32 ಕಿ. ಮೀ​ ಕಾಲ್ನಡಿಗೆಯಲ್ಲೇ ಆಫೀಸ್​ಗೆ ಬಂದ ಉದ್ಯೋಗಿಗೆ ಕಾರನ್ನೇ ಗಿಫ್ಟ್​ ಮಾಡಿದ ಬಾಸ್!


Updated:July 19, 2018, 5:14 PM IST
32 ಕಿ. ಮೀ​ ಕಾಲ್ನಡಿಗೆಯಲ್ಲೇ ಆಫೀಸ್​ಗೆ ಬಂದ ಉದ್ಯೋಗಿಗೆ ಕಾರನ್ನೇ ಗಿಫ್ಟ್​ ಮಾಡಿದ ಬಾಸ್!
  • Share this:
ನ್ಯೂಸ್​ 18 ಕನ್ನಡ

ಅಲಬಮಾದಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಾಲ್ಟರ್​ ಕಾರ್​ ಎಂಬಾತನಿಗೆ ಹೊಸ ಉದ್ಯೋಗ ಸಿಕ್ಕಿದ್ದು, ಮೊದಲ ದಿನ ಕಚೇರಿ ಸರಿಯಾದ ಸಮಯಕ್ಕೆ ತಲುಪಬೇಕೆಂದು ಆತ ಬರೋಬ್ಬರಿ 32 ಕಿ. ಮೀ ಕಾಲ್ನಡಿಗೆಯಲ್ಲೇ ಬಂದಿದ್ದಾನೆ. ಆತನಿಗೆ ಕೆಲಸದ ಮೇಲಿರುವ ಬದ್ಧತೆ ನೋಡಿದ ಆತನ ಬಾಸ್​ ಮೊದಲ ದಿನವೇ ಅತನಿಗೆ ಕಾರ್​ ಗಿಫ್ಟ್​ ಮಾಡಿದ್ದಾರೆ. ಜಾಬ್​ಗೆ ಸೇರಲಿದ್ದ ಹಿಂದಿನ ದಿನವೇ ವಾಲ್ಟರ್​ ಕಾರು ಕೆಟ್ಟಿತ್ತು, ಹೀಗಘಾಇ ಆತ ಕಚೇರಿಗೆ ನಡೆದುಕೊಂಡು ಹೋಗಲು ನಿರ್ಧರಿಸಿದ್ದಾನೆ. ಆಫೀಸ್​ಗೆ ಸರಿಯಾದ ಸಮಯಕ್ಕೆ ತಲುಪಬೇಕೆಂದು ಆತ ಅರ್ಧ ರಾತ್ರಿಯಲ್ಲೇ ಮನೆಯಿಂದ ಹೊರಟಿದ್ದಾನೆ. ಪೆಹಲಮ್​ ಎಂಬ ಸ್ಥಳ ತಲುಪುತ್ತಿದ್ದಂತೆಯೇ ಅಲ್ಲಿನ ಪೊಲೀಸರು ಬಳಲಿದ್ದ ವಾಲ್ಟರ್​ನನ್ನು ನೋಡಿದ್ದಾರೆ. ಅಷ್ಟರಲ್ಲೇ ಆತ ಕಾಲ್ನಡಿಗೆ ಆರಂಭಿಸಿ 4 ಗಂಟೆಯಾಗಿತ್ತು.

ಪೊಲೀಸರು ಆತನ ಕಥೆ ಕೇಳಿ ಬೆಳಗ್ಗಿನ ಉಪಾಹಾರ ನೀಡಿ, ಆಫೀಸ್​ವರೆಗೂ ಬಿಟ್ಟಿದ್ದಾರೆ. ಅಲ್ಲದೇ ಪೊಲೀಸ್​ ಆಫೀಸರ್ಸ್​​ ಆತನ ಕಥೆಯನ್ನು ತಮ್ಮ ಫೇಸ್​ಬುಕ್​ ಪೇಜ್​ನಲ್ಲೂ ಶೇರ್​ ಮಾಡಿದ್ದು, ಅದು ಕೆಲವೇ ಕ್ಷಣಗಳಲ್ಲಿ ವೈರಲ್​ ಆಗಿದೆ. ಎಲ್ಲರೂ ಆತನ ಈ ಸ್ಟೋರಿಯನ್ನು ಶೇರ್​ ಮಾಡಿದ್ದಾರೆ. ಇನ್ನು ಈ ಸ್ಟೋರಿ ವಾಲ್ಟರ್​ ಸಿಇಒಗೂ ತಲುಪಿದ್ದು, ಇದನ್ನು ಓದಿದ ಅವರು ಏನಾದರೂ ಸ್ಪಷಲ್​ ಮಾಡಬೇಕೆಂದು ಯೋಚಿಸಿಉದ್ದಾರೆ. ಸೋಮವಾರದಂದು ಲೂಕ್​ ಮಾರ್ಕಲಿನ್​, ತಮ್ಮ 2014ರ ಮಾಡೆಲ್​ ಕಾರನ್ನು ವಾಲ್ಟರ್​ಗೆ ನೀಡಿದ್ದಾರೆ. ಇದನ್ನು ನೋಡಿದ ವಾಲ್ಟರ್​ ಭಾವುಕರಾಗಿ ಅತ್ತಿದ್ದಾರೆ.


ಇನ್ನು ವಾಲ್ಟರ್​ ಕಥೆ ಕೇಳಿದ ಬಹುತೇಕ ಎಲ್ಲರೂ ಅವರನ್ನು ಹೊಗಳುತ್ತಿದ್ದು, ಸಹಾಯ ಮಾಡಿದ ಪೊಲೀಸರಿಗೂ ಶಹಬ್ಬಾಸ್​ ಎಂದಿದ್ದಾರೆ. ಅತ್ತ ಪೊಲೀಸರು ತಮ್ಮ ಪೋಸ್ಟ್​ನಲ್ಲಿ ವಾಲ್ಟರ್​ನನ್ನು ಹೊಗಳಿದ್ದಾರೆ.


ಫೇಸ್​ಬುಕ್​ನಲ್ಲಿ ಬಳಕೆದಾರರೊಬ್ಬರು "ಜಗತ್ತಿನಲ್ಲಿ ಹಲವಾರು ಇಂತಹ ವಾಲ್ಟರ್​ಗಳ ಅಗತ್ಯವಿದೆ. ಆತನ ಕಥೆ ಕೇಳಿ ನಿಜಕ್ಕೂ ಖುಷಿಯಾಯ್ತು" ಎಂದಿದ್ದಾರೆ. ಮತ್ತೊಬ್ಬ ಯೂಸರ್​ "ಕೆಲಸದ ವಿಚಾರದಲ್ಲಿ ಇಷ್ಟು ಪ್ರಾಮಾಣಿಕತೆ ಹೊಂದಿರುವ ಇಂತಹವರನ್ನು ಮನೋಡಿದಾಗ ಬಹಳ ಖುಷಿಯಾಗುತ್ತದೆ" ಎಂದಿದ್ದಾರೆ.
First published:July 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading