Viral Photo: ಬೈಕ್​ನಲ್ಲಿ ಕೂತು ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡ್ತಾರೆ ಬೆಂಗಳೂರು ಯುವಕರು! ವೈರಲ್ ಆಯ್ತು ಫೊಟೋ

ಬೆಂಗಳೂರಿನ ಒಂದು ಮೇಲ್ಸೇತುವೆಯ ದಾರಿಯ ಮಧ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿರುವ ವ್ಯಕ್ತಿಯ ಚಿತ್ರಣ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ. ಇದರಲ್ಲಿ ವಿಶೇಷ ಏನಿದೆ ಎಂದು ನಿಮಗೆ ಆಶ್ಚರ್ಯ ಆಗಬಹುದು, ಹೌದು ವಿಶೇಷತೆ ಇದೆ, ಆ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಲೇ ದಾರಿಯ ಮಧ್ಯದಲ್ಲಿಯೇ ತನ್ನ ಲ್ಯಾಪ್ಟಾಪ್ ಅಲ್ಲಿ ಕೆಲಸ ಮಾಡುತ್ತಿದ್ದನು.

ಲ್ಯಾಪ್ಟಾಪ್ ಅಲ್ಲಿ ಕೆಲಸ ಮಾಡುತ್ತಿರುವ ಯುವಕ

ಲ್ಯಾಪ್ಟಾಪ್ ಅಲ್ಲಿ ಕೆಲಸ ಮಾಡುತ್ತಿರುವ ಯುವಕ

  • Share this:
ಬೆಂಗಳೂರಿನ (Bengaluru) ಒಂದು ಮೇಲ್ಸೇತುವೆಯ ದಾರಿಯ ಮಧ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿರುವ ವ್ಯಕ್ತಿಯ ಚಿತ್ರಣ ಒಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಹಳ ವೈರಲ್ ಆಗಿದೆ. ಇದರಲ್ಲಿ ವಿಶೇಷ ಏನಿದೆ ಎಂದು ನಿಮಗೆ ಆಶ್ಚರ್ಯ ಆಗಬಹುದು, ಹೌದು ವಿಶೇಷತೆ ಇದೆ, ಆ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಲೇ ದಾರಿಯ ಮಧ್ಯದಲ್ಲಿಯೇ ತನ್ನ ಲ್ಯಾಪ್ಟಾಪ್ ಅಲ್ಲಿ (Laptop) ಕೆಲಸ ಮಾಡುತ್ತಿದ್ದನು. ಅದನ್ನು ಹರ್ಶ್ಮೀತ್ ಸಿಂಗ್ ಎಂಬುವವರು ತಮ್ಮ ಲಿಂಕ್ಡಿನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಆ ಪೋಸ್ಟ್ ನೋಡಿ ಸಾಕಷ್ಟು ಜನ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಲಿಸುತ್ತಿರುವ ಬೈಕ್ ನಲ್ಲಿಯೇ (Bike) ಕುಳಿತುಕೊಂಡು ಯುವಕನೊಬ್ಬ ತನ್ನ ಲ್ಯಾಪ್ ಟಾಪ್ ತೆರೆದುಕೊಂಡು ಅದನ್ನು ನಿರ್ವಹಿಸುತ್ತಿದ್ದ ಫೋಟೋ (Photo) ಈಗ ಸಕತ್ ಸೆನ್ಸೇಷನ್ ಆಗಿದೆ.

ದ್ವಿಚಕ್ರ ವಾಹನದಲ್ಲಿ ಚಲಿಸುತ್ತಲೇ ಲ್ಯಾಪ್ಟಾಪ್ ಅಲ್ಲಿ ಕೆಲಸ ಮಾಡುತ್ತಿರುವ ಯುವಕ
“ಬೆಂಗಳೂರು ನಿಜವಾಗಿಯು ಯಾವ ಸ್ಥಿತಿಯಲ್ಲಿದೆ ಉತ್ತಮ ಸ್ಥಿತಿಯಲ್ಲೋ ಅಥವ ಕೆಟ್ಟ ಸ್ಥಿತಿಯಲ್ಲೊ? 11 ಗಂಟೆ ರಾತ್ರಿಯಲ್ಲಿ ಅತ್ಯಂತ ವಾಹನಗಳಿಂದ ಕೂಡಿರುವ ಬೆಂಗಳೂರಿನ ಮೇಲ್ಸೇತುವೆ ಒಂದರಲ್ಲಿ ವ್ಯಕ್ತಿ ಒಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಲೇ ಲ್ಯಾಪ್ಟಾಪ್ ಅಲ್ಲಿ ಕೆಲಸ ಮಾಡುತ್ತಿದ್ದಾನೆ. ನೀವು ಒಬ್ಬ ಬಾಸ್ ಆಗಿದ್ದರೆ ನೀವೇನಾದರು ನಿಮ್ಮ ಸಹ-ಕೆಲಸಗಾರರಿಗೆ ಅಥವ ನಿಮ್ಮ ಕೈಕೆಳಗೆ ಕೆಲಸ ಮಾಡುವ ಜನರಿಗೆ ಅವರ ಸುರಕ್ಷತೆಯನ್ನು ಲೆಕ್ಕಿಸದೆ ನಿಗದಿ ಪಡಿಸಿರುವ ಸಮಯದ ಒಳಗೆ ಕೆಲಸ ಮಾಡಬೇಕು ಎಂದು ಅತಿಯಾದ ಒತ್ತಡ ಹೇರುತ್ತಿದ್ದರೆ ನೀವೊಮ್ಮೆ ಇದನ್ನು ನೋಡಲೇಬೇಕು.

ಇದನ್ನೂ ಓದಿ: Bahubali Samosa: ಇದು ಬಾಹುಬಲಿ ಸಮೋಸಾ! ಅರ್ಧ ಗಂಟೆಯಲ್ಲಿ ತಿಂದರೆ 51 ಸಾವಿರ ರೂಪಾಯಿ ಬಹುಮಾನವಾಗಿ ಗೆಲ್ಲಿರಿ

ಇದರ ಬಗ್ಗೆ ಇನ್ನೊಮ್ಮೆ ಸರಿಯಾಗಿ ಯೋಚಿಸಲು ನಿಮಗಿದು ಸೂಕ್ತ ಸಮಯ, ಇನ್ನು ಮುಂದೆ ನೀವು “ಇಟ್ಸ್ ಅರ್ಜೇಂಟ್ ಅಥವಾ ಡು ಇಟ್ ಆ್ಯಸ್ ಸೂನ್ ಆ್ಯಸ್ ಪಾಸಿಬಲ್” ಎಂದು ತಾಕೀತು ಮಾಡುವಾಗ ಬಹಳ ಎಚ್ಚರದಿಂದ ಇರಬೇಕು. ಪ್ರಮುಖವಾಗಿ ನೀವೇನಾದರು ಮ್ಯಾನೇಜರ್ ಅಥವ ಬಾಸ್ ಎಂಬ ಎತ್ತರದ ಸ್ಥಾನದಲ್ಲಿದ್ದರೆ ಇದರ ಬಗ್ಗೆ ಮತ್ತಷ್ಟು ಜಾಗರೂಕರಾಗಿರಬೇಕು. ಏಕೆಂದರೆ ನೀವು ಬಳಸುವ ಈ ವಾಕ್ಯವು ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಜನರ ಮೇಲೆ ಯಾವ ರೀತಿಯಾದ ಪರಿಣಾಮವನ್ನು ಬೀರುತ್ತದೆ ಎಂಬ ಅರಿವು ನಿಮಗಿಲ್ಲ.” ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದೇಕೆ  
ಹರ್ಶ್ಮೀತ್ ಸಿಂಗ್ ಅವರ ಪ್ರಕಾರ ಆ ವ್ಯಕ್ತಿಯು ತನಗೆ ನೀಡಿರುವ ಕೆಲಸವನ್ನು ನಿಗದಿ ಪಡಿಸಿರುವ ಸಮಯದ ಒಳಗೆ ಮುಗಿಸುವ ಸಲುವಾಗಿ ರಸ್ತೆಯ ಮಧ್ಯದಲ್ಲಿ ವಾಹನದಲ್ಲಿ ಚಲಿಸುತ್ತಲೇ ಲ್ಯಾಪ್ಟಾಪ್ ಅಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅವರ ಈ ವಾದಕ್ಕೆ ಬಹಳ ಜನ ನೆಟ್ಟಿಗರಿಂದ ಸಂಪೂರ್ಣ ವಿರೋಧ ವ್ಯಕ್ತವಾಗುತ್ತಿದೆ.

ಲಿಂಕ್ಡಿನ್ ಅಲ್ಲಿ ಈ ಪೋಸ್ಟ್ ಸುಮಾರು 40 ಸಾವಿರ ಲೈಕ್ ಪಡೆಯುವ ಮೂಲಕ ವೈರಲ್ ಆಗಿದೆ. ಇಲ್ಲಿ ಕೆಲ ಜನರು ಆ ವ್ಯಕ್ತಿಯು ಅವನ ಆಫೀಸ್ ಕೆಲಸ ಅಲ್ಲದೆ ಬೇರೆ ಯಾವುದೊ ಮುಖ್ಯವಾಗಿರುವ ಕೆಲಸವನ್ನು ಮಾಡುತ್ತಿರಬಹುದು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮತ್ತೆ ಕೆಲವರಂತೂ ಈ ಚಿತ್ರದಲ್ಲಿರುವ ಜಾಗವು ಬೆಂಗಳೂರೇ ಅಲ್ಲ ಎಂಬಂತೆ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Heart Attack Risk: ಹುಡುಗರ ಹಾರ್ಟ್ ಫೆಲ್ಯೂರ್​ ಆಗಲು ಬ್ಯೂಟಿಫುಲ್ ಹುಡುಗಿಯರೇ ಕಾರಣವಂತೆ!

ರಾಘವ್ ಹರಿ ಸುಭಾಶ್ ಎನ್ನುವವರು ಆತ ಮಾಡಬೇಕಾಗಿರುವ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಿರುವುದಿಲ್ಲ , ಅದಲ್ಲದೆ ಒಬ್ಬ ಹಿಂಬದಿ ಸವಾರ ಹೀಗೆ ಚಲಿಸುತ್ತಿರುವ ಗಾಡಿಯಲ್ಲಿ ಕೆಲಸ ಮಾಡುವುದು ಅಸಾಧ್ಯ ಹಾಗೇನಾದರು ಮಾಡುತ್ತಿದ್ದರೆ ಅವನು ಮನುಷ್ಯ ಆಗಿರಲು ಸಾಧ್ಯವಿಲ್ಲ ಬಹುಶಃ ಆತ ಬೇರೊಂದು ಗ್ರಹದಿಂದ ಬಂದಿರಬೇಕು.  ಅವನು RRR ಸಿನಿಮಾ ನೋಡುತ್ತಿರ ಬಹುದು ಎಂದು ಕಾಲೆಳೆದಿದ್ದಾರೆ.

ಇನ್ನೊಬ್ಬ ಬಳಕೆದಾರರು ಕಾರ್ಪೋರೇಟ್ ಜೀವನ ಕೆಲ ಮ್ಯಾನೇಜರ್ ಹಾಗು ಕೆಲಸಗಾರರನ್ನು ಮನುಷ್ಯತ್ವ ಇಲ್ಲದ ರಾಕ್ಷಸರನ್ನಾಗಿ ಮಾಡಿದೆ. ಅವರು ಮನುಷ್ಯ ಜೀವನವನ್ನು ಗೌರವಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
Published by:Ashwini Prabhu
First published: