ಪ್ರತಿಯೊಬ್ಬರು ಜೀವನದಲ್ಲಿ ಹಲವು ಮಜಲುಗಳನ್ನು ದಾಟಿಕೊಂಡು ಬಂದಿರುತ್ತಾರೆ. ಕಷ್ಟ –ಸುಖ ಎರಡನ್ನೂ ಅನುಭವಿಸಿ ಗೆಲುವಿನ ಕಡೆಗೆ ಮುನ್ನಡೆದು ಜೀವನವನ್ನು ಚಂದವಾಗಿ ರೂಪಿಸುತ್ತಾರೆ, ಅದರಂತೆ ಇಲ್ಲೊಬ್ಬ ವಿಚ್ಛೇದಿತ ಮಹಿಳೆ ಒಂಟಿ ಜೀವನದಲ್ಲಿ ಬಂದ ಸೋಲುಗಳನ್ನು ಮೆಟ್ಟಿ, ಕಠಿಣ ಪರಿಶ್ರಮದಿಂದ ಗೆಲುವಿನ ಹಾದಿ ಹಿಡಿಯುತ್ತಾಳೆ. ಸದ್ಯ ಮಹಿಳೆ ತನ್ನ ಪರಿಶ್ರಮದಿಂದ ಮನೆಯಲ್ಲಿಯೇ ಕುಳಿತುಕೊಂಡು ತಿಂಗಳಿಗೆ 41 ಲಕ್ಷ ರೂ ಸಂಪಾದಿಸುತ್ತಾರೆ.
ಕೆಲವರು ವಿವಾಹವಾಗಿ ನಂತರ ವಿಚ್ಛೇಧನ ಮೂಲಕ ದೂರ ದೂರವಾಗುತ್ತಾರೆ, ಈ ಸಮಯಲ್ಲಿ ಒಂಟಿತನ ಕಾಡಿ ಬದುಕೇ ಮುಗಿತು ಅಂದುಕೊಳ್ಳುತ್ತಾರೆ. ಆದರೆ ಇಂಗ್ಲೆಂಡ್ ಮೂಲದ ಮೈಕೆಲಾ ಮೊರ್ಗಾನ್ ಅದಾವುದನ್ನು ಚಿಂತಿಸಿಲ್ಲ. ಕಠಿಣ ಪರಿಶ್ರಮವೊಂದೆ ಇದಕ್ಕೆ ದಾರಿ ಎಂದುಕೊಂಡ ಆಕೆ ಮನೆಯಲ್ಲಿಯೇ ಕಲಾಕೃತಿ ತಯಾರಿಸಲು ಮುಂದಾಗುತ್ತಾಳೆ. ಹೀಗೆ ದುಡಿಯುವ ಮೂಲಕ ತಿಂಗಳಿಗೆ 41 ಲಕ್ಷ ರೂ ಗಳಿಸುತ್ತಿದ್ದಾಳೆ.
ಮೈಕೆಲಾ ಮೊರ್ಗಾನ್ 2019ರಲ್ಲಿ ತನ್ನ ಪತಿಗೆ ವಿಚ್ಛೇದನ ನೀಡುತ್ತಾಳೆ. ಈ ಸಮಯದಲ್ಲಿ ಆಕೆಯ ಜತೆಗಿದ್ದದ್ದು, ಸಾಕು ನಾಯಿ ಮಾತ್ರ. ಪತಿಯಿಂದ ದೂರವಾದ ಸಮಯದಲ್ಲೇ ಆಕೆ ಹೆಚ್ಚು ಪ್ರೀತಿಸುತ್ತಿದ್ದ ಮುದ್ದಿನ ನಾಯಿ ಕೂಡ ಕ್ಯಾನ್ಸರ್ ರೋಗದಿಂದ ಸತ್ತಿತು. ಇದರಿಂದ ಬೇಸರಗಂಡ ಆಕೆ ಮನೆಯ ಹಾಸಿಗೆಯಲ್ಲಿ ಮಲಗಿದಳು.
ಮನೆಯಲ್ಲಿ ಬೇಸರದಲ್ಲಿ ಕೂತಿದ್ದ ಮೈಕೆಲಾ ಮೊರ್ಗಾನ್ ಸುಮ್ಮನಿದ್ದರೆ ಆಗದು ಏನಾದರು ಮಾಡಿ ಜಯಿಸಬೇಕು ಎಂಬ ಹಠ ಹುಟ್ಟುತ್ತದೆ. ಕೊನೆಗೆ ಮನೆಯಲ್ಲಿಯೇ ಕಲಾಕೃತಿ ಮಾಡಲು ಪ್ರಾರಂಭಿಸುತ್ತಾಳೆ. ಡಿಜಿಟಲ್ ಆರ್ಟ್ವರ್ಕ್ ಕೂಡ ಮಾಡುತ್ತಾಳೆ. ಲಾಕ್ಡೌನ್ ಸಮಯವನ್ನು ಸಂಪೂರ್ಣವಾಗಿ ಇದಕ್ಕಾಗಿ ಬಳಸಿಕೊಂಡು ವ್ಯವಹಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಳು. ಕಳೆದ ವರ್ಷ ಎಪ್ರಿಲ್ ಮತ್ತು ಜುಲೈ ತಿಂಗಳಿನಲ್ಲಿ ಆಕೆಯ ಮಿಮೋ ಆರ್ಟ್ 1.2 ಕೋಟಿ ರೂ.ಗೆ ಮಾರಾಟವಾಯ್ತು. ಸದ್ಯ ಆರಾಮವಾಗಿ ಜೀವನ ಸಾಗಿಸುತತಿದ್ದಾಳೆ ಮೈಕೆಲಾ ಮೊರ್ಗಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ