ನ್ಯೂಸ್ 18 ಕನ್ನಡ
ಸಾಮಾಜಿಕ ತಾಣಗಳಿಂದಲೇ ರಾತ್ಮೂರೋತ್ರೋರಾತ್ರಿ ಫೇಮಸ್ ಆದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈಗಾಗಲೇ ತಿಳಿದಿರುವಂತೆ ಪ್ರಿಯಾ ತಮ್ಮ ಒಂದು ಇನ್ಸ್ಟಾಗ್ರಾಂ ಪೋಸ್ಟ್ಗೆ ಎಂಟು ಲಕ್ಷ ಪಡೆಯುತ್ತಿದ್ದಾರೆ. ಅದರಂತೆ ಈಗ ಇನ್ಸ್ಟಾಗ್ರಾಂನಲ್ಲಿ ಪ್ರಿಯಾ ಒಂದಿಷ್ಟು ಫೋಟೋಗಳನ್ನು ಪ್ರಕಟಿಸಿದ್ದು, ಅವು ಮತ್ತೆ ವೈರಲ್ ಆಗಿವೆ.
ಮಲಯಾಳಂನ 'ಓರು ಆಡಾರ್ ಲವ್' ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾ, ಈ ಚಿತ್ರದ ನಾಯಕ ರೋಷನ್ ಜತೆಗಿನ ಹಲವು ಚಿತ್ರಗಳನ್ನು ಸಾಮಾಜಿ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ತಲೆಗೆ ಹೂವು ಮುಡಿದು ಮುದ್ದಾಗಿ ಕಾಣುತ್ತಿರುವ ಈ ಜೋಡಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಜತೆಗೆ ಪ್ರಿಯಾ ಪ್ರಕಾಶ್ ವಿಡಿಯೋ ಒಂದನ್ನ ಹಂಚಿಕೊಂಡಿದ್ದು, ಇದು ಕೂಡ ಸಖತ್ ವೈರಲ್ ಆಗಿವೆ. ಈ ವಿಡಿಯೋದಲ್ಲಿ ಸಿನಿಮಾದ ನಾಯಕ ರೋಷನ್ ಹಾಗೂ ಸ್ನೇಹಿತರಿಗೆ ಪ್ರಿಯಾ ಮತ್ತು ಸ್ನೇಹಿತರಯರು ಬಣ್ಣ ಎರಚುವ ದೃಶ್ಯಗಳಿವೆ. ಪ್ರಿಯಾ ಪ್ರಕಾಶ್ ಹಾಗೂ ರೋಷನ್ ಅವರ ಕೆಲ ಫೋಟೋಗಳು ಮತ್ತು ವಿಡಿಯೋ ಇಲ್ಲಿವೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ