ಕಾಲೇಜು (College) ಹುಡುಗಿಯರಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರಿಗೂ (Ladies) ರೀಲ್ಸ್ (Reels) ಗೀಳು ಹೆಚ್ಚಾಗಿದೆ. ಎಲ್ಲೆಂದರಲ್ಲಿ ಟ್ರೆಂಡಿಂಗ್ (Trending) ಹಾಡುಗಳಿಗೆ (Songs) ಹೆಜ್ಜೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ (Social Media) ಅಪ್ಲೋಡ್ ಮಾಡುತ್ತಾರೆ. ಉತ್ತಮ ರೀಲ್ಸ್ಗಳಿಗೆ ಲೈಕ್ (Likes), ಕಾಮೆಂಟ್ (Comment) ಪಡೆದುಕೊಳ್ಳುತ್ತಾರೆ. ಹೀಗೆ ಮಾಡಿದ ರೀಲ್ಸ್ ಕೆಲವರನ್ನು ಪಬ್ಲಿಕ್ ಫಿಗರ್ (Public Figure) ಮಾಡಿಬಿಟ್ಟಿದೆ. ಇಂತವರ ಸಾಲಿಗೆ ಗಗನಸಖಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಉಮಾ ಮೀನಾಕ್ಷಿ ಹೆಸರು ಎಲ್ಲರಿಗೂ ಈಗ ಪರಿಚಿತ. ಗಗನ ಸಖಿಯಾಗಿರುವ ಈಕೆ ಟ್ರೆಂಡಿಂಗ್ ಹಾಡುಗಳಿಗೆ ವಿಮಾನದೊಳಗೆ ಹೆಜ್ಜೆ ಹಾಕುತ್ತಾ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಿನಕ್ಕೊಂದು ರೀಲ್ಸ್ ಅಪ್ಲೋಡ್ ಮಾಡುತ್ತಾ ಸೋಶಿಯಲ್ ಮೀಡಿಯಾದ ಟ್ರೆಂಡಿಂಗ್ ಆಗಿದ್ದಾರೆ. ಸ್ಪೈಸ್ ಜೆಟ್ ಗಗನಸಖಿ ಉಮಾ ಮೀನಾಕ್ಷಿ ಮತ್ತೊಮ್ಮೆ ತಮ್ಮ ಮತ್ತೊಂದು ವಿಡಿಯೋದ ಮೂಲಕ ಈಗ ಸುದ್ದಿಯಲ್ಲಿದ್ದಾರೆ.
ಗಗನಸಖಿ ಉಮಾ ಮೀನಾಕ್ಷಿ ಸಖತ್ ಡ್ಯಾನ್ಸ್
ಸ್ಪೈಸ್ ಜೆಟ್ ವಿಮಾನದಲ್ಲಿ ಗಗನಸಖಿಯಾಗಿರುವ ಉಮಾ ಮೀನಾಕ್ಷಿ ಸದ್ಯ ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಆಲಿಯಾ ಭಟ್ ಅವರ ಧೋಲಿಡಾ ಹಾಡಿಗೆ ಸಖತ್ ಸ್ಟೆಫ್ ಹಾಕುವ ಮೂಲಕ ಮತ್ತೊಮ್ಮೆ ನೆಟ್ಟಿಗರ ಮನ ಗೆದ್ದಿದ್ದಾರೆ.
2 ಮಿಲಿಯನ್ಗೂ ಹೆಚ್ಚು ವೀಕ್ಷಣೆ
ಇತ್ತೀಚೆಗೆ ರಿಲೀಸ್ ಆಗಿದ್ದ ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ‘ಧೋಲಿಡಾ..’ ಹಾಡು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಇದರ ರೀಲ್ಸ್ ವಿಡಿಯೋ ಹಾಕುತ್ತಿದ್ದಾರೆ. ಇದೀಗ ವಿಮಾನದ ಕ್ಯಾಬಿನ್ನಲ್ಲಿ ಉಮಾ ಮೀನಾಕ್ಷಿ ಈ ಹಾಡಿಗೆ ಹೆಜ್ಜೆ ಹಾಕಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ 2 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಮತ್ತು ಲೆಕ್ಕವಿಲ್ಲದಷ್ಟು ಕಾಮೆಂಟ್ಸ್, ಲೈಕ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ: Bollywood: ಶಿವನೇ ಶಂಭುಲಿಂಗ.. ಒಂದ್ ಸಿನಿಮಾಗೆ ಈ ಪಾಟಿನಾ ದುಡ್ಡು ತಗೋಳೋದು ಈ ನಟಿಮಣಿಯರು?
ಈ ಹಿಂದೆಯೂ ಫೇಮಸ್ ಆಗಿದ್ದ ಉಮಾ
ವಿಡಿಯೋದಲ್ಲಿ ಕೆಂಪು ಉಡುಪು ಧರಿಸಿದ ಗಗನಸಖಿ ಉಮಾ ಮೀನಾಕ್ಷಿ ಅವರು ಧೋಲಿಡಾ ಹಾಡಿಗೆ ಸ್ಟೆಪ್ ಹಾಕಿರುವುದನ್ನು ಕಾಣಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿದೆ. ಈ ಹಿಂದೆಯೂ ಗಗನಸಖಿಯ ಹಲವು ಡ್ಯಾನ್ಸ್ ವಿಡಿಯೋಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.
ಹಲವು ಹಾಡಿಗೆ ಹೆಜ್ಜೆ ಹಾಕಿದ್ದ ಉಮಾ
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಕಚ್ಚಾ ಬಾದಾಮ್, ಪುಷ್ಪ ಸಿನಿಮಾದ ಹಾಡು, ಬೀಸ್ಟ್ ಚಿತ್ರದ ಹಾಡು, ಧವನಿ ಭಾನುಶಾಲಿ ಅವರ ಹಾಡಿನ ಮೇರಾ ಯಾರ್ ಹಾಡಿಗೆ ಹೆಜ್ಜೆ ಹಾಕಿದ್ದಾಳೆ.
ತಮ್ಮ ಸಹೋದ್ಯೋಗಿಗಳ ಜೊತೆಗೂ ಖಾಲಿ ವಿಮಾನದಲ್ಲಿ ಬಿಂದಾಸ್ ಆಗಿ ಸ್ಟೆಪ್ ಹಾಕಿದ ಡ್ಯಾನ್ಸ್ ವಿಡಿಯೋಗಳನ್ನು ಸ್ಪೈಸ್ ಜೆಟ್ ವಿಮಾನದಲ್ಲಿ ಗಗನಸಖಿಯಾಗಿರುವ ಉಮಾ ಮೀನಾಕ್ಷಿ ಹಂಚಿಕೊಂಡಿದ್ದಾರೆ. ಇನ್ನು ಉಮಾ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿವೆ.
ವಿಡಿಯೋ ನೋಡಿ:
ಉಮಾ ಹೆಸರಲ್ಲಿ ಫ್ಯಾನ್ಸ್ ಪೇಜ್
ಇನ್ಸ್ಟಾಗ್ರಾಮ್ನಲ್ಲಿ ಉಮಾ 754k ಫಾಲೋವರ್ಸ್ಗಳನ್ನು ಹೊಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯವಾಗಿರುತ್ತಾಳೆ. ತನ್ನ ರೀಲ್ಸ್ನಿಂದಾಗಿ ಖ್ಯಾತಿ ಪಡೆದಿರುವ ಉಮಾ ಹೆಸರಿನಲ್ಲಿ ಈಗಾಗ್ಲೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ಪೇಜ್ಗಳು ಸಹ ಹುಟ್ಟಿಕೊಂಡಿವೆ. ಗಗನಸಖಿಯ ಹಾಡಿಗೆ ನೆಟ್ಟಿಗರು ಕಾಮೆಂಟ್ ಮಳೆ ಸುರಿಸಿದ್ದು, ವಾವ್, ಸೂಪರ್ ಡಾನ್ಸ್ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಪೈಸ್ ಜೆಟ್ ಗಗನಸಖಿಯಾಗಿರುವ ಉಮಾ ಮೀನಾಕ್ಷಿ ವಿಮಾನದ ಕ್ಯಾಬಿನ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಹೃದಯವನ್ನು ಗೆದ್ದಿದ್ದಲ್ಲದೇ ಇಂಟರ್ನೆಟ್ ಸೆನ್ಸೇಷನ್ ಗರ್ಲ್ ಆಗಿದ್ದಾರೆ.
ಇದನ್ನೂ ಓದಿ: Alia Bhatt: ಇದೇನ್ರಿ ಹಿಂಗಿದೆ.. ಬಾತ್ರೂಂನಲ್ಲೂ ಫೋಟೋಶೂಟಾ? ಆಲಿಯಾ ನೀ ಮಾಡಿದ್ದು ಸರಿಯಾ!
ಆಲಿಯಾ ಭಟ್ ಅಭಿನಯದ ಧೋಲಿಡಾ ಹಾಡನ್ನು ಜಾನ್ವಿ ಶ್ರೀಮಾನ್ಕರ್ ಮತ್ತು ಶೈಲ್ ಹದಾ ಹಾಡಿದ್ದಾರೆ. ಈ ಹಾಡನ್ನು ಕುಮಾರ್ ಎಂಬುವವರು ಬರೆದಿದ್ದು, ಸಂಜಯ್ ಲೀಲಾ ಬನ್ಸಾಲಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಭಾರಿ ವಿವಾದಕ್ಕೀಡಾದ ಚಿತ್ರವು ಫೆಬ್ರವರಿ 25 ರಂದು ಬಿಡುಗಡೆಗೆ ಸಿದ್ಧವಾಗಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ