Airtel ಮಹಿಳಾ ಉದ್ಯೋಗಿಗಳಿಗೆ ಬಂಪರ್: ಮಗುವಿಗೆ 18 ತಿಂಗಳು ಆಗುವವರೆಗೂ 7 ಸಾವಿರ ಹೆಚ್ಚುವರಿ ಬೋನಸ್

ಹುಟ್ಟಿದ ಮಗುವಿಗೆ 18 ತಿಂಗಳು ತುಂಬುವವರೆಗೂ 7,000 ರೂಪಾಯಿಗಳ ವಿಶೇಷ ಮಾಸಿಕ ಭತ್ಯೆಯನ್ನು ನೀಡಲಾಗುವುದು ಎಂದು ಏರ್​ಟೆಲ್​ ಕಂಪನಿ ತನ್ನ ಇತ್ತೀಚಿನ ಘೋಷಣೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೊಡ್ಡ ದೊಡ್ಡ ಕಂಪನಿಗಳು ತನ್ನ ಉದ್ಯೋಗಿಗಳಿಗಾಗಿ (Employees) ಸದಾ ಒಂದಲ್ಲ ಒಂದು ಹೊಸದಾದ ಘೋಷಣೆಗಳನ್ನು ಮಾಡುತ್ತಲೇ ಇರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮಹಿಳಾ (Women) ಉದ್ಯೋಗಿಗಳು ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎಂದರೆ ಅವರಿಗಾಗಿ ಕೆಲವು ತಿಂಗಳುಗಳ ಕಾಲ ಹೆರಿಗೆ ರಜೆಯನ್ನು (Maternity leave) ನೀಡುವುದರ ಜೊತೆಗೆ, ಮಗು (Child) ಜನಿಸಿದ ಕೆಲವು ತಿಂಗಳುಗಳ ನಂತರ ಅವರಿಗೆ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಮಗುವನ್ನು ನೋಡಿಕೊಳ್ಳಲು ಕಂಪನಿಯಲ್ಲಿಯೇ ಬೇಬಿ ಸಿಟ್ಟಿಂಗ್ (Baby sitting) ಸಹ ಇರಿಸಿರುತ್ತಾರೆ.

ಏರ್​ಟೆಲ್​ ಮಹಿಳಾ ಉದ್ಯೋಗಿಗಳಿಗೆ ಬಂಪರ್​

ಟೆಲಿಕಾಂ ಸೇವಾ  ಪೂರೈಕೆದಾರ ಕಂಪನಿಯಾದ ಏರ್​ಟೆಲ್ ಸಹ ತನ್ನ ಮಹಿಳಾ ಉದ್ಯೋಗಿಗಳಿಗಾಗಿ ಹೊಸದಾಗಿ ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ. ಏನಪ್ಪಾ ಅದು ಒಳ್ಳೆಯ ಸುದ್ದಿ ಅಂತೀರಾ..? ಏರ್​ಟೆಲ್ ಈಗ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು, ಅದರಲ್ಲೂ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ ತಾಯಂದಿರಿಗೆ ತಿಂಗಳಿಗೆ 7,000 ರೂಪಾಯಿ ನೀಡುವುದಾಗಿ ಏರ್​ಟೆಲ್ ಘೋಷಿಸಿದೆ.

ತಾಯಂದಿರಿಗೆ 7 ಸಾವಿರ ವಿಶೇಷ ಮಾಸಿಕ ಭತ್ಯೆ 

ಈ ಹೊಸ ಯೋಜನೆಯನ್ನು ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ತಮ್ಮ ಮಗುವಿಗೆ ಜನ್ಮ ನೀಡಿದರೆ ಅವರ ಪೋಷಕರ ಪ್ರಯೋಜನಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಏರ್​ಟೆಲ್ ಈ ಘೋಷಣೆಯನ್ನು ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು, ಇದನ್ನು ಕೇವಲ ಒಂದೆರಡು ತಿಂಗಳುಗಳ ಕಾಲ ಅಲ್ಲ, ಹುಟ್ಟಿದ ಮಗುವಿಗೆ 18 ತಿಂಗಳು ತುಂಬುವವರೆಗೂ 7,000 ರೂಪಾಯಿಗಳ ವಿಶೇಷ ಮಾಸಿಕ ಭತ್ಯೆಯನ್ನು ನೀಡಲಾಗುವುದು ಎಂದು ಕಂಪನಿ ತನ್ನ ಇತ್ತೀಚಿನ ಘೋಷಣೆಯಲ್ಲಿ ಹೇಳಿದೆ.

ಇದನ್ನೂ ಓದಿ: Climate Change Impact: ಹವಾಮಾನ ಬದಲಾವಣೆಯ ಪ್ರಭಾವ; ಗಾಳಿ, ಸೌರ ಶಕ್ತಿಗಳಿಗೆ ಫುಲ್ ಡಿಮ್ಯಾಂಡ್

ವಿಶೇಷ ಮಾಸಿಕ ಭತ್ಯೆಯು ಕೇವಲ ಮಕ್ಕಳನ್ನು ಜನ್ಮ ನೀಡಿದ ತಾಯಂದಿರಿಗೆ ಅಲ್ಲದೆ, ಮಕ್ಕಳನ್ನು ದತ್ತು ಪಡೆದ ತಾಯಂದಿರಿಗೂ ಸಹ ಈ ಮಾಸಿಕ ಭತ್ಯೆಯನ್ನು ನೀಡುವುದಾಗಿ ಕಂಪನಿ ತಿಳಿಸಿದೆ. ಹೊಸ ಪೋಷಕರ ಉಪಕ್ರಮದೊಂದಿಗೆ, ವೈವಿಧ್ಯಮಯ ಮತ್ತು ಅಂತರ್ಗತ ಕಾರ್ಯ ಕ್ಷೇತ್ರವನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ ಎಂದು ಕಂಪನಿ ಹೇಳುತ್ತದೆ. ಹೊಸ ತಂದೆ ತಾಯಂದಿರಿಗೆ ಇಂತಹ ಅನೇಕ ಆರ್ಥಿಕ ಪ್ರಯೋಜನಗಳನ್ನು ನೀಡುವ ಕೆಲವೇ ಕೆಲವು ಕಂಪನಿಗಳಲ್ಲಿ ಏರ್​ಟೆಲ್ ಸಹ ಒಂದಾಗಿದೆ ಎಂದು ಹೇಳಲಾಗುತ್ತಿದೆ.

18 ತಿಂಗಳು ತುಂಬುವವರೆಗೂ ವಿಶೇಷ ಭತ್ಯೆ

ಆರ್ಥಿಕ ಲಾಭಗಳ ಜೊತೆಗೆ, ಕಂಪನಿಯು ಮಹಿಳಾ ಉದ್ಯೋಗಿಗಳಿಗೆ 26 ವಾರಗಳ ಹೆರಿಗೆ ರಜೆಯನ್ನು ನೀಡುತ್ತದೆ. ಇದಲ್ಲದೆ, ಟೆಲಿಕಾಂ ಆಪರೇಟರ್ 24 ವಾರಗಳ ಫ್ಲೆಕ್ಸಿಬಲ್ ವರ್ಕ್ ಆಯ್ಕೆಯನ್ನು ಸಹ ನೀಡುತ್ತದೆ. ಇದರಿಂದ ಹೊಸ ತಾಯಂದಿರು ತಮ್ಮದೇ ಆದ ಸಮಯವನ್ನು ತೆಗೆದುಕೊಂಡು ಕೆಲಸಕ್ಕೆ ಮರಳಬಹುದು ಮತ್ತು ಇದರಿಂದ ತಮ್ಮ ನವಜಾತ ಶಿಶುಗಳಿಗೆ ಹೆಚ್ಚು ಸಮಯ ನೀಡಿದಂತಾಗುತ್ತದೆ. ಹೊಸ ತಾಯಂದಿರು ಶಿಶುಪಾಲನೆಗಾಗಿ ಪ್ರತಿ ತ್ರೈಮಾಸಿಕದಲ್ಲಿ ಎರಡು ಹೆಚ್ಚುವರಿ ರಜೆಗಳನ್ನು ಸಹ ಪಡೆಯುತ್ತಾರೆ.

ಟೆಲಿಕಾಂ ಆಪರೇಟರ್ ಹೊಸ ತಂದೆಯರಿಗೆ ಪೋಷಕರ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಏಕೆಂದರೆ ಅವರು ಸಹ ಕಾಳಜಿ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಂಪನಿಯು ಹೊಸ ತಂದೆಯರಿಗೆ ಎಂಟು ವಾರಗಳ ಪಿತೃತ್ವ ರಜೆಯನ್ನು ಸಹ ನೀಡುತ್ತದೆ.

ಮಹಿಳಾ ಉದ್ಯೋಗಿಗಳಿಗೆ ಪ್ರೋತ್ಸಾಹ

ಭಾರ್ತಿ ಏರ್​ಟೆಲ್‌ನ ಮುಖ್ಯ ಪೀಪಲ್ಸ್ ಆಫೀಸರ್ ಅಮೃತ್ ಪಡ್ಡಾ ಅವರು ಈ ಎಲ್ಲಾ ಪ್ರಯೋಜನಗಳ ಬಗ್ಗೆ ಮಾತಾಡುತ್ತಾ, ಕಂಪನಿ ಪಟ್ಟಿಯಲ್ಲಿ ಮೇಲಿರಲು "ನೀತಿಗಳನ್ನು ಮರುಪರಿಶೀಲಿಸುವ ಅಗತ್ಯವಿದೆ" ಎಂದು ಹೇಳಿದರು. ಈ ಉಪಕ್ರಮಗಳು "ಭಾರ್ತಿ ಏರ್​ಟೆಲ್‌ನಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಲು ಹೆಚ್ಚಿನ ಮಹಿಳೆಯರನ್ನು ಪ್ರೋತ್ಸಾಹಿಸುತ್ತವೆ" ಎಂದು ಅವರು ನಂಬುತ್ತಾರೆ.

ಇದನ್ನೂ ಓದಿ: Pariksha Pe Charcha ಕಾರ್ಯಕ್ರಮಕ್ಕೆ ಮೈಸೂರು ವಿದ್ಯಾರ್ಥಿ ಆಯ್ಕೆ; ಏ.1 ರಂದು ಮಕ್ಕಳೊಂದಿಗೆ ಮೋದಿ ಸಂವಾದ

"ನಾವು ಇದನ್ನು ಹೆಚ್ಚು ವೈವಿಧ್ಯಮಯ ಮತ್ತು ಅಂತರ್ಗತ ಕೆಲಸದ ಸ್ಥಳವನ್ನಾಗಿ ಮಾಡುವ ಸ್ಪಷ್ಟ ಗಮನದೊಂದಿಗೆ ಮಾಡಿದ್ದೇವೆ. ಹೆಚ್ಚಿನ ಮಹಿಳೆಯರು ತಮ್ಮ ಪ್ರಮುಖ ಜೀವನದ ಹಂತಗಳನ್ನು ಹಾದು ಹೋಗುವಾಗ ಏರ್​ಟೆಲ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಲು ಇದು ಪ್ರೋತ್ಸಾಹಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಪಡ್ಡಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಕಂಪನಿಯು ಈ ರೀತಿಯ ಒಳ್ಳೆಯ ನೀತಿಗಳನ್ನು ಸೃಷ್ಟಿಸುವ ಬಗ್ಗೆ ಹೆಮ್ಮೆ ಪಡುತ್ತದೆ" ಎಂದೂ ಅವರು ಹೇಳಿದರು.
Published by:Pavana HS
First published: