Video: ಇವ್ರೇನು ರಾಕಿ ಭಾಯ್‌ನಾ, ರಾಕಿ ಭಾಯ್ ತಮ್ಮನಾ? ಸೆಲ್ಫಿಗಾಗಿ ಓಡೋಡಿ ಬಂದವಳು ಫುಲ್ ಕನ್ಫ್ಯೂಸ್!

ಯಶ್​ ಕೆಜಿಎಫ್​ ಸಿನಿಮಾ ನೋಡಿವರಿಗೆ ಯಶ್​ ಲುಕ್​ ಬಗ್ಗೆ ಚೆನ್ನಾಗಿ ಪರಿಚಯವಿರುತ್ತದೆ. ಕೆಜಿಎಫ್​ ಹೊಸ ಟ್ರೆಂಡ್​ ಸೃಷ್ಟಿಸಿದ ಸಿನಿಮಾ. ಅದರಂತೆಯೇ ಈ ಸಿನಿಮಾದಲ್ಲಿ ಯಶ್​ ನಟನೆ ಮಾತ್ರವಲ್ಲ, ಅವರ ಸ್ಟೈಲಿಶ್​ ಹೇರ್​ ಸ್ಟೈಲ್​ ಮತ್ತು ಗಡ್ಡ ಕೂಡ ಟ್ರೆಂಡ್​ ಹುಟ್ಟುಹಾಕಿದೆ.

ಯಶ್​ ಅವರಂತೆ ಕಾಣುವ ವ್ಯಕ್ತಿ

ಯಶ್​ ಅವರಂತೆ ಕಾಣುವ ವ್ಯಕ್ತಿ

  • Share this:
    ಸಿನಿಮಾ ತಾರೆಯರು ಅಥವಾ ಸೆಲೆಬ್ರಿಟಿಗಳನ್ನು (Celebrity) ಕಂಡಾಗ ಜನರು ಅವರ ಬಳಿಗೆ ಓಡೋಡಿ ಬರುವುದು ಸಹಜ. ಅದರಲ್ಲೂ ಖ್ಯಾತ ಸಿನಿಮಾ ತಾರೆಯರನ್ನು (Film Actor) ಕಂಡಾಗ ಹತ್ತಿರ ಬಂದು ಮೊದಲಿಗೆ ಕಿಸೆಯಿಂದ ಮೊಬೈಲ್​ ತೆಗೆದು ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ಇರಲಾರರು. ಅದರಂತೆ ರಾಕಿಂಗ್​​​ ಸ್ಟಾರ್​ ಯಶ್​ (Rocking Star Yash) ಇದ್ದಕ್ಕಿಂದ್ದಂತೆಯೇ ಸಿಕ್ಕಿದರೆ ಹೇಗಿರುತ್ತದೆ?. ಇಲ್ಲೊಬ್ಬಳು ಹುಡುಗಿ ರಾಕಿಂಗ್​ ಸ್ಟಾರ್​ ಯಶ್​ ನೋಡಿ ಕಾರು ನಿಲ್ಲಿಸಿ ಓಡೋಡಿ ಬರುತ್ತಾಳೆ. ಮಾತ್ರವಲ್ಲದೆ, ಕೈಯಲ್ಲಿದ್ದ ಮೊಬೈಲ್​ ಹಿಡಿದುಕೊಂಡು ರಾಕಿ ಭಾಯ್​​ಯೊಂದಿಗೆ ಸೆಲ್ಫಿ (Selfie) ಕ್ಲಿಕ್ಕಿಸಲು ಮುಂದಾಗುತ್ತಾಳೆ. ಆದರೆ ಆಮೇಲೆ ಗೊತ್ತಾಗುತ್ತದೆ ಅದು ರಾಕಿಂಗ್​​ ಸ್ಟಾರ್​ ಅಲ್ಲ, ಅವರಂತೆಯೇ ಇರುವ  ವ್ಯಕ್ತಿ ಎಂದು.

    ಹೌದು. ಇಂತಹದೊಂದು ತಮಾಷೆಯ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗುತ್ತಿದೆ. ಯುವತಿಯೊಬ್ಬಳು ಕನ್ಫ್ಯೂಸ್​ ಆಗಿ ಯಶ್​ ಎಂದು ತಿಳಿದುಕೊಂಡು ಕಾರಿನಿಂದ ಇಳಿದು ವ್ಯಕ್ತಿ ಇರುವ ಕಾರಿನ ಬಳಿ ಓಡೋಡಿ ಬರುತ್ತಾಳೆ. ಈ ವೇಳೆ ಮುಖ ನೋಡುವಾಗ ಕೊಂಚ ಅನುಮಾನವು ಆಕೆಗೆ ಕಾಡುತ್ತದೆ. ಆದರೆ ಕಾರಿನಲ್ಲಿದ್ದ ವ್ಯಕ್ತಿ ನಾನು ಯಶ್​ ಅಲ್ಲ ಎಂದಾಗ ಆಕೆಗೆ ಸುಮ್ಮನಾಗುತ್ತದೆ.

    ಯಶ್​ ಕೆಜಿಎಫ್​ ಸಿನಿಮಾ ನೋಡಿವರಿಗೆ ಯಶ್​ ಲುಕ್​ ಬಗ್ಗೆ ಚೆನ್ನಾಗಿ ಪರಿಚಯವಿರುತ್ತದೆ. ಕೆಜಿಎಫ್​ ಹೊಸ ಟ್ರೆಂಡ್​ ಸೃಷ್ಟಿಸಿದ ಸಿನಿಮಾ. ಅದರಂತೆಯೇ ಈ ಸಿನಿಮಾದಲ್ಲಿ ಯಶ್​ ನಟನೆ ಮಾತ್ರವಲ್ಲ, ಅವರ ಸ್ಟೈಲಿಶ್​ ಹೇರ್​ ಸ್ಟೈಲ್​ ಮತ್ತು ಗಡ್ಡ ಕೂಡ ಟ್ರೆಂಡ್​ ಹುಟ್ಟುಹಾಕಿದೆ. ಇಂದು ಅನೇಕರು ಯಶ್​​ ಅವರಂತೆ ಕಾಣಲು ಕೂದಲು ಬಿಡುತ್ತಿದ್ದಾರೆ. ಜೊತೆಗೆ ಉದ್ದನೆಯ ಗಡ್ಡ ಕೂಡ ಬಿಡುತ್ತಿದ್ದಾರೆ.


    ಫಣೀಂದ್ರ ಸುಬ್ರಮಣ್ಯಂ ಎಂಬ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್​ ಆಗಿದೆ. ಮೇಲ್ನೋಟಕ್ಕೆ ಈ ಖಾತೆ ಹೊಂದಿರುವ ವ್ಯಕ್ತಿ ಕಾರು ಚಲಾಯಿಸುತ್ತಿರುವಂತೆ ಕಾಣುತ್ತದೆ. ನೋಡಲು ಯಶ್​ ಅವರಂತೆಯೇ ಉದ್ದನೆಯ ಕೂದಲು, ಉದ್ದನೆಯ ಗಡ್ಡ ಬಿಟ್ಟುಕೊಂಡಿರುತ್ತಾರೆ. ಜೊತೆಗೆ ಕಣ್ಣಿಗೆ ಕನ್ನಡಕ ಹಾಕಿಕೊಳ್ಳುವ ಮೂಲಕ ನೋಡಲು ಮೇಲ್ನೋಟಕ್ಕೆ ಯಶ್​ ಅವರಂತೆಯೇ ಕಾಣಿಸುತ್ತಾರೆ. ಈ ವೇಳೆ ಮುಸ್ಲಿಂ ಯುವತಿಯೊಬ್ಬಳು ಕಾರಿನಲ್ಲಿರುವುದು ಯಶ್​ ಎಂದು ತಿಳಿದು ತಾನಿದ್ದ ಕಾರನ್ನು ನಿಲ್ಲಿಸಿ ಇತ್ತ ಓಡೋಡಿ ಬರುತ್ತಾಳೆ.

    ನಾನು ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಬಹುದಾ, ನಾನು ನಿಮ್ಮ ದೊಡ್ಡ ಫ್ಯಾನ್​ ಎಂದು ಯಶ್​ನಂತೆಯೇ ಕಾಣುವ ವ್ಯಕ್ತಿ ಬಳಿ ಹೇಳುತ್ತಾಳೆ. ಆದರೆ ಆತ ನಾನು ಯಶ್​ ಅಲ್ಲ ಎಂದು ಹೇಳುತ್ತಾನೆ. ಅದಕ್ಕೆ ಆಕೆ ಮತ್ತೆ ಯಾರು ಎಂದಾಗ ಕಾರಿನ ಇತ್ತ ಕಡೆಯಲ್ಲಿದ್ದ ವ್ಯಕ್ತಿ ಯಶ್​ ತಮ್ಮ ಎಂದು ಹೇಳಿದ್ದಾನೆ.






    ದೃಶ್ಯದಲ್ಲಿ ಕಾಣುವಂತೆ ಬೆಳಗ್ಗಿನಿಂದ ನೋಡದವರು ಈ ವ್ಯಕ್ತಿಯನ್ನು ಯಶ್​ ಅಂತ ಕನ್ಫ್ಯೂಶ್​ ಆಗಿ ಮಾತನಾಡಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಚೆನ್ನಾಗಿ ರೆಕಾರ್ಡ್​ ಆಗಿದೆ. ಅದರಲ್ಲೂ ಯಶ್​ ಎಂದು ಕಾಣುವ ವ್ಯಕ್ತಿಯನ್ನು ಫಣೀಂದ್ರ ಸುಬ್ರಮಣ್ಯಂ ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 7 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಜೊತೆಗೆ ಕಾಮೆಂಟ್​ ಕೂಡ ಬರೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ.
    Published by:Harshith AS
    First published: