Kerala to Himalayas: ಕಾಲ್ನಡಿಗೆಯಲ್ಲಿಯೇ ಕೇರಳದಿಂದ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದ ಯುವಕರ ತಂಡ!

ಪ್ರಯಾಣ ಎಂದರೆ ನಮ್ಮನ್ನು ನಾವು ಕಂಡುಕೊಳ್ಳುವ ಒಂದು ವಿಶಿಷ್ಟ ಅನುಭವ ಆಗಿದೆ. ಪ್ರಯಾಣವನ್ನು ಒಂದು ವಿಶೇಷ ಅನುಭವವನ್ನಾಗಿ ನಮ್ಮ ಜೀವನದಲ್ಲಿ ನೋಡಬೇಕು ಎಂದು ಇಲ್ಲಿ ಕೆಲ ಯುವಕರು ತಾವಿರುವ ಸ್ಥಳದಿಂದ ಹಿಮಾಲಯದವರೆಗೆ ಪಾದಯಾತ್ರೆಯಲ್ಲಿ ಪ್ರಯಾಣ ಕೈಗೊಂಡಿರುವ ವಿಶೇಷ ಲೇಖನ ಇಂದು ನಮ್ಮೊಂದಿಗೆ ಇದೆ. ಮುಂದೆ ಓದಿ.

ಕೇರಳದಿಂದ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದ ಯುವ ತಂಡ

ಕೇರಳದಿಂದ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದ ಯುವ ತಂಡ

  • Share this:
ಈ ಆಧುನಿಕ ಕಾಲದಲ್ಲಿ ಪ್ರಯಾಣ (Travel) ಎಂಬುದು ಒಂದು ಬಂಡವಾಳ ಬಯಸುವ ಉದ್ಯಮವಾಗಿ ಎಲ್ಲೆಡೆ ತನ್ನ ಪ್ರಭಾವವನ್ನು ಬೀರುತ್ತಿದೆ. ಇನ್ನು ಹಲವು ಕಡೆ ಪ್ರಯಾಣದ ಹೆಸರಲ್ಲಿ ಹಣವನ್ನು (Money) ಸುಖಾಸುಮ್ಮನೆ ಹಣ ಕೀಳುವ ಗೀಳು ಹೆಚ್ಚಾಗುತ್ತಿದೆ. ಕೇವಲ ಹಣ ಮಾಡಬೇಕೆಂಬ ದುರಾಲೋಚನೆ ಇಂದು ಪ್ರಯಾಣದ ಹೆಸರನ್ನು ದುರ್ಬಳಕೆ ಮಾಡುತ್ತಿವೆ ಎಂದರೂ ತಪ್ಪಾಗಲಾರದು. ಪ್ರಸಿದ್ಧ ಬರಹಗಾರ ಜೆಆರ್‌ಆರ್‌ ಟೋಲ್ಕಿನ್‌ ಅವರು “ಪ್ರಯಾಣ ಮಾಡುವವರೆಲ್ಲರೂ ಕಳೆದು ಹೋಗುವುದಿಲ್ಲ” ಎಂದು ಹೇಳಿದ್ದಾರೆ. ಅವರ ಮಾತಿನಂತೆ ಸಮಾಜದಲ್ಲಿ ಇಂದು ಪ್ರಯಾಣವನ್ನು ಒಂದು ಹಣ ಸುಲಿಯುವ ಕಾಯಕವನ್ನಾಗಿ ವ್ಯವಹಾರ (Business) ಮಾಡಿಕೊಂಡಿದ್ದಾರೆ. ಪ್ರಯಾಣ ಎಂದರೆ ನಮ್ಮನ್ನು ನಾವು ಕಂಡುಕೊಳ್ಳುವ ಒಂದು ವಿಶಿಷ್ಟ ಅನುಭವ (Experience) ಆಗಿದೆ.

ಪ್ರಯಾಣವನ್ನು ಒಂದು ವಿಶೇಷ ಅನುಭವವನ್ನಾಗಿ ನಮ್ಮ ಜೀವನದಲ್ಲಿ ನೋಡಬೇಕು ಎಂದು ಇಲ್ಲಿ ಕೆಲ ಯುವಕರು ತಾವಿರುವ ಸ್ಥಳದಿಂದ ಹಿಮಾಲಯದವರೆಗೆ ಪಾದ ಯಾತ್ರೆಯಲ್ಲಿ ಪ್ರಯಾಣ ಕೈಗೊಂಡಿರುವ ವಿಶೇಷ ಲೇಖನ ಇಂದು ನಮ್ಮೊಂದಿಗೆ ಇದೆ. ಮುಂದೆ ಓದಿ.

7 ತಿಂಗಳ ಕಾಲ ಕಾಲ್ನಡಿಗೆ ಮೂಲಕ ಹಿಮಾಲಯ ಸೇರಿದ ಯುವಕರು
ಕೇರಳದಿಂದ ಹಿಮಾಲಯಕ್ಕೆ ನಡೆದುಕೊಂಡು ಪ್ರಯಾಣ ಬೆಳೆಸಲು ನಿರ್ಧರಿಸಿದ ಆ ನಾಲ್ವರು ಯುವಕರು - ಮೊಹಮದ್ ಮುಜ್ತಾಬಾ (24), ಶ್ರೀರಾಗ್ ಕೆಟಿ (23), ವಿಬಿನ್ (22) ಮತ್ತು ಪ್ರದೀಪ್ ಶ್ರೀಧರನ್ (24) ವರ್ಷದ ನವ ತರುಣರಾಗಿದ್ದಾರೆ. ಇವರಲ್ಲಿ ಶ್ರೀಮಂತ ಹುಡುಗರ ಹತ್ತಿರ ಇರುವ ಎನ್‌ಫೀಲ್ಡ್ ಬೈಕ್‌ಗಳು, ಬೌದ್ಧ ಪ್ರಾರ್ಥನಾ ಧ್ವಜಗಳು ಅಥವಾ ಡಿಎಸ್‌ಎಲ್‌ಆರ್‌ಗಳು ಇವು ಯಾವುದು ಇರಲಿಲ್ಲ. ಆದರೆ ಇವರ ಪ್ರಯಾಣದ ಕನಸು ಮಾತ್ರ ಇವರ ಜೊತೆಗಿತ್ತು. ಆದ್ದರಿಂದಲೇ ಅಷ್ಟು ದೂರದ ಪ್ರಯಾಣವನ್ನು ಕಾಲ ನಡಿಗೆಯಲ್ಲಿ ಕೈಗೊಂಡಿರುವುದು ವಿಶೇಷ. ಒಂದು ಸೈಕಲ್‌ಗೆ ಟಾರ್ಪಾಲಿನ್ ಶೀಟ್‌ಗೆ "ಕೇರಳದಿಂದ ಹಿಮಾಲಯಕ್ಕೆ" ಎಂಬ ಬೋರ್ಡ್ ಅನ್ನು ಹಾಕಿಕೊಂಡು ಇವರ ಪ್ರಯಾಣ ಆರಂಭವಾಯಿತು.

ಇದನ್ನೂ ಓದಿ: Baby Video: ಶ್ರೀಲಂಕಾ ಫ್ಲೈಟ್​ನಲ್ಲಿ ಸ್ಪೆಷಲ್ ಫ್ರೆಂಡ್! ಪುಟ್ಟ ಹೆಣ್ಣುಮಗುವಿನ ವಿಡಿಯೋ ವೈರಲ್

ಈ ನಾಲ್ವರು ಡಿಸೆಂಬರ್ 2021 ರಲ್ಲಿ ತಿರುರ್ ಮತ್ತು ಕನ್ಯಾಕುಮಾರಿಯಿಂದ ಪ್ರಯಾಣವನ್ನು ಪ್ರಾರಂಭಿಸಿದರು. ಸುದೀರ್ಘ 7 ತಿಂಗಳ ಬಳಿಕ ಲಡಾಖ್‌ನ ಖರ್ದುಂಗ್ ಲಾದಲ್ಲಿ ಇವರು ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ. ಈ ನಾಲ್ವರಲ್ಲಿ ಇಬ್ಬರು ಲಲಿತಕಲಾ ಪದವೀಧರರಾದ ಮುಜ್ತಾಬಾ ಮತ್ತು ಶ್ರೀರಾಗ್ ಮತ್ತು ಇಬ್ಬರು ಬಿಕಾಂ ಪದವೀಧರರಾದ ವಿಬಿನ್ ಮತ್ತು ಪ್ರದೀಪ್ ಅವರು ಪ್ರತ್ಯೇಕವಾಗಿ ಪ್ರಯಾಣವನ್ನು ಕೈಗೊಳ್ಳಲು ನಿರ್ಧರಿಸಿದರು ಮತ್ತು ಹರಿಯಾಣದ ಕುರುಕ್ಷೇತ್ರದಲ್ಲಿ ಮತ್ತೆ ಭೇಟಿಯಾದರು.

ಪ್ರಯಾಣದ ಅನುಭವವನ್ನು ಹಂಚಿಕೊಂಡ ಯುವಕರು
“ನಾವು ಇನ್‌ಸ್ಟಾಗ್ರಾಮ್‌ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕದಲ್ಲಿದ್ದೆವು ಮತ್ತು ಪ್ರಯಾಣ ಬೆಳೆಸಿದ ನಂತರ ನಾವು ಕರ್ನಾಟಕದಲ್ಲಿ ಸಿಗುತ್ತೆವೆ ಎಂದು ಕೊಂಡೆವು. ಆದರೆ ಅದು ಆಗಲಿಲ್ಲ. ನಂತರ ಮಹಾರಾಷ್ಟ್ರದಲ್ಲಿಯಾದರೂ ಸಿಗೋಣ ಎಂದರೂ ಅದು ಕೂಡ ಆಗಲಿಲ್ಲ. ನಂತರ ಕುರುಕ್ಷೇತ್ರದಲ್ಲಿ ಭೇಟಿಯಾದೆವು” ಎಂದು ಪ್ರದೀಪ್‌ ಹೇಳುತ್ತಾರೆ.

ಇವರಲ್ಲಿ ಮುಜ್ತಬಾ ಮತ್ತು ಶ್ರೀರಾಗ್ ಛಾಯಾಗ್ರಾಹಕ ಕಲಾವಿದರಾಗಿರುವ ಹಿನ್ನೆಲೆಯಿಂದಾಗಿ ಅವರು ಹೋದ ಕಡೆಗೆಲ್ಲ ಪೋಟೊ ಕ್ಲಿಕ್ಕಿಸಿ ಪ್ರಯಾಣಿಕರಿಗೆ ನೀಡುವ ಮೂಲಕ ಹಣ ಸಂಪಾದಿಸಿ ತಮ್ಮ ಖರ್ಚುಗಳನ್ನು ನೋಡಿಕೊಂಡಿದ್ದಾರೆ. ಇನ್ನು ಈ ಕಡೆ ವಿಬಿನ್ ಮತ್ತು ಪ್ರದೀಪ್ ಸರಳವಾಗಿ ಪ್ರಯಾಣಿಸಲು ಬಯಸಿದ್ದರು. “ತಮ್ಮ ಆರಂಭಿಕ ಯೋಜನೆ ಸೈಕಲ್ ದಿಂದ ನಂತರ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುವುದೆಂದು ಬದಲಾಯಿತು” ಎಂದು ವಿಬಿನ್ ಹೇಳುತ್ತಾರೆ.

ಇದನ್ನೂ ಓದಿ:  Plastic Waste: ಸರೋವರಗಳಲ್ಲಿರುವ ಪ್ಲಾಸ್ಟಿಕ್​​ ಅನ್ನು ಆಹಾರವನ್ನಾಗಿ ಬಳಸಿಕೊಳ್ಳುತ್ತವೆ ಈ ಬ್ಯಾಕ್ಟೀರಿಯಾಗಳು!

"ಭಾರತದ ವಿಭಿನ್ನ ಸಂಸ್ಕೃತಿಗಳನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗವೆಂದು ನಾವು ಭಾವಿಸಿದ್ದೇವೆ" ಎಂದು ಮುಜ್ತಾಬಾ ಹೇಳುತ್ತಾರೆ. ಅಂತಿಮವಾಗಿ ಪ್ರಯಾಣ ಎಂಬುದು ನಮ್ಮ ಅನುಭವಗಳನ್ನು ಹೆಚ್ಚಿಸಿಕೊಳ್ಳುವ ಒಂದು ವಿಧಾನವಾಗಿರುತ್ತದೆಯೇ ಹೊರತು, ಅದನ್ನು ಪಡೆಯಲು ಹೇಗೆ ಅಲ್ಲಿಗೆ ಹೋದೆವು ಎಂಬುದು ಮುಖ್ಯವಲ್ಲ ಎಂದು ಈ ನಾಲ್ಕು ಯುವಕರ ಪ್ರಯಾಣದಿಂದ ನಮಗೆಲ್ಲರಿಗೂ ಅರ್ಥವಾಗಬೇಕಾದ ವಾಸ್ತವಾಂಶ ಆಗಿದೆ.
Published by:Ashwini Prabhu
First published: