Goat Marriage: ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ

ಇತ್ತೀಚಿಗೆ ಗುಜರಾತ್‌ ಮೂಲದ ಕ್ಷಮಾ ಬಿಂದು ಎಂಬಾಕೆ ತನ್ನನ್ನೇ ತಾನು ಮದುವೆಯಾಗಿ ಸುದ್ದಿಯಾಗಿದ್ದಳು. ಇದೀಗ ಈ ಭೂಪ ಮೇಕೆಯನ್ನು ಮದುವೆಯಾಗಿ ಸುದ್ದಿ ಮಾಡಿದ್ದಾನೆ. ಈತ ವಧುದಕ್ಷಿಣೆ ನೀಡಿ ಹೆಣ್ಣು ಮೇಕೆಯನ್ನು ವಿವಾಹವಾಗಿದ್ದಾನಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಡೋನೇಷ್ಯಾ: ಇದು ಮದುವೆಯ (Marriage) ಹುಚ್ಚೋ (Craze) ಅಥವಾ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸ್ಟಾರ್ (Star) ಆಗುವ ಖಯಾಲಿಯೋ ಗೊತ್ತಿಲ್ಲ. ಇಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ರೀತಿಯ ಕೆಲಸ ಮಾಡಿ, ಸುದ್ದಿ (News) ಮಾಡೋಕೆ ಹೊರಟು, ನಗೆಪಾಟಲಿಗೆ ಈಡಾಗಿದ್ದಾನೆ. ಅಂದಹಾಗೆ ಈತ ಹೆಣ್ಣು ಮೇಕೆಯೊಂದಿಗೆ (Female Goat) ಮದುವೆ (Marriage) ಮಾಡಿಕೊಂಡಿದ್ದಾನೆ. ಆ ಹೆಣ್ಣು ಮೇಕೆಗೆ ವಧು ದಕ್ಷಿಣೆಯನ್ನೂ (Dowry) ನೀಡಿದ್ದಾನೆ. ಸಾಲದ್ದಕ್ಕೆ ಅದನ್ನು ರೆಕಾರ್ಡ್ (Record) ಮಾಡಿ ಎಲ್ಲಾ ರೀತಿಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ (Video) ಹರಿ ಬಿಟ್ಟಿದ್ದಾನೆ. ಇದೀಗ ಈತನ ವಿಚಿತ್ರ ಮದುವೆಯ ವಿಡಿಯೋ ವೈರಲ್ (Viral) ಆಗಿದ್ದು, ಇದನ್ನು ನೋಡಿದ ಜನ ಬಿದ್ದೂ ಬಿದ್ದೂ ನಗುತ್ತಿದ್ದಾರಂತೆ! ಇತ್ತೀಚಿಗೆ ಗುಜರಾತ್‌ ಮೂಲದ ಕ್ಷಮಾ ಬಿಂದು ಎಂಬಾಕೆ ತನ್ನನ್ನೇ ತಾನು ಮದುವೆಯಾಗಿ ಸುದ್ದಿಯಾಗಿದ್ದಳು. ಇದೀಗ ಈ ಭೂಪ ಮೇಕೆಯನ್ನು ಮದುವೆಯಾಗಿ ಸುದ್ದಿ ಮಾಡಿದ್ದಾನೆ.

ಹೆಣ್ಣು ಮೇಕೆಯನ್ನು ಮದುವೆಯಾದ ವ್ಯಕ್ತಿ

ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ರೀತಿಯಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾನೆ. 44 ವರ್ಷದ  ಪ್ರಾಯದ ಸೈಫುಲ್ ಆರಿಫ್ ಎಂಬಾತ ಇದೇ ತಿಂಗಳ ಜೂನ್ 5 ರಂದು ಬೆಂಜೆಂಗ್ ಜಿಲ್ಲೆಯ ಗ್ರೆಸಿಕ್‌ನಲ್ಲಿರುವ ಕ್ಲಾಂಪೋಕ್ ಗ್ರಾಮದಲ್ಲಿ  ರಹಾಯು ಬಿನ್ ಬೆಜೊ ಎಂಬುವರೊಂದಿಗೆ ಮದುವೆಯಾಗಿದ್ದಾನೆ. ಅರೇ ಅದರಲ್ಲೇನು ವಿಶೇಷ ಅಂದ್ರಾ? ವಿಶೇಷ ಇದೆ ಸ್ವಾಮಿ, ಈ ರಹಾಯು ಬಿನ್ ಬೆಜೊ ಎಂಬುದು ಹುಡುಗಿ ಹೆಸರಲ್ಲ, ಬದಲಾಗಿ ಒಂದು ಹೆಣ್ಣು ಮೇಕೆಯ ಹೆಸರು. ಈ ಸೈಫುಲ್ ಆರಿಫ್ ಮದುವೆಯಾಗಿದ್ದು ಹೆಣ್ಣು ಮೇಕೆಯನ್ನು.



ವಧು ದಕ್ಷಿಣೆ ನೀಡಿ ಹೆಣ್ಣು ಮೇಕೆ ಜೊತೆ ವಿವಾಹ

ಅಂದ ಹಾಗೆ ಈ ಸೈಫುಲ್ ಆರಿಫ್ ಹೆಣ್ಣು ಮೇಕೆಯನ್ನು ಸುಮ್ಮನೆ ಮದುವೆಯಾಗಲಿಲ್ಲವಂತೆ. ಬದಲಾಗಾ ಆತ ಅದಕ್ಕೆ 22,000 ರೂಪಾಯಿ ವಧು ದಕ್ಷಿಣೆ ನೀಡಿದ್ದಾನಂತೆ.

ಇದನ್ನೂ ಓದಿ: Sologamy: ತನ್ನನ್ನು ತಾನೇ ಮದುವೆಯಾದ ಗುಜರಾತ್ ಯುವತಿ! ಇಲ್ನೋಡಿ ಫೋಟೋಸ್

ಮದುಮಗಳ ಡ್ರೆಸ್‌ನಲ್ಲಿ ಮಿಂಚಿದ ಮೇಕೆ

ಮದುಮಗನ ಡ್ರೆಸ್‌ನಲ್ಲಿ ಸೈಫುಲ್ ಆರಿಫ್ ಇದ್ದರೆ,  ವಧು ಮೇಕೆ ಶಾಲು ಹೊದ್ದುಕೊಂಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಸಾಂಪ್ರದಾಯಿಕ ಜಾವಾನೀಸ್ ವೇಷಭೂಷಣಗಳನ್ನುಧರಿಸಿದ ಸ್ಥಳೀಯರ ಗುಂಪೂ ಸಹ ಈ ವಿಚಿತ್ರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿತ್ತಂತೆ.

ಟಿವಿಯಲ್ಲೂ ಟೆಲಿಕಾಸ್ಟ್ ಆಯ್ತು ಮದುವೆ ವಿಡಿಯೋ

ಈ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಚಿತರ ವಿವಾಹದ ವಿಡಿಯೋವನ್ನು ಇಂಡೋನೇಷಿಯಾದ ಸೂರ್ಯ ಟಿವಿ ಎಂಬ ವಾಹಿನಿ ಕೂಡ  ಪ್ರಸಾರ ಮಾಡಿದ್ಯಂತೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರ ಆಕ್ರೋಶ

ಈ ವಿಡಿಯೋ ಆಪ್‌ಲೋಡ್ ಆಗುತ್ತಿದ್ದಂತೆ ಎಲ್ಲಾ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬಹುತೇಕರು ಇದನ್ನು  ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಕೆಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಆ ವ್ಯಕ್ತಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Shocking: ಸತ್ತ ಮಗ ತಿಥಿ ದಿನ ಮನೆಗೆ ಬಂದೇ ಬಿಟ್ಟ: ಯುವಕನಿಗೆ ಆಶ್ಚರ್ಯ, ಕುಟುಂಬಸ್ಥರಿಗೆ ಪರಮಾಶ್ಚರ್ಯ!

ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಸೈಫುಲ್ಲಾ ಆರೀಪ್

ಇನ್ನು ಈ ವೀಡಿಯೊವನ್ನು ಕೇವಲ  ವೈರಲ್ ಆಗುವ ಉದ್ದೇಶದಿಂದ ಮಾತ್ರ ನಿರ್ಮಿಸಲಾಗಿದೆ ಎಂದು ಸೈಫುಲ್ ಆರೀಫ್ ಹೇಳಿದ್ದಾನೆ. ಇದು ಸಂಪೂರ್ಣವಾಗಿ ನಟನೆಯಾಗಿದೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವ ಉದ್ದೇಶದಿಂದ  ನಿರ್ಮಿಸಲಾಗಿದೆ. ಈ ವೀಡಿಯೊ ಯಾರನ್ನೂ ಅಪರಾಧಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಮತ್ತು ಪ್ರೇಕ್ಷಕರ ಮನರಂಜನೆಗಾಗಿ ರಚಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ.
Published by:Annappa Achari
First published: