ಯಾದಗಿರಿ (ಮೇ.07): ಬೇಸಿಗೆ (Summer) ಕಾಲದಲ್ಲಿ ಈಗ ರಾಜ್ಯದ ಜನ ತಲ್ಲಣಗೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಲ್ಯಾಣ ಕರ್ನಾಟಕ (Karnataka) ಭಾಗದ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸೂರ್ಯನ ಪ್ರಖರತೆಗೆ ಜನರು ಕಂಗಲಾಗಿದ್ದಾರೆ. ಮಧ್ಯಾಹ್ನ ಜನರು ಮನೆಯಿಂದ ಹೊರಬರದಂತಾಗಿದೆ. ಸೂರ್ಯನ ತಾಪದಿಂದ ಜನರು ತಲ್ಲಣಗೊಂಡಿದ್ದಾರೆ. ಜನರು ನೀರು ಖರೀದಿ ಮಾಡಿ ನೀರಿನ ದಾಹ (Water) ತಣಿಸಿಕೊಳ್ಳುತ್ತಾರೆ. ಆದರೆ, ಮೂಕ ಪ್ರಾಣಿಗಳು (Animals) ಬೇಸಿಗೆಯಲ್ಲಿ ನೀರಿನ ದಾಹ ತಣಿಸಿಕೊಳ್ಳಲು ನಿತ್ಯವೂ ಪರದಾಡುವಂತಾಗಿದೆ.
ಗೋವುಗಳ ನೀರಿನ ಪರದಾಡ ಅರಿತು ಮುಸ್ಲಿಂ ರೈತನೋರ್ವ ಗೋವುಗಳ ಪ್ರೇಮ ಮೆರೆದಿದ್ದಾರೆ. ಬೇಸಿಗೆ ಕಾಲದಲ್ಲಿ ಗೋವುಗಳು ನೀರಿನ ದಾಹ ತಣಿಸಿಕೊಳ್ಳಲು ಅಲೆದಾಡುವದನ್ನು ಅರಿತ ಗೋ ಪ್ರೇಮಿ ಅಬ್ದುಲ್ ಗಫರ್ ಅವರು ಗೋವುಗಳ ನೀರಿನ ದಾಹ ತಣಿಸುತ್ತಿದ್ದಾರೆ.
ಜಮೀನಿನಲ್ಲಿ ಬೊರವೆಲ್ ಹಾಕಿಸಿ, ನೀರು ಸಂಗ್ರಹ ಮಾಡಲು ಹೌಸ್ ನಿರ್ಮಾಣ
ಅಧುನಿಕ ಭಗೀರಥ ಅಬ್ದುಲ್ ಗಫರ್ ಗೋವುಗಳ ನೀರಿನ ದಾಹ ತಣಿಸುತ್ತಿದ್ದಾನೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ರೈತ ಅಬ್ದುಲ್ ಗಫರ್ ಅವರು ಗ್ರಾಮದ ಬೆಟ್ಟದ ಭಾಗದಲ್ಲಿರುವ ತನ್ನ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಬೇಸಿಗೆಯಲ್ಲಿ ಜಾನುವಾರುಗಳು ನೀರಿಗಾಗಿ ಪರದಾಡುವದನ್ನು ಅರಿತು ಮೂಕ ಪ್ರಾಣಿಗಳಿಗೆ ಅನುಕೂಲವಾಗಲು ಜಮೀನಿನಲ್ಲಿ ಬೊರವೆಲ್ ಹಾಕಿಸಿ, ನೀರು ಸಂಗ್ರಹ ಮಾಡಲು ಹೌಸ್ ನಿರ್ಮಾಣ ಮಾಡಿದ್ದಾರೆ.
ಸಾವಿರಾರು ಜಾನುವಾರು ನೀರು ಕುಡಿಯಲು ಬರುತ್ತೆ
ಹೌಸ್ ತುಂಬಿಸಿ ಜಾನುವಾರುಗಳಿಗೆ ನೀರು ಕುಡಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.ಬೇಸಿಗೆ ಕಾಲದಲ್ಲಿ ನಾಲ್ಕು ತಿಂಗಳ ಕಾಲ ಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಯರಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಆಗಮಿಸಿ ನೀರು ಸೇವನೆ ಮಾಡುತ್ತವೆ.ಕುರಿ ಮೆಕೆಗಳು ಸಹಿತ ನೀರಿನ ದಾಹ ತಣಿಸಿಕೊಳ್ಳುತ್ತವೆ.
8 ವರ್ಷದಿಂದ ಹಸುಗಳಿಗೆ ನೀರುಣಿಸುವ ಅಬ್ದುಲ್ಲ
ಸುತ್ತಮುತ್ತಲಿನ ಪ್ರದೇಶದಲ್ಲಿ ಜಾನುವಾರುಗಳು ಮೇವು ತಿಂದು ನಂತರ ನೀರು ಕುಡಿಯಲು ಆಗಮಿಸಿ ನೀರು ಸೇವನೆ ಮಾಡಿ ತೆರಳುತ್ತವೆ.ಕಳೆದ ಎಂಟು ವರ್ಷದಿಂದ ಗೋವುಗಳಿಗೆ ನೀರು ಕುಡಿಯಲು ಅನುಕೂಲ ಕಲ್ಪಿಸಿದ್ದಾರೆ. ಅಬ್ದುಲ್ ಗಫರ್ ನ ಮೂಕ ಪ್ರಾಣಿಗಳ ಕಾಳಜಿಯ ಕಾರ್ಯ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Successful Farmer: ಬರಡು ಭೂಮಿಯಲ್ಲಿ ಛಲ ಬಿಡದ ರೈತ! 10 ಕೋಟಿ ಲೀಟರ್ ಹಿಡಿಯುವ ಬಾವಿ, ಒಣಗಿದ್ದ ನೆಲದಲ್ಲಿ ಈಗ ತಿಳಿನೀರು
ಗಫರ್ ಹೇಳೋದೇನು?
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅಬ್ದುಲ್ ಗಫರ್ ಮಾತನಾಡಿ, ಸರ್ ಮನುಷ್ಯನಿಗೆ ನೀರು ಬೇಕಾದರೆ ನೀರು ಖರೀದಿ ಮಾಡಿ ನೀರು ಕುಡಿಯುತ್ತಾನೆ.ಆದರೆ, ಮೂಕ ಪ್ರಾಣಿಗಳು ಎಲ್ಲಿಂದ ಕುಡಿಯಬೇಕು.ಬೇಸಿಗೆ ಕಾಲದಲ್ಲಿ ಎಷ್ಟೆ ದೂರ ಇದ್ದರು ನೀರು ಇರುವ ಕಡೆ ಹೋಗಿ ನೀರು ಸೇವನೆ ಮಾಡುತ್ತವೆ.ಹೀಗಾಗಿ, ಜಾನುವಾರುಗಳು ನೀರಿನ ಸಮಸ್ಯೆ ಎದುರಿಸುವದನ್ನು ಅರಿತು ನಾನು ಜಮೀನಿನಲ್ಲಿ ಕೊಳವೆ ಬಾವಿ ಹಾಕಿಸಿ ,ಹೌಸ್ ನಿರ್ಮಾಣ ಮಾಡಿ ನೀರು ಸಂಗ್ರಹ ಮಾಡಿ ಬೇಸಿಗೆಯ ನಾಲ್ಕು ತಿಂಗಳ ಕಾಲ ಮೂಕ ಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲ ಮಾಡಿದ್ದೆನೆ ಎಂದಿದ್ದಾರೆ.
ಇದನ್ನೂ ಓದಿ: Viral Tree: ಇಲ್ಲೊಂದು ಕಾರಂಜಿ ಮರ! ಈ ಮರದೊಳಗಿಂದ ಚಿಮ್ಮುತ್ತಲೇ ಇರುತ್ತೆ ನೀರು, ಏನಿದರ ರಹಸ್ಯ?
ಜಾನುವಾರು ಹಾಗೂ ಕುರಿ ಮೆಕೆಗಳಿಗೆ ನೀರು ಕುಡಿಸಲು ಸಣ್ಣ ಸೇವೆ ಮಾಡುತ್ತಿದ್ದೆನೆ.ಸರಕಾರದಿಂದ ಯಾವುದೇ ಸಹಾಯ ಪಡೆಯದೇ ನೀರುನ ಅನುಕೂಲ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಈಗ ಧರ್ಮ ದಂಗಲ್ ನಡೆಯುತ್ತಿದೆ. ಆದರೆ, ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಅಬ್ದುಲ್ ಗಫರ್ ಯಾವುದೇ ಧರ್ಮ ಸಂಘರ್ಷದ ಬಗ್ಗೆ ವಿಚಾರ ಮಾಡದೇ ಮೂಕ ಪ್ರಾಣಿಗಳ ನೀರಿನ ದಾಹ ತಣಿಸುವ ಕಾರ್ಯ ಮಾಡುತ್ತಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ