Viral Video; ಸಲ್ಮಾನ್ ಮುಂದೆಯೇ ಕತ್ರಿನಾಗೆ ಪ್ರಪೋಸ್ ಮಾಡಿದ ನಟ ವಿಕ್ಕಿ ಕೌಶಲ್; ವೈರಲ್ ವಿಡಿಯೋ ನೋಡಿ

ಯಾಕೆ ನೀವು ವಿಕ್ಕಿ ಕೌಶಲ್ ಅಂತಹ ಒಳ್ಳೆಯ ವ್ಯಕ್ತಿಯನ್ನು ಹುಡುಕಿ ಮದುವೆ ಆಗುತ್ತಿಲ್ಲ. ಮದುವೆಯ ಸೀಜನ್ ನಡೆಯುತ್ತಿದ್ದು, ನೀವು ಮದುವೆ ಆಗಲು ಇಷ್ಟಪಡುತ್ತೀರಿ ಅಂತ ನನಗೆ ಅನ್ನಿಸುತ್ತದೆ . ಹಾಗಾಗಿ ನನಗೆ ಮದುವೆ ಬಗ್ಗೆ ನಿಮ್ಮನ್ನು ಕೇಳ ಬೇಕೆನಿಸಿತು ಎಂದು ವಿಕ್ಕಿ ಕೌಶಲ್ ಹೇಳುತ್ತಾರೆ.

ವಿಕ್ಕಿ ಕೌಶಲ್ -ಕತ್ರೀನಾ ಕೈಫ್

ವಿಕ್ಕಿ ಕೌಶಲ್ -ಕತ್ರೀನಾ ಕೈಫ್

  • Share this:
    ಮುಂಬೈ: 2019ರಲ್ಲಿ ನಟ ವಿಕ್ಕಿ ಕೌಶಲ್ (Vicky Kaushal) ನಟಿ ಕತ್ರಿನಾ ಕೈಫ್ (Katrrina Kaif) ಗೆ ಪ್ರಪೋಸ್ ಮಾಡಿರುವ ವಿಡಿಯೋ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ವಿಕ್ಕಿ ಕೌಶಲ್ ಪ್ರಪೋಸ್ ಮಾಡುತ್ತಿರುವಾಗ ನಟ ಸಲ್ಮಾನ್ ಖಾನ್ (Salman Khan) ಸಹ ಉಪಸ್ಥಿತರಿದ್ದರು. ವಿಕ್ಕಿ ಪ್ರಪೋಸ್ ಗೆ ಕತ್ರಿನಾ ನೀಡಿದ ಉತ್ತರ ಸಹ ಮಜವಾಗಿತ್ತು. ಈ ವಿಡಿಯೋ ಜೊತೆ  ಇಬ್ಬರ ಮದುವೆಗೆ  (Maariage)ಸಿದ್ಧತೆ ನಡೆದಿರುವ ಬಗ್ಗೆ ಚರ್ಚೆಗಳು ನಡೆದಿವೆ. ಮದುವೆ ಬಗ್ಗೆ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದ್ರೂ ಇಬ್ಬರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಕೆಲ ವರದಿಗಳ ಪ್ರಕಾರ ಡಿಸೆಂಬರ್ 7 ಅಥವಾ 9ರ ನಡುವೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಇಬ್ಬರು ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಅಭಿಮಾನಿಗಳು ಇಬ್ಬರ ಮದುವೆಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಇಬ್ಬರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ.

    ವೈರಲ್ ಆಗಿರುವ  ವಿಡಿಯೋದಲ್ಲಿ ಏನಿದೆ?

    ಯಾಕೆ ನೀವು ವಿಕ್ಕಿ ಕೌಶಲ್ ಅಂತಹ ಒಳ್ಳೆಯ ವ್ಯಕ್ತಿಯನ್ನು ಹುಡುಕಿ ಮದುವೆ ಆಗುತ್ತಿಲ್ಲ. ಮದುವೆಯ ಸೀಜನ್ ನಡೆಯುತ್ತಿದ್ದು, ನೀವು ಮದುವೆ ಆಗಲು ಇಷ್ಟಪಡುತ್ತೀರಿ ಅಂತ ನನಗೆ ಅನ್ನಿಸುತ್ತದೆ . ಹಾಗಾಗಿ ನನಗೆ ಮದುವೆ ಬಗ್ಗೆ ನಿಮ್ಮನ್ನು ಕೇಳ ಬೇಕೆನಿಸಿತು ಎಂದು ವಿಕ್ಕಿ ಕೌಶಲ್ ಹೇಳುತ್ತಾರೆ.




    ವಿಕ್ಕಿ ಕೌಶಲ್ ಪ್ರಪೋಸ್ ಗೆ ಪ್ರತಿಕ್ರಿಯಿಸುವ ಕತ್ರಿನಾ, ಅರೇ ಏನು ಎಂದು ಒಂದು ರೀತಿಯ ರಿಯಾಕ್ಷನ್ ನೀಡುತ್ತಾರೆ. ಈ ವೇಳೆಗೆ ಸಲ್ಮಾನ್ ಖಾನ್ ಚಿತ್ರದ ‘ಮುಜ್ ಸೇ ಶಾದಿ ಕರೇಗಿ’ ಹಾಡು ಕೇಳುತ್ತಿದ್ದಂತೆ ವಿಕ್ಕಿ ಸಹ ಹಾಡುತ್ತಾರೆ. ಆದ್ರೆ ಕತ್ರಿನಾ ಮಾತ್ರ ನಿಮಗೆ  ಧೈರ್ಯವಿಲ್ಲ ಎಂದು ಹೇಳಿ ಟಾಂಗ್ ಕೊಡುತ್ತಾರೆ. ವೇದಿಕೆ ಮೇಲೆ ಇಬ್ಬರು ಮಾತನಾಡುತ್ತಿದ್ದರೆ, ಮುಂಭಾಗದ ಮೊದಲ ಸಾಲಿನಲ್ಲಿಯೇ ಸಲ್ಮಾನ್ ಖಾನ್ ಕುಳಿತಿರೋದನ್ನು ಕಾಣಬಹುದಾಗಿದೆ.

    ಇದನ್ನೂ ಓದಿ:  Katrina kaif-Vicky Kaushal: ಗುಟ್ಟಾಗಿ ಎಂಗೇಜ್​​ಮೆಂಟ್​​ ಮಾಡಿಕೊಂಡ್ರಾ ಕತ್ರಿನಾ-ವಿಕ್ಕಿ? ಮತ್ತೊಂದು ಬಾಲಿವುಡ್ ಜೋಡಿ ಮದುವೆ?

    ಮದುವೆ ಸ್ಥಳಕ್ಕಾಗಿ ಕತ್ರಿನಾ ಹುಡುಕಾಟ

    ಬಾಲಿವುಡ್ ಲೈಫ್  ವರದಿ ಪ್ರಕಾರ, ಕತ್ರಿನಾ ಕೈಫ್ ಮದುವೆಯಾಗಲು ರಾಜಸ್ಥಾನದ ಸುಂದರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ವರದಿಗಳ ಪ್ರಕಾರ ಮಹಾರಾಣಿಯ ಶೈಲಿಯಂತೆ ಮದುವೆಯಾಗಲು ಕತ್ರಿನಾ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ ಮನೆತನದ ಶೈಲಿಯಂತೆ ಮದುವೆ ಸೆಟ್ ಸಹ ನಿರ್ಮಾಣವಾಗಲಿದೆಯಂತೆ. ಮದುವೆಯಲ್ಲಿ ಪಾರಂಪರಿಕ ಉತ್ತರ ಚಿನ್ನಾಭರಣ ಮತ್ತು  ಡ್ರೆಸ್​  ಸಹ ರಾಜಸ್ಥಾನದ ಶೈಲಿಯಲ್ಲಿ ಇರಲಿದೆಯಂತೆ.

    ಮದುವೆಗೆ ಆಗಮಿಸುವ ಅತಿಥಿಗಳಿಗೂ ರಾಜಸ್ಥಾನಿ ಶೈಲಿಯ ಡ್ರೆಸ್ ಕೋಡ್ ಮಾಡಲು ಕತ್ರಿನಾ ಮುಂದಾಗಿದ್ದು, ಒಳ್ಳೆಯ ಡಿಸೈನ್ ಗಾಗಿ ಹುಡುಕಾಟ ನಡೆಸಿದ್ದಾರಂತೆ. ಮದುವೆ ಸಹ ಸಂಪೂರ್ಣವಾಗಿ ರಾಜಸ್ಥಾನಿ ಸಂಪ್ರದಾಯದಂತೆ ನಡೆಯಲಿದ ಎಂದು ಹೇಳಲಾಗುತ್ತಿದೆ

    ಇದನ್ನೂ ಓದಿ:  Akshay Kumar And Katrina Kaif ; ಅಕ್ಷಯ್ ಕುಮಾರ್ ಕೆನ್ನೆಗೆ ಹೊಡೆದ ವಿಷಯ ಬಿಚ್ಚಿಟ್ಟ ಕತ್ರಿನಾ ಕೈಫ್

    ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್

    ಕತ್ರಿನಾ ಕೈಫ್ ಬಾಲಿವುಡ್ ಗೆ ಬಂದಾಗಿನಿಂದಲೂ ಸಲ್ಮಾನ್ ಖಾನ್ ಅವರನ್ನು ಮದುವೆಯಾಗ್ತಾರೆ ಅಂತಾನೇ ಹೇಳಲಾಗಿತ್ತು. ಅದೇ ರೀತಿ ಸಲ್ಮಾನ್ ಮತ್ತು ಕತ್ರಿನಾ ಜೊತೆಯಾಗಿಯೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದಾದ ನಂತರ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಸಲ್ಮಾನ್ ಬಳಿಕ ಕತ್ರಿನಾ ಹೆಸರು ನಟ ರಣಬೀರ್ ಕಪೂರ್ ಜೊತೆಯಲ್ಲಿಯೂ ತಳಕು ಹಾಕಿಕೊಂಡಿತ್ತು. ಇಬ್ಬರು ವಿದೇಶದಲ್ಲಿ ಜೊತೆಯಾಗಿ ಬೀಚ್ ನಲ್ಲಿ ಕಾಣಿಸಿಕೊಂಡಿದ್ದ ಫೋಟೋ ಸಹ ವೈರಲ್ ಆಗಿತ್ತು.
    Published by:Mahmadrafik K
    First published: