Aishwarya Rai: ಇವರು ಐಶ್ವರ್ಯಾ ರೈ ಬಚ್ಚನ್ ಅಲ್ವಾ? ಕನ್​​ಫ್ಯೂಸ್​​ ಆಗ್ಬೇಡಿ, ಅವರಂತೆ ಕಾಣ್ತಾರೆ ಅಷ್ಟೇ

ಇಲ್ಲೊಬ್ಬರು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರಂತೆಯೇ ಕಾಣುತ್ತಾರೆ. ದಿಟ್ಟೋ ಐಶ್ವರ್ಯಾ ಅವರಂತೆಯೇ ಇರುವ ಒಬ್ಬರನ್ನು ಇಂಟರ್ನೆಟ್ ಕಂಡುಕೊಂಡಿದೆ. ಆಶಿತಾ ಸಿಂಗ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಹೋಲಿಕೆಗಾಗಿ ಇತ್ತೀಚೆಗೆ ಟ್ರೆಂಡ್ ನಲ್ಲಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಹಾಗೆಯೇ ಕಾಣುವ ಆಶಿತಾ ಸಿಂಗ್

ಐಶ್ವರ್ಯಾ ರೈ ಬಚ್ಚನ್ ಹಾಗೆಯೇ ಕಾಣುವ ಆಶಿತಾ ಸಿಂಗ್

  • Share this:
ಒಬ್ಬ ವ್ಯಕ್ತಿಯಂತೆ (Person) ಇಡೀ ಜಗತ್ತಿನಲ್ಲಿ (World) ಏಳು ಜನರು ಇರುತ್ತಾರೆ ಅಂತ ನಾವು ಅನೇಕ ಬಾರಿ ಕೇಳಿರುತ್ತೇವೆ ಮತ್ತು ಕೆಲವೊಬ್ಬರು ದಿಟ್ಟೋ ನಾವು ನೋಡಿದ ವ್ಯಕ್ತಿಗಳಂತೆಯೇ ಇರುತ್ತಾರೆ. ಅರೇ.. ನಿಮ್ಮನ್ನು ಎಲ್ಲೋ ನೋಡಿದ್ದೆನಲ್ಲಾ ಅಂತ ನಮಗೆ ಬಹಳ ಸಾರಿ ಅನ್ನಿಸಿರುತ್ತದೆ. ಆದರೆ ಅವರು ಅವರಾಗಿರುವುದಿಲ್ಲ, ಅವರಂತೆ ಹೋಲುವ ಮುಖವನ್ನು (Face) ಹೊಂದಿರುತ್ತಾರಷ್ಟೆ. ಒಂದೇ ರೀತಿ ಕಾಣುವ ವ್ಯಕ್ತಿಗಳಲ್ಲಿ ಕೆಲವೊಮ್ಮೆ ಮುಖದಲ್ಲಿರುವ ಆ ಲಕ್ಷಣ ಒಂದೇ ಆಗಿರಬಹುದು ಮತ್ತು ಇನ್ನೂ ಕೆಲ ಸಂದರ್ಭದಲ್ಲಿ ಅವರ ಇಡೀ ದೇಹದ (Body) ರಚನೆಯೇ ಆ ವ್ಯಕ್ತಿಯಂತೆ ಕಾಣಬಹುದು.

ಸಿನೆಮಾ ತಾರೆಗಳಂತೆ ಕಾಣುವ ಕೆಲವು ವ್ಯಕ್ತಿಗಳು 
ಅದರಲ್ಲೂ ಕೆಲವರಂತೂ ಈ ಸಿನೆಮಾ ತಾರೆಗಳಂತೆ ಇರುತ್ತಾರೆ, ಇನ್ನೂ ಕೆಲವರು ಸ್ವಲ್ಪ ಅವರಂತೆ ಕಾಣುತ್ತಿದ್ದರೆ ಸಾಕು ಸ್ಟಾರ್ ಗಳ ನಕಲಿ ಅಂತೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಹೋಗಿ ಜನರನ್ನು ರಂಜಿಸುತ್ತಾರೆ ಮತ್ತು ಸ್ಥಳೀಯ ಆರ್ಕೇಸ್ಟ್ರಾದಲ್ಲಿ ಹಾಡು ಹೇಳಿ ರಂಜಿಸುತ್ತಾರೆ.

ಇದನ್ನೂ ಓದಿ: YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ

ನಮ್ಮ ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೆ ಅನೇಕ ಜನರು ಡಾ. ರಾಜ್ ಕುಮಾರ್ ಅವರ ಹಾಗೆ ಮಾತಾಡುವುದು, ಹಾಡು ಹೇಳುವುದು, ವಿಷ್ಣುವರ್ಧನ್ ಅವರ ಹಾಗೆ ನಡೆಯುವುದು, ಶಂಕರ್ ನಾಗ್ ಅವರಂತೆ ಡೈಲಾಗ್ ಹೇಳುತ್ತಾರೆ. ಬಾಲಿವುಡ್ ನ ಸಲ್ಮಾನ್ ಖಾನ್ ಅವರಂತೆ ಅನೇಕ ಮಂದಿ ದೇಹದಾರ್ಡ್ಯತೆಯನ್ನು ಬೆಳೆಸಿಕೊಂಡಿರುತ್ತಾರೆ. ಇನ್ನೂ ಕೆಲವರು ಶಾರುಕ್ ಖಾನ್ ಅವರಂತೆ ಇರುತ್ತಾರೆ.

ಐಶ್ವರ್ಯಾ ರೈ ಬಚ್ಚನ್ ಅವರಂತೆಯೇ ಕಾಣುವ ಆಶಿತಾ ಸಿಂಗ್
ಹೀಗೆ ಇಲ್ಲೊಬ್ಬರು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರಂತೆಯೇ ಕಾಣುತ್ತಾರೆ. ದಿಟ್ಟೋ ಐಶ್ವರ್ಯಾ ಅವರಂತೆಯೇ ಇರುವ ಒಬ್ಬರನ್ನು ಇಂಟರ್ನೆಟ್ ಕಂಡುಕೊಂಡಿದೆ. ಆಶಿತಾ ಸಿಂಗ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಹೋಲಿಕೆಗಾಗಿ ಇತ್ತೀಚೆಗೆ ಟ್ರೆಂಡ್ ನಲ್ಲಿದ್ದಾರೆ.

ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಗಳ ಕಾಮೆಂಟ್ ವಿಭಾಗವು "ಎಂತಹ ಹೋಲಿಕೆ" "ಐಶ್ವರ್ಯಾ ಪ್ರೋ ಮ್ಯಾಕ್ಸ್" ನಂತಹ ಕಾಮೆಂಟ್ ಗಳಿಂದ ತುಂಬಿದೆ.


ಇಂಟರ್ನೆಟ್ ಹೀಗೆ ಐಶ್ವರ್ಯ ರೈ ಬಚ್ಚನ್ ಅವರನ್ನು ಹೋಲುವ ಮಹಿಳೆಯನ್ನು ಕಂಡುಕೊಂಡಿರುವುದು ಇದೇನು ಮೊದಲನೆಯದಲ್ಲ ಬಿಡಿ. ಏಕೆಂದರೆ ಈ ಹಿಂದೆ ಸಹ ಅನೇಕರಿಗೆ ಹೀಗೆ ಲೇಬಲ್ ಮಾಡಿತ್ತು. ಇದರಲ್ಲಿ ಕೆಲವರು ದಿಟ್ಟೋ ಐಶ್ವರ್ಯಾ ಅವರಂತೆಯೇ ಇದ್ದರೆ, ಇನ್ನೂ ಕೆಲವರು ಸ್ವಲ್ಪ ಮಟ್ಟಿಗೆ ಅವರನ್ನು ಹೋಲುವವರಾಗಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಅವರನ್ನೇ ಹೋಲುವ ಕೆಲವು ಯುವತಿಯರು 
ಸಲ್ಮಾನ್ ಖಾನ್ ಅವರೊಂದಿಗೆ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರದಲ್ಲಿ ನಟಿಸಿದ ನಟಿ ಸ್ನೇಹಾ ಉಲ್ಲಾಳ್ ಕೂಡ ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಹೋಲಿಕೆ ಹೊಂದಿದ್ದಾರೆ. ಆಮ್ನಾ ಇಮ್ರಾನ್ ಎಂಬ ವೈದ್ಯಕೀಯ ವೃತ್ತಿಪರರು ಕೆಲವು ಸಮಯದ ಹಿಂದೆ ‘ಗುರು’ ಚಿತ್ರದ ನಟಿಯೊಂದಿಗಿನ ಹೋಲಿಕೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದರು.


View this post on Instagram


A post shared by Sneha Ullal (@snehaullal)
View this post on Instagram


A post shared by Aamna Imran (@aamna_imrann)


ಐಶ್ವರ್ಯಾ ರೈ ಬಚ್ಚನ್ ಅವರ ಸಿನೆಮಾಗಳು 
ಐಶ್ವರ್ಯಾ ರೈ ಬಚ್ಚನ್ ಅವರ ಇನ್ನೂ ಕೆಲವು ಲುಕ್ ಅಲೈಕ್ ಗಳು, ಅಂತರ್ಜಾಲದಿಂದ ಪ್ರಸಿದ್ಧರಾಗಿದ್ದಾರೆ. ಅನಿಲ್ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅವರೊಂದಿಗೆ 2018 ರ ‘ಫ್ಯಾನಿ ಖಾನ್’ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:  Nutty: 55 ಮಿಲಿಯನ್​ ಡಾಲರ್​ ಮುಂಡಾ ಮೋಚಿದ ಯೂಟ್ಯೂಬರ್​​! ಪೊಲೀಸರ ಮೊರೆ ಹೋದಾ ಬಳಕೆದಾರರು

ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟಿ ಐಶ್ವರ್ಯಾ ಅವರು ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ರಮ್, ಕಾರ್ತಿ, ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್, ಜಯಂ ರವಿ ಮತ್ತು ಐಶ್ವರ್ಯ ಲಕ್ಷ್ಮಿ ಸೇರಿದಂತೆ ಅನೇಕ ತಾರಾಗಣವನ್ನು ಈ ಚಿತ್ರ ಹೊಂದಿದೆ.
Published by:Ashwini Prabhu
First published: