ಕೆಲವೊಂದು ಪ್ರಾಣಿಗಳು (Animal) ಸದಾ ಏನಾದರೂ ತುಂಟಾಟಗಳನ್ನು ಮಾಡುತ್ತಲೇ ಇರುತ್ತವೆ. ಆ ಮುಗ್ಧ ಪ್ರಾಣಿಗಳ ತುಂಟಾಟ ಹೇಗೇ ಇದ್ದರೂ ನೋಡಲು ಮುದ್ದಾಗಿರುತ್ತದೆ. ನೀವು ಕರಡಿಯೊಂದು (Bear) ಬಣ್ಣಗಳ (Colors) ಜೊತೆ ಆಟವಾಡುವುದನ್ನು ಯಾವತ್ತಾದರೂ ನೋಡಿದ್ದೀರಾ? ಈ ತಿಂಗಳ ಆರಂಭದಲ್ಲಿ, ಯೂಎಸ್‍ನ ವಾಷ್ಟಿಂಗ್ಟನ್‍ನಲ್ಲಿರುವ ನಾರ್ತ್ ವೆಸ್ಟ್ ಟ್ರೆಕ್ ವೈಲ್ಡ್ ಪಾರ್ಕ್ ಅಂತಹ ವಿಡಿಯೋ (Video) ಒಂದನ್ನು ಪೋಸ್ಟ್ ಮಾಡಿದೆ. ಸುಮಾರು 723 ಎಕರೆ ವಿಸ್ತೀರ್ಣದ ಬಹು ದೊಡ್ಡ ಪಾರ್ಕ್ (Park) ಅದು. ಆ ವೈಲ್ಡ್‍ಲೈಫ್ ಪಾರ್ಕ್ ತನ್ನ ಅಧಿಕೃತ ಇನ್‍ಸ್ಟಾಗ್ರಾಂ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ
ಫರ್ನ್ ಎಂಬ ಹೆಸರಿನ ಹೆಣ್ಣು ಕರಡಿಯೊಂದು, ತನ್ನ ಗೂಡಿನ ನೆಲದ ಮೇಲೆ ಬಿದ್ದಿರುವ ವಿವಿಧ ಬಣ್ಣದ ಪೇಂಟ್‍ಗಳ ಮೇಲೆ ಹೊರಳಾಡುತ್ತಾ, ಮೂತಿಯನ್ನು ಬಣ್ಣಗಳ ಮೇಲೆ ಉಜ್ಜುವುದರಲ್ಲಿ ಮಗ್ನವಾಗಿರುವುದನ್ನು ಕಾಣಬಹುದು. ಆ ಮಧ್ಯೆ ಪಕ್ಕದ ಗೂಡಿನ ಕರಡಿಯೊಂದು ಬಂದು ಫರ್ನ್ ಮಾಡುತ್ತಿರುವ ಕೆಲಸವನ್ನು ಇಣುಕಿ ನೋಡಿ, ತನ್ನ ಪಾಡಿಗೆ ಹೊರಟು ಹೋಗುವ ದೃಶ್ಯ ಕೂಡ ನಮಗೆ ಕಾಣ ಸಿಗುತ್ತದೆ.
ಇದನ್ನೂ ಓದಿ: Crab: ರೋಮಗಳಿರೋ ವಿಶಿಷ್ಟ ಏಡಿ ನೋಡಿದ್ದೀರಾ? ಈಗ ವೈರಲ್ ಆಗಿದೆ
View this post on Instagram
ಈ ವಿಡಿಯೋವನ್ನು ನಾರ್ತ್ ವೆಸ್ಟ್ ಟ್ರೆಕ್ ವೈಲ್ಡ್ ಪಾರ್ಕ್ ಪೋಸ್ಟ್ ಮಾಡಿದ್ದು, ಅದರ ಜೊತೆಗೆ “ನಮ್ಮ ಸ್ನೇಹಿತರು ಮತ್ತು ನಿಧಿ ಸಂಗ್ರಹಕಾರರಿಗೆ ನೀಡಲು ನಮಗೆ ಪಂಜದ ಪ್ರಿಂಟ್‍ಗಳು ಬೇಕಿದ್ದರಿಂದ, ಫರ್ನ್ ಎಂಬ ಕಪ್ಪು ಕರಡಿಗೆ ನಮ್ಮ ಪ್ರಾಣಿ ಆರೈಕೆ ತಂಡ ಬಣ್ಣಗಳನ್ನು ನೀಡಿತ್ತು, ಆದರೆ ಫರ್ನ್ ವಿಷಕಾರಿಯಲ್ಲದ ಬಣ್ಣದ ಜೊತೆ ಫೇಸ್ ಪೇಂಟಿಂಗ್‍ನ ಆನಂದ ಪಡೆಯುವುದನ್ನು ಆಯ್ಕೆ ಮಾಡಿಕೊಂಡಿತು. ಫೋಟೋ ತೆಗೆದವರು: ಕೀಪರ್ ಕರ್ಲಿ” ಎಂದು ಬರೆದುಕೊಂಡಿದೆ.
ನಾರ್ತ್ ವೆಸ್ಟ್ ಟ್ರೆಕ್ ವೈಲ್ಡ್ ಪಾರ್ಕ್ ಈ ಪೋಸ್ಟಿನ ಜೊತೆಗೆ ಫರ್ನ್ ಕುರಿತ ಇನ್ನಷ್ಟು ಮಾಹಿತಿ
“ಫರ್ನ್ ತೋರಿಸುತ್ತಿರುವ ಅಪರೂಪದ ವರ್ತನೆ ಇದು ಎಂದು ಅದರ ಆರೈಕೆ ಮಾಡುವವರು ಹೇಳುತ್ತಾರೆ. ಏಕೆಂದರೆ ಅದು ಯಾವತ್ತೂ “ಸಂಪೂರ್ಣವಾಗಿ ಬಣ್ಣದ ಜೊತೆ ಆಟವಾಡಿಲ್ಲ. ಆದರೆ ಅವಳಿಗೆ ಅದರ ಜೊತೆ ಸಂತೋಷಪಡಲು ಬಿಟ್ಟು ಬಿಟ್ಟರು” ಎಂದು ಬರೆಯಲಾಗಿದೆ.
ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು
ಈ ವಿಡಿಯೋವನ್ನು 2022 ರ ಜೂನ್ 1 ರಂದು ಪೋಸ್ಟ್ ಮಾಡಲಾಗಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಣ್ಣಗಳೊಂದಿಗೆ ಕರಡಿಯ ಚಿನ್ನಾಟದ ಈ ವಿಡಿಯೋ ಈಗಾಗಲೇ 11,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡುತ್ತಾ , “ನೀವು ಆ ಬಣ್ಣವನ್ನು ಕ್ಯಾನ್ವಸ್‍ನ ಮೇಲೆ ಮಾಡಿಸಬಹುದು ಮತ್ತು ಅದನ್ನು ಪಾರ್ಕ್‍ಗೆ ದೇಣಿಗೆ ಪಡೆಯುವುದಕ್ಕಾಗಿ ಮಾರಬಹುದು, ನಿಮಗೆ ಹಣ ಸಂಪಾದಿಸಲು ಇದು ಉತ್ತಮ ಮಾರ್ಗವಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ನೆಟ್ಟಿಗ, “ಅದು ಅದ್ಭುತವಾಗಿದೆ ! ಬಹುಷಃ ಒಂದು ಬೆಚ್ಚಗಿನ ದಿನದಲ್ಲಿ ಇದು ತಂಪಾಗಿದೆ ಎಂದು ಅನಿಸಿತೇನೊ? ಅವಳು ಸುಂದರವಾಗಿ ಕಾಣುತ್ತಿದ್ದಾಳೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Viral Video: ಮರ ಹತ್ತಿ ಕೂತ ಮರಿ ಕೋತಿ ಮೇಲೆ ಚಿರತೆ ಅಟ್ಯಾಕ್! ವಿಡಿಯೋ ನೋಡಿ ನೆಟ್ಟಿಗರು ಶಾಕ್
“ಫರ್ನ್ ನನಗೆ ನಿಮ್ಮ ಕೆಲಸ ಇಷ್ಟವಾಯಿತು” ಎಂದು ಇನ್ನೊಬ್ಬ ಬಳಕೆದಾರರು ಹೊಗಳಿದ್ದರೆ, “ಎಷ್ಟು ಮುದ್ದಾಗಿದೆ” ಎಂದು ಮತ್ತೊಬ್ಬರು ಬರೆದಿದ್ದಾರೆ. ಬಹಳಷ್ಟು ಮಂದಿಗೆ ಈ ಪೋಸ್ಟ್‍ಗೆ ಹೃದಯದ ಇಮೋಜಿಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದೆ ರೀತಿ ರೆಸ್ಕ್ಯೂ ನಾಯಿ ಮಾಡಿದ ಪೇಂಟಿಂಗ್
ತನ್ನ ‘ಕಲಾತ್ಮಕ’ ಸಾಮಥ್ರ್ಯದ ಕಾರಣದಿಂದಾಗಿ ವೈರಲ್ ಆದ ಪ್ರಾಣಿಗಳಲ್ಲಿ ಫರ್ನ್ ಕರಡಿ ಮೊದಲಿಗಳೇನಲ್ಲ. ಫೆಬ್ರವರಿ ತಿಂಗಳಲ್ಲಿ, ಬಾಂಕ್ಸಿ ಎಂಬ ಜನಪ್ರಿಯ ಗ್ರಾಫಿಟಿ ಕಲಾವಿದನ ಹೆಸರನ್ನೇ ಹೊಂದಿರುವ ರೆಸ್ಕ್ಯೂ ನಾಯಿಯೊಂದು ಮಾಡಿದ್ದ ಪೇಟಿಂಗನ್ನು 50 ಸಾವಿರ ರೂ.ಗಳಿಗೆ ಹರಾಜು ಹಾಕಲಾಯಿತು. ಹರಾಜಿನಲ್ಲಿ ಬಂದ ಹಣವನ್ನು ಯೂಕೆಯಲ್ಲಿರುವ ಬ್ರಿಸ್ಟಾಲ್ ಅನಿಮಲ್ ರೆಸ್ಕ್ಯೂ ಕೇಂದ್ರಕ್ಕಾಗಿ ಬಳಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ