Agniveer: ಅಗ್ನಿವೀರರನ್ನು ಸೇನೆಗೆ ಸೇರಿಸುವ ಮುನ್ನ ಅವರ ಸಂಪೂರ್ಣ ಮೌಲ್ಯಮಾಪನ ಮಾಡಲಾಗುವುದು: ಲೆಫ್ಟಿನೆಂಟ್ ಜನರಲ್

ಈ ನಿಟ್ಟಿನಲ್ಲಿ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಅವರು ಹೇಳಿಕೆಯೊಂದನ್ನು ನೀಡಿದ್ದು ಅದರಲ್ಲಿ ಅವರು, ಹೀಗೆ ನೇಮಕಗೊಂಡ ಅಗ್ನಿವೀರರು ಅಂತಿಮವಾಗಿ ಸೇನೆಯನ್ನು ಸೇರುವ ಮುಂಚೆ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಅವರನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದ್ದಾರೆ.

ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು

ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು

  • Share this:
ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರದ ಹೊಸ ಯೋಜನೆ ಅಗ್ನಿಪಥವು (Agnipath) ಸಾಕಷ್ಟು ಚರ್ಚೆಯಲ್ಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ದೇಶದ ಕೆಲವೆಡೆ ಪ್ರತಿಭಟನೆಗಳು ನಡೆದಿರುವುದು ಒಂದು ಕಡೆಯಾದರೆ ಈ ಯೋಜನೆಯನ್ನು ಸಮರ್ಥಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಸಾಕಷ್ಟು ಹೇಳಿಕೆಗಳು ಇರುವುದನ್ನೂ ನೋಡಬಹುದು. ಅಷ್ಟಕ್ಕೂ ಈ ಯೋಜನೆಯ ಮೂಲಕ ನೇಮಕಗೊಳ್ಳುವವರನ್ನು ಅಗ್ನಿವೀರರು (Agniveer) ಎಂದು ಕರೆಯಲಾಗುತ್ತದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಅಷ್ಟಕ್ಕೂ ನಾಲ್ಕು ವರ್ಷಗಳ ಕಾಲ ಕೆಲಸ ನಿರ್ವಹಿಸುವ ಅಗ್ನಿವೀರರಲ್ಲಿ ಮೆರಿಟ್ ಆಧರಿಸಿ ಇಂತಿಷ್ಟು ಪ್ರತಿಶತದಷ್ಟು ಅಗ್ನಿವೀರರನ್ನು ಸೇನೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬ ವಿಷಯವೂ ಸಹ ಎಲ್ಲರಿಗೂ ಗೊತ್ತಿದೆ.

ಇದೀಗ ಈ ನಿಟ್ಟಿನಲ್ಲಿ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಅವರು ಹೇಳಿಕೆಯೊಂದನ್ನು ನೀಡಿದ್ದು ಅದರಲ್ಲಿ ಅವರು, ಹೀಗೆ ನೇಮಕಗೊಂಡ ಅಗ್ನಿವೀರರು ಅಂತಿಮವಾಗಿ ಸೇನೆಯನ್ನು ಸೇರುವ ಮುಂಚೆ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಅವರನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದ್ದಾರೆ.

ನೇಮಕಾತಿಯ ಬಗ್ಗೆ ಹೇಳಿದ್ದು ಹೀಗೆ?
ವಿಶೇಷ ಸಂದರ್ಶನವೊಂದರಲ್ಲಿ, ನಾಲ್ಕು ವರ್ಷಗಳ ನಂತರ ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗುವ 25 ಪ್ರತಿಶತ ಅಗ್ನಿವೀರರಿಗೆ ಪಾರದರ್ಶಕವಲ್ಲದ ಆಯ್ಕೆ ಪ್ರಕ್ರಿಯೆಗೆ ಒಳಗಾಗಬಹುದೇನೋ ಎಂಬ ಭಯವನ್ನು ನಿವಾರಿಸುವ ನಿಮಿತ್ತ ಅವರ ವಿಶ್ವಾಸದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಅವರು “ನಾಲ್ಕು ವರ್ಷಗಳ ಕೊನೆಯಲ್ಲಿ, ಅಗ್ನಿವೀರನು ತಾನು ಪಾರದರ್ಶಕ ಪ್ರಕ್ರಿಯೆಯ ಮೂಲಕ ಒಳ ಹೋಗಿದ್ದೇನೆ ಎಂಬ ವಿಶ್ವಾಸವನ್ನು ಹೊಂದಬೇಕು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಹಾಗಾಗಿ, ಪ್ರತಿಯೊಂದು ಶಸ್ತ್ರಾಸ್ತ್ರ ಮತ್ತು ಸೇವೆಗಳಲ್ಲಿ ನೇಮಕಾತಿಗಳನ್ನು ಪರೀಕ್ಷಿಸಲು ನಾವು ನಿರ್ದಿಷ್ಟವಾದ ನಿಬಂಧನೆಗಳನ್ನು ಮಾಡಿದ್ದೇವೆ. ಇದು ನಿರಂತರ ಮೌಲ್ಯಮಾಪನವಾಗಲಿದೆ,'' ಎಂದು ಹೇಳಿದರು.

ಅಗ್ನಿವೀರರಿಗೆ ಆರು ತಿಂಗಳ ತರಬೇತಿ
ಮೆಚ್ಚುಗೆಯ ಆಧಾರದಲ್ಲಿರದೆ ಅಥವಾ ಪಕ್ಷಪಾತ ಮಾಡದೆ ಇಲ್ಲವೆ ಅನಾರೋಗ್ಯಕರ ಸ್ಪರ್ಧೆಯಿಲ್ಲದೆ ಖಾಯಂ ನೇಮಕಾತಿಗಳಾಗಿ ಅಗ್ನಿವೀರರ ಆಯ್ಕೆಯನ್ನು ವಸ್ತುನಿಷ್ಠವಾಗಿ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಸೇನೆಯು ಹೇಗೆ ಖಚಿತಪಡಿಸುತ್ತದೆ ಎಂಬುದರ ಬಗ್ಗೆ ವಿವರಣೆ ನೀಡಿದ ಲೆಫ್ಟಿನೆಂಟ್ ಜನರಲ್ ರಾಜು ಅವರು ಅಗ್ನಿವೀರ ತನ್ನ ಆರು ತಿಂಗಳ ತರಬೇತಿ ಅವಧಿಯ ಕೊನೆಯಲ್ಲಿ ತನ್ನ ಮೊದಲ ಮೌಲ್ಯಮಾಪನವನ್ನು ಎದುರಿಸಲಿದ್ದಾನೆ ಎಂದರು.

ಇದನ್ನೂ ಓದಿ: Agnipath Recruitment: ಅಗ್ನಿಪಥ್ ನೇಮಕಾತಿ ದಾಖಲೆ! ಅಗ್ನಿವೀರರಾಗಲು 56,960 ಅರ್ಜಿ ಸಲ್ಲಿಕೆ

"ನಂತರ ಪ್ರತಿ ವರ್ಷದ ಕೊನೆಯಲ್ಲಿ, ಪ್ರತಿಯೊಬ್ಬ ಅಗ್ನಿವೀರರ ದೈಹಿಕ ಸಾಮರ್ಥ್ಯ, ಫೈರಿಂಗ್ ಕೌಶಲ್ಯಗಳು ಮತ್ತು ಇತರ ಡ್ರಿಲ್‌ಗಳಂತಹ ವಿವಿಧ ನಿಯತಾಂಕಗಳ ಆಧಾರದ ಮೇಲೆ ಅವರನ್ನು ಮೌಲ್ಯಮಾಪನ ಮಾಡಲಾಗುತ್ತದೆ" ಎಂದು ಆರ್ಮಿ ಸ್ಟಾಫಿನ ವೈಸ್ ಚೀಫ್ ಸಹ ಆಗಿರುವ ರಾಜು ಹೇಳಿದರು.

ವರ್ತನೆಯಂತಹ ನಿಯತಾಂಕಗಳ ಮೇಲೆ ಕೆಲವು ವ್ಯಕ್ತಿನಿಷ್ಠ ಮೌಲ್ಯಮಾಪನವೂ ಇದರಲ್ಲಿ ಇರಲಿದ್ದು ಆ ಪ್ರಕಾರ ಪ್ರತಿಯೊಬ್ಬ ಅಗ್ನಿವೀರ ತನ್ನ ಪ್ಲಟೂನ್ ಕಮಾಂಡರ್, ಕಂಪನಿಯ ಕಮಾಂಡರ್ ಮತ್ತು ಕಮಾಂಡಿಂಗ್ ಆಫೀಸರ್‌ ಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾನೆ, ಅವನಲ್ಲಿ ಯೋಗ್ಯತೆ ಎಷ್ಟಿದೆ ಮುಂತಾದ ಅಂಶಗಳನ್ನು ಮೌಲ್ಯಮಾಪನ ಮಾಡಿ ವರ್ಷದ ಕೊನೆಯಲ್ಲಿ, ಅದನ್ನೆಲ್ಲ ಒಟ್ಟುಗೂಡಿಸಿ ಸಿಸ್ಟಮ್ ಗೆ ಅಪ್ಲೋಡ್ ಮಾಡಲಾಗುವುದು.

ಸಂಪೂರ್ಣ ಡೇಟಾ ಒಟ್ಟುಗೂಡಿಸಿ ಮೆರಿಟ್ ಪಟ್ಟಿ ತಯಾರಿ
ಆನಂತರ ಅದರಲ್ಲಿ ಯಾವುದೇ ರೀತಿಯ ಮಾನವ ಹಸ್ತಕ್ಷೇಪವಿರುವುದಿಲ್ಲ. ಎರಡು ಮತ್ತು ಮೂರನೇ ವರ್ಷದ ಕೊನೆಯಲ್ಲಿ ಇದೇ ಪ್ರಕ್ರಿಯೆಯನ್ನು ಅನುಸರಿಸಿ ನಾಲ್ಕು ವರ್ಷಗಳ ಕೊನೆಯಲ್ಲಿ ಸಂಪೂರ್ಣ ಡೇಟಾವನ್ನು ಒಟ್ಟುಗೂಡಿಸಿ ನಂತರ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ,'' ಎಂದು ರಾಜು ವಿವರಿಸಿದರು.

ಇದನ್ನೂ ಓದಿ: Maharashtra Crisis: ಶಿವಸೇನೆಯ ಬಂಡಾಯ ಶಾಸಕರಿಗೆ Y-plus CRPF ಭದ್ರತೆ ನೀಡಿದ ಕೇಂದ್ರ ಸರ್ಕಾರ

ಇನ್ನು ಈ ಯೋಜನೆಯ ವಿಶಿಷ್ಟತೆಗೆ ಸಂಬಂಧಿಸಿದಂತೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಅವರು "ನಾವು ಅತ್ಯುತ್ತಮ ಸೈನಿಕರನ್ನು ಆಯ್ಕೆ ಮಾಡುತ್ತಿದ್ದೇವೆ ಎಂಬ ವಿಶ್ವಾಸವನ್ನು ಇದು ನೀಡುತ್ತದೆ. ತರಬೇತಿ ಅವಧಿಯ ಮೂಲಕ, ಅಗ್ನಿವೀರರಿಗೆ ಕೌನ್ಸೆಲಿಂಗ್ ಮಾಡಲಾಗುವುದು ಮತ್ತು ಅವರ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಮಾಡಲಾಗುವುದು" ಎಂದು ಹೇಳಿದರು. ಮುಂದುವರೆಯುತ್ತ ಅವರು "ಇದರಲ್ಲಿನ ಇಡೀ ಕಲ್ಪನೆಯು ನಿರಂತರ ಮೌಲ್ಯಮಾಪನ ಮಾಡುವುದೇ ಆಗಿದೆ, ಇದು ತರಬೇತಿ ಅವಧಿಯಲ್ಲಿ ಪ್ರಾರಂಭವಾಗಿ ನಂತರದ ವರ್ಷಗಳವರೆಗೆ ಪ್ರತಿ ಬಾರಿ ಪ್ರತ್ಯೇಕವಾದ ಮೌಲ್ಯಮಾಪನದ ತೂಕವನ್ನು ವೃದ್ಧಿಸುತ್ತ ಹೋಗಲಿದೆ.

ಮಹಿಳಾ ಸೈನಿಕರನ್ನು ಅಗ್ನಿವೀರರನ್ನಾಗಿ ಸೇನೆಗೆ ಸೇರ್ಪಡೆಗೊಳಿಸುವ ಕುರಿತು ಕೇಳಲಾದ ಪ್ರಶ್ನೆಗೆ, ಅಗ್ನಿಪಥ್ ಯೋಜನೆಯ ಮೂಲಕ ಸೇನಾ ಪೊಲೀಸ್ ಕಾರ್ಪ್ಸ್‌ನಲ್ಲಿ (ಸಿಎಂಪಿ) ಮಹಿಳಾ ಸೈನಿಕರನ್ನು ಸೇನೆಗೆ ಸೇರ್ಪಡೆಗೊಳಿಸಲಾಗುವುದು ಎಂದು ರಾಜು ಹೇಳಿದರು. ಇತರ ನೇಮಕಾತಿಗಳಂತೆ, CMPಗೆ ಮಹಿಳೆಯರ ನೇಮಕಾತಿಯನ್ನು ಆರಂಭಿಕ ಬ್ಯಾಚ್‌ಗಳ ನಂತರ ಎರಡು ವರ್ಷಗಳವರೆಗೆ ತಡೆಹಿಡಿಯಲಾಗಿದೆ.

‘ಸಾಕಷ್ಟು ತರಬೇತಿಗೆ ನಾಲ್ಕು ವರ್ಷಗಳು ಸಾಕು’
ಸೈನಿಕರ ತರಬೇತಿಯ ಕುರಿತು ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಾಜು, ಅವರ ತರಬೇತಿಗೆ ನಾಲ್ಕು ವರ್ಷಗಳು ಸಾಕಷ್ಟು ಸಮಯವಾಗಿದೆ ಎಂದು ಹೇಳಿದರು. ಅವರಿಗೆ ಆರು ತಿಂಗಳ ಕಾಲ ತೀವ್ರ ತರಬೇತಿ ನೀಡಲಾಗುವುದು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಬೆಟಾಲಿಯನ್ ಕಮಾಂಡರ್ ಪ್ರತಿಯೊಬ್ಬ ವ್ಯಕ್ತಿಗೆ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅಗತ್ಯವಾದ ತರಬೇತಿಯನ್ನು ನೀಡುತ್ತಾನೆ ಎಂದು ಅವರು ಹೇಳಿದರು.
Published by:Ashwini Prabhu
First published: