Viral Video: ಅಳುತ್ತಿರುವ ಮಗುವನ್ನು ಮುದ್ದಾಡಿದ ಏರ್ ಇಂಡಿಯಾ ಸಿಬ್ಬಂದಿ! ಎಷ್ಟು ಕ್ಯೂಟ್ ಆಗಿದೆ ಈ ವಿಡಿಯೋ

ಏರ್ ಇಂಡಿಯಾದ ಮೇಲ್ವಿಚಾರಕರೊಬ್ಬರು ಅಳುತ್ತಿರುವ ಅಂಬೆಗಾಲಿನ ಮಗುವನ್ನು ಎತ್ತಿಕೊಂಡು ಅವಳನ್ನು ಸಂತೈಸಿದ್ದಾರೆ. ಮೇಲ್ವಿಚಾರಕನ ಹಾವಭಾವದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ಮತ್ತು ಇದು ಅನೇಕ ನೆಟ್ಟಿಗರ ಹೃದಯವನ್ನು ಗೆದ್ದಿದೆ.

ಅಳುತ್ತಿರುವ ಮಗುವನ್ನು ಸಮಾಧಾನಪಡಿಸಿದ ಏರ್ ಇಂಡಿಯಾ ಸಿಬ್ಬಂದಿ

ಅಳುತ್ತಿರುವ ಮಗುವನ್ನು ಸಮಾಧಾನಪಡಿಸಿದ ಏರ್ ಇಂಡಿಯಾ ಸಿಬ್ಬಂದಿ

  • Share this:

ಸಾಮಾನ್ಯವಾಗಿ ನಾವು ಈ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಸ್ ನಲ್ಲಿ (Bus) ಅಥವಾ ರೈಲಿನಲ್ಲಿ (Train) ಹೋದರೆ ಅವುಗಳಿಗೆ ಅದೇನು ಅಂತಾನೆ ಅರ್ಥವಾಗದೆ ಸ್ವಲ್ಪ ಹೊತ್ತು ಕಿರಿಕಿರಿ ಮಾಡಿಕೊಂಡು ಅಳುವುದಕ್ಕೆ (Cry) ಶುರು ಮಾಡುವುದಂತೂ ಗ್ಯಾರೆಂಟಿ.  ಆಗ ಆಳುವ ಮಕ್ಕಳನ್ನು ಪಕ್ಕದಲ್ಲಿರುವ ಜನರು ಸ್ವಲ್ಪ ಎತ್ತಿಕೊಂಡು ಸಮಾಧಾನ ಪಡಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ. ಹೌದು.. ಚಿಕ್ಕ ಮಕ್ಕಳು (Children) ಎಷ್ಟೇ ಕಿರಿಕಿರಿ ಮಾಡಿದರೂ ತಾಳ್ಮೆ ಕಳೆದುಕೊಳ್ಳದೆ ಜನರು ಆ ಮಗುವನ್ನು ಎತ್ತಿಕೊಂಡು ಆಡಿಸುತ್ತಾ ಮಗುವನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ.  ಇಲ್ಲಿ ಒಂದು ಹೊಸ ವಿಡಿಯೋ (Video) ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ಜೋರಾಗಿ ಹರಿದಾಡುತ್ತಿದೆ ಮತ್ತು ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿದೆ ನೋಡಿ.


ಅಂಬೆಗಾಲಿಡುವ ಮಗುವನ್ನು ಸಮಾಧಾನಪಡಿಸಿದ ಏರ್ ಇಂಡಿಯಾ ಸಿಬ್ಬಂದಿ
ಬಸ್ ಮತ್ತು ರೈಲಿನಲ್ಲಿ ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವುದು ಕಷ್ಟದ ಕೆಲಸ ಅಂತ ಹೇಳಬೇಕಾದರೆ ಇಲ್ಲಿ ವಿಮಾನದಲ್ಲಿ ಅಂಬೆಗಾಲಿಡುವ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದಾರೆ ನೋಡಿ. ಅದರಲ್ಲೂ ದೀರ್ಘ ಸಮಯದ ಪ್ರಯಾಣದ ಸಮಯದಲ್ಲಿ ಮಗುವು ಚಡಪಡಿಕೆಯನ್ನು ಅನುಭವಿಸುತ್ತದೆ ಮತ್ತು ಸ್ಥಿರವಾಗಿ ಕುಳಿತುಕೊಳ್ಳಲು ಬಯಸುವುದಿಲ್ಲ.


ಇದನ್ನೂ ಓದಿ:  Viral Post: ಕಾರು ಖರೀದಿಸಿದ ಬಳಿಕ ಮಾಜಿ ಬಾಸ್ ಮತ್ತು ಮಾಜಿ ಗೆಳತಿಯರಿಗೆ ಥ್ಯಾಂಕ್ಸ್ ಹೇಳಿದ ವ್ಯಕ್ತಿ! ಯಾಕೆ?

ಈ ಹೃದಯಸ್ಪರ್ಶಿ ವಿಡಿಯೋದಲ್ಲಿ ಏರ್ ಇಂಡಿಯಾದ ಮೇಲ್ವಿಚಾರಕನೊಬ್ಬ ಪ್ರಯಾಣಿಕನ ಅಸಮಾಧಾನಗೊಂಡ ಅಂಬೆಗಾಲಿಡುವ ಮಗುವನ್ನು ಎತ್ತಿಕೊಂಡು ಅವಳನ್ನು ಸಂತೈಸಿದನು. ಮೇಲ್ವಿಚಾರಕನ ಹಾವಭಾವದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ಮತ್ತು ಇದು ಅನೇಕ ನೆಟ್ಟಿಗರ ಹೃದಯವನ್ನು ಗೆದ್ದಿದೆ.


ಈ ವೈರಲ್ ವಿಡಿಯೋದಲ್ಲೇನಿದೆ ?
ಛಾಯಾಗ್ರಾಹಕ ಜೀವನ್ ವೆಂಕಟೇಶ್ ಅವರು ತಮ್ಮ ಮಗಳನ್ನು ಸಂತೈಸಲು ಸಹಾಯ ಮಾಡಿದ ಏರ್ ಇಂಡಿಯಾದ ವಿಮಾನದ ಮೇಲ್ವಿಚಾರಕನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೀಲ್ ಮಲ್ಕಮ್ ಎಂದು ಗುರುತಿಸಲಾಗಿರುವ ಫ್ಲೈಟ್ ಸ್ಟೀವರ್ಡ್, ಅಂಬೆಗಾಲಿಡುವ ಮಗುವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ವಿಮಾನದಲ್ಲಿ ಅತ್ತಿಂದಿತ್ತ ನಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು.





ಇದನ್ನೂ ಓದಿ:  Marriage with Doll: ಇವನಿಗೆ ಬೊಂಬೆ ಮೇಲೆ ಪ್ಯಾರ್‌ಗೇ ಆಗ್ಬಿಟ್ಟೈತೆ! ಅದನ್ನೇ ಮದ್ವೆಯಾಗ್ತಾನಂತೆ ಈ ಭೂಪ!

ಆ ಪುಟ್ಟ ಮಗುವಿನ ಬೆನ್ನನ್ನು ತಟ್ಟಿ ಸಂತೈಸುವುದನ್ನು ಸಹ ವಿಡಿಯೋದಲ್ಲಿ ನಾವು ನೋಡಬಹುದು ಮತ್ತು ಅಷ್ಟೇ ಅಲ್ಲದೆ ಆ ಮಗುವು ಅವರ ತೋಳುಗಳಲ್ಲಿ ಸಾಕಷ್ಟು ನಿರಾಳವಾಗಿ ಮಲಗಿರುವುದನ್ನು ನಾವು ನೋಡಬಹುದು.


ಸಿಕ್ಕಾಪಟ್ಟೆ ವೈರಲ್ ಆಯ್ತು ಈ ಕ್ಯೂಟ್ ವಿಡಿಯೋ
"ಏರ್ ಇಂಡಿಯಾ ವಿಮಾನದ ಸಿಬ್ಬಂದಿಯ ಮಧುರ ಹಾವಭಾವವನ್ನು ನಿಜವಾಗಿಯೂ ಶ್ಲಾಘಿಸಿ, ನನ್ನ ಮಗಳು ಮೇಲ್ವಿಚಾರಕನ ತೋಳಿನಲ್ಲಿ ಆರಾಮವಾಗಿ ಮಲಗಿದಾಗ ಆಶ್ಚರ್ಯವಾಯಿತು, ಅವರಿಗೆ ಧನ್ಯವಾದಗಳು. ಟಾಟಾ ಸ್ವಾಧೀನದ ನಂತರ ಈ ಪ್ರವಾಸದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಧನ್ಯವಾದಗಳು" ಎಂದು ವೆಂಕಟೇಶ್ ವಿಡಿಯೋದ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.


ವೈರಲ್ ವಿಡಿಯೋ ನೋಡಿ ನೆಟ್ಟಿಗರು ಏನಂದ್ರು 
ಈ ವಿಡಿಯೋ ಪೋಸ್ಟ್ ಮಾಡಿದ ನಂತರ, ವಿಡಿಯೋಗೆ 2.20 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ನೆಟ್ಟಿಗರು ಈ ವಿಮಾನದ ಸಿಬ್ಬಂದಿಯ ದಯಾಪರ ವರ್ತನೆಯನ್ನು ಶ್ಲಾಘಿಸಿದರು ಮತ್ತು ಕೆಲವರು ವಿಮಾನಯಾನ ಸಂಸ್ಥೆಯನ್ನು ಶ್ಲಾಘಿಸಿದರು.


ಇದನ್ನೂ ಓದಿ:  Fitness: ಜಿಮ್‌ಗೆ ಹೋಗದೆ ಫಿಟ್ನೆಸ್‌ನಲ್ಲಿ ವಿಶ್ವ ದಾಖಲೆ ಬರೆದ ಪಂಜಾಬ್ ಯುವಕ! ಸಾಧನೆ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಸಿಂಗ್‌

"ಹೃದಯಸ್ಪರ್ಶಿ ಹಾವಭಾವ, ಎಂತಹ ದಯಾಳು ವ್ಯಕ್ತಿ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಕ್ಯಾಬಿನ್ ಸಿಬ್ಬಂದಿ ಯಾವಾಗಲೂ ತಮ್ಮ ವೈಯಕ್ತಿಕ ಸ್ಪರ್ಶವನ್ನು ಹೊಂದಿರುತ್ತಾರೆ. ಅವರಿಗೆ ನಮಸ್ಕಾರಗಳು" ಎಂದು ಇನ್ನೊಬ್ಬರು ಹೇಳಿದರು.

Published by:Ashwini Prabhu
First published: