ಬಾಯ್​ಫ್ರೆಂಡ್​ಗೆ Tattoo ಹಾಕಿ ಟ್ರೋಲ್​ ಆಗಿದ್ದ ಅಮೀರ್ ಖಾನ್​ ಮಗಳು Ira Khan

ಫಿಟ್ನೆಸ್​ ಕೋಚ್ ನುಪುರ್​ ಶಿಖಾರೆ ಎಂಬುವರನ್ನು ಅಮೀರ್ ಖಾನ್ ಮಗಳು ಐರಾ ಖಾನ್​ ಪ್ರೀತಿಸುತ್ತಿದ್ದಾರೆ. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ನುಪುರ್ ಶಿಖಾರೆ ಅವರು ಐರಾ ಜೊತೆಗಿನ ಒಂದು ನೆನಪನ್ನು ಮೆಲುಕು ಹಾಕಿದ್ದಾರೆ. 

ಬಾಯ್​ಫ್ರೆಂಡ್​ ನುಪುರ್​ ಶಿಖರೆ ಜೊತೆ ಅಮೀರ್ ಖಾನ್​ ಮಗಳು ಐರಾ ಖಾನ್​

ಬಾಯ್​ಫ್ರೆಂಡ್​ ನುಪುರ್​ ಶಿಖರೆ ಜೊತೆ ಅಮೀರ್ ಖಾನ್​ ಮಗಳು ಐರಾ ಖಾನ್​

  • Share this:
ಬಾಲಿವುಡ್​ನ ಪರ್ಫೆಕ್ಷನಿಸ್ಟ್​ ಅಮೀರ್ ಖಾನ್ ಅವರ ಮಗಳಿ ಐರಾ ಖಾನ್​ ತಮ್ಮ ಲವ್​ ಲೈಫ್​ ಹಾಗೂ ಬಾಯ್​ಪ್ರೆಂಡ್​ ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಐರಾ ಖಾನ್​ ಹೆಚ್ಚಾಗಿ ವೈಯಕ್ತಿಕ ವಿಷಯಗಳಿಂದಲೇ ಚರ್ಚೆಯ ವಿಷಯವಾಗಿರುತ್ತಾರೆ. ಮಿಶಾಲ್​ ಕೃಪಲಾನಿ ಎಂಬ ಯುವಕನೊಂದಿಗೆ ಐರಾ ಖಾನ್​​ ಡೇಟಿಂಗ್​ ಮಾಡುತ್ತಿದ್ದರು. ಈ ಜೋಡಿಯ ಫೋಟೋಗಳು ಈ ಹಿಂದೆ ವೈರಲ್​ ಆಗಿದ್ದವು. ಮೊದಲ ಬಾಯ್​ಫ್ರೆಂಡ್​ ಜೊತೆ ಬ್ರೇಕಪ್​ ಆದ ನಂತರ ಐರಾ ಖಾನ್​  ಹೊಸ ಬಾಯ್​ಫ್ರೆಂಡ್​ ಜತೆಗಿನ ಫೋಟೋಗಳು ವೈರಲ್​ ಆಗಿದ್ದವು. ಅಲ್ಲದೆ ಅವರ ಲವ್​ ಲೈಫ್​ ಕುರಿತಾಗಿ ಸಾಕಷ್ಟು ಗುಸು ಗುಸು ಆರಂಭವಾಗಿತ್ತು.ಐರಾ ಖಾನ್​ ಮತ್ತೆ ಪ್ರೀತಿಲಿ ಬಿದ್ದಿದ್ದಾರೆ  ಅನ್ನೋ ಸುದ್ದಿ ತುಂಬಾ ಸಮಯ ಹರಿದಾಡಿತ್ತು. ಅದಕ್ಕೆ ತಕ್ಕಂತೆ ಐರಾ ಖಾನ್​ ಕಳೆದ ಪ್ರೇಮಿಗಳ ದಿನದಂದು ತಮ್ಮ ಲವ್​ ಲೈಫ್​ ಕುರಿತಾಗಿ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಎಲ್ಲ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದರು.

ಫಿಟ್ನೆಸ್​ ಕೋಚ್ ನುಪುರ್​ ಶಿಖಾರೆ ಎಂಬುವರನ್ನು ಅಮೀರ್ ಖಾನ್ ಮಗಳು ಐರಾ ಖಾನ್​ ಪ್ರೀತಿಸುತ್ತಿದ್ದಾರೆ. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ನುಪುರ್ ಶಿಖಾರೆ ಅವರು ಐರಾ ಜೊತೆಗಿನ ಒಂದು ನೆನಪನ್ನು ಮೆಲುಕು ಹಾಕಿದ್ದಾರೆ.
View this post on Instagram


A post shared by Popeye ⚓ (@nupur_shikhare)


ಬಾಯ್​ಫ್ರೆಂಡ್​ಗಾಗಿ ಐರಾ ಖಾನ್​ ಅವರು ಈ ಹಿಂದೆ ಟ್ಯಾಟೂ ಆರ್ಟಿಸ್ಟ್​ ಆಗಿ ಬದಲಾಗಿದ್ದರು. ಒಂದು ವರ್ಷದ ಹಿಂದೆ ನುಪುರ್ ಅವರಿಗೆ ಅವರ ಮೊದಲ ಹಾಗೂ ಇಷ್ಟದ ಟ್ಯಾಟೂ ಹಾಕಿಕೊಟ್ಟಿದ್ದರಂತೆ ಐರಾ. ಆ ನೆನಪನ್ನು ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: Ira Khan: ಪ್ರೀತಿಸುವ ಹುಡುಗನಿಗೆ ಹೇರ್​ ಕಟ್​ ಮಾಡಿದ ಅಮೀರ್​ ಖಾನ್​ ಮಗಳು ಇರಾ ಖಾನ್​..!

ಐರಾ ಖಾನ್​ ತಮ್ಮ ಬಾಯ್​​ಫ್ರೆಂಡ್​ಗಾಗಿ ಟ್ಯಾಟ್​ ಆರ್ಟಿಸ್ಟ್​ ಆಗಿದ್ದಕ್ಕೆ ಆಗ ಟ್ರೋಲ್​ಗಳಿಗೆ ಬಲಿಯಾಗಿದ್ದರು. ಸಾಕಷ್ಟು ಮಂದಿ ಅಮೀರ್ ಖಾನ್​ ಮಗಳನ್ನು ಟೀಕಿಸಿದ್ದರು. ಆದರೆ ನುಪುರ್​ ಮಾತ್ರ ತನ್ನ ಜೀವನದಲ್ಲಿ ಸಿಹಿಯಾದ ನೆನಪು ಕೊಟ್ಟ ಐರಾಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು, ಪ್ರೀತಿಸುವ ಹುಡುಗನಿಗೆ ಅಮೀರ್​ ಖಾನ್​ ಮಗಳು ಪ್ರೀತಿಯಿಂದ ಹೇರ್ ಕಟ್​ ಮಾಡಿದ್ದರು. ಆ ಫೋಟೋವನ್ನು ನುಪುರ್​ ಗ್ರೂಮಿಂಗ್​ ಸೆಶನ್​ ಎಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Ira Khan: ಮತ್ತೆ ಪ್ರೀತಿಲಿ ಬಿದ್ದ ಅಮೀರ್​ ಖಾನ್ ಮಗಳು: ಇರಾ ಖಾನ್​ ಡೇಟಿಂಗ್​ ಮಾಡುತ್ತಿರುವ ಹುಡುಗ ಇವರೇ..!

ಅಮೀರ್ ಖಾನ್​ ಮಗಳು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದು, ಈ ಹಿಂದೆ ಒಂಧು ನಾಟಕವನ್ನು ನಿರ್ದೇಶಿಸಿದ್ದರು. ಆ ನಾಟಕ ಬೆಂಗಳೂರಿನಲ್ಲೂ ಪ್ರದರ್ಶನ ಕಂಡಿತ್ತು. ಐರಾ ಖಾನ್​ ಮಾಡೆಲಿಂಗ್ ಜೊತೆಗೆ ರಂಗಭೂಮಿ ಚಟುವಟಿಕೆಗಳಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ.

ಅಮೀರ್ ಖಾನ್ ಅವರು ತಮ್ಮ ಎರಡನೇ ವಿವಾಹದಿಂದ ಹೊರ ಬಂದ ಕಾರಣಕ್ಕೆ ಸುದ್ದಿಯಲ್ಲಿದ್ದರು. ಕಿರಣ್​ ರಾವ್​ ಅವರ ಜೊತೆಗೆ ವಿಚ್ಛೇದನದ ವಿಷಯವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಅಮೀರ್ ಖಾನ್​ ತಮ್ಮ ಸಿನಿಮಾ ಲಾಲ್ ಸಿಂಗ್ ಚಡ್ಡಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್​ ನಟ ನಾಗ ಚೈತನ್ಯ ಅವರೂ ನಟಿಸಿದ್ದಾರೆ. ಇದರ ಜೊತೆಗೆ ಅಮೀರ್ ಖಾನ್ ಅವರ ಮೂರನೇ ಮದುವೆ ಸುದ್ದಿ ಸಹ ಹರಿದಾಡುತ್ತಿದೆ.
Published by:Anitha E
First published: