Fire PaniPuri: ವಾವ್ ಗುಜರಾತಿಗರದ ಫೈರ್ ಪಾನಿಪೂರಿ ರುಚಿ ಗೊತ್ತೇ...?

Fire PaniPuri: ವಾರಾಣಾಸಿಯಂತಹ ಸ್ಥಳಗಳಲ್ಲಿ ಏಳು ವಿಧದ ಪಾನೀಪುರಿಗಳು ಲಭ್ಯವಾಗುತ್ತದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಪಾನಿಪೂರಿಯು ಹೊಸ ವೈವಿಧ್ಯಮಯವಾದ ಪಾನೀಪೂರಿಯನ್ನು ಪರಿಚಯಿಸಿದೆ. ಅದುವೇ ಫೈರ್ ಪಾನಿಪೂರಿ.

ಫೈರ್ ಪಾನಿಪೂರಿ

ಫೈರ್ ಪಾನಿಪೂರಿ

  • Share this:
ಇತ್ತೀಚಿನ ದಿನಗಳಲ್ಲಿ ವಿಭಿನ್ನ ರುಚಿಯ, ವಿವಿಧ ಬಗೆಯ ಆಹಾರ ಪದ್ಧತಿಗಳು (Diets Attract)ಜನರನ್ನು ತಮ್ಮತ್ತ ಸೆಳೆಯುತ್ತವೆ. ಭಾರತೀಯ ಪಾಕ ಪದ್ಧತಿಯಲ್ಲಿ ವಿವಿಧ ಪ್ರಯೋಗಗಳು (Experiments)ನಡೆಯುತ್ತಿವೆ. ಒಂದಕ್ಕಿಂತ ಒಂದು ವಿಭಿನ್ನ ರುಚಿ ನೀಡುವ ಆಹಾರಗಳಿಗೇನು (Foods)ಕಡಿಮೆ ಇಲ್ಲ. ಈ ಸಂಬಂಧ ಪಾಕಪದ್ಧತಿ (Cuisine)ಗುರಿಯಾಗಿಸಿಕೊಂಡು ಚಾನಲ್‍ಗಳು ಶುರುವಾಗಿದ್ದು, ಎಲ್ಲಾ ರೀತಿಯಲ್ಲೂ ಅನುಕೂಲವಾಗುತ್ತಿವೆ. ಇದರ ಜೊತೆಗೆ ಕೆಲವರು ಹೊರಗೆ ಇಂದ ಆಹಾರಗಳನ್ನು ಅದರ ರುಚಿ, ಎಲ್ಲಿ ಸಿಗುತ್ತದೆ ಎಂಬ ವಿವರದೊಂದಿಗೆ ಆ ಆಹಾರದ ವೈಶಿಷ್ಟ್ಯವನ್ನು ಹೇಳುತ್ತಾರೆ. ಇದೀಗ ಅದೇ ರಿತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಕುತೂಹಲಿಗಳನ್ನಾಗಿ ಮಾಡಿರುವುದಲ್ಲದೇ ಒಮ್ಮೆಯಾದರೂ ಪ್ರಯತ್ನಿಸಬೇಕು ಎಂದೆನಿಸುವಂತೆ ಮಾಡಿದೆ. ಹೌದು ಅದುವೇ ಪಾನಿಪೂರಿಯ ಮತ್ತೊಂದು ವೈವಿಧ್ಯಮಯ ರುಚಿಯ ಫೈರ್ ಪಾನಿಪೂರಿ.(Fire Panipuri)

ಏಳು ವಿಧದ ಪಾನೀಪುರಿ
ಪಾನಿಪೂರಿ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರಿಗೂ ಇಷ್ಟ. ಪಾನಿಪೂರಿ ಇಷ್ಟಪಡದ ವ್ಯಕ್ತಿಗಳು ವಿರಳ ಎಂದೇ ಹೇಳಬಹುದು. ಪಾನಿಪೂರಿ ಹೆಸರು ಹೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಎಷ್ಟು ತಿಂದರೂ ಬೇಕೆನಿಸುವ ಈ ಪಾನಿಪೂರಿಗೆ ಮಾರುಹೋಗದವರೇ ಇಲ್ಲ. ಪೂರಿ ಹಿಡಿದು ಅದರಲ್ಲಿ ಪಾನಿ ಸುರಿದುಕೊಂಡು ತಿನ್ನುವ ಮಜವೇ ಬೇರೆ.

ಇದನ್ನೂ ಓದಿ: Viral Video: ಕೊರೊನಾ ಭಯವಿಲ್ಲದೇ ತಿನ್ನಿ ಪಾನಿಪುರಿ: ಹೊಸ ಮಷೀನ್ ಗೆ ಆಹಾರ ಪ್ರಿಯರು ಫುಲ್ ಖುಷ್

ಭಾರತದಲ್ಲಿ ಅತ್ಯಂತ ಪ್ರಿಯವಾದ ಬೀದಿ ಆಹಾರಗಳಲ್ಲಿ ಗೋಲ್ಗಪ್ಪಾ ಅಥವಾ ಪಾನಿ ಪುರಿ ಒಂದಾಗಿದೆ. ವಾರಾಣಾಸಿಯಂತಹ ಸ್ಥಳಗಳಲ್ಲಿ ಏಳು ವಿಧದ ಪಾನೀಪುರಿಗಳು ಲಭ್ಯವಾಗುತ್ತದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಪಾನಿಪೂರಿಯು ಹೊಸ ವೈವಿಧ್ಯಮಯವಾದ ಪಾನೀಪೂರಿಯನ್ನು ಪರಿಚಯಿಸಿದೆ. ಅದುವೇ ಫೈರ್ ಪಾನಿಪೂರಿ.

ಫೈರ್ ಪಾನಿಪೂರಿ
ಹೌದು ಕೈಯಲ್ಲಿ ಪಾನಿಪೂರಿ ಹಿಡಿದು ಅದಕ್ಕೆ ಬೆಂಕಿ ಹಚ್ಚಿ ಗ್ರಾಹಕರ ಬಾಯಲ್ಲಿ ಇಡಲಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಖ್ಯಾತಿ ಪಡೆದುಕೊಳ್ಳುತ್ತಿದೆ. ಫೈರ್ ಪಾನ್ ಜೊತೆಗೆ ಫೈರ್ ಪಾನಿಪೂರಿ ಕೂಡ ದೇಶದ ಕೆಲವು ನಗರಗಳಲ್ಲಿ ಮಾನ್ಯತೆ ಪಡೆದುಕೊಳ್ಳುತ್ತಿದೆ.

ವಿಡಿಯೋ ನೋಡಿ:

ಫೈರ್ ಪಾನಿಪೂರಿ ತಿಂದಿರುವ ಯುವತಿಯೊಬ್ಬಳು ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕೃಪಾ ಪಾಟೀಲ್ ಎಂಬುವರು ಅಹಮದಾಬಾದಿನ ಫೈರ್ ಪಾನಿಪೂರಿ ಎಂದು ಶೀರ್ಷಿಕೆ ಬರೆದು ಅಪ್‍ಲೋಡ್ ಮಾಡಿದ ವಿಡಿಯೋದಲ್ಲಿ ಆತ ಮಸಾಲೆ ತುಂಬಿದ ಪಾನಿಪೂರಿ ಹಿಡಿದು ಅದಕ್ಕೆ ಬೆಂಕಿ ಹಚ್ಚಿ ಯುವತಿಯ ಬಾಯಲ್ಲಿ ಇಡುವುದನ್ನು, ಯುವತಿಯು ತಿನ್ನುವುದನ್ನು ನಾವು ಕಾಣಬಹುದು.

ಆನ್‍ಲೈನ್‍ನಲ್ಲಿ ಹವಾ
ಕೆಲವರು ಇದನ್ನು ತಿನ್ನಲು ಸುರಕ್ಷಿತವೇ ಎಂದು ಕೇಳಿದರೆ, ನಿನಗೆ ಏನು ತೊಂದರೆ ಆಗಿಲ್ಲವೇ? ಎಂದು ಕಮೆಂಟ್ ಮಾಡಿದರೆ ಇನ್ನು ಕೆಲವರು ಬೆಂಕಿ ಹಚ್ಚಲು ಕರ್ಪೂರ ಬಳಸುತ್ತಾರೆಯೇ ಎಂದು ಅಣಕಿಸಿದ್ದಾರೆ. ಪಾನಿಪೂರಿಯನ್ನು ನಿನ್ನ ಬಾಯಿಗೆ ಹಾಕುವ ಅಂಕಲ್ ಪಾನ್ ಅಂಗಡಿಯಲ್ಲಿ ಕೆಲಸ ಮಾಡಿದ್ದರೇ? ಎಂದು ಕೂಡ ಕೇಳಿದ್ದಾರೆ. ಹಲವಾರು ಬಳಕೆದಾರರು ಸ್ಥಳ ತಿಳಿದುಕೊಳ್ಳಲು ಬಯಸುತ್ತಾರೆ. ಇದರಿಂದ ಅವರು ತಮ್ಮ ಅನುಭವಗಳನ್ನು ಪ್ರಯತ್ನಿಸಬಹುದು ಮತ್ತು ಹಂಚಿಕೊಳ್ಳಬಹುದು. ಇತ್ತೀಚೆಗೆ, ಬಹಳಷ್ಟು ಆಹಾರ ಪ್ರಯೋಗದ ವಿಡಿಯೋಗಳು ಆನ್‍ಲೈನ್‍ನಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಶೇರ್ ಆಗುತ್ತಿವೆ.

ಇದನ್ನೂ ಓದಿ: ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಅಪ್ಪು; ತಿನ್ನುವ ಮುನ್ನ ಹಾಕಿದ್ದ ಕಂಡೀಷನ್ ಏನು ಗೊತ್ತಾ?

ಪಾನಿ ಪೂರಿ ದಕ್ಷಿಣ ಏಶಿಯಾದ ಒಂದು ಜನಪ್ರಿಯ ಹಾಗು ರುಚಿಕರವಾದ ಖಾದ್ಯ. ಭಾರತದಲ್ಲಿ ಪ್ರತಿಯೊಂದು ಊರಲ್ಲೂ ಪಾನಿ ಪೂರಿ ಗಾಡಿಗಳು ಕಾಣಸಿಗುತ್ತವೆ. ಉತ್ತರ ಭಾರತದ 'ಗೋಲ್ ಗಪ್ಪ' ಕೂಡ ಪಾನಿ ಪೂರಿ ಮಾಡುವ ಒಂದು ವಿಧಾನ. ಗೋಳಾಕಾರವಾಗಿರುವ ಪೂರಿಯಲ್ಲಿ ಈರುಳ್ಳಿ, ಕ್ಯಾರೆಟ್, ಬೇಯಿಸಿದ ಬಟಾಣಿ, ಆಲೂಗಡ್ಡೆ ಇವುಗಳನ್ನು ಒಂದೊಂದಾಗಿ ತುಂಬಿ, ಮೊದಲೇ ತಯಾರಿಸಿದ ಪಾನಿ ಹಾಗು ಸ್ವೀಟ್ ಜೊತೆ ತಿನ್ನಲು ರುಚಿ. ಇದನ್ನು ಬೇರೆ ಬೇರೆ ವಿಧಾನದಲ್ಲೂ ತಯಾರಿಸಬಹುದು.
Published by:vanithasanjevani vanithasanjevani
First published: