Dinosaur eggs: ಮಧ್ಯಪ್ರದೇಶದಲ್ಲಿ ಪತ್ತೆಯಾಗಿದೆ ಅಪರೂಪದ ಡೈನೋಸಾರ್ ಮೊಟ್ಟೆಗಳು; ಹೇಗಿವೆ ಗೊತ್ತಾ?

ದೆಹಲಿ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಪಳೆಯುಳಿಕೆಗೊಂಡ ಅಪರೂಪದ ಡೈನೋಸಾರ್ ಗಳ ಮೊಟ್ಟೆಗಳನ್ನು ಪತ್ತೆಹಚ್ಚಿದೆ. ಪಳೆಯುಳಿಕೆ ಇತಿಹಾಸದಲ್ಲಿ ಈ ರೀತಿ ಮೊಟ್ಟೆಯೊಳಗೆ ಮೊಟ್ಟೆ ಕಂಡುಬರುವುದು ಅಪರೂಪದ ಪ್ರಕರಣ ಎಂದು ಸಂಶೊಧಕರು ಹೇಳಿದ್ದಾರೆ.

ಅಪರೂಪದ ಡೈನೋಸಾರ್ ಮೊಟ್ಟೆ ಪತ್ತೆ

ಅಪರೂಪದ ಡೈನೋಸಾರ್ ಮೊಟ್ಟೆ ಪತ್ತೆ

  • Share this:
ದೆಹಲಿ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಡೈನೋಸಾರ್ (dinosaur) ಪಳೆಯುಳಿಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಪಳೆಯುಳಿಕೆಗೊಂಡ ಅಪರೂಪದ ಡೈನೋಸಾರ್ ಗಳ ಮೊಟ್ಟೆಗಳನ್ನು (Eggs) ಪತ್ತೆಹಚ್ಚಿದೆ. ಪಳೆಯುಳಿಕೆ ಇತಿಹಾಸದಲ್ಲಿ ಈ ರೀತಿ ಮೊಟ್ಟೆಯೊಳಗೆ ಮೊಟ್ಟೆ ಕಂಡುಬರುವುದು ಅಪರೂಪದ ಪ್ರಕರಣ ಎಂದು ಸಂಶೊಧಕರು ಹೇಳಿದ್ದಾರೆ. ಮೊಟ್ಟೆ ಪಕ್ಷಿಗಳಲ್ಲಿ (Birds) ಮಾತ್ರ ಸಂಭವಿಸುತ್ತವೆ ಮತ್ತು ಸರೀಸೃಪಗಳಲ್ಲಿ ಇದು ಇವತ್ತಿನವರೆಗೂ ಕಂಡುಬಂದಿಲ್ಲ ಎಂದಿದ್ದಾರೆ. ಸಂಶೊಧಕರ ಹೊಸ ಆವಿಷ್ಕಾರದಿಂದ ಭಾರತದಲ್ಲಿ ಡೈನೋಸಾರ್ ಅಸ್ತಿತ್ವದ ಬಗ್ಗೆ ಇನ್ನಷ್ಟು ಕೌತುಕ ಹೆಚ್ಚಾಗಿದೆ. ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯ ಬಾಗ್ ಪ್ರದೇಶದಿಂದ ಪತ್ತೆಯಾದ ಟೈಟಾನೊಸೌರಿಡ್ ಡೈನೋಸಾರ್ ಮೊಟ್ಟೆಯಲ್ಲಿನ 'ಎಗ್-ಇನ್-ಎಗ್' ಆವಿಷ್ಕಾರವನ್ನು ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಟೈಟಾನೋಸಾರ್‌ ಪ್ರಬೇಧದ ಜೀವಿಗಳಿಗೆ ಸೇರಿದ ಮೊಟ್ಟೆಗಳು
ಪತ್ತೆಯಾಗಿರುವ ಮೊಟ್ಟೆಗಳು ಟೈಟಾನೋಸಾರ್‌ ಪ್ರಬೇಧದ ಜೀವಿಗಳಿಗೆ ಸೇರಿವೆ, ಇದು ಸೌರೋಪಾಡ್ ಡೈನೋಸಾರ್‌ಗಳ ವೈವಿಧ್ಯಮಯ ಗುಂಪಾಗಿದೆ. ಸೌರೋಪಾಡ್ ಕುಟುಂಬದ ಡೈನೋಸಾರ್‌ಗಳು ಇದುವರೆಗೆ ವಾಸಿಸುತ್ತಿದ್ದ ಅತಿದೊಡ್ಡ ಭೂ ಪ್ರಾಣಿಗಳಲ್ಲಿ ಒಂದಾಗಿದ್ದು, ಲಕ್ಷಾಂತರ ವರ್ಷಗಳ ಹಿಂದೆ ವ್ಯಾಪಕವಾಗಿ ಹರಡಿದ್ದವು. ಇಲ್ಲಿಯವರೆಗೆ ಈ ಪ್ರಾಣಿಗಳ ಪಳೆಯುಳಿಕೆಗಳು ಗುಜರಾತ್, ಮಧ್ಯಪ್ರದೇಶ ಮತ್ತು ಮೇಘಾಲಯದಲ್ಲಿ ಕಂಡುಬಂದಿವೆ.

ಸೌರೋಪಾಡ್ ಗೂಡುಗಳು ಪತ್ತೆ
ಮಧ್ಯ ಭಾರತದ ಮೇಲ್ಭಾಗದಲ್ಲಿ ಕಂಡುಬರುವ ಕ್ರಿಟೇಶಿಯಸ್ ಲ್ಯಾಮೆಟಾ ರಚನೆಯು ಡೈನೋಸಾರ್ ಪಳೆಯುಳಿಕೆಗಳಿಗೆ (ಅಸ್ಥಿಪಂಜರ ಮತ್ತು ಮೊಟ್ಟೆಯ ಅವಶೇಷಗಳೆರಡೂ) ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಮತ್ತು ಇತ್ತೀಚೆಗೆ ನಡೆದ ಸಂಶೋಧನೆಯ ತಂಡದಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು, ಬಾಗ್‌ಗೆ ಸಮೀಪವಿರುವ ಪಾಡ್ಲ್ಯಾ ಗ್ರಾಮದ ಬಳಿ 52 ಟೈಟಾನೊಸೌರಿಡ್ ಸೌರೋಪಾಡ್ ಗೂಡುಗಳನ್ನು ಪತ್ತೆ ಹಚ್ಚಿ ದಾಖಲಿಸಿದ್ದಾರೆ. ಈ ಗೂಡುಗಳಲ್ಲಿ ಒಂದು 10 ಮೊಟ್ಟೆಗಳನ್ನು ಒಳಗೊಂಡಿತ್ತು ಮತ್ತು ಅವುಗಳಲ್ಲಿ ಒಂದು "ಅಸಹಜ" ಮೊಟ್ಟೆಯಾಗಿತ್ತು.

ಇದನ್ನೂ ಓದಿ: Viral News: ಕೋಳಿ ಮೊಟ್ಟೆ ಇಟ್ಟಿದ್ದೇ ದೊಡ್ಡ ಸುದ್ದಿ! 6 ಗಂಟೆಲಿ 24 ಮೊಟ್ಟೆ ಇಟ್ಟ ಚಿನ್ನು!

ವಿಶಾಲವಾದ ಅಂತರದಿಂದ ಬೇರ್ಪಟ್ಟ ಎರಡು ನಿರಂತರ ಮತ್ತು ವೃತ್ತಾಕಾರದ ಮೊಟ್ಟೆಯ ಚಿಪ್ಪಿನ ಪದರಗಳನ್ನು ಈ ಮೊಟ್ಟೆ ಹೊಂದಿದ್ದು, ಈ ಆವಿಷ್ಕಾರದವರೆಗೂ ಡೈನೋಸಾರ್ಗಳು, ಆಮೆಗಳು, ಹಲ್ಲಿಗಳು ಮತ್ತು ಮೊಸಳೆಗಳಂತಹ ಸರೀಸೃಪಗಳಲ್ಲಿ ಅಸಹಜ ಮೊಟ್ಟೆ ಎಂದಿಗೂ ಕಂಡುಬಂದಿಲ್ಲ ಎಂದು ವಿಜ್ಞಾನಿಗಳ ಹೇಳಿದ್ದಾರೆ.

ಮೊಟ್ಟೆಗಳು ನೋಡಲು ಹೇಗಿವೆ?
ಡೈನೋಸಾರ್‌ಗಳು, ಆಮೆಗಳು ಮತ್ತು ಇತರ ಸರೀಸೃಪಗಳಂತೆಯೇ ಸಂತಾನೋತ್ಪತ್ತಿ ಕಾರ್ಯವನ್ನು ಹೊಂದಿವೆ ಎಂದು ನಂಬಲಾಗಿದೆ. ಆದರೆ ಇದು ಮೊಸಳೆಗಳು ಮತ್ತು ಪಕ್ಷಿಗಳು ಹೊಂದಿರುವ ಪ್ರತ್ಯೇಕ ಪೊರೆ ಮತ್ತು ಶೆಲ್ ಶೇಖರಣೆಯ ವಿಭಜಿತ ಸಂತಾನೋತ್ಪತ್ತಿ ಸ್ಥಳಗಳಿಗೆ ಹೋಲಿಸಿದರೆ ವ್ಯತಿರಿಕ್ತವಾಗಿದೆ.

ಮೊಸಳೆಗಳು ಶೆಲ್ ಮೆಂಬರೇನ್ ಮತ್ತು ಖನಿಜಯುಕ್ತ ಶೆಲ್ ಶೇಖರಣೆಯ ಪ್ರತ್ಯೇಕ ಪ್ರದೇಶಗಳನ್ನು ಹೊಂದಿದ್ದರೂ, ಅವು ಆಮೆಗಳು ಮತ್ತು ಇತರ ಸರೀಸೃಪಗಳಂತೆ ಎಲ್ಲಾ ಮೊಟ್ಟೆಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತವೆ. ಪಕ್ಷಿಗಳಲ್ಲಿ, ಅಂಡಾನೋತ್ಪತ್ತಿ ಕ್ರಿಯೆಯು ಅನುಕ್ರಮವಾಗಿದ್ದು ಏಕ ಕಾಲದಲ್ಲಿ ಒಂದು ಮೊಟ್ಟೆಯಂತೆ ಇಡುತ್ತವೆ. "ಅಂಡಾಣುವಿನಲ್ಲಿ ಅಂಡಾಣು ಇರುವ ಈ ಹೊಸ ಆವಿಷ್ಕಾರ, ಟೈಟಾನೊಸೌರಿಡ್‌ಗಳಲ್ಲಿರುವ ಮೊಸಳೆಗಳ ರೀತಿಯ ಸೆಗ್ಮೆಂಟೆಡ್ ಓವಿಡಕ್ಟ್ ಇರುವಿಕೆ ಹಾಗೂ ಪಕ್ಷಿಗಳ ಮತ್ತು ಪಕ್ಷಿಗಳಲ್ಲಿರುವಂತೆ ಅನುಕ್ರಮವಾಗಿ ಮೊಟ್ಟೆಗಳನ್ನು ಇಡುವ ವಿಶಿಷ್ಟ" ಎಂದು ಲೇಖಕರು ಹೇಳಿದ್ದಾರೆ.

ಈ ಬಗ್ಗೆ ದೆಹಲಿ ವಿಶ್ವವಿದ್ಯಾನಿಲಯ ಸಂಶೋಧಕರು ಹೇಳಿದ್ದು ಹೀಗೆ
"ಟೈಟಾನೋಸೌರಿಡ್ ಗೂಡಿನಿಂದ ಅಂಡಾಣುವಿನಲ್ಲಿ ಮೊಟ್ಟೆಯ ಪತ್ತೆಯು ಸೌರೋಪಾಡ್ ಡೈನೋಸಾರ್‌ಗಳು ಮೊಸಳೆಗಳು ಅಥವಾ ಪಕ್ಷಿಗಳಂತೆಯೇ ಅಂಡಾಣು ರೂಪವಿಜ್ಞಾನವನ್ನು ಹೊಂದಿರುವ ಸಾಧ್ಯತೆ ಬಗ್ಗೆ ಹೇಳುತ್ತದೆ ಮತ್ತು ಅವು ಪಕ್ಷಿಗಳ ಮೊಟ್ಟೆಯಿಡುವ ಗುಣಲಕ್ಷಣಕ್ಕೆ ಹೊಂದಿಕೊಂಡಿರಬಹುದು" ಎಂದು ದೆಹಲಿ ವಿಶ್ವವಿದ್ಯಾನಿಲಯ ಸಂಶೋಧಕ ಡಾ ಹರ್ಷ ಧಿಮಾನ್ ಹೇಳಿದ್ದಾರೆ.

ಇದನ್ನೂ ಓದಿ: Goat Marriage: ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ

ಹೊಸ ರೋಗಶಾಸ್ತ್ರೀಯ ಮೊಟ್ಟೆಯು ಅಪರೂಪದ ಮತ್ತು ಪ್ರಮುಖವಾದ ಆವಿಷ್ಕಾರವಾಗಿದೆ ಏಕೆಂದರೆ ಇದುವರೆಗೆ ಸರೀಸೃಪಗಳಲ್ಲಿ ಯಾವುದೇ ಅಂಡಾಣುವಿನಲ್ಲಿ ಅಂಡಾಣು ಇರುವ ಮೊಟ್ಟೆ ಕಂಡುಬಂದಿಲ್ಲ ಮತ್ತು ಡೈನೋಸಾರ್‌ಗಳು, ಆಮೆಗಳು ಮತ್ತು ಹಲ್ಲಿಗಳು ಅಥವಾ ಅವುಗಳ ತಕ್ಷಣದ ಸೋದರಸಂಬಂಧಿಗಳಂತಿರುವ ಮೊಸಳೆಗಳು ಮತ್ತು ಪಕ್ಷಿಗಳ ಸಂತಾನೋತ್ಪತ್ತಿ ಜೀವಶಾಸ್ತ್ರವನ್ನು ಹೊಂದಿವೆಯೇ ಎಂಬ ಮಹತ್ವದ ಮಾಹಿತಿಯನ್ನು ಅರಿಯಬಹುದಾಗಿದೆ" ಎಂದು ದೆಹಲಿ ವಿವಿಯ ಲೇಖಕ ಗುಂಟುಪಲ್ಲಿ ಪ್ರಸಾದ್ ಎಂ ತಿಳಿಸಿದ್ದಾರೆ.

ಹೊಸ ಸಂಶೋಧನೆಯು ಡೈನೋಸಾರ್ ವೈವಿಧ್ಯತೆ, ಗೂಡುಕಟ್ಟುವ ನಡವಳಿಕೆ ಮತ್ತು ಸಂತಾನೋತ್ಪತ್ತಿ ಜೀವಶಾಸ್ತ್ರದ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡಬಹುದು ಎಂದು ನೀರಿಕ್ಷಿಸಲಾಗಿದೆ.
Published by:Ashwini Prabhu
First published: