HOME » NEWS » Trend » AIRPORTS COULD PRODUCE ENOUGH SOLAR ENERGY TO POWER OVER 1 LAKH HOMES STUDY STG LG

1 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಪೂರೈಸುತ್ತಿವೆ ಆಸ್ಟ್ರೇಲಿಯಾ ವಿಮಾನ ನಿಲ್ದಾಣಗಳು; ಸಂಶೋಧನೆಯಿಂದ ಬಹಿರಂಗ

ಮೆಲ್ಬೋರ್ನ್‌ನ RMIT ವಿಶ್ವವಿದ್ಯಾನಿಲಯದಲ್ಲಿ ಈ ಸಂಶೋಧನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಶೋಧಕರು ಆಸ್ಟ್ರೇಲಿಯ ನಗರದಲ್ಲಿ ವಸತಿ ಸೌರ ಫಲಕಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಆ ದೇಶದ 21 ವಿಮಾನ ನಿಲ್ದಾಣಗಳ ಹಸಿರು ಶಕ್ತಿ ಉತ್ಪಾದನೆಗೆ ಹೋಲಿಸಿದ್ದಾರೆ.

news18-kannada
Updated:May 12, 2021, 1:17 PM IST
1 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಪೂರೈಸುತ್ತಿವೆ ಆಸ್ಟ್ರೇಲಿಯಾ ವಿಮಾನ ನಿಲ್ದಾಣಗಳು; ಸಂಶೋಧನೆಯಿಂದ ಬಹಿರಂಗ
ವಿಮಾನ ನಿಲ್ದಾಣ
  • Share this:
ಸೌರಶಕ್ತಿಯ ಅನಿವಾರ್ಯತೆ ಈಗ ದಿನೇ ದಿನೇ ಹೆಚ್ಚುತ್ತಿದೆ. ದೊಡ್ಡ ದೊಡ್ಡ ಕಾರ್ಖಾನೆಗಳಿಂದ ಹಿಡಿದು ಎಲ್ಲಾ ಕ್ಷೇತ್ರಗಳಿಗೂ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ಕೊರತೆ ನೀಗುವ ಅಗತ್ಯತೆ ಇದೆ. ಅಲ್ಲದೇ ಪರಿಸರವನ್ನು ಸಂರಕ್ಷಿಸಿಕೊಳ್ಳಲೇಬೇಕಾದ ನೈತಿಕ ಜವಾಬ್ದಾರಿಗಳಿವೆ. ಈ ನಿಟ್ಟಿನಲ್ಲಿ ದೈತ್ಯ ವಿಮಾನ ನಿಲ್ದಾಣಗಳು ಆಸ್ಟ್ರೇಲಿಯಕ್ಕೆ ವರದಾನವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಏರ್‌ಪೋರ್ಟ್‌ ಕಟ್ಟಡಗಳನ್ನು ಬಹಳ ವಿಸ್ತಾರವಾಗಿ ನಿರ್ಮಿಸಲಾಗಿರುತ್ತದೆ. ಈಗ ಈ ವಿಮಾನ ನಿಲ್ದಾಣಗಳ ಖಾಲಿ ಛಾವಣಿಯ ಪ್ರಯೋಜನದ ಬಗ್ಗೆ ಸಂಶೋಧನಾ ವರದಿ ಪ್ರಕಟವಾಗಿದೆ. ಈ ಸಂಶೋಧನೆ ಪ್ರಕಾರ ಆಸ್ಟ್ರೇಲಿಯ ಸರ್ಕಾರದ ಒಡೆತನದ ವಿಮಾನ ನಿಲ್ದಾಣಗಳು ದೊಡ್ಡ ಮಟ್ಟದಲ್ಲಿ ಸೌರಶಕ್ತಿಯನ್ನು ಅಳವಡಿಸಲು ಪ್ರಯೋಜನಕಾರಿಯಾಗಿದೆ. ಛಾವಣಿಗಳ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸಿದರೆ, 1,36,000 ಮನೆಗಳಿಗೆ ವಿದ್ಯುತ್ ಪೂರೈಸುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ನೆಟ್ ಝೀರೋ ಹೊರಸೂಸುವಿಕೆಯ ನಿರ್ಧಾರಕ್ಕೆ ಇದು ಮೊದಲ ಹೆಜ್ಜೆ ಇಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಮೆಲ್ಬೋರ್ನ್‌ನ RMIT ವಿಶ್ವವಿದ್ಯಾನಿಲಯದಲ್ಲಿ ಈ ಸಂಶೋಧನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಶೋಧಕರು ಆಸ್ಟ್ರೇಲಿಯ ನಗರದಲ್ಲಿ ವಸತಿ ಸೌರ ಫಲಕಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಆ ದೇಶದ 21 ವಿಮಾನ ನಿಲ್ದಾಣಗಳ ಹಸಿರು ಶಕ್ತಿ ಉತ್ಪಾದನೆಗೆ ಹೋಲಿಸಿದ್ದಾರೆ.

ದಿ ಜರ್ನಲ್ ಆಫ್ ಬಿಲ್ಡಿಂಗ್ ಎಂಜಿನಿಯರಿಂಗ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಸಂಶೋಧಕರು ದಕ್ಷಿಣ ಆಸ್ಟ್ರೇಲಿಯದ ಬೆಂಡಿಗೊ ಪಟ್ಟಣದಲ್ಲಿ 17,000 ಮನೆಗಳ ಸೋಲಾರ್ ಫಲಕಗಳ ಸ್ಯಾಟಲೈಟ್ ಚಿತ್ರಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳು ದೊಡ್ಡ ಮಟ್ಟದ ಸೋಲಾರ್ ಫಲಕಗಳಿಂದ ಆವೃತ್ತವಾದರೆ, 17,000 ಮನೆಗಳ ಪ್ಯಾನಲ್‌ಗಿಂತಲೂ 10 ಪಟ್ಟು ಹೆಚ್ಚು ವಿದ್ಯುತ್ ಅನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವರ್ಷದಲ್ಲಿ ಹಸಿರು ಮನೆ ಅನಿಲದ ಹೊರಸೂಸುವಿಕೆಯನ್ನು 151.6 ಕಿಲೋ ಟನ್ ಕಡಿಮೆ ಮಾಡಬಹುದು. ಇದು 71,000 ಪ್ಯಾಸೆಂಜರ್ ಕಾರ್ ಹೊಮ್ಮಿಸುವ ಪ್ರಮಾಣದಷ್ಟಿದ್ದು, ಅದನ್ನು ತಗ್ಗಿಸಿದಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದಿದ್ದಾರೆ.

Bengaluru Bed Scam: ಬೆಂಗಳೂರು ಬೆಡ್​ ಬ್ಲಾಕಿಂಗ್​ ದಂಧೆ; ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು

ಪರ್ತ್ ವಿಮಾನ ನಿಲ್ದಾಣವೊಂದೇ ಬೆಂಡಿಗೋಗಿಂತ ಎರಡುಪಟ್ಟು ಹೆಚ್ಚು ಸೌರಶಕ್ತಿ ಉತ್ಪಾದಿಸುತ್ತದೆ. ಹೆಚ್ಚು ಬಿಸಿಲು ಬೀಳುವುದು ಮತ್ತು ದೊಡ್ಡ ಕಟ್ಟಡಗಳಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಒಂದು ವೇಳೆ ಸರ್ಕಾರ ಮತ್ತು ಸಂಶೋಧಕರು ನವೀಕರಿಸಬಹುದಾದ ಶಕ್ತಿ ಮೂಲಗಳ ಅಂಶದ ಕಡೆಗೆ ಗಮನಹರಿಸಿದರೆ ಬಹು ದೊಡ್ಡ ಪರಿಣಾಮ ಬೀರುವುದು ಖಂಡಿತ ಎಂದು ವಿಶ್ಲೇಷಣಾಕಾರರು ಅಭಿಪ್ರಾಯ ಪಡುತ್ತಾರೆ.
ಅಷ್ಟೇ ಅಲ್ಲದೇ ಸಂಶೋಧಕರು ವಿಮಾನ ನಿಲ್ದಾಣದ ತೆರೆದ ಛಾವಣಿಯ ಸ್ಯಾಟಲೈಟ್ ಚಿತ್ರಗಳನ್ನು ಸ್ಕ್ಯಾನ್ ಮಾಡಿದ್ದು, ಇಲ್ಲಿ ಸೋಲಾರ್ ಫಲಕಗಳು ನೆರಳನ್ನು ಕೂಡ ನಿಯಂತ್ರಿಸಲು 2.61 ಚದರ ಕಿಲೋಮೀಟರ್ ಪ್ರದೇಶವನ್ನು ಗುರುತಿಸಲಾಗಿದೆ.ಹಿಂದಿನ ಅಧ್ಯಯನಗಳು ವಿಮಾನ ನಿಲ್ದಾಣಗಳು ಸೌರಶಕ್ತಿ ಸಂಗ್ರಹಣೆಗೆ ಪ್ರಮುಖ ತಾಣವಾಗಿದೆ ಎಂದು ತಿಳಿಸಿವೆ. RMIT ಸಂಶೋಧನೆಯೂ ದೊಡ್ಡ ಮಟ್ಟದಲ್ಲಿ ಇದನ್ನು ರೂಪಿಸುವ ಬಗ್ಗೆ ಇನ್ನಷ್ಟು ತೊಡಗಿಕೊಳ್ಳಲಿದೆ.
Youtube Video

RMITಯ ಸ್ಕೂಲ್ ಆಫ್ ಸೈನ್ಸ್‌ನ ಭೂವೈಜ್ಞಾನಿಕ ವಿಜ್ಞಾನಿ ಚೈನ್ ಸನ್ ಅವರ ಪ್ರಕಾರ ಈ ಸಂಶೋಧನೆಯ ಫಲಿತಾಂಶವು ಶಕ್ತಿ ನೀತಿ ಮತ್ತು ಇನ್ನಿತರ ಅಧ್ಯಯನದ ಬಗ್ಗೆ ಗಮನಹರಿಸುವುದಲ್ಲದೇ ದೊಡ್ಡ ಕಟ್ಟಡದಲ್ಲಿ ಸೋಲಾರ್ ಫಲಕ ಅಳವಡಿಸುವ ಬಗ್ಗೆ ಮಾರ್ಗದರ್ಶನ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.
Published by: Latha CG
First published: May 12, 2021, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories