• Home
 • »
 • News
 • »
 • trend
 • »
 • Grand Canyon: ಕಾನೂನು ಉಲ್ಲಂಘಿಸಿ ಗಾಲ್ಫ್ ಆಟವಾಡಿದ ಟಿಕ್‌ಟಾಕರ್; ಕ್ರಿಮಿನಲ್ ಪ್ರಕರಣ ದಾಖಲು

Grand Canyon: ಕಾನೂನು ಉಲ್ಲಂಘಿಸಿ ಗಾಲ್ಫ್ ಆಟವಾಡಿದ ಟಿಕ್‌ಟಾಕರ್; ಕ್ರಿಮಿನಲ್ ಪ್ರಕರಣ ದಾಖಲು

 ಕಾನೂನು ಉಲ್ಲಂಘಿಸಿ ಗಾಲ್ಫ್ ಆಟವಾಡಿದ ಟಿಕ್‌ಟಾಕರ್

ಕಾನೂನು ಉಲ್ಲಂಘಿಸಿ ಗಾಲ್ಫ್ ಆಟವಾಡಿದ ಟಿಕ್‌ಟಾಕರ್

19 ರ ಹರೆಯದ ಕೇಟಿ ಸಿಗ್ಮಂಡ್, ಟಿಕ್‌ಟಾಕ್ ಇನ್‌ಫ್ಲುಯೆನ್ಸರ್. ಇವರು ಗ್ರ್ಯಾಂಡ್ ಕ್ಯಾನನ್‌ಗೆ ಗಾಲ್ಫ್ ಚೆಂಡನ್ನು ಅಪ್ಪಳಿಸಿ ಬೀಸುತ್ತಿರುವ ದೃಶ್ಯ ಹಾಗೂ ಗಾಲ್ಫ್ ಕೇಸ್ ಕೂಡ ಅರ್ಧತುಂಡಾಗಿ ಕಣಿವೆಯತ್ತ ಹಾರಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಕೇಟಿಯ ಮೇಲೆ ಆರೋಪ ಹೊರಿಸಲಾಗಿದೆ. 

ಮುಂದೆ ಓದಿ ...
 • Share this:

  ವ್ಯಾಪಕ ಪಳೆಯುಳಿಕೆ ದಾಖಲೆಗಳು, ಭೌಗೋಳಿಕ ವೈಶಿಷ್ಟ್ಯಗಳು, ಶ್ರೀಮಂತ ಪುರಾತತ್ತ್ವ ಶಾಸ್ತ್ರದ ಇತಿಹಾಸವನ್ನು ಹೊಂದಿರುವ ಗ್ರ್ಯಾಂಡ್ ಕ್ಯಾನನ್ (Grand Canyon) ಪ್ರಪಂಚದಲ್ಲಿಯೇ ಅತ್ಯಂತ ಆಕರ್ಷಣೀಯ ಭೂದೃಶ್ಯಗಳಲ್ಲಿ ಒಂದೆನಿಸಿದೆ. ಟಿಕ್‌ಟಾಕ್ ಇನ್‌ಫ್ಲುಯೆನ್ಸರ್ ಒಬ್ಬರು ಈಗ ಈ ರಾಷ್ಟ್ರೀಯ ಉದ್ಯಾನವನದ (The Grand Canyon National Park) ಕಾನೂನು ಉಲ್ಲಂಘನೆಯನ್ನು ಮಾಡಿದ್ದು, ಆಕೆಯ ಮೇಲೆ ಉದ್ಯಾನವನ ಕಠಿಣ ಕ್ರಮ ಕೈಗೊಂಡಿದೆ.


  ಟಿಕ್‌ಟಾಕ್ ಇನ್‌ಫ್ಲುಯೆನ್ಸರ್‌ ಮೇಲೆ ಪ್ರಕರಣ ದಾಖಲು


  19 ರ ಹರೆಯದ ಕೇಟಿ ಸಿಗ್ಮಂಡ್, ಟಿಕ್‌ಟಾಕ್ ಇನ್‌ಫ್ಲುಯೆನ್ಸರ್. ಇವರು ಗ್ರ್ಯಾಂಡ್ ಕ್ಯಾನನ್‌ಗೆ ಗಾಲ್ಫ್ ಚೆಂಡನ್ನು ಅಪ್ಪಳಿಸಿ ಬೀಸುತ್ತಿರುವ ದೃಶ್ಯ ಹಾಗೂ ಗಾಲ್ಫ್ ಕೇಸ್ ಕೂಡ ಅರ್ಧತುಂಡಾಗಿ ಕಣಿವೆಯತ್ತ ಹಾರಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಕೇಟಿಯ ಮೇಲೆ ಆರೋಪ ಹೊರಿಸಲಾಗಿದೆ. ಈ ವಿಡಿಯೋವು ವೈರಲ್ ಆಗಿದ್ದು, ಗ್ರ್ಯಾಂಡ್ ಕ್ಯಾನನ್ ರಾಷ್ಟ್ರೀಯ ಉದ್ಯಾನವನವು ತನ್ನ ಫೇಸ್‌ಬುಕ್ ಪುಟದಲ್ಲಿ ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದೆ ಹಾಗೂ ಆಕೆ ಕಣಿವೆಗೆ ಗಾಲ್ಫ್ ಚೆಂಡನ್ನು ಹಾರಿಸಿದ ವಿಡಿಯೋಗೆ ಪ್ರತಿಕ್ರಿಯೆ ನೀಡಿದೆ.


  ಇದನ್ನೂ ಓದಿ: Indian Army: ಭಾರತೀಯ ಸೇನೆಯನ್ನೇ ಮದ್ವೆಗೆ ಆಹ್ವಾನಿಸಿದ ವಧು-ವರ! ಗಡಿಯಿಂದಲೇ ಬಂತು ಶುಭಸಂದೇಶ!


  ಕೋಪಗೊಂಡ ಬಳಕೆದಾರರು


  ಸಾಮಾಜಿಕ ಖಾತೆಯಲ್ಲಿ ಸಿಗ್ಮಂಡ್ ಅವರ ವಿಡಿಯೋ ಟ್ರೆಂಡ್ ಆಗುತ್ತಿದ್ದಂತೆಯೇ ಕುಪಿತರಾದ ಬಳಕೆದಾರರು ಉದ್ಯಾನವನಕ್ಕೆ ವಿಡಿಯೋ ಕುರಿತು ದೂರು ನೀಡಿದ್ದಾರೆ ಹಾಗೂ ವಿಡಿಯೋ ಕ್ಲಿಪ್ ಅನ್ನು ಸಾಕ್ಷಿಯಾಗಿ ಒದಗಿಸಿದ್ದಾರೆ ಎಂಬುದು ತಿಳಿದುಬಂದಿದೆ.


  ಇಂತಹ ನೀಚ ಕೃತ್ಯವನ್ನು ನಡೆಸುತ್ತಿರುವ ಈಕೆಯ ಹೆಸರು ಕೇಟ್ ಸಿಗ್ಮಂಡ್ ಹಾಗೂ ಆಕೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಳಕೆದಾರರು ಬರೆದುಕೊಂಡಿದ್ದಾರೆ. ಈಕೆಯ ಕೃತ್ಯವು ಮತ್ತೊಬ್ಬರ ಪ್ರಾಣಕ್ಕೆ ಸಂಚಕಾರಿಯಾಗಬಹುದು ಎಂಬುದು ಇನ್ನೊಬ್ಬ ಬಳಕೆದಾರರ ಹೇಳಿಕೆಯಾಗಿದೆ.


  ಉದ್ಯಾನವನವು ಈ ವಿಡಿಯೋಗೆ ಪ್ರತಿಕ್ರಿಯೆಯಾಗಿ ಶೀರ್ಷಿಕೆಯೊಂದನ್ನು ನೀಡಿದ್ದು ಗ್ರ್ಯಾಂಡ್ ಕ್ಯಾನನ್‌ಗೆ ಗಾಲ್ಫ್ ಚೆಂಡನ್ನು ಹೊಡೆಯಬೇಡಿ ಎಂದು ವಿದ್ಯಾವಂತರಿಗೆ ಹಾಗೂ ಶಿಕ್ಷಿತ ಜನರಿಗೆ ನಾವು ತಿಳಿಹೇಳಬೇಕೇ ಎಂದು ಕೇಳಿದೆ.


  ಕೇಟಿಯನ್ನು ಸಂಪರ್ಕಿಸಿರುವ ಉದ್ಯಾನವನ


  ಟಿಕ್‌ಟಾಕ್ ಇನ್‌ಫ್ಲುಯೆನ್ಸರ್ ಕೇಟಿ ಸಿಗ್ಮಂಡ್ ಅವರ ಖಾತೆಯನ್ನು ಹುಡುಕಲು ಸಾರ್ವಜನಿಕರು ನೆರವು ನೀಡಿದರು ಎಂದು ತಿಳಿಸಿರುವ ಉದ್ಯಾನವನವು, ಅಕ್ಟೋಬರ್ 27 ರಂದು ಗ್ರ್ಯಾಂಡ್ ಕ್ಯಾನನ್‌ ಪ್ರದೇಶದಲ್ಲಿ ವಿಧಿಸಿರುವ ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ ಹಾಗೂ ಘಟನೆಯ ಕುರಿತು ಆ ವ್ಯಕ್ತಿಯನ್ನು ಸಂಪರ್ಕಿಸಿದೆ ಎಂದು ಎಂದು ಗ್ರ್ಯಾಂಡ್ ಕ್ಯಾನನ್ ರಾಷ್ಟ್ರೀಯ ಉದ್ಯಾನವನ ಹೇಳಿಕೆಯಲ್ಲಿ ತಿಳಿಸಿದೆ.


  ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣದ ದಾಖಲಿಸಿರುವ ಉದ್ಯಾನವನ ವ್ಯಕ್ತಿಯ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ ಹಾಗೂ ಖುದ್ದಾಗಿ ಆಕೆ ಯುಎಸ್ ಡಿಸ್ಟ್ರಿಕ್ಟ್ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ ಎಂದು ತಿಳಿಸಿದ್ದಾರೆ.


  ನ್ಯಾಯಾಂಗ ಇಲಾಖೆಯ ಅಪರಾಧ ಸಂಪನ್ಮೂಲ ಕೈಪಿಡಿ, ರಾಷ್ಟ್ರೀಯ ಉದ್ಯಾನವನದ ನಿಯಮಗಳ ಉಲ್ಲಂಘನೆಯು $100 ದಂಡ ಹಾಗೂ ಮೂರು ತಿಂಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ಊಹಿಸಲಾಗಿದೆ. ಕಣಿವೆಯ ಅಂಚಿನ ಮೇಲೆ ನಿಂತು ವಸ್ತುಗಳನ್ನು ಎಸೆಯುವುದು ಕಾನೂನು ಬಾಹಿರ ಮಾತ್ರವಲ್ಲ ಇದರಿಂದ ಕಣಿವೆಯ ಕೆಳಗಿರುವ ವ್ಯಕ್ತಿಗಳು, ಪಾದಾಚಾರಿಗಳು ಹಾಗೂ ವನ್ಯಜೀವಿಗಳಿಗೆ ಅಪಾಯವಿದೆ ಎಂದು ಉದ್ಯಾನವನ ಪ್ರಕಟಣೆಯಲ್ಲಿ ತಿಳಿಸಿದೆ.


  ವಿಡಿಯೋ ಅಳಿಸಿರುವ ಸಿಗ್ಮಂಡ್


  ಘಟನೆಯ ತರುವಾಯ ಸಿಗ್ಮಂಡ್ ತಮ್ಮ ಖಾತೆಯಲ್ಲಿದ್ದ ವಿಡಿಯೋಗಳನ್ನು ಅಳಿಸಿದ್ದರೂ, ರೆಡ್ಡಿಟ್ ಬಳಕೆದಾರರು ಈ ವಿಡಿಯೋದ ಮೂಲ ಕ್ಲಿಪ್ ಅನ್ನು ಉಳಿಸಿಕೊಂಡಿದ್ದಾರೆ. ಹಂಚಿಕೊಂಡಿರುವ ವಿಡಿಯೋದಲ್ಲಿ ಸಿಗ್ಮಂಡ್ ಕಣಿವೆಯ ಅಂಚಿನಲ್ಲಿ ನಿಂತುಕೊಂಡು ಗಾಲ್ಫ್ ಚೆಂಡನ್ನು ಉಡಾಯಿಸಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಆಕೆಯ ಗಾಲ್ಫ್ ಕ್ಲಬ್ ಅರ್ಧ ಮುರಿದು ಕಣಿವೆಯತ್ತ ಹಾರಿರುವುದು ಕಂಡುಬಂದಿದೆ ಹಾಗೂ ಇನ್ನರ್ಧ ಸಿಗ್ಮಂಡ್ ಅವರ ಕೈಯಲ್ಲಿರುವುದು ವಿಡಿಯೋದಲ್ಲಿ ನಿಖರವಾಗಿದೆ.


  ಇದನ್ನೂ ಓದಿ: Food Delivery: ಲಾಂಗೆಸ್ಟ್‌ ಫುಡ್‌ ಡೆಲಿವರಿ ಮಾಡಿದ ಮಹಿಳೆಯ ಸಾಹಸ ಕೇಳಿದ್ರೆ ಶಾಕ್​ ಆಗ್ತಿರಾ!


  ಸಿಗ್ಮಂಡ್ ಸುಮಾರು ಏಳು ಮಿಲಿಯನ್ ಟಿಕ್‌ಟಾಕ್ ಅನುಯಾಯಿಗಳನ್ನು ಮತ್ತು ಮೂರು ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಗಾಲ್ಫ್ ಕೋರ್ಸ್‌ನಲ್ಲಿ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ.


  ಸಿಗ್ಮಂಡ್ ಜನಪ್ರಿಯ YouTube ಸಮೂಹ ನೆಲ್ಕ್‌ನೊಂದಿಗೆ ಜಂಟಿಯಾಗಿ ಸೇರಿಕೊಂಡಿದ್ದು, ಈ YouTube ಸಮೂಹವು ಗಾಲ್ಫ್-ಸಂಬಂಧಿತ ಕುಚೇಷ್ಟೆಗಳು ಸೇರಿದಂತೆ ಸಾರ್ವಜನಿಕವಾಗಿ ವಿಲಕ್ಷಣ ಸಾಹಸಗಳನ್ನು ಪ್ರದರ್ಶಿಸಲು ಹೆಸರುವಾಸಿಯಾಗಿದೆ.

  Published by:Precilla Olivia Dias
  First published: