ಪ್ರಾಣಿಗಳ ಸ್ನೇಹ, ಪ್ರೀತಿ, ವಾತ್ಸಲ್ಯ, ಮಮತೆ, ತುಂಟಾಟ, ಚೆಲ್ಲಾಟ, ಜಗಳ ಹೀಗೆ ಪ್ರತಿಯೊಂದು ಭಾವನೆಗಳು ನೋಡಲು ಸೊಗಸಾಗಿರುತ್ತದೆ. ಇತ್ತೀಚೆಗೆ ಎರಡು ಪಾಂಡಗಳು ತಾ ಮುಂದು ನಾ ಮುಂದು ಎಂದು ಮರ ಹತ್ತಲು ಜಗಳವಾಡಿದ್ದು, ಹಾವಿನಿಂದ ತನ್ನ ಕೋಳಿ ಮರಿಯನ್ನು ರಕ್ಷಿಸಲು ಒದ್ದಾಡಿದ್ದು, ಕೋತಿ ಮರಿಯು ಪಕ್ಷಿಯನ್ನು ತಬ್ಬಿಕೊಂಡು ಮುದ್ದಾಡಿದ್ದು, ಒಂದು ಬೆಕ್ಕು ಸಾವನ್ನಪ್ಪಿದಾಗ ಮತ್ತೊಂದು ಬೆಕ್ಕು ಸಮಾಧಿ ಮುಂದೆ ಕುಳಿತು ಅತ್ತಿದ್ದು ಹೀಗೆ ಮುದ್ದಾದ ವಿಡಿಯೋಗಳು(Cute Videos) ಸಾಮಾಜಿಕ ಜಾಲತಾಣ(Social Media)ದಲ್ಲಿ ದಿನಕ್ಕೊಂದಾದರೂ ನೋಡಲು ಸಿಗುತ್ತದೆ. ಜನರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಇರುತ್ತದೆ.
ಹೌದು, ಇದೇ ರೀತಿ ಕೋತಿ ಮತ್ತು ಮೇಕೆ ಮರಿ ವಿಡಿಯೋ ಕೂಡ ಸಾಕಷ್ಟು ಮಂದಿಗೆ ಇಷ್ಟವಾಗಿದ್ದು, ಅವುಗಳ ಅನ್ಯೋನ್ಯತೆ, ಸ್ನೇಹವನ್ನು ಕೊಂಡಾಡುತ್ತಿದ್ದಾರೆ. ಮೇಕೆ ಮರಿಯನ್ನು ಕೋತಿ ಮರಿ ತಬ್ಬಿಕೊಂಡಿದ್ದು, ಹಣ್ಣು ತಿನ್ನುವ ವೇಳೆ ಮೇಕೆಯ ಬೆನ್ನ ಮೇಲೆ ಹತ್ತಿ ಕುಳಿತುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ನೆಟ್ಟಿಗರ ಮನಸೂರೆಗೊಳಿಸಿದೆ.
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೋತಿ ಮರಿಯು ಮೇಕೆಯ ಹೊಟ್ಟೆಭಾಗದಲ್ಲಿ ಅಂಟಿಕೊಂಡಿರುತ್ತದೆ. ಕೆಲವು ಬೆರ್ರಿ ಹಣ್ಣುಗಳನ್ನು ಮೇಕೆಗೆ ನೀಡಲು ಮನುಷ್ಯ ಕರೆಯುತ್ತಾನೆ. ಆ ಹಣ್ಣುಗಳು ತಿನ್ನಲು ಕೈ ಮುಂದೆ ಬಂದು ಮೇಕೆ ನಿಂತಾಗ ಕೋತಿ ಮರಿ ಇರುವುದು ಗೋಚರವಾಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊವನ್ನು ಆರಂಭದಲ್ಲಿ ಇಂಕ್ ಬ್ಲಾಟ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಯಿತು. ನಂತರ ಅದನ್ನು ಟ್ವಿಟರ್ ಬಳಕೆದಾರ ಕ್ರಿಸ್ಟಿ ಯಮಗುಚ್ಚಿಮನೆ ಮರು ಪೋಸ್ಟ್ ಮಾಡಿದರು. ಈ ವಿಡಿಯೋವನ್ನು 15 ಮಿಲಿಯನ್ಗಿಂತಲೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ ಮತ್ತು 137.2 ಸಾವಿರ ಬಾರಿ ರೀಟ್ವೀಟ್ ಮಾಡಲಾಗಿದೆ.
Am I high right now what is happening pic.twitter.com/itBaV1XUNK
— Kristi Yamaguccimane (@wapplehouse) September 26, 2021
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಬೆರಳೆಣಿಕೆಯಷ್ಟು ಚೆರಿಗಳೊಂದಿಗೆ ಮೇಕೆಯನ್ನು ಕೂಗುವುದನ್ನು ಕಾಣಬಹುದು. ಅವನ ಕರೆಯನ್ನು ಕೇಳಿದ, ಒಂದು ಮೇಕೆ ಕಾಡಿನಿಂದ ಹೊರಬಂದಿತು ಮತ್ತು ಆತನ ಕಡೆಗೆ ಹೋಗುತ್ತದೆ. ಹತ್ತಿರ ಬಂದ ಮೇಲೆ, ಮರಿ ಕೋತಿ ಕೂಡ ಅದರ ಮೇಲೆ ಅಂಟಿಕೊಂಡಿರುವುದನ್ನು ನಾವು ನೋಡಬಹುದು.
ಮನುಷ್ಯನು ಮೇಕೆಗೆ ಬೆರಳೆಣಿಕೆಯಷ್ಟು ಹಣ್ಣುಗಳನ್ನು ನೀಡುತ್ತಾನೆ ಮತ್ತು ಅದು ಒಂದರ ನಂತರ ಒಂದರಂತೆ ತಿನ್ನಲು ಪ್ರಾರಂಭಿಸುತ್ತದೆ. ಆರಂಭದಲ್ಲಿ, ಮಂಗವು ಮನುಷ್ಯನ ಅಂಗೈಗಳಿಂದ ಹಣ್ಣುಗಳನ್ನು ತೆಗೆದುಕೊಳ್ಳಲು ಹಿಂದು ಮುಂದು ನೋಡುತ್ತದೆ, ಸಂಕೋಚ ವ್ಯಕ್ತಪಡಿಸುತ್ತದೆ.
ಆದರೆ ಬಹಳ ಹಿಂಜರಿಕೆಯ ನಂತರ, ಅದು ಚೆರ್ರಿ ಹಣ್ಣನ್ನು ತೆಗೆದುಕೊಂಡ ನಂತರ ಮೇಕೆಯ ಹಿಂಭಾಗದಲ್ಲಿ ಆರಾಮವಾಗಿ ಕುಳಿತುಕೊಂಡು ಬೇರಡೆ ನೋಡುತ್ತಾ ಹಣ್ಣನ್ನು ಸವಿಯಲು ಪ್ರಾರಂಭಿಸುತ್ತದೆ. ವೈರಲ್ ವೀಡಿಯೋದಲ್ಲಿ ಈ ಜೋಡಿ ಹಣ್ಣುಗಳನ್ನು ತಿನ್ನುತ್ತಾ ಅದರ ರುಚಿಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಕೇವಲ 39 ಸೆಕೆಂಡ್ಗಳಿರುವ ಈ ವಿಡಿಯೋದಲ್ಲಿ ಮನುಷ್ಯ ಹಾಗೂ ಆ ಎರಡು ಪ್ರಾಣಿಗಳ ನಡುವಿನ ಪ್ರೀತಿ ಗೋಚರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ