ವೋಗ್ ಮ್ಯಾಗಜಿನ್​ಗೆ ಅಮೆರಿಕ ಗಾಯಕನ ಜತೆ ಹಾಟ್ ಪೋಸ್ ಕೊಟ್ಟ ಐಶ್ವರ್ಯ ರೈ

news18
Updated:April 5, 2018, 7:32 PM IST
ವೋಗ್ ಮ್ಯಾಗಜಿನ್​ಗೆ ಅಮೆರಿಕ ಗಾಯಕನ ಜತೆ ಹಾಟ್ ಪೋಸ್ ಕೊಟ್ಟ ಐಶ್ವರ್ಯ ರೈ
news18
Updated: April 5, 2018, 7:32 PM IST
ನ್ಯೂಸ್ 18 ಕನ್ನಡ

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರು ವೋಗ್ ಮ್ಯಾಗಜಿನ್​ಗೆ ಅಮೆರಿಕದ ನಟ ಹಾಗೂ ಗಾಯಕ ಫಾರೆಲ್ ವಿಲಿಯಮ್ಸ್ ಜತೆ ಪೋಸ್ ಕೊಟ್ಟಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಏಪ್ರಿಲ್ ಸಂಚಿಕೆಯ ಮ್ಯಾಗಜಿನ್​ನ ಮುಖ ಪುಟದಲ್ಲಿ ಈ ಫೋಟೋ ಬಿಡುಗಡೆಯಾಗಿದ್ದು, ಐಶ್ಚರ್ಯ ರೈ ಅವರು ಸೆಕ್ಸಿ ಲುಕ್​ನಲ್ಲಿ ಕಂಗೊಳಿಸುತ್ತಿದ್ದಾರೆ.

ವಿಲಿಯಮ್ಸ್ ಅವರು ಈ ಫೋಟೋದಲ್ಲಿ ಧರಿಸಿರುವ ಬಟ್ಟೆ ಈ ವರ್ಷ ರಣವೀರ್ ಸಿಂಗ್ ಜತೆ ಹೋಲಿ ಆಡುವ ಸಂದರ್ಭ ಧರಿಸಿದ ಬಟ್ಟೆಯ ರೀತಿ ಗೋಚರಿಸುತ್ತದೆ. ಇನ್ನು ಐಶ್ವರ್ಯ ರೈ ಅವರು ಎಡಭಾಗ ಸ್ಲೀವ್​ ಲೆಸ್ ಇರುವ ತೆಳು ನೀಲಿ ಬಣ್ಣದ ಬಟ್ಟೆ ಧರಿಸಿದ್ದರೆ, ವಿಲಿಯಮ್ಸ್ ಅವರು ಐಶ್ವರ್ಯ ಅವರ ಸೊಂಟವನ್ನು ಹಿಡಿದು ಪೋಸ್ ಕೊಟ್ಟಿದ್ದಾರೆ. ಇನ್ನೊಂದು ಫೋಟೋದಲ್ಲಿ ಇಬ್ಬರು ಸಹ ಕೆಂಪು ಬಣ್ಣದ ಉಡುಗೆ ತೊಟ್ಟಿದ್ದು, ಐಶ್ವರ್ಯ ಅವರು ವಿಲಿಯಮ್ಸ್ ಅವರ ಹೆಗಲ ಮೇಲೆ ಕೈ ಇರಿಸಿ ಪೋಸ್ ನೀಡಿದ್ದಾರೆ.

 

 
ಫೋಟೋ ಶೂಟ್ ಬಳಿಕ ಮಾತನಾಡಿದ ಐಶ್ವರ್ಯ ರೈ ಅವರು, 'ನಾನು ಕುಟುಂಬಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತೇನೆ. ಅದರಲ್ಲೂ ಆರಾಧ್ಯ ಜತೆ ಹೆಚ್ಚು ಸಮಯ ಕಳೆಯುತ್ತೇನೆ. ಚಿತ್ರೀಕರಣದಲ್ಲಿ ಅಥವಾ ಫೋಟೋ ಶೂಟ್​ಗಳಲ್ಲಿ ಭಾಗಿಯಾಗುವುದು ತುಂಬಾನೇ ಕಷ್ಟ' ಎಂದು ಹೇಳಿದ್ದಾರೆ.

ಸದ್ಯ ಐಶ್ವರ್ಯ ಅವರು ಅನಿಲ್ ಕಪೂರ್ ಜತೆ 'ಫನ್ನೆ ಖಾನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 
 


First published:April 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ