Aamir Khan-Kiran Rao: ಡಿವೋರ್ಸ್ ಆದ್ರೆ ಏನಾಯ್ತು, ಒಟ್ಟಿಗೆ ಡ್ಯಾನ್ಸ್ ಮಾಡ್ಬಾರ್ದಾ ? ಆಮಿರ್ ಖಾನ್ ದಂಪತಿಯ ಹೊಸಾ ನೃತ್ಯ ನೋಡಿ !

ಆಮಿರ್ ಖಾನ್ ಮತ್ತು ಕಿರಣ್ ರಾವ್ ಡಿವೋರ್ಸ್ ಆಗಿದ್ದಕ್ಕೆ ಇಷ್ಟೊಂದು ಖುಷಿಯಾಗಿದ್ದಾರಾ ? ವಿಚ್ಛೇದನದ ನಂತರ ಈ ಜೋಡಿಯ ಮೊದಲ ಫೋಟೋ ನೋಡಿ ಜನರೆಲ್ಲಾ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂದ್ಹಾಗೆ ಈ ಡ್ಯಾನ್ಸ್ ಯಾಕೆ ಮಾಡಿದ್ರು ಅನ್ನೋದು ಸ್ವಲ್ಪ ಇಂಟರೆಸ್ಟಿಂಗ್ ವಿಚಾರ.

ಆಮಿರ್ ಖಾನ್ - ಕಿರಣ್ ರಾವ್

ಆಮಿರ್ ಖಾನ್ - ಕಿರಣ್ ರಾವ್

  • Share this:

Aamir Khan Divorce: ಇತ್ತೀಚೆಗೆ ವಿಚ್ಛೇದನೆಯನ್ನು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಕಾರಣದಿಂದ ಸುದ್ದಿಯಲ್ಲಿದ್ದ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಮತ್ತು ಕಿರಣ್ ರಾವ್ ಲಡಾಖ್ನಲ್ಲಿ ತಮ್ಮ ಲಾಲ್ಸಿಂಗ್ಚಡ್ಡಾ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ ನಂತರ ಸ್ಥಳೀಯರ ಜೊತೆಗೆ ಲಡಾಖ್ ಜನರ ಜಾನಪದ ಹಾಡಿಗೆ ಅವರೊಂದಿಗೆ ಜೊತೆಗೂಡಿ ಕುಣಿದು ಕುಪ್ಪಳಿಸಿದರು. ಆಮೀರ್ ಖಾನ್ ಮತ್ತು ಕಿರಣ್ ರಾವ್ ಇಬ್ಬರು ತಮ್ಮ ಲಾಲ್ ಸಿಂಗ್ ಚಡ್ಡಾ ಚಿತ್ರದ ಶೂಟಿಂಗ್ ಮಾಡಲು ಲಡಾಖ್ನ ವಾಖಾ ಗ್ರಾಮಕ್ಕೆ ಚಿತ್ರತಂಡವು ಬಂದಾಗ ಅಲ್ಲಿನ ಸ್ಥಳೀಯರ ಒತ್ತಾಯದ ಮೇರೆಗೆ ಇಬ್ಬರೂ ಲಡಾಖ್ ಜಾನಪದ ಶೈಲಿಯ ಉಡುಗೆಯನ್ನು ತೊಟ್ಟು ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಲಾಲ್ ಸಿಂಗ್ ಚಡ್ಡಾ ಚಿತ್ರತಂಡವನ್ನು ವಾಖಾ ಗ್ರಾಮದವರು ತುಂಬಾ ಹೃದಯ ಪೂರ್ವಕವಾಗಿ ಸ್ವಾಗತಿಸಿದ್ದು ತುಂಬಾ ವಿಶೇಷವಾಗಿತ್ತು.


ವಿಡಿಯೋದಲ್ಲಿ ಇತ್ತೀಚೆಗೆ ವಿಚ್ಛೇದನೆಯನ್ನು ಪಡೆದಂತಹ ಆಮೀರ್ ಮತ್ತು ಕಿರಣ್ ರಾವ್‌ ಇಬ್ಬರೂ ಜೊತೆಗೂಡಿ ವಾಖಾ ಗ್ರಾಮದಲ್ಲಿ ಜಾನಪದ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನಾವು ನೋಡಬಹುದಾಗಿದೆ. ಇಬ್ಬರೂ ಲಡಾಖಿ ಉಡುಗೆಗಳಾದ ಕೋಸ್ ಮತ್ತು ಸುಲ್ಮಾವನ್ನು ತೊಟ್ಟು ಗೊಂಬಾ ಸುಮ್ಶಾಕ್ ಜನಪ್ರಿಯವಾದ ನೃತ್ಯಕ್ಕೆ ಹೆಜ್ಜೆ ಹಾಕಿರುವುದನ್ನು ಕಾಣಬಹುದಾಗಿದೆ.


ಸರೋಖ ಥಾಂಗ್ ವಾಖಾ ಗ್ರಾಮದ ಜನರು 3 ಈಡಿಯಟ್ಸ್ ಖ್ಯಾತಿಯ ಆಮೀರ್ ಖಾನ್ ತಮ್ಮ ಚಿತ್ರತಂಡದವರೊಡನೆ ಬಂದಾಗ ತುಂಬಾ ಆದರದಿಂದ ಬರಮಾಡಿಕೊಂಡಿದ್ದು ಅವರಿಗೆ ಬುಧವಾರ ರಿಸೆಪ್ಶನ್ ನೀಡಿದರು. ಅವರ ಈ ಪ್ರೀತಿ ವಿಶ್ವಾಸಕ್ಕೆ ಮತ್ತು ಆತಿಥ್ಯಕ್ಕೆ ಆಮೀರ್ ಖಾನ್ ಗ್ರಾಮದ ಜನರಿಗೆ ಧನ್ಯವಾದಗಳನ್ನು ತಿಳಿಸಿದರು. ಮಕ್ಕಳ ಜೊತೆಯಲ್ಲೂ ಅವರು ನೃತ್ಯ ಮಾಡಿದ್ದು ಗ್ರಾಮಸ್ಥರಲ್ಲಿ ತುಂಬಾ ಸಂತೋಷವನ್ನುಂಟು ಮಾಡಿತ್ತು.


ಇದನ್ನೂ ಓದಿ: Aamir Khan Divorce: ಆಮಿರ್ ಖಾನ್​ಗೆ ತಿನ್ನುವ ಖಾಯಿಲೆ ಇದೆ, ಆತ ಸ್ನಾನ ಮಾಡಲ್ಲ: ಕಿರಣ್ ರಾವ್ !

ಲಾಲ್ ಸಿಂಗ್ ಚಡ್ಡಾ ಚಿತ್ರದ ಶೂಟಿಂಗ್ ಮಾಡಲು ಲಡಾಖ್ಗೆ ಬಂದಂತ ಆಮೀರ್ ಖಾನ್ ಪ್ರೊಡಕ್ಷನ್ಸ್ ಚಿತ್ರತಂಡವು ಚಿತ್ರೀಕರಣ ಮುಗಿಸಿದ ನಂತರ ಕಸವನ್ನು ಹಾಕಿ ಸ್ವಚ್ಛ ಮಾಡದೇ ಹಾಗೆಯೇ ಹೋಗಿದ್ದಾರೆ ಎಂದು ಕೆಲವರು ಟ್ವಿಟ್ಟರ್ನಲ್ಲಿ ದೂರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಮೀರ್ ಖಾನ್ ಪ್ರೊಡಕ್ಷನ್ಸ್ "ನಮ್ಮಲ್ಲಿ ಚಿತ್ರದ ಶೂಟಿಂಗ್ ನಂತರ ಆ ಸ್ಥಳವನ್ನು ಸ್ವಚ್ಛ ಮಾಡಲು ಬೇರೆ ತಂಡವಿದ್ದು, ಎಲ್ಲಿಯೂ ಚಿತ್ರತಂಡದಿಂದ ಕಸವನ್ನು ಹಾಗೆಯೇ ಬಿಟ್ಟು ಹೋಗಲ್ಲ, ಶೂಟಿಂಗ್ ಮಾಡಿದ ಜಾಗವನ್ನು ಸ್ವಚ್ಛಗೊಳಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.


ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾವು ಆಸ್ಕರ್ ವಿಜೇತ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ ಎನ್ನುವುದರ ಹಿಂದಿ ರಿಮೇಕ್ ಆಗಿದ್ದು, 1994ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರದಲ್ಲಿ ಟಾಮ್ ಹಾಂಕ್ಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಆಮೀರ್ರೊಂದಿಗೆ ಕರೀನಾ ಕಪೂರ್ ಸಹ ಅಭಿನಯಿಸುತ್ತಿದ್ದು, ಚಿತ್ರದ ಬಿಡುಗಡೆಯ ದಿನಾಂಕವನ್ನು ಎಲ್ಲಿಯೂ ಬಾಯಿ ಬಿಟ್ಟಿಲ್ಲ. 15 ವರ್ಷಗಳ ವೈವಾಹಿಕ ಜೀವನದ ನಂತರ ಆಮೀರ್ ಮತ್ತು ಕಿರಣ್ ಇಬ್ಬರು ವಿಚ್ಛೇದನೆಯನ್ನು ಪಡೆಯಲು ನಿರ್ಧರಿಸಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: