Viral Video: ಕಚ್ಚಾ ಬದಾಮ್ ಬಳಿಕ ವೈರಲ್ ಆಗ್ತಿದೆ ದ್ರಾಕ್ಷಿ ಮಾರಾಟಗಾರನ ವಿಡಿಯೋ

ಕಚ್ಚಾ ಬದಾಮ್ (Kacha Badam) ರಿಮಿಕ್ಸ್ ಹಾಡಿಗೆ ಬಹುತೇಕ ಎಲ್ಲ ಸ್ಟಾರ್ ಗಳು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಭುವನ್ ಬದ್ಯಾಕರ್ ಬಳಿಕ ಈಗ ದ್ರಾಕ್ಷಿ ಮಾರಾಟ (Grapes Seller) ಮಾಡುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ.

ದ್ರಾಜ್ಷಿ ಮಾರಾಟಗಾರ

ದ್ರಾಜ್ಷಿ ಮಾರಾಟಗಾರ

  • Share this:
ಸಾಮಾಜಿಕ ಜಾಲತಾಣದಲ್ಲಿ (Social Media) ಅಪ್ಲೋಡ್ ಆಗುವ ಎಲ್ಲ ವಿಡಿಯೋಗಳು ವೈರಲ್ (Viral Videos) ಆಗಲ್ಲ. ವಿಶಿಷ್ಠ ಮತ್ತು ವಿಭಿನ್ನವಾಗಿರುವ ವಿಡಿಯೋಗಳು ರಾತ್ರೋ ರಾತ್ರಿ ಮಿಂಚಿನಂತೆ ವೈರಲ್ ಆಗುವ ಮೂಲಕ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದಕ್ಕೆ ಒಳ್ಳೆಯ ಉದಾಹರಣೆ ಅಂದ್ರೆ ಕಡಲೆಕಾಯಿ (ಶೇಂಗಾ) ಮಾರಾಟಗಾರ ಭುವನ್ ಬದ್ಯಾಕರ್ (Bhaban Badyakar). ರಸ್ತೆ ಬದಿ ತಮ್ಮದೇ ಶೈಲಿಯಲ್ಲಿಯೇ ಕಡಲೆಕಾಯಿ (Peanuts) ಮಾರಾಟ ಮಾಡುತ್ತಿದ್ದ ಭುವನ್ ಬದ್ಯಾಕರ್ ಇಂದು ಸೆಲೆಬ್ರಿಟಿ ಆಗಿದ್ದಾರೆ. ಇವರ ಕಚ್ಚಾ ಬದಾಮ್ (Kacha Badam)  ರಿಮಿಕ್ಸ್ ಹಾಡಿಗೆ ಬಹುತೇಕ ಎಲ್ಲ ಸ್ಟಾರ್ ಗಳು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಭುವನ್ ಬದ್ಯಾಕರ್ ಬಳಿಕ ಈಗ ದ್ರಾಕ್ಷಿ ಮಾರಾಟ (Grapes Seller) ಮಾಡುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ.

ಈ ದ್ರಾಕ್ಷಿ ಮಾರಾಟಗಾರ ಗ್ರಾಹಕರನ್ನು  ತಮ್ಮದೇ ಶೈಲಿಯಲ್ಲಿ ಕರೆದಿದ್ದಾರೆ. ಅಂದ್ರೆ ಪ್ರಾಸವಾಗಿ ಪದಗಳನ್ನು ಜೋಡಿ ಕ್ಷಣಾರ್ಧದಲ್ಲಿ ದ್ರಾಕ್ಷಿ ಖರೀದಿಸಿ ಎಂದು ಹೇಳುತ್ತಾರೆ. ಗ್ರಾಹಕರನ್ನು ಕರೆಯುವ ಇವರ ಶೈಲಿ ನೆಟ್ಟಿಗರಿಗೆ ಇಷ್ವವಾಗಿದ್ದು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ರಸ್ತೆ ಬದಿ ನಿಲ್ಲಿಸಲಾಗಿರುವ ಬಂಡಿಯ ಮೇಲೆ ಓರ್ವ ವ್ಯಕ್ತಿ ದ್ರಾಕ್ಷಿ ಹಾಕಿಕೊಂಡಿದ್ದಾನೆ. ಕೈಯಲ್ಲಿ ಟೀ ಕಪ್ ಹಿಡಿದು ಜಿಂಗಲ್ ಹಾಡುತ್ತಾ ಗ್ರಾಹಕರಿಗೆ ದ್ರಾಕ್ಷಿ ಖರೀದಿಸುವಂತೆ ಹೇಳಿದ್ದಾರೆ. ಈ ಮಾರಾಟಗಾರ ಲೇಲೋ 15 ರೂಪಾಯಿಗೆ 12 ದ್ರಾಕ್ಷಿ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ವ್ಯಕ್ತಿಯ ಪದಗಳ ಉಚ್ಛಾರಣೆ ಅಸ್ಪಷ್ಟವಾಗಿದ್ದರೂ ಕೇಳುಗರಿಗೆ ಅವರ ಧ್ವನಿ ಇಷ್ವವಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ರೂಪದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಅಪಘಾತದ ಬಳಿಕ ಹೊಸ ಹಾಡು ಹೇಳಿದ ಕಚ್ಚಾ ಬದಾಮ್ ಖ್ಯಾತಿಯ Bhuban Badyakar

25 ಲಕ್ಷಕ್ಕೂ ಅಧಿಕ ವೀಕ್ಷಣೆ

ದ್ರಾಕ್ಷಿ ಮಾರಾಟಗಾರನ ಈ ವಿಡಿಯೋವನ್ನು ಸಾಲಿಮಿನಾಯತ್ (Saaliminayat) ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ 25 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಆದ್ರೆ ದ್ರಾಕ್ಷಿ ಮಾರಾಟಗಾರ ಯಾರು? ಯಾವ ಊರಿನವರು ಎಂಬುದನ್ನು ತಿಳಿಸಿಲ್ಲ.




ಇವರು ಒಬ್ಬ ಅತ್ಯುತ್ತಮ ದ್ರಾಕ್ಷಿ ಮಾರಾಟಗಾರ. ಇದು ಸಹ ಕಚ್ಚಾ ಬದಾಮ್ ರೀತಿಯಲ್ಲಿ ವೈರಲ್ ಆಗಲಿದೆ ಎಂದು ಕಮೆಂಟ್ ಮಾಡಿದ್ದಾರೆ. ಒಂದಿಷ್ಟು ಜನ ನಗುತ್ತಿರುವ, ಸೂಪರ್ ಮತ್ತು ಚಪ್ಪಾಳೆ ಹೊಡೆಯುತ್ತಿರುವ ಎಮೋಜಿಗಳನ್ನು ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

27 ಸೆಕೆಂಡ್ ನ ಹರಿ ಹರಿ, ಕಚ್ಚಿ ಕಚ್ಚಿ, ಪೀಲಿ ಪೀಲಿ ವಿಡಿಯೋ

ಕಚ್ಚಾ ಬಾದಾಮ್ ಹಾಡು ಹಾಡಿರುವ ಕಡಲೆಕಾಯಿ ಮಾರಾಟಗಾರ ಭುವನ್ ಬದ್ಯಾಕರ್ (Bhuban Badyakar)  ಪ್ರತಿಯೊಬ್ಬರಿಗೂ ಚಿರಪರಿಚಿತರು. ಇದೀಗ ಅಂತಹುವುದೇ ಮತ್ತೊಂದು ಹಾಡು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ (Viral Video) ಆಗುತ್ತಿದೆ.  ಈ ಹೊಸ ಹಾಡನ್ನು (New Song) ವಯಸ್ಸಾದ ಪೇರಲ (ಸೀಬೆ ಹಣ್ಣು) ಮಾರಾಟಗಾರೊಬ್ಬರು ಹಾಡಿದ್ದಾರೆ.

ಈ ಹಿರಿಯ ವ್ಯಕ್ತಿ ತನ್ನ ಗಾಡಿಯಲ್ಲಿರುವ ಸೀಬೆ ಹಣ್ಣು ಖರೀದಿಸಲು ಗ್ರಾಹಕರನ್ನು ವಿಶೇಷವಾಗಿ ಆಹ್ವಾನಿಸಿದ್ದಾರೆ. "ಯೇ ಹರಿ ಹರಿ, ಕಚ್ಚಿ ಕಚ್ಚಿ, ಪೀಲಿ ಪೀಲಿ, ಪಾಕಿ ಪಾಕಿ, ಮೀಥಿ ಮೀಥಿ, ಗದ್ದರ್ ಗದ್ದರ್, ತಾಜಾ ತಾಜಾ, ನಮಕ್ ಲಗಾ ಕೆ ಖಾಜ್ ಖಾಜಾ" ಎಂದು ಹಾಡುತ್ತಾರೆ. ಅಂದರೆ ಪೇರಲ ಹಣ್ಣು ತಾಜಾ ಆಗಿದ್ದು, ತಿನ್ನಲು ಯೋಗ್ಯವಾಗಿದೆ. ಸ್ವಲ್ಪ ಉಪ್ಪು ಹಚ್ಚಿಕೊಂಡು ಈ ಹಣ್ಣು ತಿನ್ನಲು ಬನ್ನಿ ಎಂದು ಮಾರಾಟಗಾರ ಗ್ರಾಹಕರನ್ನು ಆಹ್ವಾನಿಸಿದ್ದಾರೆ.



ಪೇರಲ ಮಾರಾಟಗಾರನ ಇಪ್ಪತ್ತೇಳು ಸೆಕೆಂಡುಗಳ ವೀಡಿಯೊವನ್ನು ಯೂಟ್ಯೂಬ್ ಮತ್ತು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಆದ್ರೆ ಈ ವ್ಯಕ್ತಿ ಯಾರು? ಯಾವ ಊರು ಎಂಬುದರ ಮಾಹಿತಿ ತಿಳಿದು ಬಂದಿಲ್ಲ.

ಇದನ್ನೂ ಓದಿ: Viral Video: ತಾಯಿ ಮಾಡಿಕೊಟ್ಟ ತಿಂಡಿಗೆ ಪುಟ್ಟ ಹುಡುಗಿಯ ಅದ್ಭುತ ರಿಯಾಕ್ಷನ್, ತಿನ್ನೋದಷ್ಟೇ ಅಲ್ಲ, ಕಾಂಪ್ಲಿಮೆಂಟ್ಸ್ ಕೊಡಿ

ಅದೇನೇ ಇರಲಿ ನೆಟ್ಟಿಗರು  ಪೇರಲ ಮಾರುವವರ ಜಿಂಗಲ್ ಹಾಡನ್ನು ಇಷ್ಟುಪಟ್ಟು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜನರು ಈ ಹಾಡನ್ನು ಕಚ್ಛಾ ಬದಾಮಾಗೆ ಹೋಲಿಸಿ ಶೇರ್ ಮಾಡುತ್ತಿದ್ದಾರೆ.
Published by:Mahmadrafik K
First published: