ವಾಹನಗಳು ಸಂಚರಿಸುತ್ತಿರುವಾಗಲೇ ಹೆದ್ದಾರಿಮೇಲೆ ಲ್ಯಾಂಡ್ ಆಯ್ತು ಹೆಲಿಕಾಪ್ಟರ್; ವೈರಲ್ ಆಯ್ತು ವಿಡಿಯೋ

ಹೆಲಿಕಾಪ್ಟರ್​ ಲ್ಯಾಂಡ್​ ಆದ ಬೆನ್ನಲ್ಲೇ ಒಂದು ಗಂಟೆಗೂ ಅಧಿಕ ಕಾಲ ರಿಪೇರಿ ಕಾರ್ಯ ನಡೆದಿತ್ತು. ಸಂಪೂರ್ಣವಾಗಿ ರಿಪೇರಿ ಹೊಂದಿದ ನಂತರ ಹೆಲಿಕಾಪ್ಟರ್​ ಮತ್ತೆ ಹಾರಾಟ ನಡೆಸಿದೆ.

news18-kannada
Updated:June 26, 2020, 3:06 PM IST
ವಾಹನಗಳು ಸಂಚರಿಸುತ್ತಿರುವಾಗಲೇ ಹೆದ್ದಾರಿಮೇಲೆ ಲ್ಯಾಂಡ್ ಆಯ್ತು ಹೆಲಿಕಾಪ್ಟರ್; ವೈರಲ್ ಆಯ್ತು ವಿಡಿಯೋ
ಸಾಂದರ್ಭಿಕ ಚಿತ್ರ
  • Share this:
ರಸ್ತೆಯ ಮೇಲೆ ವಾಹನಗಳು ಓಡಾಡುವುದು ಸಾಮಾನ್ಯ. ಆದರೆ, ಹೆದ್ದಾರಿಯಲ್ಲಿ ಹೆಲಿಕಾಪ್ಟರ್​ ಲ್ಯಾಂಡ್​ ಆಗಿ ಬಿಟ್ಟಿರೆ? ಹೀಗೊಂದು ಘಟನೆ ಹರಿಯಾಣದಲ್ಲಿ ನಡೆದಿದೆ. ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಾಪರ್​ ಹೆದ್ದಾರಿಯಲ್ಲೇ ಬಂದಿಳಿದಿದೆ.

ಫ್ರಾನ್ಸ್​ನಲ್ಲಿ ಸಿದ್ಧಗೊಂಡ ಚೀತಾ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ, ಪೈಲಟ್​ ಬೇರೆ ದಾರಿ ಕಾಣದೆ ಹೆದ್ದಾರಿಯಲ್ಲೇ ಹೆಲಿಕಾಪ್ಟರ್ ಲ್ಯಾಂಡ್​ ಮಾಡಲು ಮುಂದಾಗಿದ್ದರು.

ಹೆದ್ದಾರಿಯ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೋರ್ವ ಹೆಲಿಕಾಪ್ಟರ್​ ಬರುತ್ತಿರುವುದನ್ನು ನೋಡಿ ಎಚ್ಚೆತ್ತುಕೊಂಡಿದ್ದ. ಅಷ್ಟೇ ಅಲ್ಲ, ರಸ್ತೆಯ ಎರಡು ಬದಿಯಿಂದ ಬರುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿದ್ದ. ಜೊತೆಗೆ ಪೈಲಟ್​ಗೆ ಹೆಲಿಕಾಪ್ಟರ್​ ಲ್ಯಾಂಡ್​ ಮಾಡಲು ಸಹಕಾರ ನೀಡಿದ್ದ.

ಇದನ್ನೂ ಓದಿ: ಹೃತಿಕ್​ ಇರೋದು ಬಾಡಿಗೆ ಮನೆಯಲ್ಲಿ, ನನ್ನದು ಸ್ವಂತ ಮನೆ; ಮಾಜಿ ಪ್ರಿಯಕರನ ಬಗ್ಗೆ ಮತ್ತೆ ಹರಿಹಾಯ್ದ ಕಂಗನಾ

ಹೆಲಿಕಾಪ್ಟರ್​ ಲ್ಯಾಂಡ್​ ಆದ ಬೆನ್ನಲ್ಲೇ ಒಂದು ಗಂಟೆಗೂ ಅಧಿಕ ಕಾಲ ರಿಪೇರಿ ಕಾರ್ಯ ನಡೆದಿತ್ತು. ಸಂಪೂರ್ಣವಾಗಿ ರಿಪೇರಿ ಹೊಂದಿದ ನಂತರ ಹೆಲಿಕಾಪ್ಟರ್​ ಮತ್ತೆ ಹಾರಾಟ ನಡೆಸಿದೆ.

ಭಾರತದಲ್ಲಿ ಸಾಕಷ್ಟು ಹೆದ್ದಾರಿಗಳನ್ನು ವಿಮಾನ ಲ್ಯಾಂಡಿಂಗ್​ಗೆ ಸಹಕಾರಿಯಾಗುವಂತೆ ಸಿದ್ಧಪಡಿಸಲಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೆದ್ದಾರಿಗಳಲ್ಲೇ ಫೈಟರ್​ ಜೆಟ್​ಗಳನ್ನು ಇಳಿಸಬಹುದಾಗಿದೆ.
First published:June 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading