• Home
  • »
  • News
  • »
  • trend
  • »
  • Air India: ಬಿಳಿ ಕೂದಲಿರೋ ಪುರುಷರು ಫುಲ್ ಬಾಲ್ಡ್ ಮಾಡ್ಕೊಳ್ಳಿ, ಮಹಿಳೆಯರು ಬಳೆ ಕಡಿಮೆ ಹಾಕಿ! ಏರ್ ಇಂಡಿಯಾ ಸಿಬ್ಬಂದಿಗೆ ಹೊಸ ರೂಲ್ಸ್

Air India: ಬಿಳಿ ಕೂದಲಿರೋ ಪುರುಷರು ಫುಲ್ ಬಾಲ್ಡ್ ಮಾಡ್ಕೊಳ್ಳಿ, ಮಹಿಳೆಯರು ಬಳೆ ಕಡಿಮೆ ಹಾಕಿ! ಏರ್ ಇಂಡಿಯಾ ಸಿಬ್ಬಂದಿಗೆ ಹೊಸ ರೂಲ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏರ್ ಇಂಡಿಯಾ ಗ್ರೂಮಿಂಗ್ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿ ಕ್ಯಾಬಿನ್ ಅಟೆಂಡೆಂಟ್ ಯಾವ ರೀತಿಯ ಲುಕ್ ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ. ಏರ್ ಇಂಡಿಯಾ ಹೊಸ ರೂಲ್ಸ್ ಏನು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ...

  • Share this:

    ಏಳು ದಶಕಗಳ ನಂತರ ಮತ್ತೆ ಏರ್ ಇಂಡಿಯಾ (Air India), ಟಾಟಾ ಗ್ರೂಪ್‌ (TATA Group) ಸೇರ್ಪಡೆಯಾಗಿದೆ. ಈಗ ಏರ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ (Main Changes) ತರಲಾಗುತ್ತಿದೆ. ಏರ್ ಇಂಡಿಯಾದ ನಿಯಮಗಳಲ್ಲಿ ಹಲವು ಬದಲಾವಣೆ ಮಾಡಲಾಗುತ್ತಿದೆ. ಈಗ ಏರ್ ಇಂಡಿಯಾ ಗಗನಸಖಿಯರು ಮತ್ತು ಸಿಬ್ಬಂದಿಗೆ ಹೊಸ ನಿಯಮ (New Rules) ಜಾರಿ ಮಾಡಲಾಗಿದೆ. ಈ ಮೂಲಕ ಏರ್ ಇಂಡಿಯಾ ಗಗನಸಖಿಯರು ಮತ್ತು ಸಿಬ್ಬಂದಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏರ್ ಇಂಡಿಯಾ ಈಗ ತನ್ನ ಕ್ಯಾಬಿನ್ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಏರ್ ಇಂಡಿಯಾ ಗ್ರೂಮಿಂಗ್ ಮಾರ್ಗಸೂಚಿಯ ವಿವರವಾದ ಪಟ್ಟಿ ಬಿಡುಗಡೆ ಮಾಡಿದೆ.


    ಏರ್ ಇಂಡಿಯಾ ಗ್ರೂಮಿಂಗ್ ಮಾರ್ಗಸೂಚಿ ಬಿಡುಗಡೆ


    ಏರ್ ಇಂಡಿಯಾ ಗ್ರೂಮಿಂಗ್ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿ ಕ್ಯಾಬಿನ್ ಅಟೆಂಡೆಂಟ್ ಯಾವ ರೀತಿಯ ಲುಕ್ ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ. ಹಾಗೂ ಸಿಬ್ಬಂದಿ ಯಾವೆಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂಬುದನ್ನು ತಿಳಿಸಲಾಗಿದೆ.


    ಮಹಿಳಾ ಸಿಬ್ಬಂದಿಗೆ ಮಾರ್ಗಸೂಚಿ ಪಟ್ಟಿ


    ಏರ್ ಇಂಡಿಯಾ ಗ್ರೂಮಿಂಗ್ ನಿಯಮಗಳ ಪಟ್ಟಿ ದೊಡ್ಡದಿದೆ. ಇದರಲ್ಲಿ ಪುರುಷ ಸಿಬ್ಬಂದಿ ಮತ್ತು ಮಹಿಳಾ ಸಿಬ್ಬಂದಿ ಯಾವ ರೀತಿಯ ಲುಕ್ ಹೊಂದಿರಬೇಕು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. ಕ್ಯಾಬಿನ್ ಸಿಬ್ಬಂದಿಗೆ ತಮ್ಮ ಲುಕ್ ಬಗ್ಗೆ ವಿಶೇಷ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ.


    ಕ್ಯಾಬಿನ್ ಸಿಬ್ಬಂದಿ ಪುರುಷರಿಗೆ ಕೂದಲು ಕಡಿಮೆ ಇರುವವರು ಹಾಗೂ ಬೊಕ್ಕ ತಲೆ ಇದ್ದವರು ಯಾವ ರೀತಿಯ ಲುಕ್ ಹೊಂದಿರಬೇಕು ಎಂದು ತಿಳಿಸಲಾಗಿದೆ. ಇದೇ ವೇಳೆ ಗಗನಸಖಿಯರು ಯಾವ ವಸ್ತುಗಳನ್ನು ಧರಿಸಬಾರದು ಎಂಬುದರ ಬಗ್ಗೆಯೂ ಹೇಳಲಾಗಿದೆ.


    ಹಣೆಗೆ ಹಚ್ಚುವ ಬಿಂದಿಯಿಂದ ಹಿಡಿದು ಬಳೆಯವರೆಗೆ ಹೇಗೆ ಕಾಳಜಿ ವಹಿಸಬೇಕು ಎಂಬ ನಿಯಮ ಮಾಡಲಾಗಿದೆ.


    ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ಮಾಡಲಾಗಿರುವ ನಿಯಮಗಳು ಹೀಗಿವೆ


    -ಮಹಿಳಾ ಸಿಬ್ಬಂದಿ ಉದ್ದ ಕಿವಿಯೋಲೆ ಧರಿಸುವಂತಿಲ್ಲ.


    - ಹಣೆಗೆ ಹಚ್ಚುವ ಬಿಂದಿ 0.5 ಸೆಂ.ಮೀ ಗಾತ್ರಕ್ಕಿಂತ ದೊಡ್ಡದಿರಬಾರದು.


    - ಯಾವುದೇ ವಿನ್ಯಾಸವಿಲ್ಲದ ಪ್ಲೇನ್ ಬಳೆ ಧರಿಸಬೇಕು. ಹೆಚ್ಚು ಬಳೆ ಧರಿಸುವಂತಿಲ್ಲ.


    - ಕೂದಲನ್ನು ಹೆಚ್ಚು ಮೇಲಕ್ಕೆ ಕಟ್ಟಬಾರದು ಮತ್ತು ಅದಕ್ಕಾಗಿ ದೊಡ್ಡ ವಸ್ತು ಬಳಸುವಂತಿಲ್ಲ. ಚಿಕ್ಕ ಬನ್ ನಲ್ಲಿ ಕೂದಲು ಕಟ್ಟಿರಬೇಕು. ಹೇರ್ ಸ್ಟೈಲ್ ಮಾಡುವಂತಿಲ್ಲ.


    - ಮುತ್ತಿನ ದೊಡ್ಡ ಕಿವಿಯೋಲೆ ಹಾಕುವಂತಿಲ್ಲ. ಯಾವುದೇ ವಿನ್ಯಾಸವಿಲ್ಲದ ಚಿನ್ನ ಅಥವಾ ವಜ್ರದ ಚಿಕ್ಕ ಕಿವಿಯೋಲೆ ಮಾತ್ರ ಹಾಕಬೇಕು.


    - ಐಶ್ಯಾಡೋ, ಲಿಪ್‌ಸ್ಟಿಕ್, ನೇಲ್ ಪೇಂಟ್ ಮತ್ತು ಹೇರ್ ಶೇಡ್ ಕಾರ್ಡ್‌ ಗಳ ಬಗ್ಗೆ ಮಾಡಿರುವ ನಿಯಮ ಪಾಲಿಸಬೇಕು.


    - ಮಹಿಳಾ ಸಿಬ್ಬಂದಿ ಮೆಹಂದಿ ಹಾಕುವಂತಿಲ್ಲ.


    - ಗಗನಸಖಿಯರು ಸೀರೆ ಮತ್ತು ಇಂಡೋ-ವೆಸ್ಟರ್ನ್ ವೇರ್ ಎರಡರ ಜೊತೆಗೆ ಫ್ಲೈಟ್ ಡ್ಯೂಟಿಗೆ ಹಾಗೂ ತಮ್ಮ ಚರ್ಮದ ಟೋನ್‌ ಗೆ ಹೊಂದಾಣಿಕೆಯಾಗುವ ಶೀರ್ ಕ್ಯಾಫ್ ಲೆಂಗ್ತ್ ಸ್ಟಾಕಿಂಗ್ಸ್ ಕಡ್ಡಾಯವಾಗಿ ಧರಿಸಬೇಕು.


    - ಮಣಿಕಟ್ಟು, ಕುತ್ತಿಗೆ, ಪಾದದ ಮೇಲೆ ಕಪ್ಪು ಅಥವಾ ಧಾರ್ಮಿಕ ದಾರ ಧರಿಸುವಂತಿಲ್ಲ.


    ಆದಾಗ್ಯೂ ವಿಮಾನಯಾನ ಮೂಲಗಳ ಪ್ರಕಾರ, ಮಾರ್ಗಸೂಚಿಗಳನ್ನು ಇದುವರೆಗೆ ಸಿಬ್ಬಂದಿ ಸಂಪೂರ್ಣವಾಗಿ ಫಾಲೋ ಮಾಡ್ತಿಲ್ಲ. ಕೂದಲಿನ ಬಣ್ಣ ಅಥವಾ ಕ್ಲೀನ್ ಶೇವ್ ತಲೆ ಮತ್ತು ಟೈ-ಪಿನ್ ಧರಿಸುವ ನಿಮಯ ಪಾಲನೆಯಾಗ್ತಿಲ್ಲ ಎಂದು ಹೇಳಿದೆ.


    ಪುರುಷ ಸಿಬ್ಬಂದಿಗೆ ಮಾಡಲಾಗಿರುವ ನಿಯಮಗಳು ಹೀಗಿವೆ


    - ತಲೆಯಲ್ಲಿ ಕಡಿಮೆ ಕೂದಲು ಹೊಂದಿರುವ ಪುರುಷ ಸಿಬ್ಬಂದಿ ತಲೆಯನ್ನು ಚೆನ್ನಾಗಿ ಬೋಳಿಸಬೇಕು. ದಿನವೂ ಕ್ಲೀನ್ ಶೇವ್ ಮಾಡಬೇಕು. ಉದ್ದ ಹಾಗೂ ಕೆದರಿದ ಕೂದಲು ಸರಿ ಮಾಡಬೇಕು. ಉದ್ದ ಕೂದಲು ಹೊಂದುವಂತಿಲ್ಲ. ಪ್ರತಿದಿನ ತಮ್ಮ ತಲೆಯ ಕೂದಲನ್ನು ಕ್ಷೌರ ಮಾಡಬೇಕು.


    ಕ್ಯಾಬಿನ್ ಸಿಬ್ಬಂದಿ ತೂಕ ತಪಾಸಣೆಗೆ ವಿರೋಧ


    ಈ ಹಿಂದೆ ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿ ತೂಕ ತಪಾಸಣೆಗೆ ಸಂಬಂಧ ಪಟ್ಟಂತೆ ಬದಲಾವಣೆ ಮಾಡಲಾಗಿತ್ತು. ಏರ್ ಇಂಡಿಯಾ ಇತ್ತೀಚೆಗೆ ಹೊರಡಿಸಿದ ಸುತ್ತೋಲೆ ಪ್ರಕಾರ, ಬಾಡಿ ಮಾಸ್ ಇಂಡೆಕ್ಸ್  ಮತ್ತು ಉದ್ಯೋಗಿಗಳ ತೂಕ ಪರಿಶೀಲಿಸಲು ಹೊಸ ನಿಯಮವಿದೆ.


    ಇದನ್ನೂ ಓದಿ: ಭವಿಷ್ಯದ ಯುದ್ಧಗಳಲ್ಲಿ ಸ್ವದೇಶಿ ಶಸ್ತ್ರಾಸ್ತ್ರ ಮಾತ್ರ ಬಳಕೆ!


    ಅದರಂತೆ ಈಗ ಪ್ರತಿ ಮೂರು ತಿಂಗಳ ನಂತರ ಸಿಬ್ಬಂದಿಯ ತೂಕ ಪರಿಶೀಲಿಸಲಾಗುತ್ತದೆ. ಸಮವಸ್ತ್ರದ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಆದ್ರೆ ಇದಕ್ಕೆ ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

    Published by:renukadariyannavar
    First published: