• Home
 • »
 • News
 • »
 • trend
 • »
 • Viral News: 60 ವರ್ಷಗಳ ನಂತರ ತನ್ನ ಹಳೆಯ ಬೈಕ್ ನೋಡಿ ಖುಷಿಯಿಂದ ಕಣ್ಣೀರಿಟ್ಟ ಅಜ್ಜ!

Viral News: 60 ವರ್ಷಗಳ ನಂತರ ತನ್ನ ಹಳೆಯ ಬೈಕ್ ನೋಡಿ ಖುಷಿಯಿಂದ ಕಣ್ಣೀರಿಟ್ಟ ಅಜ್ಜ!

ಬಿಲ್ ಜಾಂಡ್ಬೆಲ್ಟ್ ಮತ್ತು ಅವರ ಬೈಕ್

ಬಿಲ್ ಜಾಂಡ್ಬೆಲ್ಟ್ ಮತ್ತು ಅವರ ಬೈಕ್

90 ವರ್ಷದ ವ್ಯಕ್ತಿಯೊಬ್ಬರು ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 60 ವರ್ಷಗಳ ನಂತರ ತಮ್ಮ ಹಳೆಯ ಬೈಕ್ ಅನ್ನು ನೋಡಿದ್ದಾರೆ ಎಂದರೆ ಮತ್ತೆ ಒಂದಾಗಿದ್ದಾರೆ ಅಂತ ಹೇಳಬಹುದು. ಈ ಭಾವನಾತ್ಮಕ ಕ್ಷಣವು 90 ವರ್ಷದ ಅಜ್ಜ ಮತ್ತು ಅವರ ಮಗನನ್ನು ಕಣ್ಣೀರಿನಲ್ಲಿ ಮುಳುಗಿಸಿತು.

 • Share this:

  ಸಾಮಾನ್ಯವಾಗಿ ನಮಗೆ ದಶಕಗಳ ನಂತರ ನಮ್ಮ ಬಾಲ್ಯದ ಗೆಳೆಯರು (Friends) ಸಿಕ್ಕರೆ ಅಥವಾ ನಮಗೆ ತುಂಬಾನೇ ಇಷ್ಟವಾದ ಒಂದು ವಸ್ತು ಸಿಕ್ಕರೆ ಎಷ್ಟೊಂದು ಮನಸ್ಸಿಗೆ ಖುಷಿಯಾಗುತ್ತದೆ. ಹಾಗೆಯೇ ನಮ್ಮ ಬಳಿ ಇದ್ದಂತಹ ಹಳೆಯ ಬೈಕ್ (Old Bike) ಕಳೆದು ಹೋಗಿ ಮತ್ತೆ ಅದು ನಮಗೆ 20-30 ವರ್ಷಗಳ ಬಳಿಕ ಸಿಕ್ಕರೆ ಅದನ್ನು ನೋಡಿ ನಾವು ಎಷ್ಟು ಭಾವುಕರಾಗುತ್ತೇವೆ ಅಂತ ಪದಗಳಲ್ಲಿ ಹೇಳಲು ಸಾಧ್ಯವೇ ಆಗುವುದಿಲ್ಲ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. 90 ವರ್ಷದ ವ್ಯಕ್ತಿಯೊಬ್ಬರು ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 60 ವರ್ಷಗಳ (60 Years Back Bike) ನಂತರ ತಮ್ಮ ಹಳೆಯ ಬೈಕ್ ಅನ್ನು ನೋಡಿದ್ದಾರೆ ಎಂದರೆ ಮತ್ತೆ ಒಂದಾಗಿದ್ದಾರೆ ಅಂತ ಹೇಳಬಹುದು. ಈ ಭಾವನಾತ್ಮಕ ಕ್ಷಣವು 90 ವರ್ಷದ ಅಜ್ಜ ಮತ್ತು ಅವರ ಮಗನನ್ನು ಕಣ್ಣೀರಿನಲ್ಲಿ ಮುಳುಗಿಸಿತು.


  ಬಿಲ್ ಅವರಿಗೆ ತಮ್ಮ ಹಳೆಯ ಬೈಕ್ ಮತ್ತೆ ನೋಡೋದಕ್ಕೆ 60 ವರ್ಷಗಳೇ ಬೇಕಾಯ್ತು


  ಬಿಲ್ ಜಾಂಡ್ಬೆಲ್ಟ್ 60 ವರ್ಷಗಳ ಹಿಂದೆ ವಾಸಿಸುತ್ತಿದ್ದ ನೆದರ್ಲ್ಯಾಂಡ್ ನಲ್ಲಿ ತಿಂಗಳುಗಳನ್ನು ಕಳೆದ ನಂತರ, ಬಿಲ್ ಅವರ ಮಗ ತನ್ನ ತಂದೆಯ ಹಳೆಯ ಬೈಕ್ ಅನ್ನು ಕಂಡು ಹಿಡಿಯಲು ಸಾಧ್ಯವಾಯಿತು ಮತ್ತು 1960 ರ ನಂತರ ಮೊದಲ ಬಾರಿಗೆ ಅದನ್ನು ಅವರ ಬಳಿಗೆ ತಂದರು.


  ಬಿಲ್ ಮತ್ತು ಅವರ ವಿಂಟೇಜ್ 1956 ರ ಡಿಕೆಡಬ್ಲ್ಯೂ ಮೋಟರ್ ಬೈಕ್ ನಡುವಿನ ಈ ಪುನರ್ಮಿಲನವು ಬಿಲ್ ಅವರ 60 ವರ್ಷದ ಪತ್ನಿ ವಿಲ್ಮಾ ಅವರು ನಿಧನರಾದ ನಾಲ್ಕು ವಾರಗಳ ನಂತರ ಸಂಭವಿಸಿತು.
  ತಮ್ಮ ಹಳೆಯ ಬೈಕನ್ನು ಮತ್ತೆ ನೋಡಿ ಸಂತೋಷದಿಂದ ಕಣ್ಣೀರಿಟ್ಟ ಬಿಲ್..


  ಬಿಲ್ ಅವರು ವಿಲ್ಮಾ ಅವರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಕೆನಡಾದ ಒಂಟಾರಿಯೊಗೆ ವಲಸೆ ಹೋದಾಗ ಹಾಲೆಂಡ್ ನಲ್ಲಿಯೇ ಆ ಬೈಕ್ ಅನ್ನು ಬಿಟ್ಟು ಹೋಗಿದ್ದರು. ಈಗ 60 ವರ್ಷಗಳ ನಂತರ, ಬಿಲ್ ತಮ್ಮ ಲಿವಿಂಗ್ ರೂಮ್ ನಲ್ಲಿ ತಮ್ಮ ಹಳೆಯ ಬೈಕ್ ನಿಂತಿರುವುದನ್ನು ನೋಡಿ ಭಾವುಕರಾಗಿ ಸಂತೋಷದಿಂದ ಕಣ್ಣೀರಿಟ್ಟರು.


  ಈ ಹಳೆಯ ಬೈಕ್ ಅನ್ನು ತನ್ನ ತಂದೆಯ ಮನೆಗೆ ಮರಳಿ ತಂದ ಸಂಪೂರ್ಣ ಕ್ರೆಡಿಟ್ ಅವರ ಮಗ ವಿನ್ಸ್ ಗೆ ಸಲ್ಲುತ್ತದೆ. ಸಂದರ್ಶನವೊಂದರಲ್ಲಿ, ಅವರು ಮಾತನಾಡುತ್ತಾ "ತಂದೆ ನನಗೆ ಅವರ ಹಳೆಯ ಬೈಕಿನ ಬಗ್ಗೆ ಹೇಳಿದ್ದರು ಮತ್ತು ಅವರ 90ನೇ ಹುಟ್ಟುಹಬ್ಬಕ್ಕೆ ಆಶ್ಚರ್ಯವಾಗಿ ಅದನ್ನು ಮರಳಿ ತರುವುದು ಒಳ್ಳೆಯದು ಎಂದು ನಾನು ಭಾವಿಸಿದೆ.


  ಬಿಲ್ ಜಾಂಡ್ಬೆಲ್ಟ್ ಮತ್ತು ಅವರ ಬೈಕ್


  ಅದರ ಮಾಲೀಕರನ್ನು ಪತ್ತೆ ಹಚ್ಚಲು ಮತ್ತು ಇತ್ತೀಚೆಗೆ ಅದನ್ನು ಯಾರು ಖರೀದಿ ಮಾಡಿದ್ದಾರೆ ಅಂತ ಕಂಡು ಹಿಡಿಯಲು ಶುರು ಮಾಡಿದೆವು. ಬೈಕನ್ನು ಅಪ್ಪನ ಬಳಿಗೆ ಮರಳಿ ತರುವುದು ನನಗೆ ತುಂಬಾ ವಿಶೇಷವಾಗಿತ್ತು. ಬೈಕಿನ ಜೊತೆ ಅವರ ಕೊನೆಯ ಛಾಯಾಚಿತ್ರ ತೆಗೆಸಿಕೊಂಡು ಸುಮಾರು 60 ವರ್ಷಗಳೇ ಕಳೆದಿದ್ದವು, ಈಗ ಮತ್ತೆ ನಾವು ಅದನ್ನು ಅವರಿಗೆ ಮರಳಿ ನೀಡುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಹೇಳಿದರು.


  ಬಿಲ್ ಮತ್ತು ವಿಲ್ಮಾ 1960 ರಲ್ಲಿ ಯುದ್ಧದ ನಂತರದ ಯುರೋಪ್ ನಲ್ಲಿದ್ದ ಜೀವನಕ್ಕಿಂತ ಉತ್ತಮ ಜೀವನದ ಅನ್ವೇಷಣೆಯಲ್ಲಿ ಕೆನಡಾಕ್ಕೆ ವಲಸೆ ಬಂದಾಗ, ಅವರು ತಮ್ಮ ಸಹೋದರ ಗೆರಿಟ್ ಬಳಿ ನೆದರ್ಲ್ಯಾಂಡ್ ನಲ್ಲಿ ಈ ಬೈಕ್ ಅನ್ನು ಬಿಟ್ಟರು.


  ಈ ಬೈಕ್ ವಿನ್ಸ್ ಗೆ ಸಿಕ್ಕಿದ್ದು ಹೇಗೆ?


  ಬಿಲ್ ಸೇರಿದಂತೆ ಮೋಟರ್ ಬೈಕಿಗೆ ಕೇವಲ ನಾಲ್ಕು ಮಾಲೀಕರು ಮಾತ್ರ ಇದ್ದರು ಎಂದು ವಿನ್ಸ್ ತಿಳಿಸಿದರು. ಈ ಮಾಹಿತಿಯು ಅಂತಿಮವಾಗಿ ಹಾಲೆಂಡ್ ಹೋರ್ಸ್ಟ್ನಲ್ಲಿ ವಿಂಟೇಜ್ ಮೋಟಾರ್ಸೈಕಲ್ ಸಂಗ್ರಾಹಕ ಹಿಯೆಮ್ ಜಾನ್ಸೆನ್ ಅವರನ್ನು ಕಂಡು ಹಿಡಿಯಲು ಸಹಾಯ ಮಾಡಿತು. ಇವರು ಆ ಬೈಕ್ ಅನ್ನು ರಿಪೇರಿ ಮಾಡಿ ತಮ್ಮ ಕಲೇಕ್ಷನ್ ಗಳಲ್ಲಿ ಇರಿಸಿಕೊಂಡಿದ್ದರು.


  ಅಂತಿಮವಾಗಿ, ವಿನ್ಸ್ ಈ ಬೈಕನ್ನು ಮತ್ತೆ ಅವರಿಗೆ ಮಾರುವಂತೆ ವಿನಂತಿಸಿದನು. ತನ್ನ ತಂದೆಗೆ ಈ ಬೈಕ್ ಅನ್ನು ನೀಡುವ ಯೋಜನೆಯ ಬಗ್ಗೆ ಹೇಳಿದಾಗ ಆ ಬೈಕ್ ಅನ್ನು ವಿನ್ಸ್ ಗೆ ಮಾರಾಟ ಮಾಡಿದರು.


  ಹಳೆಯ ಬೈಕ್ ಬಗ್ಗೆ ವೃದ್ದ ತಂದೆ ಹೇಳಿದ್ದೇನು?


  ತನ್ನ ಬೈಕ್ ನೊಂದಿಗೆ ಮತ್ತೆ ಸೇರಿದ ನಂತರ ಬಿಲ್ ಕಣ್ಣೀರು ಸುರಿಸುತ್ತಾ "ನಾನು ಆ ಬೈಕ್ ಅನ್ನು ತುಂಬಾ ಪ್ರೀತಿಸುತ್ತಿದ್ದೆ, ನಾವು ಕೆನಡಾಕ್ಕೆ ಬಂದಾಗ ಅದನ್ನು ಹಾಲೆಂಡ್ ನಲ್ಲಿ ಬಿಟ್ಟು ಬಿಡುವ ಆಯ್ಕೆ ಅಷ್ಟೇ ನನ್ನ ಬಳಿ ಇತ್ತು.


  ಇದನ್ನೂ ಓದಿ: ಈ ರೈಲು ಸೈಕಲ್​ಗಿಂತ ನಿಧಾನವಾಗಿ ಚಲಿಸುತ್ತಂತೆ, ಹೀಗಿದೆ ಕಾರಣ!


  ನಾನು ಅದನ್ನು ಮತ್ತೆ ನೋಡುತ್ತೇನೆ ಅಂತ ಎಂದಿಗೂ ಭಾವಿಸಿರಲಿಲ್ಲ. ಇದು ನನಗೆ ಸಾಕಷ್ಟು ಹಳೆಯ ನೆನಪುಗಳನ್ನು ಮರಳಿ ತಂದಿತು. ಈ ಕ್ಷಣ ತುಂಬಾನೇ ಭಾವನಾತ್ಮಕವಾಗಿದೆ ಮತ್ತು ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಹೇಳಿದರು.

  Published by:Prajwal B
  First published: