Power Star Puneeth Rajkumar ಅಪ್ಪು ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ: ರಮ್ಯಾ ಭಾವನಾತ್ಮಕ ಪೋಸ್ಟ್

ದಿನನಿತ್ಯ ನಾವು ಅವರ ವ್ಯಕ್ತಿತ್ವವನ್ನು ಅನುಸರಿಸುವುದರ ಮೂಲಕ ನಾವು ಅವರನ್ನು ನಮ್ಮಲ್ಲಿ ಜೀವಂತವಾಗಿ ಇಡಲು ಸಾಧ್ಯ. ಈ ರೀತಿ ನಾವು ಅವರ ಮೌಲ್ಯಗಳನ್ನು ಮುಂದುವರಿಸಬಹುದು. ನಾವೆಲ್ಲರು ಅಪ್ಪು ರನ್ನು ಪ್ರತಿ ದಿನವೂ ಆರಾಧಿಸೋಣ. #BeAppu #bekind

ನಟಿ ರಮ್ಯಾ

ನಟಿ ರಮ್ಯಾ

  • Share this:
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರನ್ನು ಕಳೆದುಕೊಂಡ ಚಂದನವನ (Sandalwoo)ತಬ್ಬಲಿಯಾಗಿದೆ. ರಾಜರತ್ನನ ಇನ್ನಿಲ್ಲ ಎಂಬ ಸುದ್ದಿ  ಇಡೀ ರಾಜ್ಯವನ್ನು ಆಘಾತಕ್ಕೆ ತಳ್ಳಿತ್ತು. 2019ರ ಲೋಕಸಭೆ ಬಳಿಕ ವಿದೇಶದಲ್ಲಿದ್ದ ನಟಿ ರಮ್ಯಾ (Actress Ramy/Divya Spandana) ಸಹ ಅಪ್ಪು ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದರು. ರಮ್ಯಾ ಮತ್ತೆ ಪುನೀತ್ ಜೊತೆ ಕಮ್ ಬ್ಯಾಕ್ ಮಾಡುವ ಪ್ಲಾನ್ ನಲ್ಲಿದ್ರು. ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ಅವರ ಬಗ್ಗೆ  ಭಾವನಾತ್ಮಕ ಪೋಸ್ಟ್ ಮಾಡಿಕೊಂಡಿದ್ದಾರೆ. ಸರಳ ವ್ಯಕ್ತಿ ಪುನೀತ್ ಅವರನ್ನು ಆರಾಧಿಸೋಣ, ಅವರು ಬದುಕಿದ ರೀತಿಯಲ್ಲಿ ಬದುಕೋಣ  ಎಂದು ಹೇಳಿಕೊಂಡಿದ್ದಾರೆ .

ರಮ್ಯಾ ಪೋಸ್ಟ್

ಅಪ್ಪು ಜೊತೆಯಲ್ಲಿ ನಾನು ಕಳೆದ ಬಹಳಷ್ಟು ನೆನಪುಗಳು ಅತ್ಯಮೂಲ್ಯ . ನಿಮ್ಮನ್ನು ನಾವು ಎಂದೆಂದಿಗೂ ನೆನೆಯುತ್ತೇವೆ. ಈ ಕಷ್ಟದ ಸಮಯದಲ್ಲಿ ಭಗವಂತ ಅಶ್ವಿನಿ ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮನ್ನು ಅಗಲಿರುವ ಇಂತ ಉನ್ನತ ವ್ಯಕ್ತಿಗೆ ಸಂತಾಪ ಸಲ್ಲಿಸುವ ಸಂದರ್ಭದಲ್ಲಿ ನಾನು ಅವರ ಅಭಿಮಾನಿಗಳ ಜೊತೆ ಇರುವೆನು.

ಇದನ್ನೂ ಓದಿ:  Power Star Puneeth Rajkumar; ಯುವರತ್ನನ ರಾಜ್ಯ ಪ್ರವಾಸ ಹೇಗಿತ್ತು? ಫೋಟೋಗಳಲ್ಲಿ ನೋಡಿ

ಅಪ್ಪು ಅವರ ಬಗ್ಗೆ ಹಲವರು ಬರೆದ ಎಲ್ಲಾ ಭಾವನಾತ್ಮಕ ಸಂದೇಶಗಳನ್ನು ಓದುತ್ತಿದ್ದೇನೆ ಮತ್ತು ಅವೆಲ್ಲವೂ ಅಕ್ಷರಸಹ ನಿಜ. ಕೆಲವಂತು ನನ್ನ ಕಣ್ಣಲ್ಲಿ ನೀರು ತಂದಿತು. ಅದುವೇ ಪುನೀತ್. ಹೌದು, ಅವರೇ ಅಪ್ಪು... ಇವುಗಳನ್ನು ಓದಿದಾಗ ನನ್ನಲ್ಲಿ ಮೂಡಿದ ಕೆಲವು ಆಲೋಚನೆಗಳು ಇವು‌.

ನೆನಪುಗಳು ಮಾಸಿ ಹೋಗುತ್ತವೆ

ಒಬ್ಬ ವ್ಯಕ್ತಿಯನ್ನು ಜೀವಂತವಾಗಿಡಲು ಉತ್ತಮ ಮಾರ್ಗ ಯಾವುದು? ನೆನಪುಗಳಲ್ಲಿ ಅಲ್ಲ, ಏಕೆಂದರೆ ಅದು ಮಾಸಿ ಹೋಗುತ್ತವೆ, ಆದರೆ ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ- ಅವರು ಬದುಕಿದ ರೀತಿಯಲ್ಲಿ ಪ್ರತಿದಿನ ನಾವು ಬದುಕುವುದು. ಅವರಂತೆಯೇ ನಾವು ಪ್ರೀತಿ ಹಾಗೂ ಕರುಣಾಪೂರ್ಣ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಅವರನ್ನು ಜೀವಂತವಾಗಿ ಇಡುವುದು.

ಇದನ್ನೂ ಓದಿ:  RIP Puneeth Rajkumar; ಬೆಟ್ಟದ ಹೂ ಬಾಡುವ ಬಗ್ಗೆ ಭವಿಷ್ಯ ನುಡಿದಿದ್ದ ಅಜ್ಜಯ್ಯ; ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದ ಶ್ರೀಗಳು!

ದಿನನಿತ್ಯ ನಾವು ಅವರ ವ್ಯಕ್ತಿತ್ವವನ್ನು ಅನುಸರಿಸುವುದರ ಮೂಲಕ ನಾವು ಅವರನ್ನು ನಮ್ಮಲ್ಲಿ ಜೀವಂತವಾಗಿ ಇಡಲು ಸಾಧ್ಯ. ಈ ರೀತಿ ನಾವು ಅವರ ಮೌಲ್ಯಗಳನ್ನು ಮುಂದುವರಿಸಬಹುದು. ನಾವೆಲ್ಲರು ಅಪ್ಪು ರನ್ನು ಪ್ರತಿ ದಿನವೂ ಆರಾಧಿಸೋಣ. #BeAppu #bekind ಎಂಬ ಎರಡು ಹ್ಯಾಶ್ ಟ್ಯಾಗ್  ಬಳಸಿಕೊಂಡಿದ್ದಾರೆ.

ಅಭಿ ಸಿನಿಮಾ ಮೂಲಕ ರಮ್ಯಾ ಎಂಟ್ರಿ

ಪುನೀತ್​ ರಾಜ್​ ಕುಮಾರ್​ ಅವರ ಜತೆಗೆ ರಮ್ಯಾ/ದಿವ್ಯಸ್ಪಂದನಾ ಅವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು.  2003ರಲ್ಲಿ ತೆರೆಕಂಡಿದ್ದ ಅಭಿ ಚಿತ್ರದಲ್ಲಿ ರಮ್ಯಾ ಅವರು ಪುನೀತ್​ ರಾಜ್​ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡಿಗರಿಗೆ ನಾಯಕಿಯಾಗಿ ರಮ್ಯಾ ಪರಿಚಯವಾದರು. ಇಂತಹ ನಟನ ಜೊತೆಗೆ ಮತ್ತೆ ಕಮ್​ಬ್ಯಾಕ್​ ಮಾಡುವ ಆಲೋಚನೆ ಇತ್ತು.




'ಅಪ್ಪು' ಸಿನಿಮಾದ ನಂತರ ಪುನೀತ್ ಅಭಿನಯಿಸಿದ ಚಿತ್ರ 'ಅಭಿ'. ಈ ಸಿನಿಮಾವನ್ನು ದಿನೇಶ್‌ ಬಾಬು ಅವರು ನಿರ್ದೇಶನ ಮಾಡಿದ್ದು, ಪುನೀತ್​ ರಾಜ್​ಕುಮಾರ್ ಅವರ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಅವರು ನಿರ್ಮಿಸಿದ್ದಾರೆ. ಮಕ್ಕಳ ಸಿನಿಮಾಗಳಿಗೆ ಹೊಸ ಹೊಸ ನಾಯಕಿಯರನ್ನ ಪರಿಚಯಿಸುತ್ತಿದ್ದ ಪಾರ್ವತಮ್ಮ ಅವರು ರಮ್ಯಾ ಅವರನ್ನು ತಾವೇ ಆಯ್ಕೆ ಮಾಡಿದ್ದರು. ಆಗಲೇ ದಿವ್ಯಸ್ಪಂದನಾ ಆಗಿದ್ದವರು ರಮ್ಯಾ ಆಗಿದ್ದು. ಆಗಲೇ ಅವರಿಗೆ ರಮ್ಯಾ ಎಂಬ ಹೊಸ ಹೆಸರು ನೀಡಲಾಯಿತು. ದೊಡ್ಡ ಬ್ಯಾನರ್​, ಸ್ಟಾರ್​ ನಟನ ಜೊತೆ ಎಂಟ್ರಿ ಕೊಟ್ಟ ರಮ್ಯಾ ನಂತರದಲ್ಲಿ ಟಾಪ್​ ನಟಿಯಾಗಿ ಮಿಂಚಿದರು.

ಅಮ್ಮನ ಪಕ್ಕದಲ್ಲೇ ಚಿರನಿದ್ರೆಗೆ ಜಾರಿದ ಅಪ್ಪು

ಫವರ್ ಸ್ಟಾರ್ ಪುನೀತ್​ ರಾಜ್​ಕುಮಾರ್(Puneeth Rajkumar), ಸ್ಯಾಂಡಲ್​ವುಡ್ ಯುವರತ್ನ ಶುಕ್ರವಾರ  ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುನೀತ್​ ರಾಜ್​ಕುಮಾರ್  ಚಿಕಿತ್ಸೆ ಫಲಕಾರಿಯಾಗದೆ  ವಿಧಿವಶರಾಗಿದ್ಧಾರೆ. ಪುನೀತ್ ರಾಜ್​ಕುಮಾರ್ ಅವರ ಹಠಾತ್​ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.  ಪುನೀತ್​ ರಾಜ್​ಕುಮಾರ್ ಅವರ ಅಂತ್ಯ ಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್​ಕುಮಾರ್ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಅಮ್ಮನ ಪಕ್ಕದಲ್ಲೇ ಕರುನಾಡಿನ ‘ಯುವರತ್ನ‘ ಚಿರನಿದ್ರೆಗೆ ಜಾರಿದ್ದಾರೆ.
Published by:Mahmadrafik K
First published: