ಬಾಳೆಹಣ್ಣು ಆಯ್ತು ಈಗ ಮೊಟ್ಟೆ ಸರದಿ; ಕೇವಲ ಎರಡು ಎಗ್​ಗೆ ಈ ಪಂಚತಾರ ಹೋಟೆಲ್ ಮಾಡಿದ ಬಿಲ್ ಎಷ್ಟು ಗೊತ್ತಾ?

ಕಾರ್ತಿಕ್​ ಧಾರ್​ ಎಂಬುವವರು ಮುಂಬೈನ ಫೋರ್​ ಸೀಸನ್​ ಹೋಟೆಲ್​ಗೆ ತೆರಳಿದ್ದರು. ಈ ವೇಳೆ ಅವರು ಆಮ್ಲೆಟ್​, ಮೊಟ್ಟೆ ಮೊದಲಾದ ತಿನಿಸುಗಳನ್ನು ಆರ್ಡರ್​ ಮಾಡಿದ್ದರು. ಇದಕ್ಕೆ ಹೋಟೆಲ್​ನವರು ಮಾಡಿದ ಬಿಲ್​ನ ಫೋಟೋ ವೈರಲ್​ ಆಗಿದೆ.

Rajesh Duggumane | news18
Updated:August 13, 2019, 11:25 AM IST
ಬಾಳೆಹಣ್ಣು ಆಯ್ತು ಈಗ ಮೊಟ್ಟೆ ಸರದಿ; ಕೇವಲ ಎರಡು ಎಗ್​ಗೆ ಈ ಪಂಚತಾರ ಹೋಟೆಲ್ ಮಾಡಿದ ಬಿಲ್ ಎಷ್ಟು ಗೊತ್ತಾ?
ಮೊಟ್ಟೆಗೆ ಮಾಡಲಾದ ಬಿಲ್​
  • News18
  • Last Updated: August 13, 2019, 11:25 AM IST
  • Share this:
ಮುಂಬೈ (ಆ.13): ಬಾಲಿವುಡ್​ ನಟ ರಾಹುಲ್​ ಬೋಸ್​ಗೆ ಪಂಚತಾರಾ ಹೋಟೆಲ್ ಒಂದರಲ್ಲಿ ಎರಡು ಬಾಳೆಹಣ್ಣಿಗೆ 442 ರೂಪಾಯಿ ಬಿಲ್​ ಮಾಡಿದ್ದ ಸುದ್ದಿ ಸಖತ್​ ವೈರಲ್​ ಆಗಿತ್ತು. ಈ ಹೋಟೆಲ್ ​ಬಗ್ಗೆ ಅನೇಕರು ಅಪಸ್ವರ ಕೂಡ ಎತ್ತಿದ್ದರು. ಈ ವಿಚಾರ ತಣ್ಣಗಾಗಿದೆ. ಈಗ ಕೋಳಿ ಮೊಟ್ಟೆಯ ಸರದಿ! ಮುಂಬೈನ ಪಂಚತಾರಾ ಹೋಟೆಲ್​ನವರು ಬೇಯಿಸಿದ ಎರಡು ಮೊಟ್ಟೆಗೆ ಮಾಡಿದ ಬಿಲ್​ ನೋಡಿ ಗ್ರಾಹಕ ಕಂಗಾಲಾಗಿದ್ದ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾರ್ತಿಕ್​ ಧಾರ್​ ಎಂಬುವವರು ಮುಂಬೈನ ಫೋರ್​ ಸೀಸನ್​ ಹೋಟೆಲ್​ಗೆ ತೆರಳಿದ್ದರು. ಅವರು ಆಮ್ಲೆಟ್​, ಮೊಟ್ಟೆ ಮೊದಲಾದ ತಿನಿಸುಗಳನ್ನು ಆರ್ಡರ್​ ಮಾಡಿದ್ದರು. ಅದನ್ನು ತಿಂದ ನಂತರ ಬಿಲ್​ ನೋಡಿದ್ದಾರೆ. ಕೇವಲ ಎರಡು ಮೊಟ್ಟೆಗೆ ಹೋಟೆಲ್​ನವರು ಬರೋಬ್ಬರಿ 1,700 ರೂಪಾಯಿ ಚಾರ್ಜ್​ ಮಾಡಿದ್ದರು! ಒಂದು ಆಮ್ಲೇಟ್​ಗೆ ಹೋಟೆಲ್​ನವರು ವಿಧಿಸಿದ್ದು ಬರೋಬ್ಬರಿ 850 ರೂಪಾಯಿ. ಕಾರ್ತಿಕ್​  ಈ ಬಿಲ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್​ಗಳು ಬಂದಿವೆ.ನಟ ರಾಹುಲ್​ ಬೋಸ್​ಗೂ ಇದೇ ರೀತಿ ಆಗಿತ್ತು. ಸಿನಿಮಾವೊಂದರ ಚಿತ್ರೀಕರಣ ನಿಮಿತ್ತ ಚಂಡೀಗಢದ ಪಂಚತಾರಾ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಜಿಮ್​ನಲ್ಲಿ ವರ್ಕ್​ಔಟ್​ ಮಾಡುವಾಗ ಎರಡು ಬಾಳೆಹಣ್ಣು ತರಿಸಿಕೊಂಡಿದ್ದರು. ಅದಕ್ಕೆ ಈ ಹೋಟೆಲ್​ನವರು 442 ರೂಪಾಯಿ ಬಿಲ್​ ಮಾಡಿದ್ದರು.
Loading...
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...