ಕಮಲ್​ ಹಾಸನ್​, ಸಂಗೀತ ಮಾಂತ್ರಿಕ ಶಂಕರ್​ ಮಹಾದೇವನ್​ ಈತನ ಹಾಡಿಗೆ ಮರುಳಾಗಿದ್ದಾರೆ


Updated:July 4, 2018, 4:47 PM IST
ಕಮಲ್​ ಹಾಸನ್​, ಸಂಗೀತ ಮಾಂತ್ರಿಕ ಶಂಕರ್​ ಮಹಾದೇವನ್​ ಈತನ ಹಾಡಿಗೆ ಮರುಳಾಗಿದ್ದಾರೆ

Updated: July 4, 2018, 4:47 PM IST
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಕ್ಷಣದಲ್ಲಿ ನಿಮ್ಮ ಭವಿಷ್ಯ ಬದಲಾಗಬಹುದು ಎಂಬುದಕ್ಕೆ ಕೇರಳದ ಈ ಯುವಕನ ಕಥೆಯೇ ಸಾಕ್ಷಿ. ಕೆಲ ದಿನಗಳ ಹಿಂದೆ ರಬ್ಬರ್​ ಟ್ಯಾಪಿಂಗ್​ ಮಾಡುತ್ತಿದ್ದ ಸಂದರ್ಬದಲ್ಲಿ ಹಾಡಿದ ಹಾಡಿಗೆ ಇದೀಗ ನಟ ಕಮಲ್​ ಹಾಸನ್​ ಹಾಗೂ ಸಂಗೀತ ನಿರ್ದೇಶಕ ಶಂಕರ್​ ಮಹಾದೇವನ್​ ಫಿದಾ ಆಗಿ ಆತನನ್ನು ಭೇಟಿ ಮಾಡಿದ್ದಾರೆ.

ಹೌದು! ಕೆಲ ದಿನಗಳ ಹಿಂದೆ ರಬ್ಬರ್​ ತೋಟದಲ್ಲಿ ಟ್ಯಾಪಿಂಗ್​ ಕೆಲಸ ಮಾಡುತ್ತಿದ್ದ ರಾಕೇಶ್​ ಉನ್ನಿ ತಮಿಳು ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಈ ಹಾಡನ್ನು ಅವರ ಸ್ನೇಹಿತರೊಬ್ಬರು ಸಾಮಾಜಿ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಂತಿಮವಾಗಿ ಈ ಹಾಡಿಗೆ ಫಿದಾ ಆದ ಸಂಗೀತ ಮಾಂತ್ರಿಕ ಶಂಕರ್​ ಮಹಾದೇವನ್​ ಹಾಡನ್ನು ಟ್ವೀಟ್​ ಮಾಡಿ, ಯಾರಿತ? ಇಂತಹ ಪ್ರತಿಭಗಳನ್ನು ನೋಡಿದಾಗಲೇ ನಮಗೆ ಹೆಚ್ಚಿ ಎನಿಸುತ್ತದೆ. ಈತನ್ನು ಹುಡುಕುವುದಾದರೂ ಹೇಗೆ ಎಂದು ಟ್ವೀಟಿ ಮಾಡಿದ್ದಾರೆ.ಈ ಟ್ವೀಟ್​ ಮಾಡಿ ಕೆಲವೇ ಕ್ಷಣದಲ್ಲಿ ಟ್ವೀಟ್​ ವೈರಲ್​ ಆಗಿದ್ದು, ಕೊನೆಗೂ ನೆಟ್ಟಿಗರು ಆ ವ್ಯಕ್ತಿಯನ್ನು ಕೇರಳದ ರಾಕೇಶ್​ ಉನ್ನು ಎಂದು ಗುರುತಿಸಿದ್ದಾರೆ. ಅಲ್ಲದೇ ಆತನ ಮಾಹಿತಿಯನ್ನೂ ಶೇರ್​ ಮಾಡಿದ್ದಾರೆ.

ದಿ ನ್ಯೂಸ್​ ಮಿನಿಟ್​ ವರದಿ ಪ್ರಕಾರ ಶಂಕರ್​ ಈ ಮಾಹಿತಿಯನ್ನು ಪಡೆದು ರಾಕೇಶ್​ನನ್ನು ಭೇಟಿಯಾಗುವ ಪ್ರಯತ್ನ ಮಾಡಿರುವ ಬೆನ್ನಲ್ಲೇ ಗಾಯಕ ಪಂಡಾಲಂ ಬಾಲನ್, ಪಿಟೀಲು ವಾದಕ ಹಾಗು ಸಂಗೀತಗಾರ ಬಾಲಭಸ್ಕರ್ ಮತ್ತು ಸಂಗೀತ ಸಂಯೋಜಕ ಗೋಪಿ ಸುಂದರ್ ಈ ಹಾಡುಗಾರನಿಗೆ ಕರೆ ಮಾಡಿ ಮಾತನಾಡಿದ್ದಾರೆ.

ಮಂಗಳವಾರದಂದು ರಾಕೇಶ್​ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ, ನಟ ಕಮಲ್​ ನಟನೆಯ ವಿಶ್ವರೂಪಂ ಚಿತ್ರ ಹಾಡನ್ನು ಕಮಲ್​ ಮುಂದೆಯೇ ಹಾಡಿ ಕಮಾಲ್​ ಮಾಡಿದ್ದಾನೆ. ಈ ವಿಡಿಯೋ ಕೂಡಾ ಅಂತರ್ಜಾಲದಲ್ಲಿ ಸೆನ್ಸೇಷನ್​ ಹುಟ್ಟಿಸಿದೆ.ಕೆಲ ದಿನಗಳ ಹಿಂದೆ ಗುರಿಗಾಹಿಯೊಬ್ಬ ಹಾಡಿರುವ ಹಾಡೂ ಕೂಡಾ ಭಾರೀ ಫೇಮಸ್​ ಆಗಿರುವುದನ್ನು ನೀವು ಗಮನಿಸಿರಬಹುದು. ತಮ್ಮ ಪಾಡಿಗೆ 'ನಿನ್ನ ಲಜ್ಜೆ ಒಂದು ಸಂಗೀತದಂತೆ.. ಸಾಗರಿಯೇ...' ಹಾಡಿನ ಸಾಲುಗಳು ಕೂಡ ಇದೀಗ ಪ್ರತಿಯೊಬ್ಬರಿಗೂ ಇಷ್ಟವಾಗಿವೆ. ಈತನೂ ಕೂಡಾ ಭಾರೀ ವೈರಲ್​ ಆಗಿದ್ದ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...