ಇಂದು ಸಾಕಷ್ಟು ಜೀವನವು ವಿಚ್ಛೇದನ ಮೂಲಕ ಅಂತ್ಯವಾಗುತ್ತಿದೆ. ಅದರಂತೆ ಖ್ಯಾತ ಗಾಯಕಿಯೊಬ್ಬರು ತಮ್ಮ ಗಂಡನಿಗೆ ವಿಚ್ಛೇದನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಪರಿಹಾರವಾಗಿ ಸಾವಿರಾರು ಕೋಟಿ ಮೌಲ್ಯದ ಅಸ್ತಿಯನ್ನು ಆತನಿಗಾಗಿ ನೀಡಿದ್ದಾರೆ.
ಹಾಲಿವುಡ್ ಮೂಲದ ಸುಪ್ರಿಸದ್ಧ ಗಾಯಕಿ ಅಡೆಲೆ (32) ತನ್ನ ಗಂಡ ಸೈಮೆನ್ ಕನ್ಕಿಗೆ ವಿಚ್ಛೇದನ ನೀಡಿದ್ದಾರೆ. ಆದರೆ ಅಚ್ಚರಿಯೆಂದರೆ ಅಡೆಲೆ ದೊಡ್ಡ ಮೊತ್ತದ ಪರಿಹಾರವನ್ನು ಗಂಡನಿಗೆ ನೀಡಿದ್ದಾರೆ. ಅಂದಹಾಗೆಯೇ ಅಡೆಲೆ ಗ್ರ್ಯಾಮಿ ಮತ್ತು ಆಸ್ಕರ್ ಪ್ರಶಸ್ತಿ ವಿಜೇತೆಯಾಗಿದ್ದು, ಜನಪ್ರಿಯ ಗಾಯಕಿಯಾಗಿ ಗುರುತಿಸಿಕೊಂಡೊದ್ದಾರೆ. ಅಂತೆಯೇ ಆಕೆಯ ಪತಿ ದೊಡ್ಡ ಉದ್ಯಮಿಯಾಗಿದ್ದಾರೆ. ಆದರೀಗ ಈ ಜೋಡಿ ವಿಚ್ಛೇದನದ ಮೂಲಕ ಬೇರೆ ಬೇರೆಯಾಗಿದ್ದಾರೆ.
ಅಡೆಲೆ ಮತ್ತು ಸೈಮನ್ 2011ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. 2012ರಲ್ಲಿ ಈ ಜೋಡಿಗೆ ಮುದ್ದಾದ ಏಂಜೆಲೊ ಎಂಬ ಗಂಡು ಮಗು ಜನಿಸಿತು. ಆನಂತರ ಇವರಿಬ್ಬರು 2016ರಲ್ಲಿ ವಿವಾಹವಾಗುತ್ತಾರೆ. ವಿವಾಹವಾದ ಕೆಲವು ವರ್ಷಗಳ ನಂತರ ಈ ಜೋಡಿ ನಡುವೆ ಮನಸ್ತಾಪ ಶುರುವಾಗುತ್ತದೆ. ಇದರಿಂದಾಗಿ ದಾಂಪತ್ಯದಲ್ಲಿ ಬಿರುಕು ಕಾಣಿಸುತ್ತದೆ.
![Adele]()
ಗಾಯಕಿ ಅಡೆಲೆ
ಕೊನೆಗೆ ಸೈಮನ್ ಮತ್ತು ಅಡೆಲೆ ವಿಚ್ಛೇದನ ಮೂಲಕ ದೂರವಾಗಲು ಮುಂದಾಗುತ್ತಾರೆ. 2019, ಏಪ್ರಿಲ್ನಲ್ಲಿ ಘೋಷಣೆ ಮಾಡುವ ಮೂಲಕ ದೂರವಾಗುತ್ತಾರೆ.
ವಿಚ್ಛೇದನ ನೀಡುವಾಗ ಗಂಡ ಅಥವಾ ಹೆಂಡತಿಗೆ ಸರಿಯಾದ ಪರಿಹಾರ ಅಥವಾ ಜೀವನ ಅಂಶ ದೊರಕುವುದು ಅಗತ್ಯ. ಅದರಂತೆ ಅಡೆಲೆ ತನ್ನ ಗಂಡನಿಗೆ ಪರಿಹಾರವಾಗಿ 171 ಮಿಲಿಯನ್ ಡಾಲರ್ (ಸುಮಾರು 1248 ಕೋಟಿ ರೂ) ನೀಡಿದ್ದಾರೆ.
ಇನ್ನು ಅಡೆಲೆ ತನ್ನ ಗಂಡನಿಗಿಂತ ಹೆಚ್ಚು ದುಡಿಯುತ್ತಿರುವ ಕಾರಣ ತನಗೆ ಬರುವ ಅದಾಯದಲ್ಲಿ ಕೊಂಚ ಗಂಡನಿಗೆ ನೀಡುತ್ತಿದ್ದಾರೆ. ಜೊತೆಗೆ ಇಬ್ಬರು ಮಗ ಏಂಜೆಲೊನನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ