ಕೆಲವು ತಿಂಗಳುಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡುತ್ತಿರುವ ವಿಡಿಯೋಗಳಲ್ಲಿ (Video) ಹೆಚ್ಚಿನವು ಈ ಪ್ರಾಣಿಗಳಿಗೆ ಸಂಬಂಧಪಟ್ಟಿದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಪ್ರಾಣಿಗಳು ಅಂತ ಹೇಳಿದಾಗ, ಅದರಲ್ಲಿಯೂ ನಮಗೆ ಹೆಚ್ಚು ಈ ಸಾಕುನಾಯಿಗಳ (Pet Dogs) ವಿಡಿಯೋಗಳು ಹೆಚ್ಚಾಗಿ ನೋಡಲು ಸಿಕ್ಕಿದ್ದಂತೂ ನಿಜ. ಈ ಸಾಕುನಾಯಿಗಳ ವಿಡಿಯೋ ನಂತರ ಯಾವುದಾದರೂ ಪ್ರಾಣಿಯ (Animals) ಹೆಚ್ಚು ವಿಡಿಯೋಗಳು ನಮಗೆ ಈ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೋಡಲು ಸಿಕ್ಕಿದ್ದು ಎಂದರೆ ಅದು ಆನೆಗಳದ್ದು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಹೌದು.. ಒಂದು ತಿಂಗಳಿಂದ ಈ ಆನೆಗಳ (Elephant) ತುಂಟಾಟ ತುಂಬಾನೇ ಆಗಿದೆ ಅಲ್ಲವೇ? ಏಕೆಂದರೆ ಆನೆಗಳು ಮಾಡುತ್ತಿರುವ ತುಂಟಾಟಗಳು ಒಂದೆರಡಲ್ಲ ಬಿಡಿ.
ಒಂದು ವಿಡಿಯೋದಲ್ಲಿ ಆನೆ ತನ್ನ ಫೋಟೋ ತೆಗೆಯುತ್ತಿರುವ ಹುಡುಗಿಯ ಮೊಬೈಲ್ ಫೋನ್ ಅನ್ನು ತನ್ನ ಸೊಂಡಿಲಿನಿಂದ ಬಿಳಿಸಿದ್ದು, ನಂತರ ಆ ಮೊಬೈಲ್ ಫೋನ್ ಅನ್ನು ತನ್ನ ಸೊಂಡಿಲಿನಿಂದ ತೆಗೆದುಕೊಳ್ಳಲು ಪ್ರಯತ್ನಿಸಿದ ವಿಡಿಯೋ ಆಗಿರಬಹುದು ಅಥವಾ ಮಾವುತನು ಆನೆಯನ್ನು ಸ್ನಾನ ಮಾಡಿಸುವಾಗ ಆ ಆನೆ ತನ್ನ ತಲೆಯನ್ನು ನೆಲಕ್ಕೆ ಊರಿ ತನ್ನ ಹಿಂಬದಿಯ ಎರಡು ಕಾಲುಗಳನ್ನು ಮತ್ತು ಅರ್ಧ ದೇಹವನ್ನು ಮೇಲಕ್ಕೆ ಎತ್ತಿದ್ದ ವಿಡಿಯೋ ಆಗಿರಬಹುದು.
ಆನೆ ಮರಿಯ ಮತ್ತೊಂದು ವಿಡಿಯೋ ವೈರಲ್
ಇತ್ತೀಚೆಗೆ ಆನೆ ಮರಿಗಳೊಂದಿಗೆ ಒಬ್ಬ ಮಹಿಳೆ ಮೃಗಾಲಯದಲ್ಲಿ ತುಂಬಾನೇ ಸಲುಗೆಯಿಂದ ವರ್ತಿಸುತ್ತಿದ್ದು, ಸ್ವಲ್ಪ ಸಮಯದ ನಂತರ ಆ ಆನೆಮರಿ ಆಕೆಯನ್ನು ಹಾಗೆಯೇ ಮುಂದಕ್ಕೆ ತಳ್ಳಿಕೊಂಡು ಹೋಗಿ ಬೀಳಿಸಿದ್ದ ವಿಡಿಯೋ ಇರಬಹುದು. ಹೀಗೆ ಇನ್ನೊಂದು ವಿಡಿಯೋದಲ್ಲಿ ಮಾವುತನು ಮಲಗಿದ್ದ ಹಾಸಿಗೆಯು ತನ್ನದು ಅಂತ ಅವರ ಜೊತೆಗೆ ತಮಾಷೆಯಾಗಿ ಜಗಳ ಮಾಡಿ ಆ ಹಾಸಿಗೆಯಿಂದ ಆ ಮಾವುತನನ್ನು ಹೊರಕ್ಕೆ ತಳ್ಳಿದ ವಿಡಿಯೋವನ್ನು ಬಹುತೇಕವಾಗಿ ಎಲ್ಲರೂ ನೋಡಿ ನಕ್ಕಿರುತ್ತಾರೆ.
ಇದನ್ನೂ ಓದಿ: Viral Video: ನಾವ್ ಬರ್ತಾ ಇದ್ದೀವಿ, ಸೈಡ್ ಪ್ಲೀಸ್! ಬಾತುಕೋಳಿ ಕುಟುಂಬ ರಸ್ತೆ ದಾಟಿದ ವಿಡಿಯೋ ವೈರಲ್
ಇಲ್ಲಿ ಇನ್ನೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಹರಿದಾಡುತ್ತಿದೆ ನೋಡಿ, ಅಷ್ಟೇ ಅಲ್ಲದೆ ಸಿಕ್ಕಾಪಟ್ಟೆ ವೈರಲ್ ಬೇರೆ ಆಗಿದೆ. ಈ 13 ಸೆಕೆಂಡುಗಳ ಅವಧಿಯ ವಿಡಿಯೋದಲ್ಲಿ ಮರಿ ಆನೆಯೊಂದು ತನ್ನ ಕೀಪರ್ ನನ್ನು ತಬ್ಬಿಕೊಂಡು ಮುದ್ದಾಡುತ್ತಿರುವುದನ್ನು ನಾವು ನೋಡಬಹುದು. ಇದು ತುಂಬಾನೇ ಮುದ್ದಾಗಿದ್ದು, ಸ್ಪಷ್ಟವಾದ ಮತ್ತು ಯೋಗ್ಯವಾದ ಕಾರಣಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಹೇಳಬಹುದು.
ಜೂನ್ 27 ರಂದು ಬ್ಯೂಟೆಂಗೆಬಿಡೆನ್ ಅವರ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಆರಂಭದಲ್ಲಿ ಶೆಲ್ಡ್ರಿಕ್ ಟ್ರಸ್ಟ್ ಪೋಸ್ಟ್ ಮಾಡಿತ್ತು. ಇದು 1 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಒಂದು ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳು ಇದಕ್ಕೆ ಬಂದಿದ್ದು, 10,000ಕ್ಕೂ ಹೆಚ್ಚು ಬಾರಿ ಇದನ್ನು ಮರು ಟ್ವೀಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಮರಿ ಆನೆಯೊಂದು ತನ್ನ ಕೀಪರ್ ನ ಮೈ ಮೇಲೆ ಬಿದ್ದು ಮುದ್ದಾಡಿ ನಂತರ ಕೊನೆಯಲ್ಲಿ ಆ ವ್ಯಕ್ತಿಯ ಕಾಲಿನ ಬಳಿ ಹೋಗಿ ಮಲಗುವುದನ್ನು ನಾವು ನೋಡುತ್ತೇವೆ. ಇವರಿಬ್ಬರು ಒಟ್ಟಿಗೆ ಅದ್ಭುತ ಸಮಯವನ್ನು ಕಳೆಯುವುದನ್ನು ಇಲ್ಲಿ ನೋಡಬಹುದು. ಇದು ಆರೈಕೆಯ ಅಗತ್ಯವಿರುವ ಅನಾಥ ಯುವ ಆನೆಯಾಗಿದೆ ಮತ್ತು ಅದರ ಅಗತ್ಯಗಳನ್ನು ನೋಡಿಕೊಳ್ಳಲು ಕೀಪರ್ ಒಬ್ಬರನ್ನು ನೇಮಿಸಲಾಗಿದೆ.
ಇದನ್ನೂ ಓದಿ: Dog Video: ಈ ನಾಯಿಗೆ ಮನೆಯಲ್ಲಿ ಸ್ನಾನ ಮಾಡುವುದಂದ್ರೆ ತುಂಬಾ ಬೋರ್! ಅದಕ್ಕೇನು ಮಾಡುತ್ತೆ ಗೊತ್ತಾ?
ಈ ಕ್ಯೂಟ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
ಇಂಟರ್ನೆಟ್ ಈ ವಿಡಿಯೋವನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದೆ. ಕಾಮೆಂಟ್ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ. "ಸತ್ಯವೇನೆಂದರೆ, ನಾವು ಅರ್ಹರಲ್ಲ. ಅವರು ತುಂಬಾ ಮುದ್ದು ಮತ್ತು ಪರಿಶುದ್ಧರಾಗಿದ್ದಾರೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ವಿಡಿಯೋ ನೋಡಿ “ನನಗೆ ಈ ಆನೆಮರಿಯನ್ನು ನೀವು ಕೊಡಬಹುದೇ, ತುಂಬಾನೇ ಮುದ್ದಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು ಈ ವಿಡಿಯೋ ನೋಡಿ “ಧನ್ಯವಾದಗಳು, ನನಗೆ ಈ ಆನೆಮರಿ ಬೇಕೇಬೇಕು” ಅಂತ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ