ಯುನಿವರ್ಸಲ್ ಬಾಸ್ ಗೇಲ್'ರಿಂದ 'ವಾವ್' ಕ್ಯಾಚ್: ವಿಡಿಯೋ ವೈರಲ್

news18
Updated:July 18, 2018, 4:41 PM IST
ಯುನಿವರ್ಸಲ್ ಬಾಸ್ ಗೇಲ್'ರಿಂದ 'ವಾವ್' ಕ್ಯಾಚ್: ವಿಡಿಯೋ ವೈರಲ್
news18
Updated: July 18, 2018, 4:41 PM IST
ನ್ಯೂಸ್ 18 ಕನ್ನಡ

ವೆಸ್ಟ್‌ ಇಂಡೀಸ್‌ನ ಕ್ರಿಕೆಟಿಗ, ಸ್ಪೋಟಕ ಬ್ಯಾಟ್ಸ್​ಮನ್​​ ಕ್ರಿಸ್ ಗೇಲ್ ಕೆನಡಾದಲ್ಲಿ ನಡೆದ ಗ್ಲೋಬಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯದ ವೇಳೆ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಅಭಿಮಾನಿಗಳನ್ನು ವಿಸ್ಮಯಗೊಳಿಸಿದ್ದಾರೆ.

ಯುನಿವರ್ಸಲ್ ಬಾಸ್ ಎಂದು ಕರೆದುಕೊಳ್ಳುತ್ತಿರುವ ಗೇಲ್ ಟಿ-20 ಟೂರ್ನಿಯಲ್ಲಿ ವ್ಯಾಂಕೋವೆರ್ ನೈಟ್ಸ್ ತಂಡದ ಪರ ಆಡಿದ್ದರು. ಮೊದಲ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಗೇಲ್ ಕೇವೆಂ ಹಾಡ್ಜ್ ನೀಡಿದ ಕ್ಯಾಚ್‌ನ್ನು ಅದ್ಭುತವಾಗಿ ಪಡೆಯುವ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು. ಇದು ನೋಡುಗರನ್ನಷ್ಟೇ ಅಲ್ಲದೆ ವೀಕ್ಷಕ ವಿವರಣೆಗಾರರಿಗೂ ಅಚ್ಚರಿ ಮೂಡಿಸಿದೆ. ಸದ್ಯ ಗೇಲ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

 


Loading...

First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...