Viral Video: ಫ್ಲೈಯಿಂಗ್‌ ದೋಸೆ ಆಯ್ತು, ಈಗ ಬಂದಿದೆ ಹೆಲಿಕಾಪ್ಟರ್‌ ಭೇಲ್​ ಪುರಿ!

ಇತ್ತೀಚೆಗೆ ಒಬ್ಬ ಬೀದಿ ಆಹಾರ ವ್ಯಾಪಾರಿ ತನ್ನ ಫೇಮಸ್‌ ʼಹೆಲಿಕಾಪ್ಟರ್‌ ಭೇಲ್‌ʼ ನೊಂದಿಗೆ ಆನ್‌ಲೈನ್‌ ನಲ್ಲಿ ಸಕತ್‌ ವೈರಲ್‌ ಆಗುತ್ತಿದ್ದಾನೆ. ಇದರ ಕುರಿತು ಇನ್‌ಸ್ಟಾಗ್ರಾಮ್‌ ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ, ಬೀದಿ ಆಹಾರ ಮಾರಾಟಗಾರ ರುಚಿಕರವಾದ ಭೇಲ್​ ಪುರಿ ತಯಾರಿಸುವುದನ್ನು ನಾವು ಇಲ್ಲಿ ನೋಡಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾಜಿಕ ಮಾಧ್ಯಮದ (Social Media) ತ್ವರಿತ ಬೆಳವಣಿಗೆ ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತದೆ. ಏಕೆಂದರೆ, ಅಷ್ಟೊಂದು ವೇಗವಾಗಿ ಬೆಳೆಯುತ್ತಿರುವ ಒಂದೇ ಒಂದು ವೇದಿಕೆ ಅಂದರೆ ಅದು ಸಾಮಾಜಿಕ ಮಾಧ್ಯಮ ಆಗಿದೆ. ಇದರ ಮೂಲಕ ನಾವು ದಿನನಿತ್ಯ ಹೊಸ-ಹೊಸ ಆಹಾರ (Food) ತಿನಿಸುಗಳ ಬಗ್ಗೆ ನೋಡಬಹುದಾಗಿದೆ. ಇತ್ತಿಚೀಗೆ ಯೂಟ್ಯೂಬ್‌ ಸಾಮಾಜಿಕ ಮಾಧ್ಯಮ ನಮ್ಮನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ನಾವು ಏನೇ ತಿಳಿದುಕೊಳ್ಳಬೇಕೆಂದರೂ ನಾವು ಈ ಮಾಧ್ಯಮವನ್ನು ನೆಚ್ಚಿಕೊಂಡಿದ್ದೇವೆ. ಈ ಯುಟ್ಯೂಬ್‌ ಚಾನೆಲ್‌ನಲ್ಲಿ (YouTube Channel) ಫುಡ್‌ ಬ್ಲಾಗರ್‌ಗಳು (Blogger) ಬೇರೆ-ಬೇರೆ ಸ್ಥಳಗಳಿಗೆ ಪ್ರಯಾಣಿಸಿ ಅವರ ಚಾನಲ್‌ಗಳಲ್ಲಿ ಎಲ್ಲಾ ರೀತಿಯ ಅನನ್ಯ ಆಹಾರಗಳ ತುಣುಕುಗಳನ್ನು ನಮಗೆ ತೋರಿಸುತ್ತಾರೆ.

ಈ ಹಿಂದೆ ವೈರಲ್ ಆಗಿದ್ದ ಫ್ಲೈಯಿಂಗ್‌ ದೋಸೆ

ನೀವು ಆಹಾರದ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕಳೆದ ವರ್ಷ ವೈರಲ್ ಆಗಿದ್ದ ಮುಂಬೈ ಆಹಾರ ತಿನಿಸುಗಳಲ್ಲಿ ಅತ್ಯಂತ ಫೇಮಸ್‌ ಆದ 'ಫ್ಲೈಯಿಂಗ್ ದೋಸೆ' ಅನ್ನು ನೀವು ಖಂಡಿತ ನೆನಪಿಸಿಕೊಳ್ಳುತ್ತೀರಿ. ಈ ದೋಸೆಯು 'ಫ್ಲೈಯಿಂಗ್ ದೋಸೆ' ಏಕಾಯಿತು ಎಂದರೆ ಆ ದೋಸೆಯನ್ನು ಬೇಯಿಸುವ ಚತುರ ವಿಧಾನಕ್ಕೆ ಅದು 'ಫ್ಲೈಯಿಂಗ್ ದೋಸೆ' ಎಂದು ಆನ್‌ಲೈನ್‌ ನಲ್ಲಿ ಹೆಚ್ಚು ಖ್ಯಾತಿ ಗಳಿಸಿತು. ಈ ವಿಶೇಷ ವಿಧಾನಕ್ಕೆ ಎಲ್ಲರೂ ಫೀದಾ ಆಗಿ ಅನೇಕ ಹೊಸ ಹೊಸ ರೆಸಿಪಿಗಳು ಸೃಷ್ಟಿಯಾದವು. ಅವುಗಳಲ್ಲಿ ವಿಶೇಷವಾಗಿ - ಫ್ಲೈಯಿಂಗ್ ವಡಾ ಪಾವ್, ಫ್ಲೈಯಿಂಗ್ ದಹಿ ವಡಾ ಮತ್ತು ಇನ್ನು ಮುಂತಾದವು.

ಇದೇನಿದು ಹೆಲಿಕಾಪ್ಟರ್‌ ಭೇಲ್‌
ಹಾಗೆಯೇ ಇತ್ತೀಚೆಗೆ ಒಬ್ಬ ಬೀದಿ ಆಹಾರ ವ್ಯಾಪಾರಿ ತನ್ನ ಫೇಮಸ್‌ ʼಹೆಲಿಕಾಪ್ಟರ್‌ ಭೇಲ್‌ʼ ನೊಂದಿಗೆ ಆನ್‌ಲೈನ್‌ ನಲ್ಲಿ ಸಕತ್‌ ವೈರಲ್‌ ಆಗುತ್ತಿದ್ದಾನೆ. ಇದರ ಕುರಿತು ಇನ್‌ಸ್ಟಾಗ್ರಾಮ್‌ ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ, ಬೀದಿ ಆಹಾರ ಮಾರಾಟಗಾರ ರುಚಿಕರವಾದ ಭೇಲ್​​ ಪುರಿ ತಯಾರಿಸುವುದನ್ನು ನಾವು ಇಲ್ಲಿ ನೋಡಬಹುದು.

ಇದನ್ನೂ ಓದಿ: Viral Video | ಮೇಲೆ ಹಾರಿ ತಟ್ಟೆಗೆ ಬೀಳುತ್ತೆ ಮಸಾಲೆ ದೋಸೆ!; ಮುಂಬೈನ ಫ್ಲೈಯಿಂಗ್ ದೋಸೆ ವಿಡಿಯೋ ವೈರಲ್

ಭೇಲ್​ ಪುರಿ ಬಗ್ಗೆ ತಿಳಿಯದವರಿಗೆ, ಭೇಲ್​ ಪುರಿ ಒಂದು ಭಾರತದಲ್ಲಿ ಜನಪ್ರಿಯ ತಿಂಡಿಯಾಗಿದ್ದು, ಕಡಲೆಕಾಯಿ, ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೊ ಮತ್ತು ಮಸಾಲೆಯುಕ್ತ ಚಟ್ನಿಗಳೊಂದಿಗೆ ಪಫ್ಡ್ ರೈಸ್ ಅನ್ನು ಸಂಯೋಜಿಸಿ ಹಗುರವಾಗಿದ್ದರೂ ಅತ್ಯಂತ ರುಚಿಕರ ತಿನಿಸು ಆಗಿರುತ್ತದೆ. ಈ ಎಲ್ಲ ಸಾಮಾಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ ಅದಕ್ಕೆ ಮಸಾಲೆ ಮಿಶ್ರಣ ಸೇರಿಸಲಾಗುತ್ತದೆ. ನಂತರ ಟೊಮಾಟೋ ಸಾಸ್‌ ಸೇರಿಸಿ ತಿನ್ನಲು ಕೊಡಲಾಗುತ್ತದೆ. ಇದು ಸಾಮಾನ್ಯ ಭೇಲ್​ ಪುರಿ ಆಯಿತು.
ಆದರೆ ಇಲ್ಲಿ ಆ ಬೀದಿ ಬದಿ ವ್ಯಾಪಾರಿ ಭೇಲ್​ ಪುರಿ ಮಸಾಲೆ ಮಿಶ್ರಣವನ್ನು ಗಾಳಿಯಲ್ಲಿ ತೂರುವಂತೆ ವೇಗವಾಗಿ ಭೇಲ್​ ಪುರಿ ಕೊಡುವುದನ್ನು ಮಾಡುತ್ತಿದಾನೆ. ಮಿಶ್ರಣವನ್ನು ಹೆಲಿಕಾಪ್ಟರ್‌ ಹಾರಿಸುವಂತೆ ಹಾರಿಸುತ್ತಾ ಒಂದು ಬಟ್ಟಲಿನಿಂದ ಮತ್ತೊಂದು ಬಟ್ಟಲಿಗೆ ಸೇರಿಸುತ್ತಿರುವ ಮನಮೋಹಕ ವಿಡಿಯೋ ಈಗ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. ಆ ಹೊಸ ರೀತಿಯ ಭೇಲ್​ ಪುರಿಗೆ 'ಹೆಲಿಕಾಪ್ಟರ್ ಭೇಲ್' ಎಂದು ಕರೆದಿದ್ದಾರೆ. ಈ ವಿಡಿಯೋಗೆ “ಈಗಾಗಲೇ ನೀವು ಹೊಸ ಅನ್ವೇಷಣೆಗಳನ್ನು ನೋಡಿದ್ದೀರಿ, ಅಲ್ಲವೇ ಎಂದು ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಹೆಲಿಕಾಪ್ಟರ್‌ ಭೇಲ್‌
ಹೆಲಿಕಾಪ್ಟರ್ ಭೆಲ್ ವೀಡಿಯೊವನ್ನು @Trollgramofficial ಬಳಕೆದಾರರು ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಈ ವಿಡಿಯೋ ಈಗಾಗಲೇ 94.2k ವೀಕ್ಷಣೆಗಳು ಮತ್ತು 3.3k ಲೈಕ್‌ಗಳನ್ನು ಪಡೆದುಕೊಂಡಿದೆ. ಭೇಲ್​ ಪುರಿ-ಮಾರಾಟಗಾರರ ಕೌಶಲ್ಯದಿಂದ ಪ್ರಭಾವಿತರಾದ ಆನ್‌ಲೈನ್ ಆಹಾರ ಪ್ರೇಮಿಗಳು ಇದಕ್ಕೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಒಬ್ಬ ಬಳಕೆದಾರ "ಇನ್ನು ಕೆಲವು ನಿಮಿಷಗಳು ಹಾಗೆ ಮಾಡಿದ್ದರೆ, ಅದು ವಿದ್ಯುತ್ ಅನ್ನು ಉತ್ಪಾದಿಸುತ್ತಿತ್ತು" ಎಂದು ಕಮೆಂಟ್ ಬರೆದರೆ, ಮತ್ತೊಬ್ಬರು "ಈ ಭೇಲ್​ ಪುರಿ ಉಕ್ಕಿನ ರುಚಿಯನ್ನು ಹೊಂದಿದೆ” ಎಂದು ಕಮೆಂಟ್‌ ಬರೆದು ನಕ್ಕಿದ್ದಾರೆ. ಇದಕ್ಕೆ ಮತ್ತೊಬ್ಬರು "ಈ ಶಬ್ದವು ತುಂಬಾ ಕಿರಿಕಿರಿಯುಂಟುಮಾಡುತ್ತದೆ!" ಎಂದು ಕಮೆಂಟ್‌ ಬರೆದು ಕೊಂಡಿದ್ದಾರೆ.

ಇದನ್ನೂ ಓದಿ: Viral Bride: ತನ್ನ ಮದುವೆ ಊಟಕ್ಕೆ ಅತಿಥಿಗಳಿಂದ ದುಡ್ಡು ಕೇಳಿದ ವಧು! ಬಂದವರೆಲ್ಲ ಶಾಕ್

ಹೆಲಿಕಾಪ್ಟರ್ ಭೆಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮಲ್ಲಿ ಅಂತಹ ಆಸಕ್ತಿದಾಯಕ ಹೊಸ ಆಹಾರ ಆವಿಷ್ಕಾರಗಳು ಇವೆಯೇ? ತಿಳಿಸಿ.
Published by:Ashwini Prabhu
First published: