವಹಿಸೋದು, ಮಾತನಾಡುವುದರಲ್ಲಿ ನೈಪುಣ್ಯತೆ ಹೊಂದಿರುತ್ತಾರೆ. ಇಷ್ಟೆಲ್ಲ ಯಾಕೆ ಹೇಳ್ತಾ ಇರೋದು ಅಂದ್ರೆ, ಇದಕ್ಕೆ ಸಂಬಂಧ ಪಟ್ಟ ಒಂದು ವಿಷ್ಯ ಸಖತ್ ವೈರಲ್  (Viral) ಆಗ್ತಾ ಇದೆ.


ಬೈಕ್ ರೀಸ್, ಕಾರ್ ರೇಸ್ ಗಳು ಹೇಗೆ ನಡೆಯುತ್ತದೆಯೋ ಅದೇ ರೀತಿಯಲ್ಲಿ ರನ್ನಿಂಗ್ ರೇಸ್ ಗಳು ಇರುತ್ತದೆ ಅಂತ ನಿಮಗೂ ಗೊತ್ತು. ಅದ್ರಲ್ಲೂ ಮ್ಯಾರಾಥಾನ್ ಬಗ್ಗೆ ನೀವು ಕೇಳಿರಬಹುದು.


ಮ್ಯಾರಥಾನ್ ಎನ್ನುವುದು ದೂರ ಅಂತರದ ಓಡುವಿಕೆಯ ಸ್ಪರ್ಧೆಯಾಗಿದ್ದು, ಇದು ಸರಿ ಸುಮಾರು 42.195 ಕಿಲೋಮೀಟರುಗಳು (26 ಮೈಲುಗಳನ್ನು ಮತ್ತು 385 ಯಾರ್ಡ್‌ಗಳ) ದೂರವನ್ನು ಒಳಗೊಂಡಿರುತ್ತದೆ ಮತ್ತು ಅದು ಸಾಮಾನ್ಯವಾಗಿ ರಸ್ತೆ ಓಟವಾಗಿರುತ್ತದೆ.


ಇದನ್ನೂ ಓದಿ: ಒಂದು ಮರದ ಸೆಕ್ಯುರಿಟಿಗೆ ಬರೋಬ್ಬರಿ 64 ಲಕ್ಷ, ಅಷ್ಟಕ್ಕೂ ಇದರ ವಿಶೇಷತೆಯೇನು ಗೊತ್ತಾ?


ಈ ಓಟದ ಸ್ಪರ್ಧೆಯನ್ನು ಇದೀಗ ಓರ್ವ ವಿಶೇಷ ಚೇತನ ವ್ಯಕ್ತಿ ಪೂರ್ಣಗೊಳಿಸಿದ್ದಾರೆ ಅಂದ್ರೆ ನಂಬಲೇ ಬೇಕು. ಎಸ್, ಸ್ಪ್ಯಾನಿಷ್ ಅಥ್ಲೀಟ್ ಅಲೆಕ್ಸ್ ರೋಕಾ (Alex Roca) ಅವರಿಗೆ ದೈಹಿಕ ದೌರ್ಬಲ್ಯವಿದ್ದರೂ ಅದನ್ನು ಮೆಟ್ಟಿ ನಿಂತು ಜಗತ್ತಿನಾದ್ಯಂತ ಜನರ ಹೃದಯವನ್ನು ಗೆದ್ದಿದ್ದಾರೆ. 76% ಅಂಗವಿಕಲರಾಗಿರುವ ರೋಕಾ 42 ಕಿಮೀ ಮ್ಯಾರಥಾನ್ (Marathon) ಅನ್ನು ಪೂರ್ಣಗೊಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ, ರೋಕಾ ಅವರು ಹೇಗೆ ಮ್ಯಾರಥಾನ್ ಅನ್ನು ಓಡುತ್ತಾರೆ, ಮತ್ತು ಮುಗಿದ ನಂತರ ಅವರ ಮುಖ್ದ ಮೇಲೆ ಕಾಣುವ ಸಂತೋಷವನ್ನು ಸೆರೆಹಿಡಿದಿದೆ.


ಮ್ಯಾರಥಾನ್ ಅನ್ನು ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವಾಗಿದ್ದು, ತಿಂಗಳುಗಳ ತಯಾರಿ, ತರಬೇತಿ ಜೊತೆಗೆ ಮನೋಸ್ಥೈರ್ಯದ ಅಗತ್ಯವಿರುತ್ತದೆ. ಇದೀಗ ರೊಖಾ ಅವರ ಅದ್ಭುತ ಸಾಧನೆ ಜನರನ್ನು ಬೆರಗುಗೊಳಿಸಿದೆ.


ರೋಕಾ ಸೆರೆಬ್ರಲ್ ಪಾಲ್ಸಿ ಹೊರತಾಗಿಯೂ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದರು. ಕೆನಡಿಯನ್ ರನ್ನಿಂಗ್ ಮ್ಯಾಗಜೀನ್ ವರದಿ ಪ್ರಕಾರ, ರೋಕಾ ಬಾರ್ಸಿಲೋನಾ ಮ್ಯಾರಥಾನ್ ಅನ್ನು ಐದು ಗಂಟೆ, 50 ನಿಮಿಷ ಮತ್ತು 51 ಸೆಕೆಂಡುಗಳ ಅತ್ಯುತ್ತಮ ಸಮಯದೊಂದಿಗೆ ಮುಗಿಸಿದರು.


ಇದನ್ನೂ ಓದಿ: ಒಂದೂವರೆ ವರ್ಷದಿಂದ ಈ ಹುಡುಗಿ ಮೂತ್ರನೇ ಮಾಡಿಲ್ವಂತೆ, ಕಥೆ ಕೇಳಿದ್ರೆ ಶಾಕ್ ಆಗ್ತೀರ!


ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ರೋಕಾ,“ಇತಿಹಾಸವನ್ನು ಮಾಡಲಾಗಿದೆ! 76% ಅಂಗವೈಕಲ್ಯ ಹೊಂದಿರುವ ವಿಶ್ವದ ಮೊದಲ ವ್ಯಕ್ತಿ 42.195 ಕಿ.ಮೀ. ಮ್ಯಾರಾಥಾನ್ ಅನ್ನು ಪೂರ್ಣಗೊಳಿಸಿದ್ದಾನೆ. ಇದನ್ನು ಸಾಧ್ಯವಾಗುವಂತೆ ಮಾಡಿದ ನನ್ನ ತಂಡಕ್ಕೆ ಧನ್ಯವಾದ. ಹುರಿದುಂಬಿಸಿದ ಎಲ್ಲರಿಗೂ ಧನ್ಯವಾದಗಳು. ನನಗೆ ಮಾತೆ ಬರುತ್ತಿಲ್ಲ.” ಎಂದು ಬರೆದಿದ್ದಾರೆ. ರೋಕಾಗೆ ಸೆರೆಬ್ರಲ್ ಪಾಲ್ಸಿ ಇರುವುದರಿಂದ, ದೈನಂದಿನ ಕೆಲಸ ಮಾಡವುದು ಸವಾಲಾಗಿದೆ. ಇಂತಹ ಕಾಯಿಲೆ ಇದ್ದರೂ, ರೋಕಾ ಈ ಮ್ಯಾರಥಾನ್ ಅನ್ನು ಮುಗಿಸಿದ್ದು ಅಸಾಮಾನ್ಯವೇ ಸರಿ.ರೋಕಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ 200,000 ಲೈಕ್‌ಗಳು ಮತ್ತು ವಿವಿಧ ಪ್ರೋತ್ಸಾಹದಾಯಕ ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ನೈಕಿ ಬ್ರಾಂಡ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೋಕಾ ಅವರ ಛಾಯಾಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ.


“ಅಲೆಕ್ಸ್ ವಿಶ್ವ-ದರ್ಜೆಯ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 76% ದೈಹಿಕ ಅಸಾಮರ್ಥ್ಯ ಮತ್ತು ಸೆರೆಬ್ರಲ್ ಪಾಲ್ಸಿಯೊಂದಿಗೆ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದರು. ಇದೀಗ ಅವರು ಆ ಮೈಲಿಗಲ್ಲು ಸಾಧಿಸಿದ್ದಾರೆ.
ಇದು ಸಂತೋಷದ ಸಮಯವಾಗಿದೆ, ಆದರೆ ಹೊಸ ಗುರಿಗಳು ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತವೆ. ಹೊಸ ಸವಾಲುಗಳನ್ನು ಹುಡುಕುವುದನ್ನು ಎಂದಿಗೂ ಇವರು ನಿಲ್ಲಿಸುವುದಿಲ್ಲ ”ಎಂದು ನೈಕಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

top videos
    First published: