ಬೆಂಗಳೂರು ಆಟೊದಲ್ಲಿ ಎಬಿಡಿ ಕುಟುಂಬ, 'ಈ ಸಲ ಕಪ್​ ನಮ್ದೆ'

news18
Updated:April 28, 2018, 2:04 PM IST
ಬೆಂಗಳೂರು ಆಟೊದಲ್ಲಿ ಎಬಿಡಿ ಕುಟುಂಬ, 'ಈ ಸಲ ಕಪ್​ ನಮ್ದೆ'
Image: Instagram
news18
Updated: April 28, 2018, 2:04 PM IST
ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಪೋಟಕ ಬ್ಯಾಟ್ಸ್​ಮನ್​ನಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್‌ ಇದೀಗ ಕಟುಂಬದೊಂದಿಗೆ ರಿಕ್ಷಾದಲ್ಲಿ ಬೆಂಗಳೂರು ಸುತ್ತಿದ್ದು, ಅವರ ತೆಗೆದ ವೀಡಿಯೋ ವೈರಲ್​ ಆಗಿದೆ.

ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಕ್ರೀಡಾಂಗಣದ ಹೊರಗು ರಂಜಿಸುತ್ತಿರುವ ಎಬಿಡಿ ಚೆನ್ನೈ ವಿರುದ್ಧದ ಪಂದ್ಯದ ಬಳಿಕ ನಗರದ ವಿವಿದೆಡೆ ಆಟೋದಲ್ಲಿ ಸಂಚರಿಸಿದ್ದಾರೆ. ತನ್ನ ಪತ್ನಿ ಡೇನಿಯಲ್ ಹಾಗೂ ಮಗ ಅಬ್ರಾಹಂ ಜತೆ ನಗವರ ಸುತ್ತಿದ ಎಬಿಡಿ ಅಭಿಮಾನಿಗಳೊಂದಿಗೂ ಕೆಲ ಕಾಲ ಎಂಜಾಯ್​ ಮಾಡಿದ್ದಾರೆ.
A post shared by Sara (@virushka_folyf) on
Loading...ಅಲ್ಲದೇ ಐಪಿಎಲ್​ ಜ್ವರ ಆರಂಭವಾದಾಗಿನಿಂದಲೂ ಬೆಂಗಳೂರು ಅಭಿಮಾನಿಗಳ ಘೋಷ ವಾಕ್ಯವಾಗಿರುವ ಈ ಸಲ ಕಪ್​ ನಮ್ದೆ ಎಂಬ ಡೈಲಾಗ್​ನ್ನು ಅಭಿಮಾನಿಗಳೊಂದಿಗೆ ಸೇರಿಕೊಂಡು ಹೇಳಿದ್ದಾರೆ. ಇದೇ ವೇಳೆ ಎಬಿಡಿ ಪತ್ನಿ ಹಾಗೂ ಮಗ ಕೂಡಾ ತಮ್ಮ ನೆಚ್ಚಿನ ಆಟಗಾರನಿಗೆ ಸಾಥ್​ ನೀಡಿದ್ದು ಎಲ್ಲರೂ ಜೋರಾಗಿ ಈ ಸಲ ಕಪ್‌ ನಮ್ದೆ ಎಂದು ಕೂಗಿದ್ದಾರೆ.

ಭಾನುವಾರದಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಲ್ಕತ್ತಾ ವಿರುದ್ಧ ಆರ್​ಸಿಬಿ ಪಂದ್ಯದಲ್ಲಿ ಎಬಿಡಿ ಆಡಲಿದ್ದು ಇದಕ್ಕೂ ಮುನ್ನ ಎಬಿಡಿ ತನ್ನ ಕಟುಂಬಕ್ಕಾಗಿ ಕೆಲ ಸಮಯ ಮೀಸಲಿರಿಸಿ ನಗರ ಸುತ್ತುವಲ್ಲಿ ಮಗ್ನರಾಗಿದ್ದಾರೆ.
First published:April 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ