ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನಾವು ಹೆಚ್ಚಾಗಿ ನೋಡಲು ಸಿಗುವ ವೈರಲ್ (Viral) ಆಗಿರುವ ವೀಡಿಯೋಗಳಲ್ಲಿ (Video) ಪ್ರಾಣಿಗಳ ವೀಡಿಯೋಗಳು ಹೆಚ್ಚಾಗಿರುತ್ತವೆ. ಅದರಲ್ಲೂ ಮುದ್ದಾದ ಸಾಕು ನಾಯಿಗಳ ಮತ್ತು ಬೆಕ್ಕುಗಳ (Cat) ವೀಡಿಯೋಗಳು ತುಂಬಾನೇ ನೋಡುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾಯಿಗಳು ಮೊದಲಿನಿಂದಲೂ ತುಂಬಾನೇ ಬುದ್ದಿವಂತ ಮತ್ತು ನಿಷ್ಠೆಯುಳ್ಳ ಪ್ರಾಣಿ ಎಂದು ಎಲ್ಲರೂ ಹೇಳುವುದನ್ನು ನಾವು ಕೇಳುತ್ತಾ ಬಂದಿದ್ದೇವೆ. ಈ ನಾಯಿಗಳು ಬರೀ ಮನೆಗಳನ್ನು (Home) ಕಾಯುವುದಲ್ಲದೆ, ಪೊಲೀಸ್ (Police) ಪಡೆಯಂತಹ ಸೇವೆಯಲ್ಲಿಯೂ ಸಹ ಇವು ಬಳಸಲ್ಪಡುತ್ತವೆ ಎಂದು ಹೇಳಬಹುದು.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
ಹೀಗೆ ದೀರ್ಘಕಾಲದಿಂದ ಪೊಲೀಸ್ ಪಡೆಯ ಸೇವೆಯಲ್ಲಿರುವ ನಾಯಿಯೊಂದು ಈಗ ನಿವೃತ್ತಿ ಆಗಿದ್ದಕ್ಕೆ ಅದಕ್ಕೆ ಸೇವೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಒಂದು ವೀಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಕೊಂಡಿದ್ದಾರೆ ನೋಡಿ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆ9 ಎಂಬ ಫೌಂಡೇಶನ್ ನ ನಾಯಿಯ ನಿವೃತ್ತಿಯನ್ನು ತೋರಿಸುವ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಈ ಭಾವನಾತ್ಮಕವಾದ ವೀಡಿಯೋವನ್ನು ನೀವು ಒಮ್ಮೆ ನೋಡಿ.
ಧನ್ಯವಾದ ಅರ್ಪಿಸಿದ ಪೊಲೀಸ್ ಅಧಿಕಾರಿ
ಈ ವೀಡಿಯೋವನ್ನು ಎರಡು ದಿನಗಳ ಹಿಂದೆ ಡಾಗ್ ಎಂಬ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ ಮತ್ತು ಇದು ಇಲ್ಲಿಯವರೆಗೆ 8.03 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. "ಕೆ9 ರಿಯೊ ಅವರ ನಿವೃತ್ತಿಯ ಸೈನ್ ಆಫ್" ಎಂದು ವೀಡಿಯೊದಲ್ಲಿನ ಪಠ್ಯವು ಹೇಳುತ್ತದೆ.
ಎಂಟು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಿಯೋ ಹೆಸರಿನ ನಾಯಿಗೆ ಪೊಲೀಸ್ ಅಧಿಕಾರಿಯೊಬ್ಬರು ಧನ್ಯವಾದ ಅರ್ಪಿಸುವ ಘೋಷಣೆಯನ್ನು ವೀಡಿಯೋ ತೋರಿಸುತ್ತದೆ. ಪ್ರತಿ ಬಾರಿಯೂ ತನ್ನ ಹ್ಯಾಂಡ್ಲರ್ ನ ಸುರಕ್ಷತೆಯನ್ನು ಖಚಿತಪಡಿಸಿದ್ದಕ್ಕಾಗಿ ಈ ಪ್ರಕಟಣೆಯು ನಾಯಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ ಮತ್ತು ಅದು ಈವಾಗ ಚೆನ್ನಾಗಿ ವಿಶ್ರಾಂತಿಯನ್ನು ತೆಗೆದು ಕೊಳ್ಳಬಹುದು ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Viral Video: ಏಕಾಂಗಿಯಾಗಿ ಸರ್ಫಿಂಗ್ ಮಾಡುತ್ತಿದೆ ಈ ನಾಯಿ! ಮುದ್ದು ಶ್ವಾನದ ಕ್ಯೂಟ್ ವಿಡಿಯೋ ನೀವೂ ನೋಡಿ
"ನಿಮ್ಮ ಸೇವೆಗಾಗಿ ಧನ್ಯವಾದಗಳು ರಿಯೊ" ಎಂದು ವೀಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಕ್ಲಿಪ್ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ ಮತ್ತು ಹಲವಾರು ಕಾಮೆಂಟ್ ಗಳನ್ನು ಪೋಸ್ಟ್ ಮಾಡಲು ಬಳಕೆದಾರರನ್ನು ಪ್ರೇರೇಪಿಸಿದೆ ಎಂದು ಹೇಳಬಹುದು.
ಸಮುದ್ರವನ್ನು ಆನಂದಿಸುತ್ತಿರುವ ರಿಯೊ
ಈ ಭಾವನಾತ್ಮಕ ವೀಡಿಯೋ ನೋಡಿದ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು "ಈರುಳ್ಳಿಯನ್ನು ಯಾರು ಕತ್ತರಿಸುತ್ತಿದ್ದಾರೆ" ಎಂದು ತಮ್ಮ ಕಣ್ಣೀರನ್ನು ಮುಚ್ಚಿಕೊಳ್ಳುವಂತೆ ಕಾಮೆಂಟ್ ಮಾಡಿದ್ದಾರೆ. "ಅವನ ಪುಟ್ಟ ಕ್ಷೌರದ ತೋಳು. ಇದು ಇತ್ತೀಚೆಗೆ ಪಶುವೈದ್ಯರನ್ನು ಭೇಟಿ ಮಾಡಿರಬೇಕು, ಹಾಗಾಗಿ ಇದು ನಿವೃತ್ತಿ ಪಡೆದಿರಬೇಕು. 8 ವರ್ಷಗಳ ಸೇವೆಯು ತುಂಬಾನೇ ದೀರ್ಘ ಸಮಯವಾಗಿದೆ. ಸ್ವೀಟ್ ಬಾಯ್, ಅವನು ಕೆಲವು ಪುಟ್ಟ ಮಕ್ಕಳೊಂದಿಗೆ ಉತ್ತಮ ಕುಟುಂಬವನ್ನು ಕಂಡು ಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇನೆ" ಎಂದು ಇನ್ನೊಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. "ರಿಯೊ ಈಗ ಫ್ಲೋರಿಡಾದಲ್ಲಿರುವ ಸಮುದ್ರವನ್ನು ಆನಂದಿಸುತ್ತಿದೆ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Explained: 22 ನಾಯಿಗಳ ಮಧ್ಯೆ 2 ವರ್ಷ ಕೋಣೆಯಲ್ಲಿ ಬಂಧಿಯಾಗಿದ್ದ ಬಾಲಕ! ಪಾಪಿ ತಂದೆ-ತಾಯಿ ಈ ಶಿಕ್ಷೆ ಕೊಟ್ಟಿದ್ದೇಕೆ?
ಜಾರ್ಜಿಯಾ ಪೊಲೀಸ್ ಕೆ9 ಫೌಂಡೇಶನ್ ನ ಅಧಿಕೃತವಾದ ಇನ್ಸ್ಟಾಗ್ರಾಮ್ ಖಾತೆಗೆ ಈ ವೀಡಿಯೋವನ್ನು ಕ್ರೆಡಿಟ್ ಮಾಡಲಾಗಿದೆ. ಅವರು ರಿಯೊ ಬಗ್ಗೆ ಪೋಸ್ಟ್ ಮಾಡಿದ ಮತ್ತೊಂದು ವೀಡಿಯೋದಲ್ಲಿ, ಅದು ಒಂದು ಕಪ್ ಐಸ್ಕ್ರೀಮ್ ಅನ್ನು ತಿನ್ನುವುದನ್ನು ನೋಡಬಹುದಾಗಿದೆ. ಈ ವೀಡಿಯೋ ಸಹ ಅಪ್ಲೋಡ್ ಮಾಡಿದಾಗಿನಿಂದಲೂ 1,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಎಂದು ಹೇಳಬಹುದು.
"ನಿಮ್ಮ ನಿವೃತ್ತಿ ಜೀವನ ಸುಖಮಯವಾಗಿರಲಿ ಕೆ9 ರಿಯೊ.. ಈ ಐಸ್ಕ್ರೀಮ್ ಪಡೆಯಲು ನೀನು ಅರ್ಹ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ರಿಯೊ ಖಂಡಿತವಾಗಿಯೂ ಜೀವನ ಪರ್ಯಂತ ನಾಯಿಮರಿ ಐಸ್ಕ್ರೀಮ್ ಕಪ್ ಗಳಿಗೆ ಅರ್ಹವಾಗಿದೆ" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ