• Home
 • »
 • News
 • »
 • trend
 • »
 • Google Job: 10 ವರ್ಷ ಟ್ರೈ ಮಾಡಿ, ಕೊನೆಗೂ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಬೆಂಗಳೂರು ಟೆಕ್ಕಿ

Google Job: 10 ವರ್ಷ ಟ್ರೈ ಮಾಡಿ, ಕೊನೆಗೂ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಬೆಂಗಳೂರು ಟೆಕ್ಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರಿಗೆ ಅವರು ಅಂದುಕೊಂಡದ್ದನ್ನ ಸಾಧಿಸುವ ತನಕ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷವಿರುವುದಿಲ್ಲ ನೋಡಿ. ಅದರಲ್ಲೂ ಕೆಲವರಿಗೆ ಇಂತಹದ್ದೇ ಕಂಪನಿಯಲ್ಲಿ ತಾವು ಕೆಲಸ ಮಾಡಬೇಕು ಅನ್ನೋ ಗುರಿ ಇಟ್ಟುಕೊಂಡಿರುತ್ತಾರೆ, ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಕಥೆ ಇಲ್ಲಿದೆ ನೋಡಿ.

 • News18 Kannada
 • Last Updated :
 • New Delhi, India
 • Share this:

  ಕೆಲವರಿಗೆ ಅವರು ಅಂದುಕೊಂಡದ್ದನ್ನ ಸಾಧಿಸುವ ತನಕ ಮನಸ್ಸಿಗೆ ನೆಮ್ಮದಿ (Peace Of Mind) ಮತ್ತು ಸಂತೋಷವಿರುವುದಿಲ್ಲ ನೋಡಿ. ಅದರಲ್ಲೂ ಕೆಲವರಿಗೆ ಇಂತಹದ್ದೇ ಕಂಪನಿಯಲ್ಲಿ ತಾವು ಕೆಲಸ ಮಾಡಬೇಕು ಅನ್ನೋ ಗುರಿ ಇಟ್ಟುಕೊಂಡರೆ, ಅದು ನೆರವೇರುವ ತನಕ ಹಾಗೆಯೇ ಪ್ರಯತ್ನಿಸುತ್ತಿರುತ್ತಾರೆ ಅಂತ ಹೇಳಬಹುದು. ಹೌದು. ಪರಿಶ್ರಮವು ( Perseverance ) ಯಶಸ್ಸಿನ (Success) ಕೀಲಿಕೈ ಅಂತಾನೆ ಹೇಳಬಹುದು. ಇಲ್ಲಿಯೂ ಸಹ ಇದೇ ರೀತಿಯ ಒಂದು ಘಟನೆ (Incident) ನಡೆದಿದೆ ನೋಡಿ. ಬೆಂಗಳೂರಿನ (Bangalore) ಟೆಕ್ಕಿಯೊಬ್ಬರು ಹೀಗೆ ಪಟ್ಟು ಹಿಡಿದ ವ್ಯಕ್ತಿಯಾಗಿದ್ದು, ಕೊನೆಗೂ ಅವರಿಗೆ ಬೇಕಾದ ದೊಡ್ಡ ಕಂಪನಿಯಲ್ಲಿಯೇ ಕೆಲಸವನ್ನು (Job) ಗಿಟ್ಟಿಸಿಕೊಂಡಿದ್ದಾರೆ.


  ವೃತ್ತಿಯಲ್ಲಿ ಡಿಜಿಟಲ್ ಡಿಸೈನರ್ ಆಗಿರುವ ಅಡ್ವಿನ್ ನೆಟ್ಟೊ ಅವರನ್ನು ಇತ್ತೀಚೆಗೆ ಗೂಗಲ್ ಇಂಡಿಯಾ ನೇಮಿಸಿಕೊಂಡಿದೆ. ಇದರಲ್ಲೇನಿದೆ ಅಂತಹ ವಿಶೇಷ ಅಂತ ಬಹುತೇಕರಿಗೆ ಅನ್ನಿಸಬಹುದು, ಆದರೆ ಈ ಯಶಸ್ಸು ಬಂದಿರುವುದರ ಹಿಂದೆ ಸುಮಾರು 10 ವರ್ಷಗಳ ಕಠಿಣ ಪರಿಶ್ರಮವಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದರರ್ಥ ನೆಟ್ಟೊಗೆ ದೊಡ್ಡ ಟೆಕ್ ಕಂಪನಿಯಿಂದ ಆಫರ್ ಲೆಟರ್ ಪಡೆಯಲು ಅವನಿಗೆ ನಿಜವಾಗಿಯೂ ಒಂದು ದಶಕ ಸಮಯ ಹಿಡಿಯಿತು.


  ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ ಬೆಂಗಳೂರು ಟೆಕ್ಕಿ


  ಈಗ ಗೂಗಲ್​ನಲ್ಲಿ ಯುಎಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅಡ್ವಿನ್ ರಾಯ್ ನೆಟ್ಟೊ ಸುಮಾರು 10 ವರ್ಷಗಳ ಕಾಲ ಕಂಪನಿಯಲ್ಲಿ ಉದ್ಯೋಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು 2007 ರಲ್ಲಿ ಅನಿಮೇಷನ್ ಮತ್ತು ಗ್ರಾಫಿಕ್ ಡಿಸೈನಿಂಗ್ ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು 2008 ರಲ್ಲಿ ಸರಿಗಮ್ ಲಕ್ಷ್ಯೂರಿ ವಿಲ್ಲಾ ರಿಟ್ರೀಟ್​ ನಲ್ಲಿ ವೆಬ್ ಡಿಸೈನರ್ ಆಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು.


  ತನ್ನ ಮೊದಲ ಉದ್ಯೋಗದಲ್ಲಿ 1 ವರ್ಷ ಮತ್ತು 3 ತಿಂಗಳು ಕೆಲಸ ಮಾಡಿದ ನಂತರ, ಅವರು ಕ್ರಿಯೇಟಿವ್ ಡಿಸೈನರ್ ಆಗಿ ಬಿಲ್ಟ್ ಐಒಗೆ ಹೋದರು ಮತ್ತು ಗೂಗಲ್ ನಲ್ಲಿ ಡಿಜಿಟಲ್ ಡಿಸೈನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ಆದರೆ ಏಳು ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ಮತ್ತು ಸುಮಾರು 12 ವರ್ಷಗಳ ಅನುಭವವನ್ನು ಪಡೆದ ನಂತರ ಅವರು ಅಂತಿಮವಾಗಿ ಗೂಗಲ್ ನಲ್ಲಿ ತಮ್ಮ ಕನಸಿನ ಉದ್ಯೋಗವನ್ನು ಪಡೆದರು.


  ಇದನ್ನೂ ಓದಿ: HAL Recruitment: ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಹಾಕಿ, ತಿಂಗಳಿಗೆ 1 ಲಕ್ಷ ಸಂಬಳ


  ಗೂಗಲ್ ನಲ್ಲಿ ಕೆಲಸ ಸಿಕ್ಕ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಟೆಕ್ಕಿ.


  ಅವರು ತಮ್ಮ ಕುಟುಂಬ ಸದಸ್ಯರ ಪ್ರತಿಕ್ರಿಯೆ ವಿಡಿಯೋದೊಂದಿಗೆ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಇಂತಹ ದೊಡ್ಡ ಟೆಕ್ ಕಂಪನಿಯಲ್ಲಿ ಕೆಲಸವನ್ನು ಗಿಟ್ಟಿಸಲು ಪ್ರಯತ್ನಿಸುತ್ತಿರುವ ಆಕಾಂಕ್ಷಿಗಳಿಗೆ ಒಂದು ಕಿವಿಮಾತನ್ನು ಸಹ ಹೇಳಿದ್ದಾರೆ. "ನಾವು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಕಥೆಗಳನ್ನು ನೋಡುತ್ತೇವೆ. ನಾವು ಅರ್ಥಮಾಡಿಕೊಳ್ಳಬೇಕಾಗಿರುವುದು ಅದರ ಹಿಂದೆ ಸಾಗಿದ ಪ್ರಯತ್ನ" ಎಂದು ಅವರು ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.


  After 10 years of trying, a Bangalore techie finally got a job at Google
  ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿದ ಟೆಕ್ಕಿ


  "ಪ್ರತಿ ವರ್ಷ, ನಾನು ಗೂಗಲ್​ನಿಂದ ಯಾವುದೇ ಕರೆಯನ್ನು ಸ್ವೀಕರಿಸದೆ ಇದ್ದಾಗ, ನನ್ನೊಂದಿಗೆ ಏನೋ ತಪ್ಪಾಗಿದೆ ಎಂದು ನಾನು ಪರಿಶೀಲಿಸಿಕೊಳ್ಳುತ್ತಿದ್ದೆ. ನಾನು ನನ್ನ ರೆಸ್ಯೂಮ್ ಮತ್ತು ಪೋರ್ಟ್‌ಫೋಲಿಯೋ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಿದೆ ಮತ್ತು ಮತ್ತೆ ಈ ಕೆಲಸಕ್ಕೆ ಪ್ರಯತ್ನಿಸಿದೆ" ಎಂದು ಅವರು 10 ವರ್ಷಗಳ ತಮ್ಮ ಪ್ರಯಾಣವನ್ನು ಉಲ್ಲೇಖಿಸಿ ಹೇಳಿದರು.


  ಇಂತಹ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಲು ಏನು ಮಾಡಬೇಕು ಎಂದಿದ್ದಾರೆ ನೆಟ್ಟೊ


  ನೆಟ್ಟೊ ಮತ್ತಷ್ಟು ಆಕಾಂಕ್ಷಿಗಳಿಗೆ ಕೆಲವು ಸಲಹೆಗಳು ಬರೆದು "ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಲು ನೀವು ಏನು ಮಾಡುತ್ತೀರಿ ಎಂಬುದರ ಬಗ್ಗೆ ಇತರರಿಗೆ ಹೇಳಿ. ಅವರಿಗೂ ಸಹ ಸಹಾಯ ಮಾಡಿ. ನಿಮ್ಮ ಪೋರ್ಟ್ ಫೋಲಿಯೊವನ್ನು ಪರಿಶೀಲಿಸಲು ಮತ್ತು ಅಣಕು ಸಂದರ್ಶನವನ್ನು ಮಾಡಲು ನಿಮಗೆ ತಿಳಿದಿರುವ ಯಾರನ್ನಾದರೂ ಕೇಳಿ. ರೆಫರಲ್ ಗಳನ್ನು ಕೇಳಿ. ಪ್ರತಿಯೊಬ್ಬರಿಗೂ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ, ಆದರೆ ನಿರಾಶೆಗೊಳ್ಳಬೇಡಿ, ಕೇಳುತ್ತಲೇ ಇರಿ. ಒಬ್ಬರಲ್ಲ ಒಬ್ಬರು ನಿಮಗೆ ಸಹಾಯ ಮಾಡುತ್ತಾರೆ" ಎಂದು ಅವರು ಬರೆದಿದ್ದಾರೆ.
  ಕುತೂಹಲಕಾರಿಯಾಗಿ, ಗೂಗಲ್ ವಾರಕ್ಕೆ 1 ಲಕ್ಷಕ್ಕೂ ಹೆಚ್ಚು ರೆಸ್ಯೂಮ್ ಗಳನ್ನು ಮತ್ತು ಅಪ್ಲಿಕೇಶನ್ ಗಳನ್ನು ಸ್ವೀಕರಿಸುತ್ತದೆ ಮತ್ತು ಸುಮಾರು 144 ಜನರು ವಾಸ್ತವವಾಗಿ ಮುಖ್ಯ ಕಚೇರಿಗೆ ಬರುತ್ತಾರೆ. ಆದ್ದರಿಂದ ಕಂಪನಿಯಿಂದ ಕರೆ ಪಡೆಯುವ ಸಾಧ್ಯತೆ ಶೇಕಡಾ 1 ಕ್ಕಿಂತ ಕಡಿಮೆಯೇ ಇರುತ್ತದೆ ಅಂತ ಹೇಳಬಹುದು. ಆದ್ದರಿಂದ, ಗೂಗಲ್, ಆಪಲ್, ಅಮೆಜಾನ್ ಮತ್ತು ಇತರ ಟೆಕ್ ದೈತ್ಯ ಕಂಪನಿಗಳಲ್ಲಿ ಕೆಲಸ ಪಡೆಯಲು ಕನಸು ಕಾಣುವ ಇತರರಿಗೆ ನಟ್ಟೋ ಅವರ ಕಥೆ ನಿಜವಾಗಿಯೂ ಪ್ರೇರಣೆಯಾಗಿದೆ.

  Published by:Gowtham K
  First published: