• Home
  • »
  • News
  • »
  • trend
  • »
  • Dance Video: ‘ಲತ್ ಲಗ್ ಗಯೀ’ ಹಿಟ್ ಹಾಡಿಗೆ ಗಗನಸಖಿ ಡ್ಯಾನ್ಸ್! ಸಿಕ್ಕಾಪಟ್ಟೆ ವೈರಲ್

Dance Video: ‘ಲತ್ ಲಗ್ ಗಯೀ’ ಹಿಟ್ ಹಾಡಿಗೆ ಗಗನಸಖಿ ಡ್ಯಾನ್ಸ್! ಸಿಕ್ಕಾಪಟ್ಟೆ ವೈರಲ್

ಉಮಾ ಮೀನಾಕ್ಷಿ

ಉಮಾ ಮೀನಾಕ್ಷಿ

ಇತ್ತೀಚೆಗೆ ಈ ವಿಮಾನದಲ್ಲಿರುವಂತಹ ಗಗನಸಖಿಯರು ಸಹ ತಮ್ಮ ಬಿಡುವಿನ ಸಮಯದಲ್ಲಿ ನೆಚ್ಚಿನ ಹಾಡಿಗೆ ಡ್ಯಾನ್ಸ್ ಮಾಡುವ ಹೊಸ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮತ್ತು ಸ್ಪೈಸ್ ಜೆಟ್ ಗಗನಸಖಿ ಉಮಾ ಮೀನಾಕ್ಷಿ ತನ್ನ ಡ್ಯಾನ್ಸ್ ವೀಡಿಯೋಗಳಿಂದಾಗಿ ಆಗಾಗ್ಗೆ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾರೆ.

ಮುಂದೆ ಓದಿ ...
  • Share this:

ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ವೈರಲ್ (Viral) ಆಗುವುದು ಎಂದರೆ ಈ ಪ್ರಾಣಿಗಳ ವೀಡಿಯೋಗಳು (Animal Video) ಎಂದು ಹೇಳಬಹುದು. ಇದರ ನಂತರ ಯಾವುದಾದರೂ ವೀಡಿಯೋಗಳು ಅತೀ ಹೆಚ್ಚು ಜನರು ನೋಡಲು ಇಷ್ಟ ಪಡುತ್ತಾರೆ ಎಂದು ಹೇಳಿದರೆ ಅದು ಈ ಹಿಟ್ ಚಿತ್ರಗಳ ಹಾಡುಗಳಿಗೆ ಜನರು ಡ್ಯಾನ್ಸ್ (Dance) ಮಾಡಿರುವ ವೀಡಿಯೋಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಮದುವೆ ಸಮಾರಂಭಗಳಲ್ಲಿ (Wedding ceremony), ಹುಟ್ಟುಹಬ್ಬದ ಪಾರ್ಟಿಗಳಲ್ಲಿ (Birthday Party), ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹಿಂದಿನ ರಾತ್ರಿಯ ಪಾರ್ಟಿಯಲ್ಲಿ (Party) ಹೀಗೆ ಜನರು ಅನೇಕ ಪಾರ್ಟಿಗಳಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡುವುದನ್ನು ನಾವು ನೋಡುತ್ತೇವೆ.


ಈಗಂತೂ ಅನೇಕ ವೀಡಿಯೋ ಅಪ್ಲಿಕೇಷನ್ ಗಳು ಬಂದಿದ್ದು, ಅದರಲ್ಲಿ ಜನರು ತಮ್ಮ ಡ್ಯಾನ್ಸ್ ನ ಚಿಕ್ಕ ಪುಟ್ಟ ವೀಡಿಯೋಗಳನ್ನು ಮಾಡಿ, ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೊಳ್ಳುತ್ತಾರೆ. ಈ ಕ್ಲಿಪ್ ಗಳಲ್ಲಿ ತಮ್ಮ ನೆಚ್ಚಿನ ಚಿತ್ರ ನಟ, ನಟಿಯರ ಹಾಡುಗಳಿಗೆ ವಿಭಿನ್ನವಾಗಿ ಡ್ಯಾನ್ಸ್ ಮಾಡಿರುವುದನ್ನು ಸಹ ನಾವು ನೋಡುತ್ತೇವೆ.


ಉಮಾ ಮೀನಾಕ್ಷಿ ತನ್ನ ಡ್ಯಾನ್ಸ್ ವೀಡಿಯೋಗಳಿಂದಾಗಿ ಫುಲ್ ವೈರಲ್
ಇತ್ತೀಚೆಗೆ ಈ ವಿಮಾನದಲ್ಲಿರುವಂತಹ ಗಗನಸಖಿಯರು ಸಹ ತಮ್ಮ ಬಿಡುವಿನ ಸಮಯದಲ್ಲಿ ನೆಚ್ಚಿನ ಹಾಡಿಗೆ ಡ್ಯಾನ್ಸ್ ಮಾಡುವ ಹೊಸ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮತ್ತು ಸ್ಪೈಸ್ ಜೆಟ್ ಗಗನಸಖಿ ಉಮಾ ಮೀನಾಕ್ಷಿ ತನ್ನ ಡ್ಯಾನ್ಸ್ ವೀಡಿಯೋಗಳಿಂದಾಗಿ ಆಗಾಗ್ಗೆ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾರೆ.


ಜನರ ಗಮನ ಸೆಳೆದ ಡ್ಯಾನ್ಸ್ ನ ತುಣುಕು
ಈ ಗಗನಸಖಿಯ ಡ್ಯಾನ್ಸ್ ನ ತುಣುಕುಗಳು ತುಂಬಾನೇ ಜನರ ಗಮನ ಸೆಳೆದಿವೆ, ಮತ್ತು ಇದರ ಪರಿಣಾಮವಾಗಿ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಅವಳನ್ನು ಫಾಲೋ ಸಹ ಮಾಡುತ್ತಾರೆ. ಉಮಾ ತನ್ನ ಪ್ರೇಕ್ಷಕರಿಗಾಗಿ ವಿವಿಧ ವೀಡಿಯೋಗಳನ್ನು ಹಂಚಿಕೊಳ್ಳುವುದನ್ನು ಎಂದಿನಂತೆ ಮುಂದುವರಿಸಿದ್ದಾರೆ. ಅವರ ಇತ್ತೀಚಿನ ವೀಡಿಯೋದಲ್ಲಿ, ಅವರು ‘ಲತ್ ಲಗ್ ಗಯೀ’ ಹಿಟ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.


ಇದನ್ನೂ ಓದಿ: Chips and Sandwich: 23 ವರ್ಷದಿಂದ ಚಿಪ್ಸ್ ಸ್ಯಾಂಡ್‍ವಿಚ್ ಬಿಟ್ಟು ಬೇರೇನೂ ತಿಂದಿಲ್ಲ ಈಕೆ! ಹೇಗಿದ್ದಾಳೆ ನೋಡಿ


ಈ ಹಾಡು 2012 ರಲ್ಲಿ ಬಿಡುಗಡೆಯಾದ ರೇಸ್ 2 ಚಲನಚಿತ್ರದಲ್ಲಿತ್ತು. ಈ ಹಾಡು ನಟರಾದ ಸೈಫ್ ಅಲಿ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಒಳಗೊಂಡಿತ್ತು ಮತ್ತು ಇದು ಈಗ ಐಕಾನಿಕ್ ಆಗಿ ಮುಂದುವರೆದಿರುವುದರಿಂದ ಆಗ ಭಾರಿ ಹಿಟ್ ಆಗಿತ್ತು. ಇದನ್ನು ಗಾಯಕರಾದ ಶಾಲ್ಮಾಲಿ ಖೋಲ್ಗಡೆ ಮತ್ತು ಬೆನ್ನಿ ದಯಾಳ್ ಅವರು ಹಾಡಿದ್ದಾರೆ. ಉಮಾ ಮೀನಾಕ್ಷಿ ಈಗ ಈ ಹಾಡಿಗೆ ತುಂಬಾನೇ ಅದ್ಬುತವಾಗಿ ಡ್ಯಾನ್ಸ್ ಮಾಡಿರುವುದನ್ನು ನೀವು ಇದರಲ್ಲಿ ನೋಡಬಹುದು.


‘ಲತ್ ಲಗ್ ಗಯೀ’ ಹಿಟ್ ಹಾಡಿಗೆ ಡ್ಯಾನ್ಸ್
"ಮುಜೆ ತೋ ತೇರಿ ಲತ್ ಲಗ್ ಗಯೀ, ಲಗ್ ಗಯೀ" ಎಂಬ ಶೀರ್ಷಿಕೆಯೊಂದಿಗೆ ಅವರು ಈ ಡ್ಯಾನ್ಸ್ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಉಮಾ ಅವರ ಸಾಮಾನ್ಯ ಅಭಿವ್ಯಕ್ತಿ ಮತ್ತು ಅವರು ಈ ಡ್ಯಾನ್ಸ್ ಪ್ರದರ್ಶಿಸುವ ಸುಲಭತೆ ಈ ಕ್ಲಿಪ್ ನಲ್ಲಿ ಎದ್ದು ಕಾಣುತ್ತದೆ. ಈ ವೀಡಿಯೋ ನೋಡಿ ನೀವು ಹಾಗೆ ಒಂದೆರಡು ಹೆಜ್ಜೆ ಹಾಕೇ ಬಿಡಬೇಕು ಎನ್ನುವಷ್ಟರ ಮಟ್ಟಿಗೆ ಅನ್ನಿಸುವುದಂತೂ ನಿಜ.









View this post on Instagram






A post shared by UMA MEENAKSHI (@yamtha.uma)




ಈ ವೀಡಿಯೋವನ್ನು ಕೇವಲ ಒಂದು ದಿನದ ಹಿಂದೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ, ಲತ್ ಲಗ್ ಗಯೀ ಹಾಡಿಗೆ ಮಾಡಿರುವ ಡ್ಯಾನ್ಸ್ ಅನ್ನು ನೋಡಿ ಅನೇಕ ಜನರು ಹಲವಾರು ಕಾಮೆಂಟ್ ಗಳನ್ನು ಹಾಕಿದ್ದಾರೆ. ಇದು ಇಲ್ಲಿಯವರೆಗೆ 1.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು ಇದು 15,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ.


ಇದನ್ನೂ ಓದಿ: Viral Video: ಪಪ್ಪಾ ಹುಷಾರಾಗಿರಿ-ಸ್ವಿಮ್ ಮಾಡೋ ಅಪ್ಪನಿಗೆ ಮುದ್ದು ಮಗಳ ಕಾಳಜಿ


ವೀಡಿಯೋ ನೋಡಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ಅದ್ಭುತವಾಗಿದೆ" ಎಂದು ಬರೆದಿದ್ದಾರೆ. "ತುಂಬಾನೇ ಚೆನ್ನಾಗಿದೆ ಅಕ್ಕ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ವೀಡಿಯೋ ನೋಡಿ ಬೆಂಕಿಯ ಮತ್ತು ಚಪ್ಪಾಳೆ ತಟ್ಟುವ ಕೈಗಳ ಎಮೋಜಿಗಳನ್ನು ಕಾಮೆಂಟ್ ನಲ್ಲಿ ಹಾಕಿದ್ದಾರೆ.

Published by:Ashwini Prabhu
First published: