• Home
  • »
  • News
  • »
  • trend
  • »
  • Ajay Devgn and Kajol: ಅಜಯ್ ದೇವಗನ್ - ಕಾಜೋಲ್ ಅವರ ಭವ್ಯ ಬಂಗಲೆ ಹೇಗಿದೆ ಗೊತ್ತಾ?

Ajay Devgn and Kajol: ಅಜಯ್ ದೇವಗನ್ - ಕಾಜೋಲ್ ಅವರ ಭವ್ಯ ಬಂಗಲೆ ಹೇಗಿದೆ ಗೊತ್ತಾ?

ಕಾಜೊಲ್, ಅಜಯ್ ದೇವ್​​ಗನ್

ಕಾಜೊಲ್, ಅಜಯ್ ದೇವ್​​ಗನ್

Ajay Devgn And Kajol: ಕಾಜೊಲ್‌ ಹಾಗೂ ಅಜಯ್‌ ದೇವಗನ್‌ರ ಕನಸಿನ ಸ್ವರ್ಗ, ಬಾಲಿವುಡ್ ಸ್ಟಾರ್ ದಂಪತಿಯ ಬಂಗಲೆ ಹೇಗಿದೆ ನೋಡಿ.

  • Share this:

ಬಾಲಿವುಡ್‌ ನ (Bollywood) ಎವರ್‌ ಗ್ರೀನ್‌ ಬ್ಯೂಟಿ ಕಾಜಲ್.‌ ತಮ್ಮ ಮುದ್ದಾದ ನಗು ಹಾಗೂ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದವರು. ಇಂದಿಗೂ ಅನೇಕರ ಫೆವರೇಟ್‌ ಹಿರೋಯಿನ್‌ ಕಾಜೋಲ್.‌ ಅವರು ನಟ ಅಜಯ್‌ ದೇವಗನ್‌ ರನ್ನು ಮದುವೆಯಾಗಿದ್ದು ಫೆಬ್ರವರಿ 24, 1999 ರಲ್ಲಿ. ಮದುವೆಯಾಗಿ 22 ವರ್ಷ ಕಳೆದರೂ ಹೊಸ ಜೋಡಿಗಳಂತೆ ಕಾಣೋ ಈ ದಂಪತಿ (Couple) ಬಾಲಿವುಡ್‌ ನ ಮೋಸ್ಟ್‌ ಬ್ಯೂಟಿಫುಲ್‌ ಕಪಲ್‌ ಅಂದರೆ ತಪ್ಪಾಗಲ್ಲ. ಯುಗ್‌ ಹಾಗೂ ನ್ಯಾಸಾ ಇವರ ಇಬ್ಬರು ಮಕ್ಕಳು. ಅಜಯ್‌ ಹಾಗೂ ಕಾಜೋಲ್ (Kajal)‌ ಒಳ್ಳೆಯ ನಟರು (Actor). ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಈ ಸೆಲೆಬ್ರಿಟಿ ಕಪಲ್‌ ಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಇಂದಿಗೂ ಸಾಕಷ್ಟು ಚಿತ್ರಗಳು ಕೈಯ್ಯಲ್ಲಿವೆ.


ಅಷ್ಟಕ್ಕೂ ನಾವೀಗ ಹೇಳಹೊರಟಿದ್ದು ಅಜಯ್‌ ಹಾಗೂ ಕಾಜೊಲ್‌ ಬಹುಕೋಟಿ ಬಂಗಲೆ ಶಿವಶಕ್ತಿಯ ಬಗ್ಗೆ. ಅಂದಹಾಗೆ ತಮ್ಮ ನೆಚ್ಚಿನ ತಾರೆಯರ ಮನೆ ಹೇಗಿರುತ್ತೆ. ಅವರು ಹೇಗೆ ಇರ್ತಾರೆ. ಅವರ ಲೈಫ್‌ ಸ್ಟೈಲ್‌ ಹೇಗಿರುತ್ತೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತೆ.


ಅದರಲ್ಲೂ ಸೆಲೆಬ್ರಿಟಿಗಳ ಮನೆಯೆಂದರೆ ಯಾವ ಬಂಗಲೆಗೂ ಕಡಿಮೆ ಇರೋದಿಲ್ಲ. ಕೋಟಿ ಕೋಟಿ ಕೊಟ್ಟು ಐಷಾರಾಮಿ ತನದಲ್ಲಿ ಬದುಕುವವರ ಜೀವನ ತೆರೆಯ ಮೇಲೆ ನೋಡಿದ ಹಾಗೆಯೇ ಇರುತ್ತೆ. ಹಾಗಿದ್ರೆ ಬನ್ನಿ ಅವರ ಬಂಗಲೆ ಹೇಗಿದೆ, ಒಳಗೆ ಏನೇನೆಲ್ಲ ಇವೆ ಅನ್ನೋದನ್ನು ನೋಡೋಣ.
ವೆಲ್‌ ಕಮ್‌ ಮಾಡುತ್ತೆ ಗ್ರ್ಯಾಂಡ್‌ ಸ್ಟೇರ್‌ ಕೇಸ್!


ಮುಂಬೈನಲ್ಲಿರೋ ಬಹು ಕೋಟಿ ಮೌಲ್ಯದ ಬಂಗಲೆ ಶಿವಶಕ್ತಿ. ಇದು ಕಾಜೊಲ್‌ ಹಾಗೂ ಅಜಯ್‌ ದೇವಗನ್‌ ರ ಕನಸಿನ ಸ್ವರ್ಗವಂತೆ. ಈ ಸ್ವರ್ಗದಂತಹ ಮನೆಯ ಒಳಗೆ ಹೋಗುತ್ತಿದ್ದಂತೆ ಗಮನ ಸೆಳೆಯುವುದೇ ಮೆಟ್ಟಿಲುಗಳು. ಇಲ್ಲಿರುವ ಗ್ರ್ಯಾಂಡ್‌ ಸ್ಟೇರ್‌ ಕೇಸ್‌ ನಮ್ಮನ್ನ ಸ್ವಾಗತಿಸುತ್ತೆ. ಎತ್ತರನೆಯ ಈ ಮೆಟ್ಟಿಲುಗಳು ಮನೆಗೊಂದು ಕ್ಲಾಸಿಕ್‌ ವೈಬ್ಸ್‌ ನೀಡುತ್ತವೆ. ಹಾಗೇ ಈ ದಂಪತಿಯ ಹಲವು ಫೋಟೋಗಳಲ್ಲಿ ನಾವು ಈ ವುಡನ್‌ ಸ್ಟೇರ್‌ ಕೇಸ್‌ ನೋಡಬಹುದು.


ಅದಕ್ಕೆ ತಕ್ಕನಾಗಿ ಹಾಕಲಾಗಿರುವ ಮೊಟ್ಟೆಯಾಕಾರದ ಲೈಟ್‌ ಬಲ್ಬ್‌ ಗಳು ಆ ಜಾಗದ ಸೌಂದರ್ಯ ಹೆಚ್ಚಿಸಿವೆ. ಹಾಗಾಗಿ ಶಿವಶಕ್ತಿಯ ಪ್ರವೇಶಿಸುವಾಗ ಭವ್ಯವಾದ ರಾಯಲ್‌ ಬಂಗಲೆಯೊಂದಕ್ಕೆ ಬಂದ ಅನುಭವವಾಗುತ್ತೆ. ಬಂದ ಅತಿಥಿಗಳ ಮನ ಗೆಲ್ಲುತ್ತೆ ಈ ಮರದ ಮೆಟ್ಟಿಲುಗಳು.


ಕಾಜೊಲ್, ಅಜಯ್ ದೇವ್​ಗನ್ ಬಂಗಲೆ


ಫಸ್ಟ್‌ ಫ್ಲೋರ್‌ ನಲ್ಲಿದೆ ಕಾಜೋಲ್‌ ಕೋಣೆ!


ನಂತರ ಗಮನ ಸೆಳೆಯುವ ಸಂಗತಿ ಅಜಯ್‌ ಹಾಗೂ ಕಾಜೋಲ್‌ ಮನೆಯ ಲೋಬಿ ಏರಿಯಾ. ಇಲ್ಲಿನ ಅದ್ಭುತವಾದ ಅಚ್ಚ ಬಿಳುಪಿನ ಗ್ಲೋಸಿ ಫ್ಲೋರಿಂಗ್‌ ಹಾಗೂ ಮರದ ಅಂಚಿನ ಗಾಜಿನ ಕಿಟಕಿಗಳು ಗಮನ ಸೆಳೆಯುತ್ತವೆ.


ಈ ಕಾಜಲ್‌ ಹಾಗೂ ದೇವಗನ್‌ ರ ಈ ರೂಮ್‌ ಮುಂಬೈ ಸಿಟಿ ಕಾಣುವಂತಿದ್ದು ಕೋಣೆಯ ಪ್ರತಿ ಮೂಲೆಯಿಂದಲೂ ಬೆಳಕು ಹಾದು ಬರುತ್ತೆ. ಅಲ್ಲದೇ ಇದೊಂದು ಪೋಟೋ ತೆಗೆದುಕೊಳ್ಳಲು ಪರ್ಫೆಕ್ಟ್‌ ಜಾಗವಾಗಿದೆ. ಕಾಜೋಲ್‌ ಅವರು ಇದೇ ರೂಮಿನಲ್ಲಿಯೇ ತೆಗೆದುಕೊಂಡಂತಹ ಸಾಕಷ್ಟು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ.


ಲಿವಿಂಗ್‌ ಏರಿಯಾ ಹೇಗಿದೆ ಗೊತ್ತ?


ಇನ್ನು ಈ ಬಂಗಲೆಯ ಲಿವಿಂಗ್‌ ಏರಿಯಾವಂತೂ ಅದ್ಭುತವಾಗಿದೆ. ಬಿಳಿಯ ಬಣ್ಣದ ಥೀಮ್‌ ನಲ್ಲೇ ಮಾಡಲಾಗಿರುವ ಈ ರೂಮ್‌ ಮನಸ್ಸನ್ನ ಮುದಗೊಳಿಸುತ್ತೆ. ಅವರಿಬ್ಬರ ಕೋಣೆಯಂತೆಯೇ ಇಲ್ಲಿಯೂ ಮರದ ಅಂಚಿನ ಗ್ಲಾಸ್‌ ಕಿಟಕಿಗಳನ್ನು ಮಾಡಿಸಲಾಗಿದೆ. ಕೆಲವೊಂದಿಷ್ಟು ಅಪರೂಪದ ಅಲಂಕಾರಿಕ ಹೂವುಗಳ ಈ ರೂಮ್‌ ನ ಅಂದವನ್ನು ಹೆಚ್ಚಿಸಿವೆ. ಇದು ಇಡೀ ಬಂಗಲೆಯಲ್ಲಿಯೇ ಅತ್ಯಂತ ಸುಂದರ ಜಾಗವಾಗಿದೆ.


6 ಸೀಟರ್‌ ಗಳ ಡೈನಿಂಗ್‌ ಟೇಬಲ್‌ !


ಒಳಗೆ 6 ಖುರ್ಷಿಗಳ ಲಕ್ಸುರಿ ಡೈನಿಂಗ್‌ ಟೇಬಲ್‌ ಇದೆ. ಹಿಮದ ಬಣ್ಣದ ಈ ಟೇಬಲ್‌ ಗೆ ಅಚ್ಚ ಬಿಳಿಬಣ್ಣದ ಕುಶನ್‌ ಹೊಂದಿರುವ ಲೆದರ್‌ ಚೇರ್‌ ಗಳಿವೆ. ಗ್ಲಾಸ್‌ ಪಾಟರ್ನ್‌ ಹೊಂದಿರುವ ಈ ಡೈನಿಂಗ್‌ ಟೇಬಲ್‌ ಲಿವಿಂಗ್‌ ರೂಮ್‌ ಗೆ ರಾಯಲ್‌ ಟಚ್‌ ನೀಡುತ್ತವೆ.


ವೀಕೆಂಟ್‌ ಪಾರ್ಟಿಗಳು ನಡೆಯೋದೆಲ್ಲಿ ಗೊತ್ತ?


ಇನ್ನು ಲಿವಿಂಗ್‌ ರೂಮ್‌ ಪಕ್ಕದಲ್ಲಿಯೇ ಕ್ಯಾಜುವಲ್‌ ಲಾಂಜ್‌ ರೂಮ್‌ ಇದೆ. ಇದು ಗೆಟ್‌ ಟು ಗೆದರ್‌ ಹಾಗೂ ವೀಕೆಂಟ್‌ ಪಾರ್ಟಿಗಳಿಗೆ ಹೇಳಿ ಮಾಡಿಸಿದ ಜಾಗ, ಈ ರೂಮ್‌ ನಲ್ಲಿ ಕೆಂಪು ಬಣ್ಣದ ಸೋಫಾ ಹಾಗೂ ಕಾಂಟ್ರ್ಯಾಸ್ಟ್‌ ಥೀಮ್‌ ಗಮನ ಸೆಳೆಯುತ್ತದೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಅಲ್ಲದೇ ಇಲ್ಲಿನ ಗೋಡೆಗಳ ಮೇಲೆ ಹಾಕಲಾಗಿರುವ ಈ ಸೆಲೆಬ್ರಿಟಿ ಕುಟುಂಬದ ಭಾವಚಿತ್ರಗಳು ಕೋಣೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.


ಮನಸೆಳೆವ ಬಾಲ್ಕನಿ!


ಅಜಯ್‌ ಹಾಗೂ ಕಾಜೋಲ್‌ ರ ಸ್ವರ್ಗದಂತಹ ಮನೆ ಶಿವಶಕ್ತಿಯಲ್ಲಿ ಸುತ್ತಲೂ ಹಸಿರು ತುಂಬಿದೆ. ಲಿವಿಂಗ್‌ ರೂಮ್‌ ಗೆ ಹೊಂದಿಕೊಡಿರುವಂತೆ ಇರುವ ಬಾಲ್ಕನಿ ಇದಕ್ಕೆ ಮತ್ತಷ್ಟು ಮೆರಗು ನೀಡುತ್ತವೆ. ಫ್ರೆಶ್‌ ಗಾಳಿ ಪಡೆಯಲು ಗಾಳಿ ಬೆಳಕು ಪಡೆಯಲು ಕಾಜೋಲ್‌ ಆಗಾಗ ಇಲ್ಲಿ ಗೆ ಬರುತ್ತಿರುತ್ತಾರಂತೆ! ಸುತ್ತಲೂ ಹಸಿರು ತುಂಬಿರುವ ಬಾಲ್ಕನಿ ಲಿವಿಂಗ್‌ ರೂಮ್‌ ಮತ್ತಷ್ಟು ಮೆರಗು ನೀಡುವುದು ಸುಳ್ಳಲ್ಲ.


ಸೆಲೆಬ್ರಿಟಿ ಕಪಲ್‌ ನ ಇಂಡೋರ್‌ ಜಿಮ್!‌


ಸೆಲೆಬ್ರಿಟಿಗಳ ಬಂಗಲೆಗಳಲ್ಲಿ ಇಂಡೋರ್‌ ಜಿಮ್‌ ಇರೋದು ಕಾಮನ್.‌ ಅದರಲ್ಲೂ ಅಜಯ್‌ ಹಾಗೂ ಕಾಜೋಲ್‌ ಇಬ್ಬರೂ ಫೀಟ್‌ ನೆಸ್‌ ಗೆ ಪ್ರಾಮುಖ್ಯತೆ ಕೊಡುವವರು. ಇವ್ರು ವರ್ಕೌಟ್‌ ನ ಯಾವತ್ತೂ ಮಿಸ್‌ ಮಾಡೋದಿಲ್ವಂತೆ. ಈ ಜಿಮ್‌ ನಲ್ಲಿ ಬಹಳಷ್ಟು ವರ್ಕೌಟ್‌ ಸಾಧನ ಹಾಗೂ ಮಷಿನ್‌ ಗಳಿವೆ. ಕಳೆದ ವರ್ಷ ಕೋವಿಡ್‌ ಸಮಯದಲ್ಲಿ ಅಜಯ್‌ ದೇವಗನ್‌ ಜಿಮ್‌ ನಲ್ಲಿ ವರ್ಕೌಟ್‌ ಮಾಡುತ್ತಲೇ ಜನರಿಗೆ ಮನೆಯಲ್ಲೇ ಇರುವಂತೆ ಸಲಹೆ ನೀಡಿದ್ದ ವಿಡಿಯೋ ವೈರಲ್‌ ಆಗಿತ್ತು.


ಇದನ್ನೂ ಓದಿ: ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ವಿವಿಧ ಹುದ್ದೆ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ


ಕಲ್ಲಿನ ಹೊದಿಕೆಯ ಇಂಟೀರಿಯರ್!


2018 ರ ನವೆಂಬರ್‌ 7 ರಂದು ಕಾಜೋಲ್‌ ಇನ್‌ ಸ್ಟಾಗ್ರಾಂ ನಲ್ಲಿ ದೇವಗನ್‌ ಜೊತೆ ಹಾಕಿದ್ದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ದೀಪಾವಳಿ ಶುಭಾಷಯ ಕೋರಿ ಹಾಕಿದ್ದ ಈ ಪೋಟೋ ಬಂಗಲೆಯ ಹೊಸದೊಂದು ಜಾಗವನ್ನು ಅನಾವರಣಗೊಳಿಸಿತ್ತು. ಅದರಲ್ಲಿ ಕಂಡುಬಂದಿದ್ದ ಕಲ್ಲಿನ ಹೊದಿಕೆಯ ಇಂಟೀರಿಯರ್‌ ಎಲ್ಲರ ಗಮನ ಸೆಳೆದಿತ್ತು. ಇದು ಕ್ಲಾಸಿ ಲುಕ್‌ ನೀಡಿತ್ತಲ್ಲದೇ ಬಂಗಲೆಗೊಂದು ಬೇರೆಯದೇ ಲುಕ್‌ ನೀಡಿತ್ತು.


ಬಂಗಲೆಯ ಬೆಲೆ 60 ಕೋಟಿ!


ಈ ಅದ್ಭುತ ವಾದ ಬಂಗಲೆಯಲ್ಲಿ ಅಜಯ್‌ ದೇವಗನ್‌, ಪತ್ನಿ ಕಾಜೋಲ್‌ ಹಾಗೂ ಮಕ್ಕಳಾದ ನ್ಯಾಸ, ಯುಗ್‌ ವಾಸಿಸ್ತಾ ಇದ್ದಾರೆ. ಮುಂಬೈನ ಜುಹುವಿನಲ್ಲಿರುವ ಈ ಬಂಗಲೆಯ ಬೆಲೆ ಮೂಲಗಳ ಪ್ರಕಾರ 60 ಕೋಟಿ ರೂಪಾಯಿ.


ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಮನೆಯ ಪ್ರತಿಯೊಂದು ಮೂಲೆಯಲ್ಲೂ ಸಂಪತ್ತು ಮತ್ತು ಐಷಾರಾಮ ಕಾಣುತ್ತೆ. ಆದಾಗ್ಯೂ ಅವರ ಮಕ್ಕಳಾದ ನ್ಯಾಸಾ ಹಾಗೂ ಯುಗ್‌ ಅವರ ಬಾಂಧವ್ಯ ಅವರ ಮನೆಯನ್ನು ಮನೆಯನ್ನಾಗಿಸಿದೆ ಅಂದರೆ ಸುಳ್ಳಾಗೋದಿಲ್ಲ.


ಇದನ್ನೂ ಓದಿ: ಮನೆಯಲ್ಲಿಯೇ ಕೂತು ತಿಂಗಳಿಗೆ 24 ಸಾವಿರಕ್ಕೂ ಅಧಿಕ ವೇತನ ಪಡೆಯಿರಿ, ಇದು ಜೊಮ್ಯಾಟೋ ಆಫರ್!


ಒಟ್ಟಾರೆ, ಸೆಲೆಬ್ರಿಟಿ ಕಪಲ್‌ ಅದರಲ್ಲೂ ಬಾಲಿವುಡ್‌ ನ ಜೋಡಿಗಳು ಎಂದರೆ ಇಂದು ಜೊತೆಗಿದ್ದು ಸ್ವಲ್ಪ ದಿನಕ್ಕೇ ಬೇರೆಯಾಗಿ ಬಿಡ್ತಾರೆ ಅನ್ನೋ ಭಾವನೆ ಸಾಮಾನ್ಯ ಜನರಲ್ಲಿರುತ್ತೆ. ಆದ್ರೆ ಕೆಲವೇ ಕೆಲವು ಜೋಡಿಗಳು ಮಾತ್ರ ಕೊನೆಯವರೆಗೂ ಜೊತೆಯಾಗಿಯೇ ಕುಟುಂಬವನ್ನು ಮುನ್ನಡೆಸ್ತಾರೆ. ಅಂಥವರಲ್ಲಿ ಅಜಯ್‌ ದೇವಗನ್‌ ಹಾಗೂ ಕಾಜೋಲ್‌ ದಂಪತಿ ಕೂಡ ಹೌದು. ಮದುವೆಯಾಗಿ 22 ವರ್ಷಗಳಾದರೂ ಅವರ ದಾಂಪತ್ಯದಲ್ಲಿ ಅಪಸ್ವರ ಬಂದಿಲ್ಲ. ಇಬ್ಬರೂ ನಟನೆ ಹಾಗೂ ಸಂಬಂಧವನ್ನು ನಿಭಾಯಿಸಿಕೊಂಡು ಹೋಗಿದ್ದಾರೆಂಬುದಕ್ಕೆ ಅವರ ಅಭಿಮಾನಿಗಳಿಗೆ ಖುಷಿ ಇದೆ. ಇನ್ನು ಅವರ ಐಷಾರಾಮದ ಶಿವಶಕ್ತಿ ಬಂಗಲೆಯಲ್ಲಿ ಏನುಂಟು ಏನಿಲ್ಲ. ಬಂಗಲೆಯ ಒಳಗೆ ನೋಡಿದರೆ ಅದು ಪುಟ್ಟ ಸ್ವರ್ಗ ಅನ್ನೋದರಲ್ಲಿ ಡೌಟೇ ಇಲ್ಲ.

First published: