• Home
 • »
 • News
 • »
 • trend
 • »
 • Viral video: ಗಜಗಾಂಭೀರ್ಯಕ್ಕೆ ಬೆದರಿದ ಹುಲಿ; ಆನೆಗೆ ದಾರಿಗೆ ಅಡ್ಡ ಮಲಗಿದ್ದ ಹುಲಿ ಮಾಡಿದ್ದೇನು?

Viral video: ಗಜಗಾಂಭೀರ್ಯಕ್ಕೆ ಬೆದರಿದ ಹುಲಿ; ಆನೆಗೆ ದಾರಿಗೆ ಅಡ್ಡ ಮಲಗಿದ್ದ ಹುಲಿ ಮಾಡಿದ್ದೇನು?

ವಿಡಿಯೋದ ತುಣುಕು

ವಿಡಿಯೋದ ತುಣುಕು

ಬಾಲಿವುಡ್​ ಬೆಡಗಿ ದಿಯಾ ಮಿರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

 • Share this:

  ಆಕ್ರಮಣ ಕಾರಿ ಹುಲಿಗೆ ಬೆದರದ ಪ್ರಾಣಿಗಳಿಲ್ಲ ಎಂಬ ಮಾತಿದೆ. ಆದರೆ, ಗಜ ಗಾಂಭಿರ್ಯದ ಮುಂದೆ ಹುಲಿ ಶಕ್ತಿ ಕೂಡ ಕಡಿಮೆ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ. ಬಾಲಿವುಡ್​ ಬೆಡಗಿ ದಿಯಾ ಮಿರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಾರಣ ಆಯಾಗಿ ದಾರಿ ಮಧ್ಯ ಮಲಗಿದ್ದ ಹುಲಿಯು ಆನೆ ಕಂಡೊಡನೆ ಓಡಿದೆ, ಈ ಹಿನ್ನಲೆ ಆನೆ ಗಾಂಭೀರ್ಯದ ಮುಂದೆ ಹುಲಿ ಶೌರ್ಯವೂ ಏನಿಲ್ಲ. ಇದರಲ್ಲಿ ಯಾರು ಬಾಸ್​ ಎಂಬುದು ಈಗ ತಿಳಿಯಿತು ಎಂದು ನೆಟ್ಟಿಗರು ಕಮೆಂಟ್​ಗಳ ಮಹಾಪೂರ ಹರಿಸಿದ್ದಾರೆ.  ಸ್ಯಾಂಕ್ಚುರಿ ಏಷ್ಯಾ ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಕಾಡಿನ ಮಧ್ಯೆ ಆರಾಮವಾಗಿ ಹುಲಿ ಮಲಗಿದ್ದನ್ನು ಕಂಡು ಆನೆ ತನ್ನ ನಡೆ ಮುಂದುವರೆಸಿತು. ಹುಲಿ ಹತ್ತಿರಕ್ಕೆ ಹೋಗುತ್ತಿದ್ದರು ಗಜರಾಜ ಮಾತ್ರ ತನ್ನ ಗಾಂಭೀರ್ಯದ ನಡೆಯನ್ನು ಮುಂದುವರೆಸೆ ಇತ್ತು. ಇದನ್ನು ಅರಿಯದ ಹುಲಿ ಕೂಡ ಸುಮ್ಮನೆ ಮಲಗಿತ್ತು. ಯಾವುದೋ ಕ್ಷಣದಲ್ಲಿ ಹಿಂದಿರುಗಿ ನೋಡಿದ ಹುಲಿಗೆ ಹಿಂದೆ ಬೃಹದಾಕಾರದ ಒಂಟಿ ಸಲಗ ಬರುತ್ತಿರುವುದು ಕಂಡಿದೆ. ಒಂಟಿ ಸಲಗದ ಸಂಘ ಒಳಿತಲ್ಲ ಎಂದ ಅರಿತ ಹುಲಿ ಕಾಲಿಗೆ ಬುದ್ದಿ ಹೇಳಿ ಓಡಿದೆ. ಈ ವಿಡಿಯೋ ಅನೇಕರಲ್ಲಿ ನಗು ಕೂಡ ಮೂಡಿಸಿದೆ.  ಈ ವಿಡಿಯೋವನ್ನು ಸೆರೆ ಹಿಡಿದ ವ್ಯಕ್ತಿಯನ್ನು ಕೂಡ ಹುಡುಕುತ್ತಿರುವುದಾಗಿ ನಟಿ ದಿಯಾ ಮಿರ್ಜಾ ತಿಳಿಸಿದ್ದು, ಈ ವಿಡಿಯೋ ಬಗ್ಗೆ ತಿಳಿದು ಬಂದಲ್ಲಿ ತಮಗೆ ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣದ ಬಳಕೆದಾರರಿಗೆ ನಟಿ ಮನವಿ ಕೂಡ ಮಾಡಿದ್ದಾರೆ. ದಿಯಾ ಮಿರ್ಜಾ ಹಂಚಿಕೊಂಡಿರುವ ಈ ವಿಡಿಯೋ 95 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.


  ಕಾಡಿನ ರಕ್ಷಕ ಆನೆ ಎಂಬುದು ಸಾಬೀತಾಗಿದೆ ಎಂದು ಟ್ವಿಟರ್​ ಬಳಕೆದಾರರು ಪ್ರತಿಪಾದಿಸಿದ್ದಾರೆ. ಆನೆಗೆ ಹೆದರಿ ಹುಲಿ ಓಡಿ ಹೋಗಿದೆ. ಆನೆಯೇ ನಿಜವಾದ ರಕ್ಷಕ ಎಂಬುದು ಸಾಬೀತಾಗಿದೆ ಎಂದು ಅಭಿಪ್ರಾಯಗಳನ್ನು ಟ್ವಿಟರ್​ ಬಳಕೆದಾರರು ವ್ಯಕ್ತಪಡಿಸಿದ್ದಾರೆ.  ನಟಿಯ ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಭಾರತೀಯ ಅರಣ್ಯ ಸೇವೆ (ಐಎಫ್​ಎಸ್​) ಅಧಿಕಾರಿ ಪ್ರವೀಣ್​ ಕೊಸ್ವಾನ್​, ಕಾಡಿನ ರಾಜ ಆನೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಬೇರೆ ಯಾವುದೇ ಪ್ರಾಣಿಗಳು ಕೂಡ ಆನೆ ವಿರುದ್ಧ ನಿಲ್ಲುವುದಿಲ್ಲ ಎಂದಿದ್ದಾರೆ.​

  Published by:Seema R
  First published: