Lion Viral Video: ಇಂತಹ ವಿಡಿಯೋ ಈ ಹಿಂದೆ ನೋಡಿರಲ್ಲ ನೀವು: ಇವತ್ತು ಮಿಸ್ ಮಾಡ್ಕೊಬೇಡಿ

ಈ ವಿಡಿಯೋದಲ್ಲಿ ಸಿಂಹ ಯಾವುದೇ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿಲ್ಲ. ಬದಲಾಗಿ ಎಮ್ಮೆಗಳ ಗುಂಪಿನಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಮರವನ್ನ ಏರಿದೆ. ವೈಲ್ಡ್_ಅನಿಮಲ್_ಶಾರ್ಟ್ಸ್_ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಸಿಂಹ

ಸಿಂಹ

  • Share this:
ಸಿಂಹ (Lion) ಅಂದ್ರೆ ಅದು ಕಾಡಿನ ರಾಜ. ಅದು ಬೇಟೆಯಾಡುವ ವಿಧಾನ ಎಲ್ಲ ಪ್ರಾಣಿಗಳಿಗಿಂತ ಭಿನ್ನ. ಬಾಲ್ಯದಲ್ಲಿ ಸಿಂಹದ ಕಥೆ(Childhood Story)ಗಳನ್ನು ಎಲ್ಲರೂ ಕೇಳಿರ್ತಾರೆ. ಎಲ್ಲ ಕಥೆಗಳಲ್ಲಿ ಸಿಂಹನೇ ರಾಜ. ಪಂಚತಂತ್ರ(Panchatantra)ದ ಮೊಲದ ಕಥೆಯಲ್ಲಿ ಮಂಗನಾಗುವ ಸಿಂಹ ಬಾವಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತೇನೆ. ಇನ್ನುಳಿದಂತ ಸಿಂಹದ ರಾಜ ನಡಿಗೆ, ಅದರ ಘರ್ಜನೆ, ಬೇಟೆಯನ್ನ ದೂರದಿಂದ ಹೊಂಚು ಹಾಕುವ ಅದರ ಚತುರ ಕಣ್ಣುಗಳು, ಅದರ ವೇಗ ಈ ಎಲ್ಲ ಅಂಶಗಳು ಸಿಂಹವನ್ನ ಕಾಡಿನ ರಾಜ ಎಂದು ಹೇಳುತ್ತವೆ. ಇನ್ನು ಸೋಶಿಯಲ್ ಮೀಡಿಯಾ(Social Media)ದಲ್ಲಿ ಪ್ರತಿನಿತ್ಯ ಹಲವು ವಿಡಿಯೋಗಳು ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಸಿಂಹವೊಂದು ಕಾಡೆಮ್ಮೆಗಳ ಗುಂಪಿಗೆ ಹೆದರಕೊಂಡು ಮರವೇರಿ (Afraid Lion Climbs On Tree) ವಿಡಿಯೋ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಎಲ್ಲರೂ ಕಾಡಿನ ರಾಜ ಸಿಂಹದ ಭಯಾನಕ ರೂಪವನ್ನು ನೋಡಿರುತ್ತಾರೆ. ಆದ್ರೆ ಇದೀಗ ಹೆದರಿಕೊಂಡು ಮರವೇರಿದ ಸಿಂಹದ ಅಪರೂಪದ ವಿಡಿಯೋ ನೋಡಿದವರು, ಇದನ್ನು ನಂಬಲು ಆಗುತ್ತಿಲ್ಲ ಎಂದು ಉದ್ಘಾರ ತೆಗೆಯುತ್ತಿದ್ದಾರೆ. ಇಷ್ಟು ದಿನ ಪ್ರಾಣಿಗಳನ್ನು ಹೆದರಿಸುತ್ತಿದ್ದ ಸಿಂಹವನ್ನು ನೋಡಿದ್ದ ಜನರು, ಈಗ ಶಾಕ್ ಆಗಿದ್ದಾರೆ.

ಈ ವಿಡಿಯೋದಲ್ಲಿ ಸಿಂಹ ಯಾವುದೇ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿಲ್ಲ. ಬದಲಾಗಿ ಎಮ್ಮೆಗಳ ಗುಂಪಿನಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಮರವನ್ನ ಏರಿದೆ. ವೈಲ್ಡ್_ಅನಿಮಲ್_ಶಾರ್ಟ್ಸ್_ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:   Viral Video: ಮದುವೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ ವಧು; ವಿಡಿಯೋ ನೋಡಿ

ಹೆದರಿದ ಸಿಂಹವನ್ನು ನೋಡಿ ಜನರು ಹೇಳಿದ್ದೇನು?

ದೊಡ್ಡ ಸಂಖ್ಯೆಯಲ್ಲಿದ್ದ ಎಮ್ಮೆ ಹಿಂಡು ನೋಡಿ ಗಾಬರಿಯಾದ ಸಿಂಹ ಮರ ಹತ್ತಿದ ಮೇಲೂ ಸಾಕಷ್ಟು ಹೆದರಿದಂತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಡಿನ ರಾಜ ಭಯಪಡೋದು ನೋಡಿ ತುಂಬಾ ವಿಚಿತ್ರ ಅನ್ನಿಸಿತು ಎಂದು ಹೇಳಿದ್ದಾರೆ.
ಯಾವುದೇ ಪ್ರಾಣಿ ಸಹ ತನ್ನ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡೋದು ಇಲ್ಲಿದೆ ಅಂತ ಒಬ್ರು ಹೇಳಿದ್ದಾರೆ. ಒದು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸುತ್ತೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆಗಸ್ಟ್ 10 ರಂದು ಸಿಂಹಗಳ ದಿನ ಆಚರಣೆ 

ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಣೆ ಮಾಡಲಾಗುತ್ತದೆ.   ಈ ದಿನವನ್ನು ಸಿಂಹಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ಷೀಣಿಸುತ್ತಿರುವ  ಅವುಗಳ ಜನಸಂಖ್ಯೆ ಮತ್ತು ಸಂರಕ್ಷಣೆಗೆ  ಹೆಚ್ಚಿನ ಜನರ ಬೆಂಬಲವನ್ನು ಸಂಗ್ರಹಿಸಲು ಒತ್ತು ನೀಡಲಾಗುತ್ತದೆ.

ಪ್ರಸ್ತುತ, ಅವುಗಳನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್)  ಸಂಸ್ಥೆಯು ಕೆಂಪು ಪಟ್ಟಿಯಿಂದ ಅಳಿವಿನಂಚಿನಲ್ಲಿರುವ ಜಾತಿಗಳೆಂದು ಪಟ್ಟಿ ಮಾಡಿದೆ. ಏಷಿಯಾಟಿಕ್ ಸಿಂಹವು ಭಾರತದಲ್ಲಿ ಕಂಡುಬರುವ ಐದು ದೊಡ್ಡ ಬೆಕ್ಕುಗಳಲ್ಲಿ ಒಂದಾಗಿದೆ, ಇತರ ನಾಲ್ಕು  ದೊಡ್ಡ ಬೆಕ್ಕುಗಳೆಂದರೆ ರಾಯಲ್ ಬೆಂಗಾಲ್ ಟೈಗರ್, ಇಂಡಿಯನ್ ಚಿರತೆ, ಮೋಡದ ಚಿರತೆ ಮತ್ತು ಹಿಮ ಚಿರತೆ.

ಇದನ್ನೂ ಓದಿ:  Viral video: ಅಂಗೈಯಲ್ಲಿಯೇ ಹಾವಿಗೆ ನೀರು ಕುಡಿಸಿದ ವ್ಯಕ್ತಿಯ ವಿಡಿಯೋ ನೋಡಿ

ಸಿಂಹಗಳ ರಕ್ಷಣೆಗಾಗಿ ವಿವಿಧ ಯೋಜನೆಗಳು 

ಭಾರತ ಸರ್ಕಾರವು ಈಗಾಗಲೇ  ಸಿಂಹಗಳ ರಕ್ಷಣೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ.  ಈ  ಯೋಜನೆಗಳ ಮೂಲಕ ಕಾಡಿನ ರಾಜನನ್ನು ಸಂರಕ್ಷಿಸಲು ಪ್ರಯತ್ನಗಳನ್ನು ಮಾಡುತ್ತಿದೆ.  ಭಾರತದಲ್ಲಿ ಸಿಂಹಗಳ ಜನಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಅವುಗಳ ಜನಸಂಖ್ಯೆಯಲ್ಲಿನ ಹೆಚ್ಚಳದ ಕಾರಣ ಮತ್ತು ನೈಸರ್ಗಿಕ ಆವಾಸಸ್ಥಾನಗಳು, ಅರಣ್ಯ ಪ್ರದೇಶಗಳು ಅವುಗಳನ್ನು ಮನುಷ್ಯರಿಗೆ ಹತ್ತಿರ ಮಾಡುತ್ತಿದೆ. ಅಲ್ಲದೇ, ಅವುಗಳು ಕೆಲವೊಮ್ಮೆ ತಮ್ಮ ಬೇಟೆಯನ್ನು ಅರಸಿ ಮತ್ತು ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ಹೋಗುತ್ತಿವೆ.
Published by:Mahmadrafik K
First published: