Viral Video: 100% ಬರ್ತೀನಿ, 1 ಪರಾಠಾ ತಿನ್ನುತ್ತಿರುವೆ ಎಂದ ಉಬರ್ ಚಾಲಕ! ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ

ಒಬ್ಬ ಚಾಲಕ, ಪ್ರಯಾಣಿಕರೊಬ್ಬರು ಕ್ಯಾಬ್ ಬುಕ್ ಮಾಡಿ ಸಮಯಕ್ಕೆ ಸರಿಯಾಗಿ ತಲುಪದೆ ಇದ್ದುದಕ್ಕೆ ಪ್ರಾಮಾಣಿಕವಾದ ಕಾರಣ ಹೇಳಿದ್ದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಆ ಚಾಲಕ ಈಗ ಬಯಸದೆ ಪ್ರಸಿದ್ಧತೆಯನ್ನು ಪಡೆಯುತ್ತಿದ್ದಾನೆಂದೇ ಹೇಳಬಹುದಾಗಿದೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
ಈಗೀಗ ಬೆಂಗಳೂರು (Bengaluru), ದೆಹಲಿ (Delhi), ಮುಂಬೈಗಳಂತಹ (Mumbai) ಮಹಾನಗರಗಳಲ್ಲಿ ಕ್ಯಾಬ್ (Cab) ಸೇವೆ ಪಡೆಯುವುದಕ್ಕಿಂತ ಅದನ್ನು ಪಡೆದು ಅದರಲ್ಲಿ ಯಶಸ್ವಿಪೂರಕವಾಗಿ ಯಾವುದೇ ಅಡೆ-ತಡೆಗಳಿಲ್ಲದೆ ಪ್ರಯಾಣವನ್ನು ಸುಖಾಂತ್ಯಗೊಳಿಸುವುದು ಒಂದು ರೀತಿಯ ಸವಾಲಿನ ಚಟುವಟಿಕೆಯಾದಂತಾಗುತ್ತಿರುವುದು ಇತ್ತೀಚಿನ ಕೆಲ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳಿಂದ ಹೇಳಬಹುದಾಗಿದೆ. ಕಳೆದ ಬಾರಿ ಅಷ್ಟೇ ನಾವು ನಿಮಗೆ ಒಬ್ಬರು ಓಲಾ ಕ್ಯಾಬ್ (Ola Cabs) ಒಂದನ್ನು ಬೆಂಗಳೂರು-ಮೈಸೂರು ಮಧ್ಯೆ ಕುಟುಂಬದೊಂದಿಗೆ ಸಂಚರಿಸಲೆಂದು ಬುಕ್ (Book) ಮಾಡಿ ತದನಂತರ ಆ ಚಾಲಕ ಹಣ ಪಾವತಿ ಮಾಡಬೇಕಾಗಿದ್ದ ಹಿನ್ನೆಲೆಯಲ್ಲಿ ಕೆಲ ದ್ವಿಚಕ್ರ ವಾಹನ (Two wheelers) ಸವಾರರು ಮಾರ್ಗ ಮಧ್ಯೆಯೇ ಕ್ಯಾಬ್ ತಡೆದು ಅದರಿಂದ ಪ್ರಯಾಣಿಕ ಕುಟುಂಬದವರನ್ನು ಹೊರಗಿಳಿಸಿದ್ದನ್ನು ಕೇಳಿರಬಹುದು.

ಇದಲ್ಲದೆ ಅದೆಷ್ಟೋ ಬಾರಿ ಕ್ಯಾಬ್ ಬುಕ್ ಮಾಡಿದರೂ ಬರದೆ ಇರುವ ಅಥವಾ ಚಾಲಕರು ನಿಗದಿಯಾಗಿದ್ದಕ್ಕಿಂತ ದುಪ್ಪಟ್ಟು ಹಣ ಕೇಳಿರುವ, ಎಸಿ ಆನ್ ಮಾಡದಿರುವ ಅನೇಕ ದೂರುಗಳನ್ನು ಕೇಳಿದ್ದೇವೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋ
ಈ ಮಧ್ಯೆ ಇನ್ನೊಂದು ಪ್ರಸಿದ್ಧ ದೂರೆಂದರೆ ಕ್ಯಾಬ್ ಬುಕ್ ಮಾಡಿದ ಮೇಲೆಯೂ ಸಮಯಕ್ಕೆ ಸರಿಯಾಗಿ ಅಥವಾ ಚಾಲಕರು ಬಾರದೆ ಇರುವುದು ಸಹ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ.ಆದರೆ, ಇಂತಹ ಸಂದರ್ಭದಲ್ಲೂ ಒಬ್ಬ ಚಾಲಕ, ಪ್ರಯಾಣಿಕರೊಬ್ಬರು ಕ್ಯಾಬ್ ಬುಕ್ ಮಾಡಿ ಸಮಯಕ್ಕೆ ಸರಿಯಾಗಿ ತಲುಪದೆ ಇದ್ದುದಕ್ಕೆ ಪ್ರಾಮಾಣಿಕವಾದ ಕಾರಣ ಹೇಳಿದ್ದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಆ ಚಾಲಕ ಈಗ ಬಯಸದೆ ಪ್ರಸಿದ್ಧತೆಯನ್ನು ಪಡೆಯುತ್ತಿದ್ದಾನೆಂದೇ ಹೇಳಬಹುದಾಗಿದೆ.

ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಿದ ಕಾರು ಚಾಲಕ
ಅಸಲಿಗೆ ಒಬ್ಬ ಮಹಿಳೆ ಉಬರ್ ಕ್ಯಾಬ್ ಒಂದನ್ನು ಬುಕ್ ಮಾಡಿದ್ದರು. ಆದರೆ, ಆ ಚಾಲಕ ಸಮಯಕ್ಕೆ ಸರಿಯಾಗಿ ತಲುಪದೆ ಇದ್ದಾಗ ಮಹಿಳೆಗೆ ಅನುಮಾನ ಬಂದು ಚಾಲಕನ ನಂಬರ್ ತೆಗೆದುಕೊಂಡು ಅವನೊಂದಿಗೆ ತನ್ನನ್ನು ಪಿಕ್ ಮಾಡಲು ಬರುವ ಬಗ್ಗೆ ಖಚಿತತೆ ಪಡೆಯಲು ಚಾಟ್ ಮಾಡಿದ್ದಾರೆ. ಈ ಸಮಯದಲ್ಲಿ ಉಬರ್ ಚಾಲಕನೂ ಸಹ ಮಹಿಳೆಯ ವಿಚಾರಣೆಯುಕ್ತ ಸಂದೇಶಕ್ಕೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಿದ್ದು ಅವನ ಈ ಸಂಭಾಷಣೆ ಈಗ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ:  Ratan Tata: ಬಾಡಿಗಾರ್ಡ್ಸ್ ಇಲ್ಲದೆಯೇ ತಾಜ್ ಹೋಟೆಲ್ ಗೆ ಬಂದ ರತನ್ ಟಾಟಾ! ವೀಡಿಯೋ ವೈರಲ್

ಈತ ಪ್ರತಿಕ್ರಿಯಿಸಿದ್ದು ಏನು ಗೊತ್ತಾ?
ಮಹಿಳೆ ತಾನು ಹಂಚಿಕೊಂಡಿರುವ ಚಾಟಿನ ಸ್ಕ್ರಿನ್ ಶಾಟ್ ನಲ್ಲಿ ಅವರಿಬ್ಬರ ಮಧ್ಯದ ಸಂಭಾಷಣೆ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಮೊದಲಿಗೆ ಚಾಲಕ ಬಾರದೆ ವಿಳಂಬವಾದಾಗ ಮಹಿಳೆ ಚಾಲಕನ ಮೊಬೈಲ್ ಸಂಖ್ಯೆ ಈ ರೀತಿ ಸಂದೇಶ ಕಳುಹಿಸುತ್ತಾರೆ, "ಆಪ್ ಆ ರಹೆ ಹೈ ನಾ" (ನೀವು ಬರುತ್ತಿದ್ದೀರಲ್ಲವೆ..?) ಅದಕ್ಕೆ ಪ್ರತಿಯಾಗಿ ಉಬರ್ ಚಾಲಕ ಈ ರೀತಿ ಸಂದೇಶ ಕಳುಹಿಸುತ್ತಾನೆ, "ಆವುಂಗಾ 100 ಪರ್ಸೆಂಟ್, ಏಕ್ ಪರಾಠಾ ಖಾರಹಾ ಹು, ಆಧಾ ಬಚಾ ಹೈ...ಸಚ್ಚಾಯಿ ಮೈನೆ ಬತಾ ದಿಯಾ" (ನೂರು ಪ್ರತಿಶತ ಖಂಡಿತವಾಗಿ ನಾನು ಬರುತ್ತೇನೆ, ಒಂದು ಪರಾಠಾ ತಿನ್ನುತ್ತಿರುವೆ, ಈಗ ಅರ್ಧ ಮಾತ್ರ ಉಳಿದಿದೆ....ಇದ್ದ ಸತ್ಯವನ್ನು ನಾನು ನಿಮಗೆ ಹೇಳಿರುವೆ) ಎಂದು ಬರೆದಿದ್ದಾನೆ.

ಚಾಲಕನ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಟ್ವಿಟ್ಟರ್ ಬಳಕೆದಾರರು
ಈ ಚಾಟ್ ಸಂಭಾಷಣೆಯನ್ನು ಆ ಮಹಿಳೆ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು ಅದೀಗ ವೈರಲ್ ಆಗುತ್ತಿರುವುದಲ್ಲದೆ ಅನೇಕ ಬಳಕೆದಾರರಿಂದ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳನ್ನು ಗಳಿಸುತ್ತಿದೆ ಎಂದು ಹೇಳಬಹುದಾಗಿದೆ.

ಈ ಚಾಟ್ ಶೇರ್ ಮಾಡಿಕೊಂಡ ಮಹಿಳೆಯೇ ಮೊದಲಿಗೆ ಟ್ವಿಟ್ಟರ್ನಲ್ಲಿ, "ಈ ರೀತಿಯ ಪ್ರಾಮಾಣಿಕತೆಯನ್ನು ನಾನು ನನ್ನ ಜೀವನದಲ್ಲಿ ಸಾಧಿಸಬಯಸುವೆ" ಎಂದು ಬರೆದುಕೊಂಡರೆ, ಅದಕ್ಕೆ ಪ್ರತ್ಯುತ್ತರವಾಗಿ ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ, ಬಾಲಿವುಡ್ ಚಿತ್ರವೊಂದರ ಹಾಸ್ಯರಸ ಉಕ್ಕಿಸುವಂತಹ ಸೀನ್ ಒಂದನ್ನು ಹಂಚಿಕೊಂಡು ಅದರ ಮೇಲೆ "ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ" ಎಂದು ಬರೆದಿರುವ ಸಂದೇಶವೊಂದನ್ನು ಲಗತ್ತಿಸಿದ್ದಾರೆ.

ಇದನ್ನೂ ಓದಿ:  Carpet Python: ಮನೆಯೊಳಗಿತ್ತು 4 ಬೃಹತ್ ಹೆಬ್ಬಾವು! ಶಾಕಿಂಗ್ ವಿಡಿಯೋ ವೈರಲ್

ಇನ್ನೊಬ್ಬ ಬಳಕೆದಾರರು ಕೊನೆಗೂ ಆ ಮಹಿಳೆಗೆ ಕ್ಯಾಬ್ ಸಿಕ್ಕಿತೆ ಹಾಗೂ ಆ ಚಾಲಕ ನುಡಿದಂತೆ ನಡೆದುಕೊಂಡನೇ ಎಂಬುದನ್ನು ಖಚಿತಪಡಿಸಿಕೊಳ್ಳಲು "ಆತ ಹೇಳಿದ ಹಾಗೆ ಬಂದನೇ..?" ಎಂದು ಪ್ರಶ್ನಿಸಿದ್ದು ಅದಕ್ಕೆ ಪ್ರತ್ಯುತ್ತರವಾಗಿ ಪೋಸ್ಟ್ ಹಂಚಿಕೊಂಡಿದ್ದ ಮಹಿಳೆ "ಹೌದು, ನಿಜವಾಗಿಯೂ ಆತ ಬಂದ" ಎಂಬ ಉತ್ತರ ನೀಡಿದ್ದಾರೆ. ಕೆಲವರು ಇದು ತುಂಬ ಮಜವಾಗಿರುವುದಾಗಿಯೂ ಇದನ್ನು ನೋಡಿದ ಮೇಲೆ ನಗು ತಡೇದುಕೊಳ್ಳಲಾಗುತ್ತಿಲ್ಲ ಎಂತಲೂ ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: