Sleeping Contest: ಅಬ್ಬಬ್ಬಬ್ಬಬ್ಬಾ, ಲಾಟ್ರಿ! ನಿದ್ದೆ ಮಾಡಿ 5 ಲಕ್ಷ ರೂಪಾಯಿ ಗೆದ್ದ ಯುವತಿ! ಮಲಗೋದು ಸುಲಭ ಅಲ್ಲ ಗುರು

ಕೆಲವು ಹಂತದ ಪರೀಕ್ಷೆಗಳ ನಂತರ, ನಾಲ್ಕು ಜನರನ್ನು ಫೈನಲ್‌ಗೆ ಆಯ್ಕೆ ಮಾಡಲಾಯಿತು. ಆ ನಾಲ್ವರಲ್ಲಿ ತ್ರಿಪರ್ಣ ಕೂಡ ಇದ್ದಳು. ಫೈನಲಿ ತ್ರಿಪರ್ಣ ಸ್ಪರ್ಧೆಯಲ್ಲಿ ಗೆದ್ದಳು. ಅವರು 100 ರಲ್ಲಿ 95 ಅಂಕಗಳನ್ನು ಗಳಿಸಿದರು ಮತ್ತು ಅತ್ಯುತ್ತಮ ಸ್ಲೀಪರ್ ಪ್ರಶಸ್ತಿಯನ್ನು ಗೆದ್ದರು!

ನಿದ್ದೆ ಮಾಡುವ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಯುವತಿ

ನಿದ್ದೆ ಮಾಡುವ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಯುವತಿ

  • Share this:
ಪಶ್ಚಿಮ ಬಂಗಾಳ: ಸಾಧಕರು (Achievers) ನಿದ್ದೆ ಮಾಡೋದಿಲ್ಲ, ಲೈಫಲ್ಲಿ (Life) ಏನಾದರು ಸಾಧನೆ (Achievement) ಮಾಡಬೇಕು ಅಂತಿದ್ದರೆ ನಿದ್ದೆ (Sleep) ಮಾಡುವುದನ್ನು ಬಿಡಬೇಕು ಅಂತಾರೆ. ಆದ್ರೆ ನಿದ್ದೆ ಮಾಡಿಯೇ ಸಾಧನೆ ಮಾಡ್ತಾರೆ ಅಂದ್ರೆ ನೀವು ನಂಬುತ್ತೀರಾ? ಪಶ್ಚಿಮ ಬಂಗಾಳದಲ್ಲಿ (West Bengal) ಯುವತಿಯೊಬ್ಬಳು ನಿದ್ದೆ ಮಾಡಿ ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನು ಗೆದ್ದಿದ್ದಾಳೆ. ಕೆಲವು ಹಾಸಿಗೆ ಕಂಪನಿಗಳು (mattress Company) ಇತ್ತೀಚೆಗೆ ಮಾರ್ಕೆಟಿಂಗ್ ತಂತ್ರಕ್ಕಾಗಿ ನಿದ್ರೆಯ ಸ್ಪರ್ಧೆಗಳನ್ನು (Sleeping Contest) ನಡೆಸುತ್ತಿವೆ. ತಮ್ಮ ಕಂಪನಿ ಮಾಡಿದ ಹಾಸಿನ ಮೇಲೆ ಹಾಯಾಗಿ ಮಲಗಬಹುದು ಎಂದು ಪ್ರಚಾರ ಮಾಡುತ್ತಿದ್ದಾರೆ. ಹಣ ಬಂದರೆ ಯಾರಿಗೆ ನಿದ್ದೆ ಬರುವುದಿಲ್ಲ ಹೇಳಿ. ಕೆಲವರು ಕೆಲಸ ಮಾಡಲು ಯೋಚಿಸುತ್ತಾರೆ, ಆದರೆ ನಿದ್ರೆ ಮಾಡಲು ಹೆಚ್ಚು ಯೋಚಿಸುವುದಿಲ್ಲ. ಅದಕ್ಕೇ ಐದೂವರೆ ಲಕ್ಷ ಜನ ಈ ನಿದ್ರಾ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದೆ ಬಂದಿದ್ದರು. ಆದರೆ ಎಲ್ಲರನ್ನೂ ಹಿಂದಿಕ್ಕಿ ಗೆದ್ದಿದ್ದು ಮಾತ್ರ ಪಶ್ಚಿಮ ಬಂಗಾಳದ ಹುಡುಗಿ!

ನಿದ್ದೆ ಮಾಡುವ ಸ್ಪರ್ಧೆ ಗೆದ್ದ ಪಶ್ಚಿಮ ಬಂಗಾಳದ ಹುಡುಗಿ

ಎಲ್ಲರೂ ಯೋಚಿಸಿದಾಗ ನಿದ್ರೆ ಬರುವುದಿಲ್ಲ. ಅವರು ವಾರದಲ್ಲಿ ಆರು ದಿನ ಕೆಲಸದ ಸಮಯದಲ್ಲಿ ಮಲಗುತ್ತಾರೆ, ರಜಾದಿನಗಳು ಮತ್ತು ಭಾನುವಾರದಂದು ಅವರು ಮಲಗುವುದಿಲ್ಲ. ಆದರೆ ಈ ಸ್ಪರ್ಧೆಯಲ್ಲಿ ಪರಿಗಣಿಸಲ್ಪಟ್ಟಿದ್ದೇ ಇದು. ವಾರಕ್ಕೆ 7 ದಿನವೂ ನಿದ್ದೆ ಮಾಡಬೇಕು. ಈ ನಿಯಮವೇ ಸ್ಪರ್ಧೆಯಿಂದ ಅನೇಕ ಜನರನ್ನು ಹೊರಹಾಕಿತ್ತು. ಆದರೆ ಪಶ್ಚಿಮ ಬಂಗಾಳದ ಯುವತಿಯೊಬ್ಬಳು ಕಂಪನಿ ನಿಗದಿಪಡಿಸಿದ ನಿಯಮಗಳನ್ನು ಪಾಲಿಸಿ ಪ್ರಶಸ್ತಿ ಗೆದ್ದಿದ್ದಾಳೆ.

5 ಲಕ್ಷ ಗೆದ್ದ ತ್ರಿಪರ್ಣಾ


ನಿದ್ದೆ ಮಾಡಿ ದುಡ್ಡು ಗೆದ್ದ ಯುವತಿ ಯಾರು?

ನಿದ್ದೆ ಮಾಡುವ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿಯ 26 ವರ್ಷದ ಯುವತಿ ತ್ರಿಪರ್ಣಾ ಚಕ್ರವರ್ತಿ ಚಾಂಪಿಯನ್ ಆಗಿದ್ದಾಳೆ.  ಈ ಯುವತಿ ಸ್ಲೀಪ್ ಚಾಂಪಿಯನ್ ಆಗಿರುವ ದೇಶದ ಪ್ರಥಮ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿರುವುದು ಗಮನಾರ್ಹ.

ಇದನ್ನೂ ಓದಿ: Viral Video: ಶಾಸಕಿಯ ಕೆನ್ನೆಗೆ ಚಟಾರನೆ ಬಾರಿಸಿದ ಗಂಡ! ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ

ಐದೂವರೆ ಲಕ್ಷ ಮಂದಿ ಅರ್ಜಿ, 15 ಮಂದಿ ಆಯ್ಕೆ

ತ್ರಿಪರ್ಣ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಷಯ ತಿಳಿದು ನಿದ್ರಾ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದರು. ಆಗ ಅವಳು ಎಂಬಿಎ ಓದುತ್ತಿದ್ದಳು. ಇವರ ಜೊತೆಗೆ ಸುಮಾರು ಐದೂವರೆ ಲಕ್ಷ ಮಂದಿ ಈ ಸ್ಪರ್ಧೆಗೆ ಅರ್ಜಿ ಹಾಕಿದ್ದರು.. ಅದರಲ್ಲಿ ಆಯ್ಕೆಯಾದವರು ಕೇವಲ 15 ಮಂದಿ.

100 ದಿನ ಸ್ಪರ್ಧೆ, ಪ್ರತಿದಿನ 9 ಗಂಟೆ ನಿದ್ದೆ

ಈ ಸ್ಪರ್ಧೆಯನ್ನು ಗೆಲ್ಲಲು ನೀವು 100 ದಿನಗಳವರೆಗೆ ಪ್ರತಿದಿನ 9 ಗಂಟೆಗಳ ಕಾಲ ಮಲಗಬೇಕಾಗಿತ್ತು. 100 ದಿನಗಳವರೆಗೆ ಪ್ರತಿದಿನ 9 ಗಂಟೆಗಳ ಕಾಲ ಮಲಗಬೇಕು ಎಂಬ ಷರತ್ತಿನಡಿಯಲ್ಲಿ ಕಂಪನಿಯು ಅವರಿಗೆ ಹಾಸಿಗೆ ಮತ್ತು ಸ್ಲೀಪ್ ಟ್ರ್ಯಾಕರ್ ಅನ್ನು ನೀಡಿದೆ.

ಮೂವರನ್ನು ಸೋಲಿಸಿ ವಿನ್ನರ್ ಆದ ತ್ರಿಪರ್ಣಾ

ಕೆಲವು ಹಂತದ ಪರೀಕ್ಷೆಗಳ ನಂತರ, ನಾಲ್ಕು ಜನರನ್ನು ಫೈನಲ್‌ಗೆ ಆಯ್ಕೆ ಮಾಡಲಾಯಿತು. ಆ ನಾಲ್ವರಲ್ಲಿ ತ್ರಿಪರ್ಣ ಕೂಡ ಇದ್ದಳು. ಫೈನಲಿ ಅಪರ್ಣಾ ಸ್ಪರ್ಧೆಯಲ್ಲಿ ಗೆದ್ದಳು. ಅವರು 100 ರಲ್ಲಿ 95 ಅಂಕಗಳನ್ನು ಗಳಿಸಿದರು ಮತ್ತು ಅತ್ಯುತ್ತಮ ಸ್ಲೀಪರ್ ಪ್ರಶಸ್ತಿಯನ್ನು ಗೆದ್ದರು.

ಇದನ್ನೂ ಓದಿ: Bengaluru Rain: ಕಾರೂ ಬೇಡ ಬಸ್ಸೂ ಬೇಡ; ಟ್ರ್ಯಾಕ್ಟರ್‌ ಹತ್ತಿ ಆಫೀಸ್‌ಗೆ ಹೋದ ಟೆಕ್ಕಿ, ಉದ್ಯಮಿಗಳು!

5 ಲಕ್ಷ ಗೆದ್ದ ತ್ರಿಪರ್ಣಾ

ತ್ರಿಪರ್ಣಾ ಈ ಸ್ಪರ್ಧೆ ಗೆಲ್ಲಲು ಹೆಚ್ಚು ಕಷ್ಟಪಟ್ಟಿದ್ದಾರಂತೆ. ಯಾಕೆಂದರೆ ಆಕೆ ಮಲಗಿದ್ದು ರಾತ್ರಿಯಲ್ಲ, ಹಗಲಿನಲ್ಲಿ. ಹಗಲು ಮಲಗಿ, ರಾತ್ರಿ ಆಫೀಸಿಗೆ ಹೋಗುತ್ತಿದ್ದಳು. ಹಗಲಿನ ವೇಳೆ ಮಲಗುವ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಬೆಸ್ಟ್ ಸ್ಲೀಪರ್ ಆಗಿ ರೂ. 5 ಲಕ್ಷ ನಗದು ಗೆದ್ದಿದ್ದಾರೆ.
Published by:Annappa Achari
First published: