ಐಷಾರಾಮಿ ಪಂಚತಾರ ಹೋಟೆಲ್​ ತಿಂಡಿಯಲ್ಲಿ ಹುಳು; ಬಾಲಿವುಡ್​ ನಟಿ ಶಾಕ್

ಬಾಲಿವುಡ್​ ನಟಿ ಮೀರಾ ಚೋಪ್ರಾ ತಾವು ತಂಗಿದ್ದ ಅಹ್ಮದಾಬಾದ್​ನಲ್ಲಿರುವ ಡಬ್ಬಲ್​ ಟ್ರೀ ಹಿಲ್ಟನ್​ ಹೋಟೆಲ್​ಗೆ ತಿಂಡಿಗೆಂದು ತೆರಳಿದ್ದಾರೆ. ಈ ವೇಳೆ ಅವರು ತರಿಸಿಕೊಂಡ ತಿಂಡಿಯಲ್ಲಿ ಬಿಳಿ ಹುಳುಗಳು ಹರಿದಾಡಿವೆ. ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಎಫ್​ಎಸ್​ಎಸ್​ಎಐಗೂ ಟ್ಯಾಗ್​ ಮಾಡಿ ವಿಡಿಯೋ ಮಾಡಿದ್ದಾರೆ.

Seema.R | news18-kannada
Updated:August 24, 2019, 3:46 PM IST
ಐಷಾರಾಮಿ ಪಂಚತಾರ ಹೋಟೆಲ್​ ತಿಂಡಿಯಲ್ಲಿ ಹುಳು; ಬಾಲಿವುಡ್​ ನಟಿ ಶಾಕ್
ಮೀರಾ ಚೋಪ್ರಾ
  • Share this:
5 ಸ್ಟಾರ್​ ಹೋಟೆಲ್​​ ಎಂದರೆ ಅಲ್ಲಿ ಎಲ್ಲ ಅಚ್ಚುಕಟ್ಟು ಎಂಬ ಕಲ್ಪನೆ ನಮ್ಮಲ್ಲಿರುತ್ತದೆ. ದುಬಾರಿಯ ಬೆಲೆಯ ಈ ಹೋಟೆಲ್​ಗಳು ಶುಚಿರುಚಿಗೆ ಹೆಸರಾಗಿರುತ್ತವೆ ಎಂಬ ನಂಬಿಕೆ. ಆದರೆ, ಈ ಐಷಾರಾಮಿ ಹೋಟೆಲ್​ಗಳು ಕೇವಲ ಹಣ ವಸೂಲತಿ ಮಾಡುತ್ತವೆ. ಯಾವುದೇ ಶುಚಿತ್ವವನ್ನು ಕಾಪಾಡುವುದಿಲ್ಲ ಎಂಬುದನ್ನು ನಟಿಯೊಬ್ಬರು ಸಾಕ್ಷಿ ಸಮೇತ ತೋರಿಸಿದ್ದಾರೆ.

ಆಶ್ಚರ್ಯ ಆದರೂ ಹೌದು. ಐಷಾರಾಮಿ ಹೋಟೆಲ್​ನಲ್ಲಿ ತಿಂಡಿಗೆ ಕುಳಿತಿದ್ದ ನಟಿ ಮೀರಾ ಚೋಪ್ರಾ ತಟ್ಟೆಯಲ್ಲಿ ಬರೀ ಹುಳುಗಳು ಓಡಾಡಿವೆ.  ಇದನ್ನು ಗಮನಿಸಿದ ನಟಿ ಹೌಹಾರಿದ್ದು, ಈ ಬಗ್ಗೆ ವಿಡಿಯೋ ಮಾಡಿ ಹೋಟೆಲ್​ ಅಡುಗೆ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ.
ಬಾಲಿವುಡ್​ ನಟಿ ಮೀರಾ ಚೋಪ್ರಾ ತಾವು ತಂಗಿದ್ದ ಅಹ್ಮದಾಬಾದ್​ನಲ್ಲಿರುವ "ಡಬ್ಬಲ್​ ಟ್ರೀ ಹಿಲ್ಟನ್"​ ಹೋಟೆಲ್​ಗೆ ತಿಂಡಿಗೆಂದು ತೆರಳಿದ್ದಾರೆ. ಈ ವೇಳೆ ಅವರು ತರಿಸಿಕೊಂಡ ತಿಂಡಿಯಲ್ಲಿ ಬಿಳಿ ಹುಳುಗಳು ಹರಿದಾಡಿವೆ. ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಎಫ್​ಎಸ್​ಎಸ್​ಎಐಗೂ ಟ್ಯಾಗ್​ ಮಾಡಿ ವಿಡಿಯೋ ಮಾಡಿದ್ದಾರೆ.ಇದನ್ನು ಓದಿ: ನಾಲ್ಕು ವರ್ಷದ ಹಿಂದಿನ ಡ್ಯಾನ್ಸ್​ ವಿಡಿಯೋ ಟ್ರೋಲ್​ ಮಾಡಿದವರಿಗೆ ಧನ್ಯವಾದ ತಿಳಿಸಿದ ಸಂಸದೆ ಸುಮಲತಾ

ಈ ರೀತಿ ಕಳಪೆ ಆಹಾರ ನೀಡುತ್ತಿರುವ ಹೊಟೇಲ್​ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೂಡ ತಮ್ಮ ಟ್ವೀಟ್​ನಲ್ಲಿ ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಹೋಟೆಲ್​ಗಳು ಹೇಗೆ ಜನರನ್ನು ಮೋಸಗೊಳಿಸುತ್ತಾ ಕಳಪೆ ಆಹಾರ ನೀಡುತ್ತಿರುವುದು ಬಾಲಿವುಡ್​ ನಟನಟಿಯರಿಂದ ಬಹಿರಂಗವಾಗುತ್ತಿದೆ. ಚಂಡೀಗಢದ ಪ್ರಖ್ಯಾತ ಐಷಾರಾಮಿ ಹೋಟೆಲ್​ನಲ್ಲಿ ಎರಡು ಬಾಳೆಹಣ್ಣಿಗೆ  442 ರೂ ಬಿಲ್​ ಮಾಡಿದ್ದು ಹೇಗೆ ಹಗಲು ದರೋಡೆ ನಡೆಸುತ್ತಿದ್ದಾರೆ ಎಂಬುದನ್ನು ಈ ಹಿಂದೆ ಬಾಲಿವುಡ್​ ನಟ ರಾಹುಲ್​ ಬೋಸ್​ ವಿಡಿಯೋ ಮಾಡಿದ್ದರು.

First published: August 24, 2019, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading